ಯಶ್​ ನೆಟ್ಟ ಸಿನಿಮಾ ಮೈಲಿಗಲ್ಲು.. Toxic ಟೀಸರ್​ಗೆ ಸಿನಿ ಪ್ರಪಂಚವೇ ಸ್ಟನ್..!

ಆಗ ಇಂಡಿಯಾ CEO.. ಈಗ ವರ್ಲ್ಡ್​​​ CEO..‘ಟಾಕ್ಸಿಕ್’​ ಯಶ್​​! ಬರ್ತ್​ಡೇಗೆ ‘ಟಾಕ್ಸಿಕ್’​ ಗಿಫ್ಟ್​​. ಟೀಸರ್​ಗೆ ಸಿನಿ ಪ್ರಪಂಚವೇ ಸ್ಟನ್​​ ಆಗಿದೆ. ಹಾಲಿವುಡ್‌ಗೆ ನ್ಯೂ ಡ್ರ್ಯಾಗನ್​ ಎಂಟ್ರಿ​​ಯಾಗಿದೆ.

author-image
Ganesh Kerekuli
Toxic (3)
Advertisment
  • ಆಗ ಇಂಡಿಯಾ CEO.. ಈಗ ವರ್ಲ್ಡ್​​​ CEO.. ‘ಟಾಕ್ಸಿಕ್’​ ಯಶ್​​!
  • ಆಗ ‘ರಾಕಿ’ ಈಗ ‘ರಾಯ’ ಹಾಲಿವುಡ್‌ಗೆ ನ್ಯೂ ಡ್ರ್ಯಾಗನ್​ ಎಂಟ್ರಿ​​!
  • ಬರ್ತ್​ಡೇ ಗೆ ‘ಟಾಕ್ಸಿಕ್’​ ಗಿಫ್ಟ್​​.. ಟೀಸರ್​ಗೆ ಸಿನಿ ಪ್ರಪಂಚ ಸ್ಟನ್​​!

ದ ವರ್ಲ್ಡ್​ ಈಸ್​ ಮೈ ಟೆರಿಟರಿ ಅಂದಿದ್ದ ರಾಕಿ ಭಾಯ್​​, ಈ ದಿನ ನಿಜವಾಗ್ಲೂ ವರ್ಲ್ಡನ್ನ ಆಳೋಕೆ ಮುಂದಾಗಿದ್ದಾರೆ. ಪವರ್​ ಫುಲ್​ ಪೀಪಲ್ ಮೇಕ್​ ಪ್ಲೇಸಸ್​ ಪವರ್​​ಫುಲ್​ ಅಂದ್ರೆ ಇಂಡಿಯಾ ಸಿಇಓ ಆಗಿದ್ದಾಗ್ಲೇ ಅರ್ಥವಾಗಿತ್ತು. ಬಟ್​ ಈಗ ಯಶ್​ ವರ್ಲ್ಡ್​ ಸಿಇಓ ರೇಂಜ್​ಗೆ ಹೋಗಿ, ಇಡೀ ಸಿನಿಮಾ ವರ್ಲ್ಡ್​ಗೆ ಬಿಗ್​ ಸ್ಟನ್​ ಕೊಟ್ಟು, ಆಫರ್​ ಕ್ಲೋಸಸ್​ ಸೂನ್​ ಅಂತ ಇಡೀ ಬಾಕ್ಸಾಫೀಸ್​ಗೆ ಆಫರ್​ ಕೊಟ್ಬಿಟ್ಟಿದ್ದಾರೆ! 

ಡ್ಯಾಡ್​ ಈಸ್​ ಹೋಮ್​! ಅದೇ ಉದ್ದ ಗಡ್ಡ, ಅದೇ ಕೈನಲ್ಲಿ ಗನ್, ಅದೇ ಚಷ್ಮಾ, ಅದೇ ಸಿಗಾರ್​,  ಅದೇ ಖದರ್! ರಾಕಿ ಭಾಯ್​ ಈಸಿ ಬ್ಯಾಕ್​ ಅಗೇನ್​ ಅನ್ಬೋದು. ಇದು ಟಾಕ್ಸಿಕ್​ನ ಟೀಸರ್​. ಈ ಟೀಸರ್​ ರಿಲೀಸ್​ ಆಗ್ತಿದ್ದಂತೆ ಸೋಷಿಯಲ್​ ಮೀಡಿಯಾಗೆ ಬೆಂಕಿ ಹಚ್ಚಿಸಿಬಿಟ್ಟಿದೆ. 

ಇದನ್ನೂ ಓದಿ: ‘ಟಾಕ್ಸಿಕ್’​ನಲ್ಲಿ ಯಶ್ ಕಿವಿ ಕಚ್ಚಿದ ನಟಿ ಯಾರು..?

Yash toxic

ಟಾಕ್ಸಿಕ್’​ ಯಶ್​​!

ಊರು ನೋಡೋಕೆ ಬಂದವನು ಊರಿನ ಬಗ್ಗೆ ತಿಳ್ಕೊಳ್ತಾನೆ. ಅದೇ ಊರನ್ನ ಆಳೋಕೆ ಬಂದವನು ಅವ್ನ ಬಗ್ಗೆ ಊರಿಗೆ ತಿಳಿಯೋ ಹಾಗೆ ಮಾಡ್ತಾನೆ. ರಾಕಿಂಗ್​ ಸ್ಟಾರ್​ ಯಶ್​ ಮಾಡ್ತಿರೋದು ಇದೇ. ಇಲ್ಲಿವರೆಗೂ ಇಂಡಿಯಾ ಸಿನಿಮಾದ ದಿಕ್ಕನ್ನೇ ಬದ್ಲಿಸಿದ್ದ ಸ್ಟಾರ್​.. ಕನ್ನಡ ಸಿನಿಮಾ ಇಂಡಸ್ಟ್ರಿಯನ್ನ ಪ್ರಪಂಚದ ಮೂಲೆ ಮೂಲೆಗೂ ತಲುಪಿಸಿದ್ದ ಸ್ಟಾರ್​.. ಈ ದಿನ ಪ್ಯಾನ್​ ಇಂಡಿಯಾ ಸ್ಟಾರ್. ನೆಕ್ಸ್​​ಟ್​ ಗ್ಲೋಬಲ್​, ವರ್ಲ್ಡ್​ ಸ್ಟಾರ್​ ಲೆವೆಲ್​ಗೆ ಹೋಗೋದ್ರಲ್ಲಿ ಡೌಟಿಲ್ಲ. ಯಾಕಂದ್ರೆ ದ ವರ್ಲ್ಡ್​ ಈಸಿ ರಾಕಿ ಟೆರಿಟರಿ.

ಯಶ್​ ಈಗಾಗ್ಲೇ ಇಂಡಿಯನ್​ ಸಿಲ್ವರ್​ ಸ್ಕ್ರೀನ್​ ಮೇಲೆ ತಾನು ಏನು ಅಂತ ಪ್ರೂವ್​ ಮಾಡಿಯಾಗಿದೆ. ಆತ ಇಂಡಸ್ಟ್ರಿಯನ್ನ ನೋಡೋಕೆ ಬಂದಿರ್ಲಿಲ್ಲ.. ಆಳೋಕೆ ಬಂದಿದ್ದ. ಬಿಸ್ನೆಸ್​ ಮಾಡೋಣ? ಆಫರ್​ ಕ್ಲೋಸಸ್​ ಸೂನ್​ ಅಂತ ಹೇಳಿ, ಎಂಟೈರ್​ ಸಿನಿಮಾ ಪ್ರಪಂಚಕ್ಕೆ ಆಫರ್​ ಕೊಟ್ಟುಬಿಟ್ಟಿದ್ದ ನಟ. ಯಶ್​​ ಸಿನಿಮಾಗಳಂದ್ರೆ ಮಿನಿಮಮ್​ ಗ್ಯಾರಂಟಿ ಅನ್ನೋ ಟಾಕ್​ ಇತ್ತು. ಬಟ್ ಈಗ ಯಶ್​ ಮೂವಿಸ್​ ಅಂದ್ರೆ ಮ್ಯಾಕ್ಸಿಮಮ್​ ಬ್ಲಾಕ್​ಬಸ್ಟರ್​ ಅನ್ನೋ ಲೆವೆಲ್​ನಲ್ಲಿದೆ. 

ಇದನ್ನೂ ಓದಿ: ಟಾಕ್ಸಿಕ್​ ಟೀಸರ್​ ರಿಲೀಸ್! ಌಕ್ಷನ್ ಪ್ಯಾಕ್ಡ್ ದೃಶ್ಯದಲ್ಲಿ ಯಶ್​ ಫುಲ್ ರಾಕಿಂಗ್..! VIDEO

Toxic

ಕನ್ನಡ ಸಿನಿಮಾ ಇಂಡಸ್ಟ್ರಿ ರೆಕಾರ್ಡ್​ಗಳ ಕಾಲ ನೋಡಿದ್ದು. ಕೆಜಿಎಫ್​ ಅನ್ನೋ ಸುನಾಮಿಯಿಂದ. ಪವರ್​ಫುಲ್​ ಪೀಪನ್​ ಮೇಕ್​ ಪ್ಲೇಸಸ್​ ಪವರ್​ಫುಲ್​ ಅನ್ನೋದಕ್ಕೆ ಸುಲ್ತಾನನಾಗಿದ್ದ. ಆವತ್ತು ಅಂಜದ ಎದೆಯಲ್ಲಿ ನಂಜೇ ಇಲ್ಲ ಅಂತ ಹೇಳಿದ್ದ ರಾಮಾಚಾರಿ, ಈಗ ಪಕ್ಕಾ ನಂಜನ್ನೇ ತುಂಬ್ಕೊಂಡು ಬಂದು.. ಡೆಡ್ಲಿ ಟಾಕ್ಸಿಕ್​ ಆಗಿ ಎಂಟ್ರಿ ಕೊಟ್ಟಿದ್ದಾನೆ. ನಿಮ್ಗೆ ಗೊತ್ತಿರೋ ಹಾಗೆ ಟಾಕ್ಸಿಕ್​ ಅಂದ್ರೆನೇ ವಿಷಕಾರಿ.. ನಂಜು ಅಂತ ಅರ್ಥ.. ಅದೆಷ್ಟು ವಿಷಕಾರಿ ಅಂತ ಟೀಸರ್​ ನೋಡಿದ್ರೇನೆ ಅರ್ಥವಾಗಿಬಿಡ್ತಿದೆ.

ಕನ್ನಡದ ಕಿರುತೆರೆಗಳಿಂದ ಹಿಡಿದು.. ₹150 ಕೋಟಿ ಗ್ಲೋಬಲ್​ ಬ್ರ್ಯಾಂಡ್​ವರೆಗೆ, 'ರಾಕಿಂಗ್ ಸ್ಟಾರ್' ಇಟ್ಟ ಹೆಜ್ಜೆ ದೊಡ್ಡ ಸಂಕಲ್ಪದ್ದು. ಆ ಪೇಷನ್ಸ್​​.. ಆ ಪರ್ಫೇಕ್ಷನ್​.. ದೊಡ್ಡ ಲೆಗಸ್ಸಿಗೆ ಕಾರಣವಾಗಿದೆ.

Yash ಫ್ಯಾನ್ಸ್​ಗೆ ಮತ್ತೊಂದು ಗುಡ್​ನ್ಯೂಸ್​; ಸಿಂಗರ್​ ಹನಿಸಿಂಗ್​ಗೆ ರಾಕಿಂಗ್ ಸ್ಟಾರ್​ ಹೇಳಿದ್ದೇನು?

ಯಶ್​ ಅಂದ್ರೆ ಒಂದು ಬ್ರ್ಯಾಂಡ್​!

ನಿಮ್ಗೆಲ್ಲಾ ಗೊತ್ತಿರೋ ಹಾಗೆ.. ಜನವರಿ ಎಂಟು ಯಶ್ ಬರ್ತ್​ಡೇ. 40ರ ಪ್ರಾಯಕ್ಕೆ ಟರ್ನ್​ ಆಗ್ತಿರೋ ಯಶ್, ಈ ದಿನ ಯಾವಾಗಿನಂತೆ ಅಭಿಮಾನಿಗಳಿಗೆ ಸಿಗಲು ಆಗ್ತಿಲ್ಲ. ಯಾಕಂದ್ರೆ ಅಭಿಮಾನಿಗಳ ನಿರೀಕ್ಷೆಯನ್ನ ಮುಟ್ಟಬೇಕು ಅಂದ್ರೆ.. ಕೊಂಚ ದಿನ ದೂರ ಇರ್ಬೇಕಾಗುತ್ತೆ. ಹಾಗಂತ ಯಶ್​ ಅಭಿಮಾನಿಗಳನ್ನ ಮರೆತಿಲ್ಲ.. ಅಭಿಮಾನಿಗಳು ಯಶ್​ನ್ನ ಮರೆತಿಲ್ಲ. 

ಮೆಟ್ರೋ ಮೇಲೆ ಯಶ್​ನ ಪೋಸ್ಟರ್ಸ್​. ವಿಶಸ್​.. ಈ ಪರಿಯಲ್ಲಿ ಅಬ್ಬಿದ್ದು ಇದೇ ಮೊದಲು. ಯಾವ ಸ್ಟಾರ್​ಗೂ ಸಿಗದ ಮಾನ್ಯತೆ ಯಶ್​ಗೆ ಸಿಕ್ಕಿದೆ. ರೋಡ್​ ತುಂಬಾ ಬ್ಯಾನರ್​ಗಳು.. ಕಟೌಟ್​ಗಳು ಫ್ಯಾನ್ಸ್​​ನ ಜೋಶ್​.. ಸೆಲೆಬ್ರೇಷನ್ಸ್​ ಭರ್ಜರಿಯಾಗಿತ್ತು. ಸಿನಿಮಾ ಇಂಡಸ್ಟ್ರಿಯಲ್ಲಿ ನಿಲ್ಬೇಕು. ಗೆಲ್ಬೇಕು ಅಂತ ಹಠ ಹಿಡಿದು ಬಂದು. ಕೆಜಿಎಫ್​ನಂಥ ಸಿನಿಮಾವನ್ನ ಹಠದಿಂದಲೇ ಮಾಡಿ ಗೆದ್ದಿದ್ರು.

ಇದನ್ನೂ ಓದಿ: ‘ಟಾಕ್ಸಿಕ್’ ಹುಮಾ ಖುರೇಷಿ ಫಸ್ಟ್​ ಲುಕ್ ಔಟ್! ಹೆಂಗಿದೆ..?

ಯಾರೋ ಹತ್ತು ಜನ್ರ ಹೊಡೆದು ಡಾನ್​ ಆದೋನಲ್ಲ ಅಲ್ಲ ಕಣೋ ನಾನು. ನಾನು​ ಹೊಡೆದ ಹತ್ತು ಜನಾನೂ ಡಾನೇ ಅನ್ನೋ ಹಾಗೆ.. ಯಾವೋ ಹತ್ತು ಸಿನಿಮಾ ಹಿಟ್​ ಕೊಟ್ಟು ಇಂಡಸ್ಟ್ರಿಗೆ ಬಂದೋನಲ್ಲ.. ಕೊಟ್ಟ ಎಲ್ಲಾ ಸಿನಿಮಾಗಳೂ ಹಿಟ್ಟೇ. ಇವತ್ತಿಗೂ ಇಡಿ ಪ್ರಪಂಚ ಕೆಜಿಎಫ್​ ಮೂವಿ ಬಗ್ಗೆ ಮಾತನಾಡುತ್ತೆ ಅಂದ್ರೆ, ಅದ್ರ ಹವಾ ಮಾಮೂಲಿಯದ್ದಲ್ಲ. 2018 ರಲ್ಲಿ ಬಂದಿದ್ದ ಕೆಜಿಎಫ್​ ಚಾಪ್ಟರ್​ 01.. ಕನ್ನಡ ಇಂಡಸ್ಟ್ರಿಗೆ ಹೊಸ ಅಲೆ.. 2022 ರಲ್ಲಿ ಬಂದಿದ್ದ ಚಾಪ್ಟರ್​ 2 ಹೊಸ ದಾಖಲೆ.

ಯಶ್​ನ ಲೈಫ್​ಸ್ಟೈಲ್​ ಫುಲ್​ ಬದ್ಲಾಗಿದೆ. ಹಾಕೋ ಬಟ್ಟೆಯಿಂದ, ಮಾತನಾಡೋ ಮಾತುಗಳು.. ಓಡಾಡುವ ದಿಕ್ಕು.. ಇರುವ ಮನೆ.. ಎಲ್ಲಾ ಪ್ರತಿಯೊಂದು ಬದ್ಲಾಗಿದೆ. ಇತ್ತಿಚೆಗೆ ಯಶ್​ ಕೊಡುವ ಸ್ಪೀಚಸ್​ ಯುವಕರಿಗೆ ಸ್ಫೂರ್ತಿ ತುಂಬ್ತಿವೆ. ಯಶ್​ ಒಬ್ಬ ಒಳ್ಳೆ ಮೋಟಿವೇಷನ್​​ ಮಾತುಗಾರ ಕೂಡ.

Kalki 2898 AD ರಿಲೀಸ್​​ ದಿನವೇ ಯಶ್ 'ಟಾಕ್ಸಿಕ್' ತಂಡದಿಂದ ಬಂತು ದೊಡ್ಡ ಸುದ್ದಿ; ಫ್ಯಾನ್ಸ್‌ಗೆ ಗುಡ್‌ನ್ಯೂಸ್‌!

ನಾಲ್ಕು ವರ್ಷ ಕಳೆದ್ವು.. ಯಶ್​ ಸಿನಿಮಾಗಾಗಿ ಕಾದಿದ್ದ ಅಭಿಮಾನಿಗಳಿಗೆ ಇನ್ನೂ ಕಾತರ ಇದೆ. ಕೆಜಿಎಫ್​ನ ಹ್ಯಾಂಗ್​ಓವರ್ ಜನರಲ್ಲಿ ಇನ್ನೂ ಹಾಗೆ ಇದೆ. ಆಗ ಆ ಸಿನಿಮಾಗೆ ಬಂದಿದ್ದ ಓಪನಿಂಗ್​. ₹1,200 ಕೋಟಿ ದಾಟಿದ್ದ ಭರ್ಜರಿ ಫ್ರಾಂಚೈಸ್​.. ಇಡೀ ವರ್ಲ್ಡ್​ ನೋಡಿತ್ತು. ಬಟ್​ ಈಗ ಟಾಕ್ಸಿಕ್​ನ ಪಾಯಿಸನ್​ ನೋಡುಗರ ನೆತ್ತಿಗೇರಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರದಿಂದ ನಟಿ ಕಿಯಾರಾ ಅಡ್ವಾಣಿ ಫಸ್ಟ್ ಲುಕ್ ರಿಲೀಸ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.  

Yash Toxic movie Toxic: A Fairy Tale for Grown-Ups
Advertisment