ರಕ್ಷಿತಾಳನ್ನ ವಿಷಕಾರಿ ಎಂದ ರಾಶಿಕಾ.. ನಾಮಿನೇಟ್ ವಿಚಾರದಲ್ಲಿ ದೊಡ್ಡ ಗಲಾಟೆ..! VIDEO

ಬಿಗ್​​ಬಾಸ್​ನಲ್ಲಿ ಕ್ಯಾಪ್ಟನ್​​ ಮಾಳು ತಮ್ಮ ಸಿಕ್ಕ ವಿಶೇಷ ಅಧಿಕಾರದಲ್ಲಿ ಆರು ಮಂದಿಯನ್ನು ನಾಮಿನೇಟ್ ಮಾಡಿದ್ದಾರೆ. ಬೆನ್ನಲ್ಲೇ ಬಿಗ್​ಬಾಸ್ ನೀಡಿದ ವಿಶೇಷ ಚಟುವಟಿಕೆಯಲ್ಲಿ ರಾಶಿಕಾ ಮತ್ತು ರಕ್ಷಿತಾ ನಡುವೆ ದೊಡ್ಡ ಗಲಾಟೆ ಆಗಿದೆ.

author-image
Ganesh Kerekuli
Bigg Boss (1)
Advertisment

ಬಿಗ್​​ಬಾಸ್​ನಲ್ಲಿ ಕ್ಯಾಪ್ಟನ್​​ ಮಾಳು ತಮ್ಮ ಸಿಕ್ಕ ವಿಶೇಷ ಅಧಿಕಾರದಲ್ಲಿ ಆರು ಮಂದಿಯನ್ನು ನಾಮಿನೇಟ್ ಮಾಡಿದ್ದಾರೆ. 

ಅಶ್ವಿನಿ ಗೌಡ, ಸುಧೀ, ರಕ್ಷಿತಾ ಶೆಟ್ಟಿ, ಧ್ರುವಂತ್, ರಾಶಿಕಾ ಶೆಟ್ಟಿ ಹಾಗೂ ಜಾಹ್ನವಿಯನ್ನು ನಾಮಿನೇಟ್ ಮಾಡಿದ್ದಾರೆ. ನಾಮಿನೇಟ್ ಬೆನ್ನಲ್ಲೇ ಬಿಗ್​ಬಾಸ್​, ಎರಡು ತಂಡಗಳನ್ನಾಗಿ ಮಾಡಿದ್ದಾರೆ. ಒಂದು ಈ ವಾರ ಮನೆಯಿಂದ ನಾಮಿನೇಟ್ ಆಗಿರುವ ಟೀಂ. ಇನ್ನೊಂದು ಸೇವ್ ಆಗಿರುವ ತಂಡ. 

ಅದಾದ ನಂತರ ಬಿಗ್​ಬಾಸ್ ಮತ್ತೊಂದು ಸ್ಪೆಷಲ್ ಟಾಸ್ಕ್​ ನೀಡಿದ್ದರು. ಆ ಟಾಸ್ಕ್​ನಲ್ಲಿ ನಾಮಿನೇಟ್ ಆಗಿರುವ ತಂಡ ಗೆದ್ದುಕೊಂಡಿತ್ತು. ಗೆದ್ದ ರಿವಾರ್ಡ್​ ಏನೆಂದರೆ, ನಾಮಿನೇಟ್ ತಂಡದ ಓರ್ವ ಸದಸ್ಯನನ್ನು ಸೇವ್ ಮಾಡಬೇಕಿದೆ. ಜೊತೆಗೆ ಸೇವ್ ಆಗಿರುವ ತಂಡದಿಂದ ಓರ್ವ ಸದಸ್ಯನ ನಾಮಿನೇಟ್ ಮಾಡಬೇಕಿದೆ. 

ಇದನ್ನೂ ಓದಿ: ಸಂಪೂರ್ಣ ಅಧಿಕಾರ ಪಡೆದು 6 ಜನರನ್ನು ನಾಮಿನೇಟ್ ಮಾಡಿದ ಕ್ಯಾಪ್ಟನ್ ಮಾಳು

ಇದೇ ವಿಚಾರಕ್ಕೆ ನಾಮಿನೇಟ್ ತಂಡದಲ್ಲಿ ದೊಡ್ಡ ಗಲಾಟೆ ಆಗಿದೆ. ರಕ್ಷಿತಾ ಕಾಕ್ರೋಚ್ ಸುಧಿ ಸೇವ್ ಆಗಬೇಕು ಎಂದು ವಾದಿಸುತ್ತಿದ್ದಾರೆ. ಇತ್ತ ರಾಶಿಕಾ ಪ್ರತಿವಾರ ನಾನು ನಾಲ್ಕು ವಾರದಿಂದ ನಾಮಿನೇಟ್ ಆಗ್ತಿದ್ದೇನೆ. ಈ ಸಲ ನನಗೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಅದಕ್ಕೆ ರಕ್ಷಿತಾ ಒಪ್ಪಿಲ್ಲ. ರಕ್ಷಿತಾ ಒಂಟಿ ಹಿಡಿತ ಸಾಧಿಸಿದ್ದು, ಇಬ್ಬರ ಮಧ್ಯೆ ಗಲಾಟೆ ಆಗಿದೆ. 

ರಕ್ಷಿತಾರನ್ನು ರಾಶಿಕಾ ವಿಷಕಾರಿ ಎಂದು ಕರೆದಿದ್ದಾರೆ. ಈ ನಿರ್ಧಾರ ಒಬ್ಬಳ ಮೇಲೆ ಆಗೋಕೆ ನಾನು ಬಿಡಲ್ಲ ಎಂದು ರಾಶಿಕಾ ಕಿಡಿಕಾರಿದ್ದಾರೆ. ಇತ್ತ ರಕ್ಷಿತಾ, ರಾಶಿಕಾ ಮಾತನಾಡುವ ರೀತಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಕೊನೆಯಲ್ಲಿ ಏನು ನಿರ್ಧಾರ ಮಾಡಿದರು ಅನ್ನೋದು ಇವತ್ತಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಇಲ್ಲಿ ಸೇವ್ ಆಗಿರುವ ಸದಸ್ಯ, ಸೇಫ್ ಆಗಿರುವ ತಂಡವನ್ನು ಕೂಡಿಕೊಳ್ಳಲಿದ್ದಾರೆ. ನಾಮಿನೇಟ್ ಆಗುವ ಸದಸ್ಯ, ಮನೆಯಿಂದ ಆಚೆ ಹೋಗಲು ಸೆಲೆಕ್ಟ್​ ಆಗಿರುವ ಸದಸ್ಯರ ತಂಡವನ್ನು ಸೇರಲಿದ್ದಾರೆ. 

ಇದನ್ನೂ ಓದಿ:ದೆಹಲಿ ಕೇಸ್​​ನಲ್ಲಿ ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ.. ಇವತ್ತು ಪ್ರಧಾನಿ ಸಭೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 BBK12 Rakshita Shetty Bigg boss Rashika Shetty
Advertisment