/newsfirstlive-kannada/media/media_files/2025/11/12/delhi-incident-8-2025-11-12-09-10-41.jpg)
10/11.. ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ನೆತ್ತರೋಕುಳಿ ಹರಿದಿದೆ.. ನಿಗೂಢ ಸ್ಫೋಟದ ಒಂದೊಂದು ದೃಶ್ಯಗಳು ಭಯಾನಕವಾಗಿವೆ.. ಕಾರು ಸ್ಫೋಟದಿಂದ ಮುಗಿಲೆತ್ತರಕ್ಕೆ ಬೆಂಕಿ ಚಿಮ್ಮಿದೆ.. ಕಾರು ಸ್ಫೋಟ ಪ್ರಕರಣದಲ್ಲಿ 9 ಜನ ಸಾವನ್ನಪ್ಪಿದ್ದಾರೆ.. ಈ ಸಂಖ್ಯೆ ಏರಿಕೆ ಆಗುವ ಸಾಧ್ಯತೆಯೂ ಇದೆ.. ಸ್ಫೋಟ ಸಂಭವಿಸುತ್ತಲೇ ಜನ ದಿಕ್ಕೆಟ್ಟು ಓಡಿದ್ದಾರೆ..
ಶಂಕಿತ ಉಮರ್ ಭಯಭೀತನಾಗಿ ಬಾಂಬ್ ಸ್ಫೋಟ!
ಕಾರು ಸ್ಫೋಟ.. ಮೊನ್ನೆ ಸಂಜೆ ನಡೆದ ಉಗ್ರರ ದಾಳಿ ದೇಶದ ಹೃದಯ ಭಾಗದಲ್ಲಿ ವಿಧ್ವಂಸಕ ಮೆರೆದಿದೆ.. ಅಮಾಯಕರ ದೇಹಗಳು ಛಿದ್ರಛಿದ್ರವಾಗಿ ಬಿದ್ದಿವೆ.. ದೆಹಲಿಯ ಕೆಂಪು ಕೋಟೆ ಬಳಿ ಸ್ಫೋಟ ಉಂಟುಮಾಡಿದ ಶಂಕಿತನ ಐಇಡಿ ಅಪೂರ್ಣವಾಗಿತ್ತು.. ಅದನ್ನು ಸರಿಯಾಗಿ ಜೋಡಿಸಲಾಗಿರಲಿಲ್ಲ.. ಇದು ಬಾಂಬ್ ಸ್ಫೋಟದ ಪರಿಣಾಮವನ್ನು ಸೀಮಿತಗೊಳಿಸಿದೆ.. ಒಂದ್ವೇಳೆ ಉದ್ದೇಶಪೂರ್ವಕ ದಾಳಿ ಆಗಿದ್ದರೆ ಅದರ ಪರಿಣಾಮ ಇನ್ನೂ ಹೆಚ್ಚಾಗಿರುತ್ತಿತ್ತು..
/filters:format(webp)/newsfirstlive-kannada/media/media_files/2025/11/11/nia-2025-11-11-17-29-43.jpg)
ಆತ್ಮಾಹುತಿ ದಾಳಿಯಲ್ಲ, ಆಕಸ್ಮಿಕ!
- ದೆಹಲಿ-ಎನ್‌ಸಿಆರ್ ಮತ್ತು ಫರಿದಾಬಾದ್‌ನಲ್ಲಿ ಭದ್ರತಾ ಕ್ರಮ
- ಫರೀದಾಬಾದ್​​ನಲ್ಲಿ ಸಹಚರರ ಬಂಧನದಿಂದ ಶಂಕಿತ ಆತಂಕ
- ಈ ವೇಳೆ ಸ್ಫೋಟಕ ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದ ಹಂತಕ
- ಈ ವೇಳೆ, ಆಕಸ್ಮಿಕವಾಗಿ ಸ್ಫೋಟಗೊಂಡಿದೆ ಎಂಬ ಮಾಹಿತಿ
- ಆತ್ಮಹತ್ಯಾ ದಾಳಿ ಅಲ್ಲ, ಆಕಸ್ಮಿಕ ಸ್ಫೋಟ ಎಂದು ಅಭಿಪ್ರಾಯ
- ವಾಹನ ಚಲಿಸ್ತಿದ್ದು, ಇದು ಆಕಸ್ಮಿಕ ಸ್ಫೋಟ ಎಂಬ ಸಿದ್ಧಾಂತ
- ಐಇಡಿ ಪೂರ್ಣವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ
- ಹೀಗಾಗಿ ಹೆಚ್ಚಿನ ವಿನಾಶವು ತಪ್ಪಿದೆ ಬಂದಿದೆ ಎಂಬ ಮಾಹಿತಿ
ಇದನ್ನೂ ಓದಿ: 5 ವರ್ಷ RCBಯಲ್ಲಿ ಉಳಿಸಿಕೊಳ್ಳೋ ಷರತ್ತು..? ಕೊಹ್ಲಿ ಡಿಮ್ಯಾಂಡ್​ ಎಷ್ಟು ಕೋಟಿ..?
/filters:format(webp)/newsfirstlive-kannada/media/media_files/2025/11/11/delhi-incident-6-2025-11-11-08-32-16.jpg)
ಉಗ್ರರ ಜಾಲಗಳೊಂದಿಗೆ ಸಂಪರ್ಕ ಹೊಂದಿರುವ ಅನೇಕ ಸ್ಥಳಗಳಲ್ಲಿ ಭದ್ರತಾ ಸಂಸ್ಥೆಗಳು ದಾಳಿ ನಡೆಸುತ್ತಿದ್ವು.. ಫರಿದಾಬಾದ್, ಸಹರಾನ್‌ಪುರ, ಪುಲ್ವಾಮಾದಲ್ಲಿ ಸಾಕಷ್ಟು ಪ್ರಮಾಣದ ಸ್ಫೋಟಕ ವಶಪಡಿಸಿಕೊಂಡಿದ್ದು, ಇದ್ರಿಂದ ಶಂಕಿತ ಹೆಚ್ಚಾದ ಮಾನಸಿಕ ಒತ್ತಡಕ್ಕೆ ಸಿಲುಕಿ ಆತುರದಿಂದ ವರ್ತಿಸಿದ್ದಾನೆ ಅಂತ ತನಿಖಾಧಿಕಾರಿಗಳು ಶಂಕಿಸಿದ್ದಾರೆ ಅಂತ ಗೊತ್ತಾಗಿದೆ..
3 ಸಾವಿರ ಕೆ.ಜಿ ಸ್ಫೋಟ, 20 ಟೈಮರ್​!
ಆಪರೇಷನ್ ಸಿಂಧೂರ್​ಗೆ ಸೇಡು ತೀರಿಸಿಕೊಳ್ಳಲು ಈ ಪಡೆ ಸಾಕಷ್ಟು ಕೆಲಸ ಮಾಡ್ತಿತ್ತು.. ಇದಕ್ಕಾಗಿ ಸ್ಫೋಟಕ ವಸ್ತುಗಳ ಸಂಗ್ರಹಕ್ಕಿಳಿದಿದೆ.. 3 ಸಾವಿನ ಕೆ.ಜಿ ಸ್ಫೋಟಕ, 20 ಟೈಮರ್​ಗಳನ್ನ ಸಿದ್ಧಪಡಿಸುವ ಬೃಹತ್​​​ ಯೋಜನೆಗೆ ರಾಕ್ಷಸ ಪಡೆ ಸಿದ್ಧವಾಗಿತ್ತು.. ಒಂದ್ವೇಳೆ, ಉಗ್ರರ ಯೋಜನೆ ಕಾರ್ಯಗತವಾಗಿದ್ದರೆ ದೇಶದ ಅತಿದೊಡ್ಡ ಭಯೋತ್ಪಾದಕ ದಾಳಿಗೆ ತುತ್ತಾಗುವ ಭೀತಿ ಇತ್ತು ಅನ್ನೋದು ಗೊತ್ತಾಗ್ತಿದೆ..
ಕಾರು ಸ್ಫೋಟವನ್ನ ತನಿಖಾ ದಳಗಳು ಗಂಭೀರವಾಗಿ ಪರಿಗಣಿಸಿವೆ.. ಪ್ರಕರಣವನ್ನ ಎನ್​ಐಎ ತನಿಖೆಗೆ ಒಪ್ಪಿಸಲಾಗಿದೆ.. ಉಳಿದ ಸಂಸ್ಥೆಗಳು ಎನ್​ಐಎಗೆ ಇನ್​ಪುಟ್​ ನೀಡಲಿವೆ.. ಸ್ಫೋಟದ ಸ್ಥಳದಲ್ಲಿ NIA, FSL ಟೀಂನಿಂದ ಶೋಧ ಮುಂದುವರಿದಿದೆ.. ಈಗಾಗಲೇ ಸ್ಫೋಟದ ಸ್ಥಳದಲ್ಲಿ 42 ಮಾದರಿಗಳನ್ನ ಸಂಗ್ರಹಿಸಲಾಗಿದದೆ.. ಇವತ್ತು ಈ ಮಾದರಿಗಳನ್ನ ಲ್ಯಾಬ್​ ಟೆಸ್ಟ್​ಗೆ ರವಾನಿಸಲಿದೆ..
ಒಟ್ಟಾರೆ, ವೈದ್ಯಕೀಯ ಶಿಕ್ಷಣ ಸಂಸ್ಥೆ ನುರಿತ ವೈದ್ಯರೇ ಆತ್ಮಹತ್ಯೆ ಬಾಂಬರ್​ಗಳಾಗಿ ಮಾರ್ಪಟ್ಟಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.. ದೇಶದಲ್ಲಿ ವೈಟ್​ ಕಾಲರ್​ ಟೆರರ್​ಗಳು ಸ್ಲೀಪರ್​ಸೆಲ್​ಗಳಾಗಿ ಕೆಲಸ ಮಾಡ್ತಿರೋದು ಅಘಾತಕಾರಿ..
ಇದನ್ನೂ ಓದಿ: ಪಾಕ್​ನಲ್ಲಿ ಪೈಶಾಚಿಕ ಕೃತ್ಯ, ಪ್ರಾಣಬಿಟ್ಟ 12 ಮಂದಿ; ಭಾರತದ ಮೇಲೆ ಗೂಬೆ ಕೂರಿಸಿದ ಟೆರರಿಸ್ತಾನ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us