/newsfirstlive-kannada/media/media_files/2025/12/25/mark-movie-3-2025-12-25-09-34-49.jpg)
ಸಿನಿ ರಸಿಕರಿಗೆ ಇವತ್ತು ಸುಗ್ಗಿ. ಸ್ಯಾಂಡಲ್​ವುಡ್​ನ ಬಿಗ್​ ಸ್ಟಾರ್​ಗಳ ಎರಡು ಚಿತ್ರಗಳು ರಿಲೀಸ್ ಆಗಿವೆ. ಕಿಚ್ಚ ಸುದೀಪ್ ಅಭಿಯನಯ ಮಾರ್ಕ್ ಹಾಗೂ ಶಿವಣ್ಣ, ಉಪೇಂದ್ರ, ರಾಜ್​ ಬಿ ಶೆಟ್ಟಿ ಅಭಿನಯದ 45 ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗಿವೆ.
ಮಾರ್ಕ್​​ vs 45
ಕಿಚ್ಚ ಸುದೀಪ್ ಅಭಿನಯದ ಮಾರ್ಕ್​ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಫ್ಯಾನ್ಸ್ ವಾರಗಳ ಮಧ್ಯೆ ರಿಲೀಸ್ ಆಗ್ತಿರುವ ಮಾರ್ಕ್​​, ಸಾಕಷ್ಟು ಕುತೂಹಲ ಮೂಡಿಸಿದೆ. ವೀಕ್ಷಕರು ಯಾವ ರೀತಿ ಮಾರ್ಕ್​ಗೆ ಎಷ್ಟು ಮಾರ್ಕ್ಸ್ ನೀಡ್ತಾರೆ ಅನ್ನೋದು ಸದ್ಯದ ಪ್ರಶ್ನೆ. ರಾಜ್ಯದ ಪ್ರಮುಖ ಥಿಯೇಟರ್​ಗಳಲ್ಲಿ ರಿಲೀಸ್ ಆಗಿರುವ ಈ ಚಿತ್ರಕ್ಕೆ ಪ್ರಸ್ತತ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಇದನ್ನೂ ಓದಿ: ದಚ್ಚು-ಕಿಚ್ಚನ ವಿವಾದಕ್ಕೆ ರಕ್ಷಿತಾ ಕಾಮೆಂಟ್.. ಏನಂದ್ರು..?
/filters:format(webp)/newsfirstlive-kannada/media/media_files/2025/12/10/mark-movie-1-2025-12-10-16-43-35.jpg)
ಮಾರ್ಕ್ ಸಿನಿಮಾ
ಮಾರ್ಕ್ ಚಿತ್ರವು, ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ರಿಲೀಸ್ ಆಗ್ತಿದೆ. ವಿಜಯ್ ಕಾರ್ತಿಕೇಯ ನಿರ್ದೇಶದ ಆ್ಯಕ್ಷನ್, ಡ್ರಾಮಾ, ಕ್ರೈಮ್ ಥ್ರಿಲ್ಲರ್ ಚಿತ್ರ ಇದಾಗಿದೆ. ಚಿತ್ರಕ್ಕೆ ಸತ್ಯ ಜ್ಯೋತಿ ಫಿಲ್ಮ್ಸ್​ ಹಾಗೂ ಕಿಚ್ಚ ಕ್ರಿಯೇಷನ್ ಬಂಡವಾಳ ಹಾಕಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಅರ್ಜನ್​ ಜನ್ಯ ಆ್ಯಕ್ಷನ್ ಕಟ್ 45!
ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಅವರು ಮೊದಲ ಬಾರಿಗೆ ನಿರ್ದೇಶ ಮಾಡಿರುವ ಚಿತ್ರ 45. ಸ್ಯಾಂಡಲ್​​ವುಡ್​ನ ಬಿಗ್​ ಸ್ಟಾರ್​ಗಳಾದ ಶಿವಣ್ಣ, ಉಪೇಂದ್ರ, ಪ್ರಮೋದ್ ಶೆಟ್ಟಿ, ರಾಜ್​ ಬಿ ಶೆಟ್ಟಿ ಹಾಗೂ ಸುಧಾರಾಣಿ ಅಭಿನಯಿಸಿರುವ ಚಿತ್ರ ಇದಾಗಿದೆ. ರಾಜ್ಯಾದ್ಯಂತ ರಿಲೀಸ್ ಕಂಡಿರುವ ಈ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರಕ್ಕೆ ರಮೇಶ್ ರೆಡ್ಡಿ ಬಂಡವಾಳ ಹಾಕಿದ್ದಾರೆ.
ಇದನ್ನೂ ಓದಿ:45 Movie Review: ನಾಳೆ ತೆರೆಗೆ ಬರಲು ಸಿದ್ಧವಾಗಿರುವ 45 ಚಿತ್ರಕ್ಕೆ ನಾಯಕರು ಎಷ್ಟು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us