/newsfirstlive-kannada/media/media_files/2025/11/11/delhi-incident-2025-11-11-07-29-54.jpg)
10/11 ದೆಹಲಿ ಚರಿತ್ರೆಗೆ ಅಂಟಿದ ಕಪ್ಪು ಕಳಂಕ.. ಕೆಂಪುಕೋಟೆ ಬಳಿ ನಡೆದ ಕಾರು ಬಾಂಬ್​​ ಸ್ಫೋಟ, ಹಲವು ಜೀವಗಳನ್ನ ಬಲಿ ಪಡೆದಿದೆ.. 8ಕ್ಕೂ ಹೆಚ್ಚು ಸಂಸ್ಥೆಗಳು ತನಿಖೆ ನಡೆಸ್ತಿದ್ದು, ಗೃಹ ಸಚಿವಾಲಯಕ್ಕೆ ಪ್ರಾಥಮಿಕ ರಿಪೋರ್ಟ್​​​ ಸಲ್ಲಿಕೆ ಆಗಿದೆ.. ಇವತ್ತು ಪ್ರಧಾನಿ ಮೋದಿ, ಭದ್ರತೆಗೆ ಸಂಬಂಧಿಸಿ ಮ್ಯಾರಾಥಾನ್​​ ಮೀಟಿಂಗ್​​ ನಡೆಸಲಿದ್ದಾರೆ.. ಇತ್ತ, ಡಾಕ್ಟರ್​ ಗ್ಯಾಂಗ್​ನ ಇನ್ನಷ್ಟು ಕರಾಳ ಪುಟಗಳು ತೆರದುಕೊಳ್ತಿವೆ..
ಇದನ್ನೂ ಓದಿ: ಪಾಕ್​ನಲ್ಲಿ ಪೈಶಾಚಿಕ ಕೃತ್ಯ, ಪ್ರಾಣಬಿಟ್ಟ 12 ಮಂದಿ; ಭಾರತದ ಮೇಲೆ ಗೂಬೆ ಕೂರಿಸಿದ ಟೆರರಿಸ್ತಾನ್..!
ಡೆಲ್ಲಿ.. ಚರಿತ್ರೆಯುದ್ದಕ್ಕೂ ಯುದ್ಧಕ್ಕೆ ಬಲಿಯಾದ ನಗರ.. ಆಧುನಿಕ ಭಾರತದಲ್ಲೂ ಡೆಲ್ಲಿಯಲ್ಲಿ ನೆತ್ತರು ಹರಿಯೋದು ನಿಂತಿಲ್ಲ.. ಫ್ರಾಕ್ಸಿ ವಾರ್​ಗೆ ದಶಕಗಳಿಂದ ತುತ್ತಾದ ಡೆಲ್ಲಿ 14 ವರ್ಷಗಳ ಬಳಿಕ ಸ್ಫೋಟದ ಸದ್ದು ಕೇಳಿದೆ.. ಘಟನೆಯಲ್ಲಿ 9 ಜನ ಸಾವನ್ನಪ್ಪಿದ್ದು, ಸರ್ಕಾರ ಅಧಿಕೃತ ಮಾಹಿತಿ ಹೇಳಬೇಕಿದೆ..
ದೆಹಲಿ ಸ್ಫೋಟದ ಬೆನ್ನಲ್ಲೇ ದೇಶಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿದೆ. ಈ ನಡುವೆ ರಾಷ್ಟ್ರಪತಿ ದೌಪದಿ ಮುರ್ಮು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕರೆ ಮಾಡಿ ಚರ್ಚೆ ನಡೆಸಿದ್ದಾರೆ. ಪ್ರಸ್ತುತ ವಿದೇಶ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಗೃಹ ಸಚಿವ ಅಮಿತ್ ಕಾ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿದ್ದು ದೆಹಲಿ ಸ್ಫೋಟದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ ಸದ್ಯದ ಪರಿಸ್ಥಿತಿ ಬಗ್ಗೆಯೂ ವಿಚಾರಿಸಿದ್ದಾರೆ..
ಇದನ್ನೂ ಓದಿ:5 ವರ್ಷ RCBಯಲ್ಲಿ ಉಳಿಸಿಕೊಳ್ಳೋ ಷರತ್ತು..? ಕೊಹ್ಲಿ ಡಿಮ್ಯಾಂಡ್​ ಎಷ್ಟು ಕೋಟಿ..?
ಇತ್ತ ಭೂತಾನ್​​​ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ, ರಾಜಧಾನಿಗೆ ಮರಳಿದ್ದಾರೆ.. ಇವತ್ತು ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಇಡೀ ದಿನ ಮ್ಯಾರಾಥಾನ್​​​ ಸಭೆ ನಡೆಸಲಿದ್ದಾರೆ ಅಂತ ಗೊತ್ತಾಗಿದೆ.. ಮೋದಿ ನೇತೃತ್ವದಲ್ಲಿ ಭದ್ರತಾ ಪಡೆಗಳ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಯಲಿದೆ.. ಸಭೆಯಲ್ಲಿ ದೇಶದ ಭದ್ರತೆ ವಿಚಾರವಾಗಿ ಮಹತ್ವದ ಚರ್ಚೆ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭದ್ರತಾಪಡೆ ಅಧಿಕಾರಿಗಳು ಭಾಗಿಯಾಗಲಿದ್ದಾರೆ..
ಮೃತರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ
ದೆಹಲಿ ಸಿಎಂ ರೇಖಾ ಗುಪ್ತಾ ಸಂತ್ರಸ್ತರ ಕುಟುಂಬಗಳಿಗೆ 10 ಲಕ್ಷ ರೂ.ಗಳ ಪರಿಹಾರವನ್ನ ಘೋಷಿಸಿದ್ದಾರೆ. ಕಾರು ಸ್ಫೋಟದಲ್ಲಿ ಜೀವ ಕಳೆದುಕೊಂಡವರ ಕುಟುಂಬಗಳಿಗೆ 10 ಲಕ್ಷ ರೂ., ಶಾಶ್ವತ ಅಂಗವಿಕಲರಾದವರಿಗೆ 5 ಲಕ್ಷ ರೂ. ಮತ್ತು ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂ. ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಘೋಷಿಸಿದ್ದಾರೆ..
ಈ ವೇಳೆ, ಭಯಾನಕ ಎನ್ನುವಂಥ ಮಾಹಿತಿಗಳು ಬೆಳಕಿಗೆ ಬಂದಿವೆ.. ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡ್ತಿದ್ದ ಉಮರ್​, ಭಯೋತ್ಪಾದನಾ ಜಾಲದ ಪ್ರಮುಖ ಸದಸ್ಯ ಆಗಿದ್ದ ಅನ್ನೋದು ಗೊತ್ತಾಗಿದೆ.. ತಾನು ಕೆಲಸ ಮಾಡುತ್ತಿದ್ದ ಪ್ರಯೋಗಾಲಯದಲ್ಲಿಯೇ ಅಮೋನಿಯಂ ನೈಟ್ರೇಟ್ ಫ್ಯುಯೆಲ್ ಆಯಿಲ್ ತಯಾರಿಸಿ ಸ್ಫೋಟದ ಬಗ್ಗೆ ಎಕ್ಸ್​ಪೈರಿಮೆಂಟ್​​ ಮಾಡಿದ್ದನಂತೆ..
ಇದನ್ನೂ ಓದಿ: ದೆಹಲಿಯಲ್ಲಿ ನಡೆದಿದ್ದು ಆತ್ಮಾಹುತಿ ದಾಳಿಯಲ್ಲ, ಪ್ಲಾನ್ ಬೇರೆಯದ್ದೇ ಇತ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us