Advertisment

5 ವರ್ಷ RCBಯಲ್ಲಿ ಉಳಿಸಿಕೊಳ್ಳೋ ಷರತ್ತು..? ಕೊಹ್ಲಿ ಡಿಮ್ಯಾಂಡ್​ ಎಷ್ಟು ಕೋಟಿ..?

RCB ಮಾರಾಟಕ್ಕಿದೆ ಅನ್ನೋ ಸುದ್ದಿ ಸದ್ಯ ಅಧಿಕೃತವಾಗಿದೆ. IPL​ ಚಾಂಪಿಯನ್​​ ಟೀಮ್ ಖರೀದಿಗೆ ಹಲವು ಬಿಲೆನಿಯರ್ಸ್​​ ನಾ ಮುಂದು ತಾ ಮುಂದು ಎಂಬಂತೆ ಬಂದಿದ್ದಾರೆ. ಖರೀದಿಗೂ ಮುನ್ನ ಇವರಿಗೆಲ್ಲಾ ಕೊಹ್ಲಿಯ ನಡೆ ಗೊಂದಲ ಮೂಡಿಸಿದೆ. ಕೊಹ್ಲಿ ಐಪಿಎಲ್​ ಆಡ್ತಾರಾ? ಇಲ್ವಾ ಅನ್ನೋದಲ್ಲ.. ಆಡೋದಾದ್ರೆ ಏನು ಕಂಡಿಷನ್ ಏನು?

author-image
Ganesh Kerekuli
RCB_KOHLI
Advertisment

IPLನ ಚಾಂಪಿಯನ್​ ಟೀಮ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿ ಸಿಕ್ಕಾಪಟ್ಟೆ ಚಟುವಟಿಕೆ ನಡೀತಿವೆ. ಒಂದು ಕಡೆ ಐಪಿಎಲ್​ನ ರಿಟೈನ್​, ರಿಲೀಸ್​ನ ಲಿಸ್ಟ್​ ರೆಡಿಯಾಗ್ತಾ ಇದ್ರೆ ಇನ್ನೊಂದೆಡೆ ಫ್ರಾಂಚೈಸಿ ಮಾರಾಟ ಪ್ರಕ್ರಿಯೆ ನಡೀತಿದೆ. ಫ್ರಾಂಚೈಸಿ ಮಾರಾಟದ ವಿಚಾರವನ್ನ ಅಧಿಕೃತವಾಗಿಸಿರೋ ಫ್ರಾಂಚೈಸಿ ಸಿಟಿ ಬ್ಯಾಂಕ್​ಗೆ ಡೀಲ್​ನ​ ಜವಾಬ್ದಾರಿಯನ್ನು ವಹಿಸಿದೆ. ಆರ್​​ಸಿಬಿ ಖರೀದಿಗೆ ಹಲವು ಬಿಗ್​​ಬುಲ್​ಗಳು ಮುಂದಾಗಿದ್ದಾರೆ. ಇವರಿಗೆಲ್ಲಾ ವಿರಾಟ್​ ಕೊಹ್ಲಿ ನಡೆ ಗೊಂದಲವನ್ನ ಮೂಡಿಸಿದೆ. 

Advertisment

ವಿರಾಟ್​ ಕೊಹ್ಲಿ ಐಪಿಎಲ್ ಆಡ್ತಾರಾ? ಇಲ್ವಾ?

ಕೊಹ್ಲಿ ಮುಂದಿನ ಐಪಿಎಲ್​ ಆಡಲ್ಲ ಎಂಬ ಸುದ್ದಿಯೇ ನೋಡಿ ಸದ್ಯ ಆರ್​​ಸಿಬಿ ಖರೀದಿಗೆ ಮುಂದಾಗ್ತಿರೋ ಬಿಗ್​ ಬುಲ್​ಗಳಿಗೆ ಟೆನ್ಶನ್​ ತರಿಸಿರೋದು. ಕೊಹ್ಲಿ ಅಂದ್ರೆ ಆರ್​​ಸಿಬಿ, ಆರ್​​ಸಿಬಿ ಅಂದ್ರೆ ಕೊಹ್ಲಿ.. ಇವತ್ತು ಆರ್​​ಸಿಬಿಗೆ ಅತಿ ಹೆಚ್ಚು ಜನಪ್ರಿಯತೆ ಬಂದಿರೋದೆ ವಿರಾಟ್​ ಕೊಹ್ಲಿಯಿಂದ. ಆರ್​​ಸಿಬಿ ಬ್ರ್ಯಾಂಡ್​ ವ್ಯಾಲ್ಯೂ ಹೆಚ್ಚಾಗಿರೋದಕ್ಕೂ ಇದೇ ಕೊಹ್ಲಿಯೇ ಕಾರಣ. ಇಂತಾ ಕೊಹ್ಲಿ ಐಪಿಎಲ್​ಗೆ ಗುಡ್​​ ಬೈ ಹೇಳಿದ್ರೆ, ಆರ್​​ಸಿಬಿ ಜನಪ್ರಿಯತೆ, ಬ್ರ್ಯಾಂಡ್​ ವ್ಯಾಲ್ಯೂ ಎಲ್ಲಾ ಕುಸಿಯೋದ್ರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಹೊಸ ಖರೀದಿದಾರರು ಕೊಹ್ಲಿ ವಿಚಾರದಲ್ಲಿ ಕ್ಲಾರಿಟಿ ಬಯಸ್ತಿದ್ದಾರೆ.

ಇದನ್ನೂ ಓದಿ: ಆರ್​ಸಿಬಿಗೆ ಬಿಗ್ ಶಾಕ್ ಕೊಟ್ಟ ಕ್ಯಾಪ್ಟನ್​ ರಜತ್ ಪಾಟೀದಾರ್​.. ಹೊಸ ಟೆನ್ಶನ್! 

Virat_kohli_RCB_team_sale

ಹೊಸ ಓನರ್ಸ್​ಗೆ ಕೊಹ್ಲಿ ಕಂಡಿಷನ್​​ ಹಾಕ್ತಾರಾ?

ಕೊಹ್ಲಿ ಐಪಿಎಲ್​ ನಿವೃತ್ತಿಯ ಜೋರಾಗಿ ಸದ್ದು ಮಾಡ್ತಾ ಇದ್ರೂ ಕೂಡ ಕೊಹ್ಲಿ ಆಡ್ತಾರೆ ಅನ್ನೋ ಭರವಸೆ ಎಲ್ಲರಲ್ಲೂ ಇದೆ. ಒಂದಲ್ಲ.. ಇನ್ನೂ ಹಲವು ಸೀಸನ್​ಗಳ ಕಾಲ ಕೊಹ್ಲಿಗೆ ಆಡೋ ಸಾಮರ್ಥ್ಯವೂ ಇದೆ. ಫಿಟ್​ನೆಸ್​ ಕೂಡ ಇದೆ. ಆದ್ರೆ, ಆಡೋದಕ್ಕೂ ಮುನ್ನ ಹೊಸದಾಗಿ ಬರೋ ಓನರ್ಸ್​ಗೆ ಕೊಹ್ಲಿ ಹಲವು ಷರತ್ತುಗಳನ್ನ ಹಾಕೋ ಸಾಧ್ಯತೆ ದಟ್ಟವಾಗಿದೆ. ಎಲ್ಲವೂ ಕಮರ್ಷಿಯಲ್​ ವ್ಯವಹಾರದ ಮೇಲೆ ನಿರ್ಧಾರವಾಗಲಿದೆ. 

Advertisment

ಕಮರ್ಷಿಯಲ್​ ಕಾಂಟ್ರ್ಯಾಕ್ಟ್​ಗೆ ಬೇಡಿಕೆ ಇಡ್ತಾರಾ?

ಕೆಲ ದಿನಗಳ ಹಿಂದಷ್ಟೇ ವಿರಾಟ್​ ಕೊಹ್ಲಿ ಆರ್​​ಸಿಬಿಯ ಕರ್ಮರ್ಷಿಯಲ್​ ಕಾಂಟ್ರ್ಯಾಕ್ಟ್​ಗೆ ಸಹಿ ಹಾಕಿಲ್ಲ ಎಂದು ಸುದ್ದಿಯಾಗಿತ್ತು. ಇನ್ಫ್ಯಾಕ್ಟ್​ ನಿವೃತ್ತಿಯ ರೂಮರ್ಸ್​ ಹಬ್ಬಲು ಕಾರಣವಾಗಿದ್ದು ಈ ಸುದ್ದಿಯೇ. ಇದೀಗ ಹೊಸ ಓನರ್​​ ಬಂದ್ರೆ ಸಹಿ ಹಾಕ್ತಾರಾ ಅನ್ನೋದು ಸದ್ಯ ಪ್ರಶ್ನೆಯಾಗಿದೆ. ಒಂದು ವೇಳೆ ಸಹಿ ಹಾಕಿದ್ರೂ ಕೂಡ ಹೆಚ್ಚಿನ ಮೊತ್ತಕ್ಕೆ ಕೊಹ್ಲಿ ಡಿಮ್ಯಾಂಡ್​ ಇಟ್ಟೇ ಇಡ್ತಾರೆ. ಇದಕ್ಕೆ ಹೊಸ ಓನರ್ಸ್​ ಉತ್ತರ ಏನಿರುತ್ತೆ ಅನ್ನೋದ್ರ ಮೇಲೆ ಎಲ್ಲಾ ನಿರ್ಧಾರವಾಗಲಿದೆ. 

ಇದನ್ನೂ ಓದಿ: ಸಂಜುಗಾಗಿ ಚೆನ್ನೈ, ರಾಜಸ್ಥಾನ್ ನಡುವೆ ಹಗ್ಗಜಗ್ಗಾಟ.. ಟ್ರೇಡ್​​ಗಾಗಿ ಬಿಗ್​​ ಡೀಲ್​..!

Kohli rcb

ನನ್ನ ಕರಿಯರ್​ ಕೊನೆಯ ದಿನದವರೆಗೆ ನಾನು ಆರ್​​ಸಿಬಿಗೆ ಮಾತ್ರ ಆಡೋದು. ಬೇರಾವ ಫ್ರಾಂಚೈಸಿಗೆ ಆಡಲ್ಲ ಅಂತಾ ವರ್ಷಗಳ ಹಿಂದೆಯೇ ಕೊಹ್ಲಿ ಬಹಿರಂಗವಾಗಿ ಘೋಷಿಸಿದ್ದಾರೆ. ಕೊಹ್ಲಿಗೆ ಮುಂದಿನ 5 ವರ್ಷಗಳ ಕಾಲ ಕ್ರಿಕೆಟ್​​​ ಆಡೋ ಎಲ್ಲಾ ಸಾಮರ್ಥ್ಯವಿದೆ. 5 ವರ್ಷಗಳ ಕಾಲ ಇದೇ ತಂಡದಲ್ಲಿ ಉಳಿಯೋದು ಕೊಹ್ಲಿಯ ಆಸೆ. ಕೊಹ್ಲಿಯ ಆಸೆಯನ್ನ ಈಡೇರಿಸೋ ವಾಗ್ದಾನವನ್ನ ಹೊಸ ಓನರ್ಸ್​ ಮಾಡಬೇಕಿದೆ.  

Advertisment

21 ಕೋಟಿಗೂ ಅಧಿಕ ಹಣಕ್ಕೆ ಡಿಮ್ಯಾಂಡ್​ ಇಡ್ತಾರಾ?

2025ರ ಮೆಗಾ ಆಕ್ಷನ್​ಗೂ ಮುನ್ನ ಆರ್​​ಸಿಬಿ ಕೊಹ್ಲಿಯನ್ನ 21 ಕೋಟಿ ಹಣಕ್ಕೆ ರಿಟೈನ್​ ಮಾಡಿಕೊಂಡಿದೆ. ಇದೀಗ ಹೊಸ ಓನರ್ಸ್ ಬಂದ ಬಳಿಕ ಕೊಹ್ಲಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಡೋ ಸಾಧ್ಯತೆ ಹೆಚ್ಚಿದೆ. ಈ ಹಿಂದೆ ಹಾರ್ದಿಕ್​ ಪಾಂಡ್ಯನ ಕರೆ ತಂದಾಗ ಮುಂಬೈ ಫ್ರಾಂಚೈಸಿಯಲ್ಲಿ ಡೀಲ್​ ನಡೆದಂತೆ, ಆರ್​​ಸಿಬಿಯ ಹೊಸ ಓನರ್ಸ್​ಗೆ​ ಕೊಹ್ಲಿಯನ್ನ ಉಳಿಸಿಕೊಳ್ಳಲು ತೆರೆ ಹಿಂದೆ ಹೊಸ ಡೀಲ್​ ಮಾಡಿಕೊಳ್ಳೋ ಅವಕಾಶವಿದೆ. ಕೊಹ್ಲಿ ಎಷ್ಟು ಡಿಮ್ಯಾಂಡ್​ ಮಾಡ್ತಾರೆ? ಇದಕ್ಕೆ ಹೊಸ ಓನರ್ಸ್​ ಒಪ್ತಾರಾ? ಅನ್ನೋದ್ರ ಮೇಲೆ ಎಲ್ಲಾ ನಿಂತಿದೆ. 

ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಓರ್ವ ಸೈಲೆಂಟ್ ಸ್ಟಾರ್​.. ಒಂದು ಅವಕಾಶಕ್ಕಾಗಿ ಕಾಯ್ತಿದ್ದಾನೆ ಈತ..!

RAJAT_KOHLI

ನಾಯಕನಲ್ಲದಿದ್ರೂ ಆರ್​​ಸಿಬಿ ಡ್ರೆಸ್ಸಿಂಗ್​ ರೂಮ್​ನಲ್ಲಿ ವಿರಾಟ್​ ಕೊಹ್ಲಿಗೆ ವಿಶೇಷವಾದ ಪವರ್​ ಇದೆ. ಕೊಹ್ಲಿಯ ಹುಕುಂ ಇಲ್ಲದೇ ಏನೂ ನಡೆಯಲ್ಲ. ತಂಡಕ್ಕೆ ಆಟಗಾರರ ಆಯ್ಕೆಯಿಂದ ಹಿಡಿದು ಸಪೋರ್ಟ್​ ಸ್ಟಾಫ್​​ ಆಯ್ಕೆಯವರೆಗೆ ಕೊಹ್ಲಿ ಅಭಿಪ್ರಾಯ ನಿರ್ಣಾಯಕವಾಗಿದೆ. ಕೊಹ್ಲಿ ಫ್ರಾಂಚೈಸಿ ಅಷ್ಟು ಫ್ರಿಡಂ ಹಾಗೂ ಪವರ್​ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ಓನರ್ಸ್​ ಕೂಡ ಇದೇ ಫ್ರಿಡಂ ಹಾಗೂ ಪವರ್​ಗೆ ಕೊಹ್ಲಿ ​ಬೇಡಿಕೆ ಇಡಬಹುದು. 

Advertisment

ಆರ್​​​ಸಿಬಿ ವಿಶ್ವದ ಮೋಸ್ಟ್ ವ್ಯಾಲ್ಯುಯೇಬಲ್ ಸ್ಪೋರ್ಟ್ಸ್​ ಟೀಮ್​ಗಳಲ್ಲಿ ಒಂದಾಗಿದೆ. ಈ ಸಕ್ಸಸ್​ಗೆ ವಿರಾಟ್​ ಕೊಹ್ಲಿ ಅನ್ನೋ ಹೆಸ್ರು ಪ್ರಮುಖ ಕಾರಣ. ಮುಂದೆಯೂ ಆರ್​​ಸಿಬಿಯ ಮಾರ್ಕೆಟ್​ ವ್ಯಾಲ್ಯೂ ಹೀಗೆ ಇರಬೇಕಂದ್ರೆ ಕೊಹ್ಲಿ ತಂಡದಲ್ಲಿರಬೇಕಿದೆ. ದೊಡ್ಡ ಬಂಡವಾಳ ಹೂಡಿಕೆ ಮಾಡಿ ತಂಡ ಖರೀದಿಸೋ ಹೊಸ ಓನರ್ಸ್​ ಕೊಹ್ಲಿ ಕಂಡಿಷನ್ಸ್​ಗೆ ಒಪ್ಪಿದ್ರೆ ಮಾತ್ರ ಬೇಗ ಲಾಭ ನೋಡೋಕೆ ಸಾಧ್ಯವಾಗಲಿದೆ. 

ಇದನ್ನೂ ಓದಿ: KSCA ಅಧ್ಯಕ್ಷೀಯ ಚುನಾವಣೆಗೆ ಎಂಟ್ರಿ ಕೊಟ್ಟ ವೆಂಕಟೇಶ್ ಪ್ರಸಾದ್..! ಕುಂಬ್ಳೆ ಬೆಂಬಲ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
RCB Kohli Virat Kohli
Advertisment
Advertisment
Advertisment