/newsfirstlive-kannada/media/media_files/2025/08/13/director-muruli-mohan-2025-08-13-17-30-35.jpg)
ಬೆಂಗಳೂರು: ಸ್ಯಾಂಡಲ್ವುಡ್ನ ಹಿರಿಯ ನಿರ್ದೇಶಕ ಮುರಳಿ ಮೋಹನ್ (Sandalwood director Muruli Mohan) ನಿಧನರಾಗಿದ್ದಾರೆ. ಜೆಸಿ ರೋಡ್ ಬಳಿಯಿರುವ ಟ್ರಸ್ಟ್ವೆಲ್ ಆಸ್ಪತ್ರೆಯಲ್ಲಿ (Trustwell Hospitals Pvt. Ltd) ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಕೊನೆಯುಸಿರಿಳೆದಿದ್ದಾರೆ.
ಇದನ್ನೂ ಓದಿ: ನಾಳೆ ರಜನಿ ಫ್ಯಾನ್ಸ್ಗೆ ಹಬ್ಬವೋ ಹಬ್ಬ.. ಸರ್ವಂ ರಜನಿಮಯಂ; ವಿದೇಶದಲ್ಲೂ ಪ್ರೀ ಬುಕ್ಕಿಂಗ್ ದಾಖಲೆ!
ಮುರಳಿ ಮೋಹನ್ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿಂದೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಅನುದಾನದ ಅವಶ್ಯಕತೆಯಿದೆ ಎಂದು ಮನವಿ ಮಾಡಿಕೊಂಡಿದ್ದರು. ಐದಾರು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಮುರಳಿ ಮೋಹನ್, ಅವರ ಚಿಕಿತ್ಸೆಗೆ 25 ಲಕ್ಷ ರೂಪಾಯಿ ಬೇಕಾಗಿತ್ತು.
ಉಪೇಂದ್ರ ಆಪ್ತ ಸ್ನೇಹಿತರಾಗಿದ್ದ ಮುರಳಿ ಮೋಹನ್, ಕಾಶೀನಾಥ್ ಗರಡಿಯಲ್ಲಿ ಬೆಳೆದಿದ್ದರು. ಶಿವಣ್ಣ ನಟನೆಯ ಸಂತ, ಉಪ್ಪಿ ನಟನೆಯ ನಾಗರಹಾವು ಹಾಗೂ ರವಿಚಂದ್ರನ್ ನಟನೆಯ ಮಲ್ಲಿಕಾರ್ಜುನ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದರು. ಉಪ್ಪಿಯ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು.
ಇದನ್ನೂ ಓದಿ: ಅಭಿಮಾನಿ ಕೈ ಮೇಲೆ ಅರಳಿದ ಪವಿತ್ರ ಗೌಡ.. ಟ್ಯಾಟೂ ಕಂಡು ಅಕ್ಕ ಫುಲ್ ಖುಷ್ -Video
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ