/newsfirstlive-kannada/media/media_files/2025/11/12/rashika-2025-11-12-11-40-46.jpg)
ಕ್ಯಾಪ್ಟನ್ ಮಾಳು ರಾಶಿಕಾ, ದ್ರುವಂತ್, ಸುಧಿ, ರಕ್ಷಿತಾ, ಅಶ್ವಿನಿ ಹಾಗೂ ಜಾಹ್ನವಿಯನ್ನು ಈ ವಾರ ನಾಮಿನೇಟ್ ಮಾಡಿದ್ದರು. ರಿಷಾ ಡೈರೆಕ್ಡ್ ನಾಮಿನೇಟ್ ಆಗಿರೋದ್ರಿಂದ ಅವರನ್ನು ಹೊರತುಪಡಿಸಿ ಉಳಿದವರಿಗೆ ತಮ್ಮನ್ನು ತಾವು ಸೇಫ್ ಮಾಡಿಕೊಳ್ಳಲು ಬಿಗ್‌ಬಾಸ್ ಒಂದು ಅವಕಾಶ ನೀಡಿದ್ದರು.
ಬಿಗ್‌ಬಾಸ್ ನೀಡಿದ್ದ ಟಾಸ್ಕ್‌ನಲ್ಲಿ ಗೆದ್ದ ನಾಮಿನೇಟೆಡ್ ತಂಡ ಈಗ ತಮ್ಮಲ್ಲಿ ಒಬ್ಬರನ್ನು ಸೇಫ್ ಮಾಡಿ ಸೇಫ್ ಇರೋ ತಂಡದಿಂದ ಒಬ್ಬರನ್ನು ನಾಮಿನೇಟ್ ಮಾಡುವ ಅವಕಾಶವನ್ನು ನೀಡಲಾಗಿತ್ತು. ಟಾಸ್ಕ್‌ನಲ್ಲಿ ರಾಶಿಕಾ ಚೆನ್ನಾಗಿ ಆಟ ಆಡಿರೋದ್ರಿಂದ ತಾನು ಸೇಫ್ ಆಗಬೇಕು ಅಂದುಕೊಂಡಿದ್ರೆ, ಕಾಕ್ರೋಚ್ ಸುಧಿಯೂ ತಾವು ಸೇಫ್ ಆಗಬೇಕು ಎಂದು ಪಟ್ಟು ಹಿಡಿದಿದ್ದರು. ಇವರಿಬ್ಬರ ನಡುವೆ ವೋಟಿಂಗ್ ನಡೆದಾಗ ಎಲ್ಲರೂ ರಾಶಿಕಾರನ್ನು ಬೆಂಬಲಿಸಿದ್ರೆ, ರಕ್ಷಿತಾ ಮಾತ್ರ ಸುಧಿಗೆ ಸಪೋರ್ಟ್ ಮಾಡಿದ್ದಾರೆ.
ಇದನ್ನೂ ಓದಿ: ರಕ್ಷಿತಾಳನ್ನ ವಿಷಕಾರಿ ಎಂದ ರಾಶಿಕಾ.. ನಾಮಿನೇಟ್ ವಿಚಾರದಲ್ಲಿ ದೊಡ್ಡ ಗಲಾಟೆ..! VIDEO
/filters:format(webp)/newsfirstlive-kannada/media/media_files/2025/11/12/bigg-boss-1-2025-11-12-09-59-50.jpg)
ಇದು ರಾಶಿಕಾ ಹಾಗೂ ರಕ್ಷಿತಾ ನಡುವೆ ಜಗಳಕ್ಕೆ ಕಾರಣವಾಗಿದೆ. ಇಂಥ ಒಬ್ಬರು ವಿಷಕಾರಿ ತಂಡದಲ್ಲಿದ್ರೆ ಯಾರು ಸೇಫ್ ಆಗೋಕಾಗಲ್ಲ ಎಂದು ರಾಶಿಕಾ ಕಿಡಿಕಾರಿದ್ದಾರೆ. ಮಾತ್ರವಲ್ಲ ಕಳೆದ ನಾಲ್ಕು ವಾರದಿಂದ ತಾನು ನಾಮಿನೇಟೆಡ್ ಆಗಿರೋದ್ರಿಂದ ಈ ವಾರವಾದ್ರೂ ತನಗೆ ಸೇಫ್ ಆಗೋ ಅವಕಾಶ ಕೊಡಬೇಕು ಎಂದಿದ್ದಾರೆ. ಇದಕ್ಕೆ ಉತ್ತರಿಸಿರೋ ರಕ್ಷಿತಾ ತಾನೂ ಅಷ್ಟೂ ವಾರಗಳಿಂದ
ನಾಮಿನೇಟ್ ಆಗೇ ಇರೋದ್ರಿಂದ ಆ ಕಾರಣಕ್ಕೆ ಸೇಫ್ ಮಾಡೋದು ಸರಿಯಲ್ಲ ಎಂದು ವಾದಿಸಿದ್ದಾರೆ.
ರಕ್ಷಿತಾ ನಾಮಿನೇಟೆಡ್ ತಂಡದಲ್ಲಿದ್ರೂ ಅವರಿಗೆ ಟಾಸ್ಕ್ ವಿಷ್ಯ ಬಂದಾಗ ಆಟ ಆಡುವ ಅವಕಾಶವನ್ನೇ ನೀಡಿರಲಿಲ್ಲ. ಅದೇ ಅವರ ಈ ನಿರ್ಧಾರಕ್ಕೆ ಕಾರಣವಾಯ್ತಾ? ಅಂತು ತಂಡ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಗದೆ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಅನ್ನೋ ಹಾಗಾಗುತ್ತ ಅನ್ನೋದನ್ನ ನೋಡಿ ಬಿಗ್‌ಬಾಸ್‌ನಲ್ಲಿ .
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us