Advertisment

ಟೀಂ ಇಂಡಿಯಾದಲ್ಲಿ ಓರ್ವ ಸೈಲೆಂಟ್ ಸ್ಟಾರ್​.. ಒಂದು ಅವಕಾಶಕ್ಕಾಗಿ ಕಾಯ್ತಿದ್ದಾನೆ ಈತ..!

ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಧೃವ್ ಜುರೆಲ್, ಸೈಲೆಂಟ್ ಆಗಿ ಸದ್ದು ಮಾಡ್ತಿದ್ದಾರೆ. ರೆಡ್​ ಬಾಲ್ ಕ್ರಿಕೆಟ್​​ನಲ್ಲಿ ಡ್ರೀಮ್ ಫಾರ್ಮ್​ನಲ್ಲಿರುವ ಜುರೆಲ್, ಮುಂಬರುವ ಟೆಸ್ಟ್​ ಸರಣಿಯಲ್ಲಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆಯೋ ನಿರೀಕ್ಷೆಯಲ್ಲಿದ್ದಾರೆ.

author-image
Ganesh Kerekuli
Dhruv Jurel
Advertisment

ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಧೃವ್ ಜುರೆಲ್, ಸೈಲೆಂಟ್ ಆಗಿ ಸದ್ದು ಮಾಡ್ತಿದ್ದಾರೆ. ರೆಡ್​ ಬಾಲ್ ಕ್ರಿಕೆಟ್​​ನಲ್ಲಿ ಡ್ರೀಮ್ ಫಾರ್ಮ್​ನಲ್ಲಿರುವ ಜುರೆಲ್, ಮುಂಬರುವ ಟೆಸ್ಟ್​ ಸರಣಿಯಲ್ಲಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆಯೋ ನಿರೀಕ್ಷೆಯಲ್ಲಿದ್ದಾರೆ. 

Advertisment

ಸ್ಟ್ರಾಂಗ್ ಟೆಕ್ನಿಕ್​​​, ಹೈಲಿ ಟ್ಯಾಲೆಂಟೆಡ್, ಕೂಲ್ ಌಂಡ್ ಕಾಮ್, ಸೆಲ್ಫ್ ಕಾನ್ಫಿಡೆನ್ಸ್! ಇದು ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್, ಧೃವ್ ಜುರೆಲ್​ರ ದೊಡ್ಡ ಅಸ್ತ್ರ. ರೆಡ್ ಬಾಲ್ ಕ್ರಿಕೆಟ್​​ಗೆ ಹೇಳಿ ಮಾಡಿಸಿದಂತಿರುವ ಜುರೆಲ್, ಸದ್ಯ ಇಂಡಿಯಾ 'ಎ' ತಂಡದ ಪರ ಮಿಂಚ್ತಿದ್ದಾರೆ. ರನ್​ ಹೊಳೆಯನ್ನೇ ಹರಿಸ್ತಿದ್ದಾರೆ. ತನ್ನ ಜಬರ್ದಸ್ತ್ ಪ್ರದರ್ಶನದಿಂದ, ಆಯ್ಕೆಗಾರರನ್ನ ತನ್ನತ್ತ ನೋಡುವಂತೆ ಮಾಡ್ತಿದ್ದಾರೆ.   

ಸೌತ್ ಆಫ್ರಿಕಾ 'A' ವಿರುದ್ಧ 2 ಇನ್ನಿಂಗ್ಸ್​, 2 ಶತಕ

ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕಾ 'ಎ' ವಿರುದ್ಧ ನಡೆಯುತ್ತಿರುವ 2ನೇ ಅನ್​ಅಫಿಶಿಯಲ್ ಟೆಸ್ಟ್ ಪಂದ್ಯದಲ್ಲಿ, ಧೃವ್ ಜುರೆಲ್ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ 175 ಎಸೆತಗಳಲ್ಲಿ ಅಜೇಯ 132 ರನ್​ ಸಿಡಿಸಿರುವ ಜುರೆಲ್, ಎರಡನೇ ಇನ್ನಿಂಗ್ಸ್​ನಲ್ಲಿ 170 ಎಸೆತಗಳಲ್ಲಿ ಅಜೇಯ 127 ರನ್​​ ದಾಖಲಿಸಿದ್ದಾರೆ. ಎರಡೂ ಇನ್ನಿಂಗ್ಸ್​ಗಳಲ್ಲಿ ಶತಕ ಬಾರಿಸಿರುವ ಜುರೆಲ್ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ. 

ಇದನ್ನೂ ಓದಿ: ಸಂಜುಗಾಗಿ ಚೆನ್ನೈ, ರಾಜಸ್ಥಾನ್ ನಡುವೆ ಹಗ್ಗಜಗ್ಗಾಟ.. ಟ್ರೇಡ್​​ಗಾಗಿ ಬಿಗ್​​ ಡೀಲ್​..!

Advertisment

GILL_DHRUV_JUREL

ಕಳೆದೊಂದು ವರ್ಷದಿಂದ ಇಂಡಿಯಾ 'ಎ' ಪರ ಡ್ರೀಮ್ ಫಾರ್ಮ್​​ನಲ್ಲಿ ರನ್​ ಕಲೆಹಾಕ್ತಿರುವ ಜುರೆಲ್, ಆಸ್ಟ್ರೇಲಿಯಾ 'ಎ' ಪರ 3 ಅರ್ಧಶತಕ ಮತ್ತು 1 ಭರ್ಜರಿ ಶತಕವನ್ನ ಸಿಡಿಸಿದ್ದಾರೆ. ಇಂಗ್ಲೆಂಡ್ 'ಎ' ಪರವೂ ಧೃವ್ ದರ್ಬಾರ್ ನಡೆಸಿದ್ದಾರೆ. ಆಂಗ್ಲರ ವಿರುದ್ಧ 3 ಅರ್ಧಶತಕಗಳನ್ನ ಕಲೆ ಹಾಕಿರುವ ಜುರೆಲ್, ಸಿಕ್ಕ ಅವಕಾಶಗಳಲ್ಲಿ ರನ್​ ಕಲೆ ಹಾಕಿದ್ದಾರೆ. ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನ ತೋರಿಸಿದ್ದಾರೆ.

ಸೈಲೆಂಟ್ ಸ್ಟಾರ್ ಜುರೆಲ್

  • ಇನ್ನಿಂಗ್ಸ್​- 14
  • ರನ್ಸ್- 911
  • ಸರಾಸರಿ- 91.10
  • 50/100- 04/04

ಔಟ್​ ಸ್ಟ್ಯಾಂಡಿಂಗ್ ಫಾರ್ಮ್​​ನಲ್ಲಿರುವ ಉತ್ತರ ಪ್ರದೇಶದ ವಿಕೆಟ್ ಕೀಪರ್ ಬ್ಯಾಟರ್​​​, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್  ಸರಣಿಯಲ್ಲಿ ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಟೆಸ್ಟ್ ಸರಣಿಯಲ್ಲಿ ಸ್ಥಾನ ನೀಡಬೇಕಾ?

ಧೃವ್ ಜುರೆಲ್​ಗೆ​ ದಕ್ಷಿಣ ಆಫ್ರಿಕಾ ವಿರುದ್ಧ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ನೀಡಬೇಕಾ? ಬೇಡವಾ ಅನ್ನೋದು ಈಗಾಗಲೇ ಟೀಮ್ ಮ್ಯಾನೇಜ್ಮೆಂಟ್ ಚರ್ಚೆ ನಡೆಸೇ ಇರುತ್ತೆ. ಯಾಕಂದ್ರೆ ಸಾಲಿಡ್ ಫಾರ್ಮ್​ನಲ್ಲಿರುವ ಜುರೆಲ್​ಗೆ, ಅವಕಾಶ ನೀಡಲೇಬೇಕು. ಪಂತ್ ಜೊತೆ ಧೃವ್ ಜುರೆಲ್, ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳಲೇಬೇಕು. ಒಂದು ವೇಳೆ ಜುರೆಲ್ ಆಡಲೇಬೇಕು ಅಂತ ತೀರ್ಮಾನಿಸಿದ್ರೆ ಆಲ್​ರೌಂಡರ್ ನಿತೀಶ್ ಕುಮಾರ್ ರೆಡ್ಡಿಯನ್ನ ತಂಡದಿಂದ ಡ್ರಾಪ್ ಮಾಡಲೇಬೇಕು. 

Advertisment

ಇದನ್ನೂ ಓದಿ:ಆರ್​ಸಿಬಿಗೆ ಬಿಗ್ ಶಾಕ್ ಕೊಟ್ಟ ಕ್ಯಾಪ್ಟನ್​ ರಜತ್ ಪಾಟೀದಾರ್​.. ಹೊಸ ಟೆನ್ಶನ್!

dhruv jurel

ಆರ್.ಅಶ್ವಿನ್ ಬ್ಯಾಟಿಂಗ್

ಟೀಮ್ ಇಂಡಿಯಾದ ಮಾಜಿ ಆಟಗಾರ ಆರ್​.ಅಶ್ವಿನ್, ಧೃವ್ ಜುರೆಲ್ ಪರ ಬ್ಯಾಟ್ ಬೀಸಿದ್ದಾರೆ. ಅದ್ಭುತ ಫಾರ್ಮ್​ನಲ್ಲಿರುವ ಜುರೆಲ್, ಕೋಚ್ ಮತ್ತು ಕ್ಯಾಪ್ಟನ್​​ಗೆ ಟಫ್ ಟೈಮ್ ನೀಡ್ತಿದ್ದಾರೆ. ಆದ್ರೆ ಜುರೆಲ್​ಗೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ನೀಡಲೇಬೇಕು ಎಂದು ಅಶ್ವಿನ್, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟೆಸ್ಟ್ ಕ್ರಿಕೆಟ್​ನಲ್ಲೂ ಜುರೆಲ್ ಭರ್ಜರಿ ಆಟ!

ಟೀಮ್ ಇಂಡಿಯಾ ಪರ ಟೆಸ್ಟ್ ಫಾರ್ಮೆಟ್​ನಲ್ಲೂ ವಿಕೆಟ್ ಕೀಪರ್ ಬ್ಯಾಟರ್ ಮಿಂಚಿದ್ದಾರೆ. ಆಡಿರೋ 7 ಟೆಸ್ಟ್ ಪಂದ್ಯಗಳಲ್ಲಿ 1 ಶತಕ ಮತ್ತು 1 ಅರ್ಧಶತಕ ಸಿಡಿಸಿರೋ ಜುರೆಲ್, 47.77 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಇಂಡಿಯಾ 'ಎ' ಮತ್ತು ಟೆಸ್ಟ್ ಕ್ರಿಕೆಟ್​ನಲ್ಲಿ ಪರ್ಫಾಮ್ ಮಾಡಿರುವ ಜುರೆಲ್​​ಗೆ, ಸೌತ್ ಆಫ್ರಿಕಾ ವಿರುದ್ಧ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಸಿಗದಿದ್ರೆ  ಅದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ.

Advertisment

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ.. ಅಧಿಕಾರಿಗಳ ತಲೆದಂಡ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Dhruv Jurel
Advertisment
Advertisment
Advertisment