/newsfirstlive-kannada/media/media_files/2025/11/11/shahin-shahid-2025-11-11-22-08-29.jpg)
ದೆಹಲಿ ಪ್ರಕರಣ ಬೆನ್ನಲ್ಲೇ ಹಲವು ಆತಂಕಕಾರಿ ಸಂಗತಿಗಳು ಬೆಳಕಿಗೆ ಬರಲಾರಂಭಿಸಿವೆ. ಒಂದ್ಕಡೆ ಶಸ್ತ್ರಾಸ್ತ್ರ ಸಂಗ್ರಹಿಸಿಕೊಂಡು ಮೂಲಭೂತವಾದಿ ವೃತ್ತಿಪರರ ತಂಡವನ್ನೇ ಬಳಸಿಕೊಂಡು ವೈಟ್​ ಕಾಲರ್ ಭಯೋತ್ಪಾದಕತೆ ನಡೆಸಿರೋದು ಬಯಲಾಗಿದೆ. ಇನ್ನೊಂದ್ಕಡೆ ಫರಿದಾಬಾದ್​​​ನಲ್ಲಿ ಅರೆಸ್ಟ್ ಆಗಿದ್ದ ವೈದ್ಯೆಯೊಬ್ಬಳ ಜಾತಕ ಬಯಲಾಗಿದ್ದು ಆಕೆಯ ಹಿನ್ನೆಲೆಯೇ ಭಯಾನಕ ಎನಿಸೋಹಾಗಿದೆ.
ದೆಹಲಿಯಲ್ಲಿ ನಡೆದಿರುವ ಪ್ರಕರಣಕ್ಕೂ ಫರಿದಾಬಾದ್​​ನಲ್ಲಿ ನಿನ್ನೆ ಸಿಕ್ಕ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪ್ರಕರಣಕ್ಕೂ ಲಿಂಕ್ ಬೆಸೆದಿದೆ. ನಿನ್ನೆ ಫರಿದಾಬಾದ್​​​ನ ಎರಡು ಮನೆಗಳಲ್ಲಿ ವೈದ್ಯ 350 ಕೆ.ಜಿ. ಆರ್​ಡಿಎಕ್ಸ್​ ಸೇರಿ ಶಸ್ತ್ರಾಸ್ತ್ರಗಳು ಪತ್ತೆಯಾಗಿತ್ತು.. ಇದೇ ವೇಳೆ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಬಳಸಿದ್ದ ಕಾರನ್ನೂ ಕೂಡ ವಶಕ್ಕೆ ಪಡೆಯಲಾಗಿತ್ತು. ವಶಕ್ಕೆ ಪಡೆಯಲಾಗಿದ್ದ ಕಾರು ಕೂಡ ಫರಿದಾಬಾದ್​​ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದ ಮಹಿಳಾ ಡಾಕ್ಟರ್​ಗೆ ಸೇರಿದ ಕಾರು ಅನ್ನೋದು ಗೊತ್ತಾಗಿತ್ತು. ಆ ಮಹಿಳೆ ಡಾಕ್ಟರ್ ವೇಷದಲ್ಲಿ ಭಯೋತ್ಪಾದಕತೆ ನಡೆಸ್ತಿರೋದು ತನಿಖೆ ವೇಳೆ ಬಯಲಾಗಿದೆ.
/filters:format(webp)/newsfirstlive-kannada/media/media_files/2025/11/11/delhi-incident-7-2025-11-11-21-23-38.jpg)
ಜೈಷ್ ಸಂಘಟನೆಗೆ ಸೇರಿದ ಭಯೋತ್ಪಾದಕಿ
ದೆಹಲಿಯಲ್ಲಿ ನಡೆದ ಕೇಸ್​​ಗೂ ಫರಿದಾಬಾದ್ ಲಿಂಕ್ ಪಡೆದಿದೆ. ನಿನ್ನೆ ದೆಹಲಿ ಹಾಗೂ ಜಮ್ಮುಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಹರಿಯಾಣದ ಫರಿದಾಬಾದ್‌ನಲ್ಲಿ ಸ್ಫೋಟಕ ವಶಪಡಿಸಿಕೊಂಡಿದ್ದರು.. ಈ ವೇಳೆ ವೈದ್ಯೆಯೊಬ್ಬಳು ಕೂಡ ಅರೆಸ್ಟ್ ಆಗಿದ್ದಳು. ಈಕೆ ಹೆಸರು ಶಾಹೀನಾ ಶಾಹಿದ್ ಅಂತ.. ಈಕೆ ನಿನ್ನೆ ಅರೆಸ್ಟ್ ಆಗಿದ್ದ ಡಾ.ಮುಜಮ್ಮಿಲ್ ಶಕೀಲ್ ಆಸ್ಪತ್ರೆಯಲ್ಲೇ ಕೆಲಸ ಮಾಡ್ತಿದ್ದ ವೈದ್ಯೆಯಾಗಿದ್ದು ಈಕೆ ಜೈಷ್-ಎ-ಮೊಹಮ್ಮದ್ ಮಹಿಳಾ ದಳದ ಭಯೋತ್ಪಾದಕಿ ಅನ್ನೋದು ಬಯಲಾಗಿದೆ.. ಭಾರತದಲ್ಲಿ ಮಹಿಳಾ ಉಗ್ರ ಪಡೆಯನ್ನ ಹ್ಯಾಂಡಲ್ ಮಾಡಲು ಈಕೆಗೆ ಕ್ಯಾಪ್ಟನ್ಸಿ ನೀಡಲಾಗಿರೋದು ಬೆಳಕಿಗೆ ಬಂದಿದೆ.
ಇದನ್ನೂ ಓದಿ:56ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ ‘ವನ್ಯ’ ಸಿನಿಮಾ ಆಯ್ಕೆ
ಶಾಹೀನಾ ಬ್ಯಾಗ್ರೌಂಡ್ ಭಯಾನಕ!
- ಜಮಾತ್ ಉಲ್ ಮೊಮಿನಾತ್ ಹೆಸರಿನ ಮಹಿಳಾ ಉಗ್ರ ಪಡೆ
- ಸಾದಿಯಾ ಅಜರ್ ನೇತೃತ್ವ ವಹಿಸಿಕೊಂಡಿದ್ದ ಮಹಿಳಾ ಉಗ್ರ ಪಡೆ
- ಜೈಷ್ ಚೀಫ್ ಮಸೂದ್​ ಅಜರ್ ಸಹೋದರಿ ಸಾದಿಯಾ ಅಜರ್
- ಯೂಸುಫ್ ಅಜರ್​ ಕಂದಹಾರ್ ಅಪಹರಣದ ಮಾಸ್ಟರ್​ಮೈಂಡ್
- ಆಪರೇಷನ್ ಸಿಂಧೂರ ವೇಳೆ ಮೇ 7ರ ದಾಳಿಯಲ್ಲಿ ಹತನಾಗಿದ್ದ
- ಬಳಿಕ ಮಹಿಳಾ ಉಗ್ರ ಪಡೆ ರಚಿಸಿದ್ದ ಮುಖ್ಯಸ್ಥ ಮಸೂದ್ ಅಜರ್
- ಸಹೋದರಿ ಸಾದಿಯಾಳನ್ನೇ ಕಮಾಂಡರ್ ಆಗಿ ನೇಮಿಸಿದ್ದ ಅಜರ್
- ಸಿಂಧೂರದಲ್ಲಿ ಗಂಡನನ್ನು ಸಾಯಿಸಿದ್ದಕ್ಕೆ ಪ್ರತಿಕಾರದ ದಾಳಿಗೆ ಪ್ಲಾನ್
- ದಾಳಿ ಪ್ಲಾನ್ ವೇಳೆಯೇ ಅಪಾರ ಪ್ರಮಾಣದ ಸ್ಫೋ*ಕ ವಸ್ತು ಪತ್ತೆ
- ಶಾಹೀನಾಗಳ ಮಾರುತಿ ಸುಜುಕಿ ಸ್ವಿಫ್ಟ್ ಕಾರು, ಬಂದೂಕು ಕೂಡ ಪತ್ತೆ
ಇದನ್ನೂ ಓದಿ: ಜಾಹ್ನವಿ, ಅಶ್ವಿನಿ ಸ್ನೇಹ ಅಂತ್ಯ.. ಹೇಗಿದ್ರು, ಹೇಗಾದ್ರು ಅಂತಿದ್ದಾರೆ ಬಿಗ್​ಬಾಸ್..!
ಶಾಹೀನಾ ಶಾಹಿದ್ ಉತ್ತರ ಪ್ರದೇಶ ಲಕ್ನೋದ ಲಾಲ್​ಬಾಗ್ ನಿವಾಸಿಯಾಗಿದ್ದು ಅಲ್ ಫಲಾಹ್ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿದ್ದಳು.. ನಿನ್ನೆ ಫರಿದಾಬಾದ್‌ನಲ್ಲಿ 2.900 ಕೆ.ಜಿ ಸ್ಫೋಟಕ ಪತ್ತೆ ಕೇಸ್‌ನಲ್ಲಿ ಬಂಧಿತ ಡಾ. ಮುಜಾಮಿಲ್ ಜೊತೆ ನಿಕಟ ಸಂಪರ್ಕದಲ್ಲಿದ್ದಳು. ಮುಜಾಮಿಲ್ ಕಾಶ್ಮೀರದ ಪುಲ್ವಾಮಾ ನಿವಾಸಿಯಾಗಿದ್ದು ಅಲ್ ಫಲಾಹ್ ವಿವಿಯಲ್ಲಿ ವೈದ್ಯನಾಗಿ ಕೆಲಸ ಮಾಡ್ತಿದ್ದ.
ಇನ್ನು ಮುಜಾಮಿಲ್ ಹಾಗೂ ಆದಿಲ್‌ಗೆ ನಿಕಟವರ್ತಿಯಾಗಿದ್ದ ಡಾ. ಉಮರ್ ನಬಿಯೇ ಸ್ಫೋಟಕ ನಡೆಸಿರುವ ಅನುಮಾನ ವ್ಯಕ್ತಪಡಿಸಲಾಗಿದ್ದು ತನಿಖೆ ಬಳಿಕ ಸತ್ಯಾಸತ್ಯತೆ ಬಹಿರಂಗ ಆಗಬೇಕಿದೆ.. ಒಟ್ಟಾರೆ, ಜನರ ಜೀವ ಉಳಿಸಲು ಮೆಡಿಕಲ್ ಓದಿದ್ದ ವೈದ್ಯರೇ ಜನರ ಜೀವ ತೆಗೆಯುವ ಭಯೋತ್ಪಾದಕರಾಗಿ ರೂಪುಗೊಂಡಿರೋದು ಮಾತ್ರ ದುರಂತವೇ ಸರಿ.
ಇದನ್ನೂ ಓದಿ: Railway Department: ಖಾಲಿ ಇರೋ ಪ್ರಮುಖ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us