/newsfirstlive-kannada/media/media_files/2025/09/11/s-narayana-2025-09-11-15-00-48.jpg)
ಬೆಂಗಳೂರು: ಕಲಾ ಸಮ್ರಾಟ ಎಸ್.ನಾರಾಯಣ್ (S Narayan) ವಿರುದ್ಧ ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪ ಪ್ರಕರಣದಲ್ಲಿ ಖ್ಯಾತ ನಿರ್ದೇಶಕ A2 ಆಗಿದ್ದಾರೆ.
ತಮ್ಮ ಮೇಲಿನ ಆರೋಪಕ್ಕೆ ಸಂಬಂಧಿಸಿ ಎಸ್.ನಾರಾಯಣ್ ಪ್ರತಿಕ್ರಿಯಿಸಿದ್ದಾರೆ. ಒಂದು ವರ್ಷದ ಹಿಂದೆಯೇ ಸೊಸೆ ಮನೆ ಬಿಟ್ಟು ಹೋಗಿದ್ದಾರೆ. ಈಗ ದೂರು ವರದಕ್ಷಿಣೆ ಕಿರುಕುಳ ಅಂತ ದೂರು ಕೊಟ್ಟಿದ್ದಾರೆ. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಎಲ್ಲಾ ಹೆಣ್ಮಕ್ಕಳು ಮಾಡೋದು ಅದೊಂದೇ ಅಸ್ತ್ರ ಎಂದಿದ್ದಾರೆ.
ಇದನ್ನೂ ಓದಿ:ಖ್ಯಾತ ನಿರ್ದೇಶಕ ಎಸ್. ನಾರಾಯಣ್ ವಿರುದ್ಧ FIR, ಆಗಿದ್ದೇನು..?
ಹೆಣ್ಣು ಮಕ್ಕಳಿಗೆ ಬೇರೆ ಅಸ್ತ್ರ ಸಿಗುವುದಿಲ್ಲ. ಹಾಗಾಗಿ ಇಂತಹದ್ದೊಂದು ಅಸ್ತ್ರವನ್ನು ಬಳಸುತ್ತಿದ್ದಾರೆ. ನಾವೇನೋ ಹಿಂಸೆ ಕೊಟ್ಟಿದ್ದೇವೆ ಅಂತ ದೂರು ಕೊಟ್ಟಿದ್ದಾರೆ. ಅದು ಕೋರ್ಟಿಗೆ ಹೋಗಿದೆ. ನಾವು ಅದರ ಬಗ್ಗೆ ಹೇಳಿದ್ರೆ ಅವರಿಗೇ ಅವಮಾನ ಮಾಡಿದಂತೆ ಆಗುತ್ತೆ. ಪಾಪ ಹೆಣ್ಮಗು ಅಲ್ವಾ? ಅವರಿಗೆ ತೇಜೋವಧೆ ಮಾಡಬಾರದು ಎಂದಿದ್ದಾರೆ.
ಅವರಿಬ್ಬರೂ ಪ್ರೀತಿಸಿ ಮದುವೆ ಆಗಿದ್ದಾರೆ. ಅವರ ಮನೆಯವರಿಗೆ ಗೊತ್ತಿದ್ದು, ಕೊನೆಯ ಕ್ಷಣದಲ್ಲಿ ಬಂದು ನನಗೆ ಹೇಳುತ್ತಾರೆ. ನಾವು ವಿರೋಧ ಮಾಡಿಲ್ಲ. ಇಬ್ಬರನ್ನೂ ಮದುವೆ ಮಾಡಿ ಕೊಟ್ಡಿದ್ವಿ. ಒಂದು ಕುಟುಂಬಕ್ಕೆ ಸೊಸೆಯಾಗಿ ಬಂದ್ಮೇಲೆ ಆ ಕುಟುಂಬದ ಸಂಸ್ಕೃತಿ-ಸಂಸ್ಕಾರ ಅರ್ಥ ಮಾಡಿಕೊಂಡು ಬಾಳುವುದನ್ನು ಕಲಿಯಬೇಕು. ನಾವೆಲ್ಲ ಬುದ್ದಿ ಹೇಳುವುದಕ್ಕೆ ಆಗುವುದಿಲ್ಲ. ಇವತ್ತಿನ ಪೀಳಿಗೆ ಹಿರಿಯರು ಹೇಳಿದ ಯಾವುದೇ ಮಾತುಗಳನ್ನು ಕೇಳಿಸಿಕೊಳ್ಳುವುದಕ್ಕೆ ಸಿದ್ಧರಿರುವುದಿಲ್ಲ. ಇದು ದೊಡ್ಡ ದುರಂತ ಎಂದು ಬೇಸರ ಹೊರ ಹಾಕಿದ್ದಾರೆ.
ಇದನ್ನೂ ಓದಿ:ಇನ್ಸ್ಟಾಗ್ರಾಮ್ ಲವ್ ಸ್ಟೋರಿಯಿಂದ ಮೋಸ ಹೋದ ಅಸ್ಸಾಂ ಮಹಿಳೆ, ಬಂಗಾರುಪೇಟೆಯ ಪ್ರಿಯಕರನ ಮನೆಯಲ್ಲಿ ಆಗಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ