/newsfirstlive-kannada/media/media_files/2025/11/12/gaddappa-2025-11-12-12-44-17.jpg)
ಮಂಡ್ಯ: ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ (Thithi fame Gaddappa) ನಿಧನರಾಗಿದ್ದಾರೆ. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಮಂಡ್ಯ ತಾಲೂಕಿನ ನೊದೆ ಕೊಪ್ಪಲು ಗ್ರಾಮದಲ್ಲಿ ಅವರು ನಿಧನರಾಗಿದ್ದಾರೆ. ಗಡ್ಡಪ್ಪ ಅವರ ಮೂಲ ಹೆಸರು ಚನ್ನೇಗೌಡ (89). ನೊದೆ ಕೊಪ್ಪಲು ಗ್ರಾಮದ ಇವರು, ತಿಥಿ ಸಿನಿಮಾ ಬಳಿಕ ಹೆಚ್ಚು ಜನಪ್ರಿಯತೆ ಪಡೆದರು.
ಗಡ್ಡಪ್ಪಗೆ ಏನಾಗಿತ್ತು..?
ಗಡ್ಡಪ್ಪ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ತಿಂಗಳ ಹಿಂದೆ ಬಿದ್ದು ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದರು. ಬಳಿಕ ಆಪರೇಷನ್ ಆಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸಂಜೆ ಸ್ವಗ್ರಾಮ ನೊದೆಕೊಪ್ಪಲು ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಗಡ್ಡಪ್ಪ ಪುತ್ರಿ ಶೋಭಾ ತಿಳಿಸಿದ್ದಾರೆ.
ಇದನ್ನೂ ಓದಿ: RCB ತಂಡದಿಂದ 5 ಆಟಗಾರರು ರಿಲೀಸ್ ಪಕ್ಕಾ.. ಪರ್ಸ್​ನಲ್ಲಿ ಹಣ ಎಷ್ಟಿದೆ?
/filters:format(webp)/newsfirstlive-kannada/media/media_files/2025/11/12/gaddappa-1-2025-11-12-12-45-43.jpg)
ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾ ತಿಥಿ. ಈ ಸಿನಿಮಾದಲ್ಲಿ ಗಡ್ಡಪ್ಪ ತುಂಬಾ ಫೇಮಸ್ ಆದರು. ನಂತರ ‘ತರ್ಲೆ ವಿಲೇಜ್’ ‘‘ಏನ್ ನಿನ್ ಪ್ರಾಬ್ಲಮ್ಮು’ ಚಿತ್ರದಲ್ಲಿ ನಟಿಸಿದ್ದರು. ತಿಥಿ, ತರ್ಲೆ ವಿಲೇಜ್, ಜಾನಿ ಮೇರಾ ನಾಮ್, ಹಳ್ಳಿ ಪಂಚಾಯಿತಿ ಸೇರಿ ಸುಮಾರು 8 ಸಿನಿಮಾಗಳಲ್ಲಿ ಅಭಿನಯ ಮಾಡಿದ್ದರು.
ಇದನ್ನೂ ಓದಿ:BBK12 ಜಗಳದಿಂದ ಬಂದ ಅವಕಾಶನೂ ಕಳಕೊಂಡ್ರಾ ರಾಶಿಕಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us