/newsfirstlive-kannada/media/media_files/2025/08/08/vishnuvardhan-smaraka-1-2025-08-08-15-21-49.jpg)
ನೆಲಸಮಗೊಂಡ ವಿಷ್ಣುವರ್ಧನ್ ಸಮಾಧಿ
ಸಾಹಸಸಿಂಹ ಡಾ.ವಿಷ್ಣವರ್ಧನ್ ಅವರ ಸ್ಮಾರಕವನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣು ಸ್ಮಾರಕ ನೆಲಸಮಗೊಂಡಿದೆ.
ಜಾಗದ ವಿಚಾರವಾಗಿ ಬಾಲಣ್ಣ ಕುಟುಂಬ ಹಾಗೂ ವಿಷ್ಣು ಅಭಿಮಾನಿಗಳ ಮಧ್ಯೆ ವಾಗ್ವಾದ ನಡೆಯುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಪುಣ್ಯಸ್ಮರಣೆಗೂ ಅವಕಾಶ ಕೊಟ್ಟಿರಲಿಲ್ಲ. ಇದೀಗ ರಾತ್ರೋರಾತ್ರಿ ವಿಷ್ಣು ಸಮಾಧಿ ನೆಲಸಮ ಆಗಿದೆ. ಇದು ವಿಷ್ಣುವರ್ಧನ್ ಅಭಿಮಾನಿಗಳಿಗೆ ತುಂಬಾ ನೋವುಂಟು ಮಾಡಿದೆ.
ಇದನ್ನೂ ಓದಿ: ಖ್ಯಾತ ನಟಿಯ ಕಸೀನ್ಗೆ ಚೂಪಾದ ವಸ್ತುವಿನಿಂದ ಇರಿತ.. ಆಸ್ಪತ್ರೆಗೆ ಹೋಗುವಷ್ಟರಲ್ಲಿ ಹೋಯಿತು ಜೀವ
/filters:format(webp)/newsfirstlive-kannada/media/media_files/2025/08/08/vishnuvardhan-smaraka-2025-08-08-15-27-58.jpg)
ವಿವಾದಿತ ಜಾಗದಲ್ಲಿ ವಿಷ್ಣುವರ್ಧನ್ ಅವರ 8 ಅಡಿ ಸ್ಮಾರಕ ಕೂಡ ಸ್ಥಾಪನೆ ಆಗಿತ್ತು. ವಿಷ್ಣುವರ್ಧನ್ ಅವರ 600 ಫೋಟೋಗಳ ಗ್ಯಾಲರಿ ಕೂಡ ಇಲ್ಲಿದೆ. ವಿಷ್ಣುವರ್ಧನ್ ಸ್ಮಾರಕದಲ್ಲಿ ಎರಡು ಕ್ಲಾಸ್ ರೂಮ್ ಕೂಡ ನಿರ್ಮಾಣ ಆಗಿತ್ತು, ಆಡಿಟೋರಿಯಂ ಕೂಡ ಇಲ್ಲಿ ನಿರ್ಮಾಣ ಮಾಡಲಾಗಿದೆ.
ಏನಿದು ವಿವಾದ..?
2009 ಡಿಸೆಂಬರ್ 30 ರಂದು ಸ್ಯಾಂಡಲ್ವುಡ್ ಸಾಹಸಸಿಂಹ ವಿಷ್ಣುವರ್ಧನ್ ನಿಧನರಾದರು. ಬಳಿಕ ಬೆಂಗಳೂರಿನ ಅಭಿಮಾನ್ ಸ್ಟುಡಿಯೊದಲ್ಲಿ ಅವರ ಸಮಾಧಿ ಮಾಡಲಾಗಿದೆ. ಇಲ್ಲೇ ಸ್ಮಾರಕ ನಿರ್ಮಿಸಬೇಕು ಅನ್ನೋದು ಅವರ ಅಭಿಮಾನಿಗಳ ಬೇಡಿಕೆ. ಆದರೆ, ಈ ಸ್ಟುಡಿಯೋ ಜಾಗ ವ್ಯಾಜ್ಯದಲ್ಲಿರುವುದೇ ಸ್ಮಾರಕ ನಿರ್ಮಾಣಕ್ಕೆ ಹಿನ್ನಡೆಗೆ ಕಾರಣವಾಗಿದೆ. ಸ್ಟುಡಿಯೊ ಕಾರ್ಯನಿರ್ವಹಣೆಯ ಸಂಬಂಧ ಸರ್ಕಾರ ತನಿಖೆ ನಡೆಸಿತ್ತು. ಈ ಸಂದರ್ಭದಲ್ಲಿ ತನಿಖಾ ತಂಡವು ಸ್ಟುಡಿಯೊದ 10 ಎಕರೆ ಭೂಮಿಯನ್ನು ಮುಟ್ಟುಗೋಲು ಹಾಕಲು ಸೂಚಿಸಿತ್ತು. ಈ ಸಂದರ್ಭದಲ್ಲಿ ನಟ ಬಾಲಕೃಷ್ಣ ಬಾಲಕೃಷ್ಣರ ಮಕ್ಕಳಿಂದ ಭೂಮಿ ಪರಭಾರೆಯ ಸೂಕ್ತ ದಾಖಲೆಗಳನ್ನಾಗಲೀ ದೃಢೀಕರಣ ಪತ್ರವನ್ನಾಗಲೀ ಮಾಡಿಸಿಕೊಳ್ಳದೆ ಎಡವಿತು. ಈ ಅವಕಾಶ ಬಳಸಿಕೊಂಡ ಬಾಲಕೃಷ್ಣ ಮಕ್ಕಳು 28.9.2015ರಲ್ಲಿ ಸರ್ಕಾರದ ಮುಟ್ಟುಗೋಲು ಆದೇಶದ ವಿರುದ್ಧ ಕೋರ್ಟ್ ಮೆಟ್ಟಿಲೇರಿದರು. ಸದ್ಯ ಪ್ರಕರಣ ಕೋರ್ಟ್ ಅಂಗಳದಲ್ಲಿದೆ.
ಇದನ್ನೂ ಓದಿ:ರಿಷಭ್ ಶೆಟ್ಟಿಗೆ ಜೊತೆಯಾದ ಕನಕವತಿ.. ಕಾಂತಾರ- 1 ರಲ್ಲಿ ರುಕ್ಮಿಣಿ ವಸಂತ್ ಪೋಸ್ಟರ್ ಲುಕ್..!
/filters:format(webp)/newsfirstlive-kannada/media/media_files/2025/08/08/vishnuvardhan-smaraka-2-2025-08-08-15-28-23.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ