/newsfirstlive-kannada/media/media_files/2025/11/11/janhvi-and-ashwini-gowda-2025-11-11-19-51-08.jpg)
ಬಿಗ್‌ಬಾಸ್ ಆರಂಭವಾದ ಮೊದಲ ಮೂರು ವಾರದಲ್ಲಿ ಜಾಹ್ನವಿ ಹಾಗೂ ಅಶ್ವಿನಿ ಗೌಡ ನಡುವಿನ ಸ್ನೇಹ ಎಲ್ಲರಲ್ಲೂ ಅಚ್ಚರಿ ಮೂಡಿಸುವ ರೀತಿಯಲ್ಲಿತ್ತು. ಇದೀಗ ಅವರು ನಿಜಕ್ಕೂ ಹಿಂದೆ ಸ್ನೇಹಿತರಾಗಿದ್ದರಾ ಅನ್ನುವ ಅನುಮಾನ ಮೂಡಿಸಿದೆ.
ಅಶ್ವಿನಿ ಗೌಡ ಹಾಗೂ ಜಾಹ್ನವಿ ಬಿಬಿ ಕಾಲೇಜಿನ ಚರ್ಚಾ ಸ್ಪರ್ಧೆಯ ನಂತರ ದೂರಾಗಿದ್ದು ಗೊತ್ತೇ ಇದೆ. ಆದರೆ ಇತ್ತೀಚೆಗೆ ಮನೆಯಿಂದ ಪತ್ರ ಬಂದಾಗ ಕೊಡುವ ಟಾಸ್ಕ್‌ನಲ್ಲಿ ಅಶ್ವಿನಿ ಜಾಹ್ನವಿಗಾಗಿ ಪತ್ರವನ್ನು ಬಿಟ್ಟುಕೊಟ್ಟಿದ್ದರು ಅಲ್ಲಿಂದ ಇವರ ಸ್ನೇಹ ಮತ್ತೆ ಚಿಗುರುತ್ತಾ ಅನ್ನೋ ಅನುಮಾನ ಮೂಡಿತ್ತು.
ಕಿಚ್ಚನ ಪಂಚಾಯ್ತಿಯಲ್ಲಿ ಅಶ್ವಿನಿ ಗೌಡ ರಕ್ಷಿತಾ ಹೇಳಿದ್ದ ಮಾತನ್ನು ತಿರುಚಿ ತಮಗೆ ಬೇಕಾದ ರೀತಿಯಲ್ಲಿ ಬದಲಾಯಿಸಿಕೊಂಡಿದ್ದನ್ನು ನೋಡಿ ಜಾಹ್ನವಿ ಅಶ್ವಿನಿ ಗೌಡ ಬಗ್ಗೆ ತಾವು ಅಂದುಕೊಂಡದ್ದು ತಪ್ಪು ಅವರು ಬದಲಾಗಿಲ್ಲ ಅನ್ನೋ ಅಭಿಪ್ರಾಯಕ್ಕೆ ಬಂದಂತೆ ಕಾಣುತ್ತಿದೆ.
ಇದನ್ನೂ ಓದಿ:ಈ ಮೂವರು ಫಿನಾಲೆಯಲ್ಲಿ ಇರುತ್ತಾರೆ -ಚಂದ್ರಪ್ರಭ ಹೇಳಿದ್ದು ಯಾರ ಹೆಸರು?
/filters:format(webp)/newsfirstlive-kannada/media/media_files/2025/10/25/ashwini-gowda-5-2025-10-25-19-09-40.jpg)
ಬಿಗ್‌ಬಾಸ್ ಮನೆಯಲ್ಲಿರುವ ವಿಷಕಾರಿ ವ್ಯಕ್ತಿ ಯಾರು? ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಜಾಹ್ನವಿ ಅಶ್ವಿನಿ ಅವರನ್ನು ಬರೀ ವಿಷವಲ್ಲ ಕಾರ್ಕೋಟಕ ವಿಷ ಎಂದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಅಶ್ವಿನಿ, ಜಾಹ್ನವಿಯೇ ತಮ್ಮನ್ನು ಬಳಸಿಕೊಂಡಿದ್ದು, ರಕ್ಷಿತಾ ವಿಚಾರದಲ್ಲೂ ಅಷ್ಟೇ ಜಾಹ್ನವಿಯೇ ಗೆಜ್ಜೆಯ ಪ್ಲಾನ್ ಮಾಡಿದ್ದು, ಅಷ್ಟು ಮಾತ್ರವಲ್ಲ ಎಲ್ಲರೂ ತಮ್ಮ ಸ್ನೇಹದ ಬಗ್ಗೆಯೇ ಹೇಳುತ್ತಿರೋದರಿಂದ ಸ್ವಲ್ಪ ದಿನ ತಾವಿಬ್ಬರೂ ದೂರ ಇರೋಣ ಎಂದು ಹೇಳಿದ್ದು ಕೂಡ ಅವರೇ ಎಂದು ಹೇಳಿದ್ದಾರೆ.
ಈ ಮಾತುಕತೆ ಇವರಿಬ್ಬರ ಸ್ನೇಹ ಇನ್ನು ಉಳಿಯೋದೆ ಇಲ್ಲ ಅನ್ನೋದನ್ನು ಸ್ಪಷ್ಟವಾಗಿ ತೋರಿಸಿದೆ. ಅಶ್ವಿನಿ ಗೌಡ ಸಡನ್ನಾಗಿ ಹೀಗೆ ಜಾಹ್ನವಿ ವಿರುದ್ಧ ತಿರುಗಿ ನಿಲ್ಲೋಕೆ, ರಕ್ಷಿತಾ ವಿಷ್ಯದಲ್ಲಿ ಜಾಹ್ನವಿ ತಪ್ಪಿಸಿಕೊಂಡ್ರು ಅಶ್ವಿನಿ ಮಾತ್ರ ಇನ್ನೂ ಅದರಿಂದ ಹೊರಬಂದಿಲ್ಲ ಯಾಕೆ ಎಂದು ಸುದೀಪ್ ಕೇಳಿದ್ದೇ ಕಾರಣವಾಯ್ತಾ? ಅನ್ನುವ ಅನುಮಾನ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us