ನಾಳೆ ರಜನಿ​ ಫ್ಯಾನ್ಸ್​ಗೆ ಹಬ್ಬವೋ ಹಬ್ಬ.. ಸರ್ವಂ ರಜನಿಮಯಂ; ವಿದೇಶದಲ್ಲೂ ಪ್ರೀ ಬುಕ್ಕಿಂಗ್​ ದಾಖಲೆ!

ನಾಳೆ ಸೂಪರ್​ ಸ್ಟಾರ್​ ರಜನಿಕಾಂತ್ ನಟನೆಯಲ್ಲಿ ಬಹುನಿರೀಕ್ಷಿತ ಕೂಲಿ ಸಿನಿಮಾ ರಿಲೀಸ್​ ಆಗುತ್ತಿದೆ. ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಸಿನಿಮಾ ಆಗಸ್ಟ್​ 14ರಂದು ವಿಶ್ವದಾದ್ಯಂತ ರಿಲೀಸ್​ ಆಗುತ್ತಿದೆ.

author-image
Veenashree Gangani
rajani coolie
Advertisment

ನಾಳೆ ತಲೈವಾ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾಗಳು ಎಂದರೆ ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟ. ರಜನಿಕಾಂತ್ ಹೊಸ ಸಿನಿಮಾ ಅನೌನ್ಸ್ ಆದ್ರೆ ಸಾಕು ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತೆ ಆಗುತ್ತೆ. ಅಷ್ಟರ ಮಟ್ಟಿಗೆ ಥಿಯೇಟರ್​ಗಳಲ್ಲಿ ಅವರ ಅಭಿಮಾನಿಗಳಂತೂ ರಜನಿಯವರ ಸ್ಟೈಲ್, ಡೈಲಾಗ್​ಗೆ ಕುಣಿದು ಕುಪ್ಪಳಿಸುತ್ತಿರುತ್ತಾರೆ.

ಇದನ್ನೂ ಓದಿ: ‘ನಾವಿಬ್ಬರು ಮ್ಯೂಚುಯಲ್ ಬ್ರೇಕಪ್ ಆಗಿದ್ದೇವೆ..’ ಭರ್ಜರಿ ಬ್ಯಾಚ್ಯುಲರ್ಸ್ ವಿನ್ನರ್​ ಸುನಿಲ್, ಅಮೃತಾ ಹೇಳಿದ್ದೇನು

rajani coolie(4)

ಇದಕ್ಕೆ ಸಾಕ್ಷಿ ಎಂಬಂತೆ ನಾಳೆ ರಜನಿಕಾಂತ್ ನಟನೆಯಲ್ಲಿ ಬಹುನಿರೀಕ್ಷಿತ ಕೂಲಿ ಸಿನಿಮಾ ರಿಲೀಸ್​ ಆಗುತ್ತಿದೆ. ಸ್ಟಾರ್​ ಹೀರೋನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನ ಮೇಲೆ ನಿಂತಿದ್ದಾರೆ. ಹೌದು, ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಸಿನಿಮಾ ಆಗಸ್ಟ್​ 14ರಂದು ವಿಶ್ವದಾದ್ಯಂತ ರಿಲೀಸ್​ ಆಗುತ್ತಿದೆ. 

rajani coolie(1)

ರಜನಿಕಾಂತ್​ ನಾಯಕನಾಗಿ ದಕ್ಷಿಣ ಹಾಗೂ ಉತ್ತರ ಭಾರತದ ಕಲಾವಿದರು ಅಭಿನಯಿಸಿರೋ ಕೂಲಿ ಸಿನಿಮಾ ತೆರೆಗೆ ಅಪ್ಪಳಿಸೋದಕ್ಕೆ ಸಜ್ಜಾಗಿದೆ. ಸದ್ಯ ಎಲ್ಲೆಡೆ ಕೂಲಿ ಮೇನಿಯಾ ಕಂಡು ಬಂದಿದೆ. ವಿಶೇಷ ಏನೆಂದರೆ ಕೂಲಿ ಸಿನಿಮಾದಲ್ಲಿ ಸ್ಯಾಂಡಲ್​ವುಡ್​ ಸ್ಟಾರ್ ನಟ ಉಪೇಂದ್ರ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್​ ನಟಿಸಿದ್ದಾರೆ. 

ಇದನ್ನೂ ಓದಿ:ಚಾಮರಾಜನಗರ: ಕಾವೇರಿ ವನ್ಯಜೀವಿಧಾಮದಲ್ಲಿ ಮತ್ತೆ ಎರಡು ಹುಲಿ ಮರಿಗಳು ದುರಂತ ಅಂತ್ಯ

rajani coolie(3)

ಈಗಾಗಲೇ ಚೆನ್ನೈನಲ್ಲಿ ಫಸ್ಟ್​ ಡೇ ಫಸ್ಟ್​ ಶೋಗಳು ಕಂಪ್ಲೀಟ್ ಸೋಲ್ಡ್​ ಔಟ್​ ಆಗಿವೆ. ಮಲ್ಟಿಪ್ಲೆಕ್ಸ್​​ವೊಂದರಲ್ಲೇ ಮೊದಲ ದಿನ ಒಟ್ಟು 56 ಶೋಗಳನ್ನು ಇಡಲಾಗಿದ್ದು, ಅಂದರೆ ಅಷ್ಟು ಶೋಗಳ ಟಿಕೆಟ್​ ಮಾರಾಟವಾಗಿದೆ. ಇನ್ನೂ, ತಮಿಳುನಾಡು ಸರ್ಕಾರ ಥೇಟರ್​ಗಳಲ್ಲಿ ಗರಿಷ್ಠ 150ರೂ, ಮಲ್ಟಿಪ್ಲೆಕ್ಸ್​ಗಳಲ್ಲಿ 160ರೂ ಹಾಗೂ ಐಮ್ಯಾಕ್ಸ್​ಗಳಲ್ಲಿ 480 ರೂ ಟಿಕೆಟ್​​ ದರವನ್ನು ನಿಗದಿ ಪಡಿಸಲಾಗಿದೆ.

rajani coolie(2)

ಅಮೆರಿಕಾದಲ್ಲಿ ಕೂಲಿ ಪ್ರೀ ಬುಕ್ಕಿಂಗ್​ ದಾಖಲೆ

ತಮಿಳು ಸಿನಿಮಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಮೆರಿಕಾದಲ್ಲಿ ಕೂಲಿ ಸಿನಿಮಾ ಪ್ರಿ ಬುಕ್ಕಿಂಗ್​ನಿಂದಲೇ 2 ಮಿಲಿಯನ್​ ಡಾಲರ್​ ಅಂದರೆ 17.55 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಇದನ್ನೂ ನಿರ್ಮಾಣ ಸಂಸ್ಥೆ ಸನ್​ ಪಿಕ್ಚರ್ಸ್​ ಅಧಿಕೃತವಾಗಿ ಘೋಷಣೆ ಮಾಡಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rajinikanth, SUPER STRA Rajinikanth
Advertisment