Vijay Thalapathy: ‘ಜನ ನಾಯಗನ್’ ಚಿತ್ರ ರಿಲೀಸ್​ಗೆ ಹೈಕೋರ್ಟ್ ಗ್ರೀನ್ ಸಿಗ್ನಲ್..!

ಕಾಲಿವುಡ್ ಹೀರೋ ವಿಜಯ್ ದಳಪತಿ ಅವರ ‘ಜನ ನಾಯಗನ್’ (Jana Nayagan) ಚಿತ್ರಕ್ಕೆ ಎದುರಾಗಿದ್ದ ಅಡೆತಡೆಗಳು ನಿವಾರಣೆ ಆಗಿವೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ಯು/ಎ 16+ ಪ್ರಮಾಣಪತ್ರ ನೀಡುವಂತೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ.

author-image
Ganesh Kerekuli
jana nayagan
Advertisment

ಕಾಲಿವುಡ್ ಹೀರೋ ವಿಜಯ್ ದಳಪತಿ ಅವರ ‘ಜನ ನಾಯಗನ್’ (Jana Nayagan) ಚಿತ್ರಕ್ಕೆ ಎದುರಾಗಿದ್ದ ಅಡೆತಡೆಗಳು ನಿವಾರಣೆ ಆಗಿವೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ಯು/ಎ 16+ ಪ್ರಮಾಣಪತ್ರ ನೀಡುವಂತೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ. ‘ಜನ ನಾಯಗನ್’ ಚಿತ್ರಕ್ಕೆ ತಕ್ಷಣವೇ UA ಪ್ರಮಾಣಪತ್ರ ನೀಡುವಂತೆ ಸಿಬಿಎಫ್‌ಸಿಗೆ ಆದೇಶಿಸಲಾಗಿದೆ.

ಮದ್ರಾಸ್ ಹೈಕೋರ್ಟ್, ಇಂದು ‘ಜನ ನಾಯಗನ್’ ನಿರ್ಮಾಪಕರ ಪರವಾಗಿ ತೀರ್ಪು ನೀಡಿದೆ. ಇದರೊಂದಿಗೆ ವಿಜಯ್ ಅವರ ಕೊನೆಯ ಚಿತ್ರ ಬಿಡುಗಡೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿ ಪಿಟಿ ಆಶಾ, ಈ ಆದೇಶ ಹೊರಡಿಸಿದ್ದಾರೆ. 

ಕೊನೆಯ ಕ್ಷಣದಲ್ಲಿ ಚಿತ್ರ ಮುಂದೂಡಲು ಕಾರಣವಾದ ಪ್ರಮುಖ ಅಡಚಣೆ ನಿವಾರಣೆ ಆಗಿದೆ. ಆದರೆ ತೀರ್ಪು ಬಂದರೂ, ನಿರ್ಮಾಪಕರು ಬಿಡುಗಡೆಯ ಹೊಸ ದಿನಾಂಕವನ್ನು ಇನ್ನೂ ಘೋಷಣೆ ಮಾಡಿಲ್ಲ. ವರದಿಗಳ ಪ್ರಕಾರ, ಜನ ನಾಯಗನ್ ಮುಂದಿನ ಎರಡು ದಿನಗಳಲ್ಲಿ ರಿಲೀಸ್ ಮಾಡಬಹುದು. 

ಇದನ್ನೂ ಓದಿ:647 ಕ್ವಿಂಟಲ್ ಮಾದಲಿ, 19 ಲಕ್ಷ ರೊಟ್ಟಿ! ಗವಿ ಜಾತ್ರೆಗೆ ಬಂದ ಭಕ್ತರ ಸಂಖ್ಯೆ ಎಷ್ಟು..?

ಜನ ನಾಯಗನ್ ಚಿತ್ರವು ಜನವರಿ 9 ರಂದು (ಇಂದು) ಬಿಡುಗಡೆಯಾಗಬೇಕಿತ್ತು. ಸೆನ್ಸಾರ್ ಆಗದ ಕಾರಣ ಬಿಡುಗಡೆ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ. ತಮ್ಮ ನಿಯಂತ್ರಣ ಮೀರಿದ ಅನಿರೀಕ್ಷಿತ ಸಂದರ್ಭಗಳಿಂದಾಗಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಚಿತ್ರ ನಿರ್ಮಾಣ ಕಂಪನಿ ಕೆವಿಎನ್ ಪ್ರೊಡಕ್ಷನ್ಸ್ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿತ್ತು. 

ಚಿತ್ರದ ಬಗ್ಗೆ ಸಿಬಿಎಫ್‌ಸಿ ಅಧ್ಯಕ್ಷರಿಗೆ ದೂರು ಬಂದ ಬೆನ್ನಲ್ಲೇ ಸೆನ್ಸಾರ್​​ ತಡೆಹಿಡಿಯಲಾಗಿತ್ತು ಅಂತಾ ಸೆನ್ಸಾರ್ ಸಮಿತಿಯ ಸದಸ್ಯರೊಬ್ಬರು ಕೋರ್ಟ್​ಗೆ ತಿಳಿಸಿದ್ದಾರೆ. ಸಮಿತಿಯ ಉಳಿದ ನಾಲ್ವರು ಸದಸ್ಯರು ಚಿತ್ರಕ್ಕೆ ಯು/ಎ 16+ ಪ್ರಮಾಣಪತ್ರ ನೀಡಲು ಶಿಫಾರಸು ಮಾಡಿದ್ದರು. ಜನ ನಾಯಗನ್ ಚಿತ್ರಕ್ಕೆ ಹೆಚ್. ವಿನೋದ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪೂಜಾ ಹೆಗ್ಡೆ, ಮಮಿತಾ ಬೈಜು ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಯಶ್​ ನೆಟ್ಟ ಸಿನಿಮಾ ಮೈಲಿಗಲ್ಲು.. Toxic ಟೀಸರ್​ಗೆ ಸಿನಿ ಪ್ರಪಂಚವೇ ಸ್ಟನ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.  

jana nayagan vijay thalapathy
Advertisment