Advertisment

‘ಮಾಳುಗೆ ಮೆದುಳೇ ಇಲ್ಲ..’ ಬಿಗ್​ಬಾಸ್ ಕ್ಯಾಪ್ಟನ್​​ಗೆ ಹೊಸ ಚಾಲೆಂಜ್‌ VIDEO

ಧನುಷ್‌ ಕಳೆದ ವಾರ ಕ್ಯಾಪ್ಟನ್‌ ಆಗಿದ್ರೂ ಟಾಸ್ಕ್‌ಗಳೇ ಇಲ್ಲದ ಕಾರಣ ಅವರು ಬಂದಿದ್ದು ಹೋಗಿದ್ದು ಗೊತ್ತೇ ಆಗಲಿಲ್ಲ. ಆದರೆ ಮಾಳು ಕ್ಯಾಪ್ಟನ್ಸಿ ಭಾರ ತೆಗೆದುಕೊಂಡ ಮೇಲೆ ಅವರ ಎದುರು ಹೊಸ ಹೊಸ ಸವಾಲುಗಳು ಬರುತ್ತಲೇ ಇವೆ. ಇದೀಗ ಮಾಳುಗೆ ಮೆದುಳೇ ಇಲ್ಲ ಅಂತನಿಸಿಕೊಳ್ಳುವಂತಾಗಿದೆ.

author-image
Ganesh Kerekuli
Malu and sudhee
Advertisment

ಧನುಷ್‌ ಕಳೆದ ವಾರ ಕ್ಯಾಪ್ಟನ್‌ ಆಗಿದ್ರೂ ಟಾಸ್ಕ್‌ಗಳೇ ಇಲ್ಲದ ಕಾರಣ ಅವರು ಬಂದಿದ್ದು ಹೋಗಿದ್ದು ಗೊತ್ತೇ ಆಗಲಿಲ್ಲ. ಆದರೆ ಮಾಳು ಕ್ಯಾಪ್ಟನ್ಸಿ ಭಾರ ತೆಗೆದುಕೊಂಡ ಮೇಲೆ ಅವರ ಎದುರು ಹೊಸ ಹೊಸ ಸವಾಲುಗಳು ಬರುತ್ತಲೇ ಇವೆ. ಇದೀಗ ಮಾಳುಗೆ ಮೆದುಳೇ ಇಲ್ಲ ಅಂತನಿಸಿಕೊಳ್ಳುವಂತಾಗಿದೆ. 

Advertisment

ಮನೆಯಲ್ಲಿರುವ ಸದಸ್ಯರ ಪೈಕಿ ಯಾರ ತಲೆಯಲ್ಲಿ ಸಗಣಿ ತುಂಬಿರೋದು? ಯಾರು ಮನೆಯ ಕಸ ಹೀಗೆ ಆಯ್ಕೆ ಮಾಡುವ ಅವಕಾಶಗಳಿದ್ದವು. ಇದರಲ್ಲಿ ಮಾಳು ಆಯ್ಕೆಗೆ ಕಾಕ್ರೋಚ್‌ ಸುಧಿ ಕೆಂಡಾಮಂಡಲವಾಗಿದ್ದಾರೆ. ಮಾಳು ಮನೆಯ ಕ್ಯಾಪ್ಟನ್‌ ಅನ್ನೋದನ್ನೂ ಮರೆತು ಮಾಳುಗೆ ಮೆದುಳೇ ಇಲ್ಲ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜಿಎಫ್ ಗಾಯಕಿ ಅನನ್ಯ ಭಟ್

ಮಾಳು ದ್ರುವಂತ್‌ ತಲೆಯಲ್ಲಿ ಬರೀ ಸಗಣಿಯೇ ತುಂಬಿಕೊಂಡಿದ್ದಾರೆ ಎಂದು ಹೇಳಿ ಅವರಿಗೆ ಬಕೆಟ್‌ ತುಂಬ ಸಗಣಿಯ ಅಭಿಷೇಕ ಮಾಡಿದ್ದರು. ನಂತರ ಬಂದ ಕಾಕ್ರೋಚ್‌ ಸುಧಿ ಅವರ ಆಯ್ಕೆಯನ್ನು ವಿರೋಧಿಸಿದ್ದಾರೆ. ದ್ರುವಂತ್‌ ನಿನ್ನನ್ನು ಕ್ಯಾಪ್ಟನ್‌ ಆಗಿ ಆಯ್ಕೆ ಮಾಡಿದ್ದಾನಲ್ಲ ಅವರ ತಲೆಯಲ್ಲಿ ನಿಜಕ್ಕೂ ಸಗಣಿಯೇ ತುಂಬಿರಬೇಕು ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುವ ಮಾಳು ಯಾರಿಗೆ ಏನು ಕೊಡಬೇಕು ಅನ್ನೋದು ನನಗೆ ತಿಳಿದಿದೆ ಎಂದಾಗ ನಿನ್ನ ಜೊತೆ ಮಾತಾಡೋದೆ ವೇಸ್ಟ್‌ ಎಂದು ಸುಧಿ ಪ್ರತಿಕ್ರಿಸುತ್ತಾರೆ. 

Advertisment

ಬೇಕಾಬಿಟ್ಟಿ ನಿರ್ಧಾರ ತೆಗೆದುಕೊಳ್ಳೋಕೆ ತನಗೇನು ಹುಚ್ಚು ಹಿಡಿದಿದ್ಯಾ ಎಂದು ಮಾಳು ಕೇಳಿದ್ದಕ್ಕೆ ಉತ್ತರಿಸುವ ಸುಧಿ ಹುಚ್ಚು ಹಿಡಿಯುವುದಕ್ಕೂ ತಲೆಯಲ್ಲಿ ಮೆದುಳು ಅನ್ನೋದು ಬೇಕು. ನಿನಗೆ ಅದೂ ಇಲ್ಲ ಎಂದಿದ್ದಾರೆ. ಅಲ್ಲದೇ ರಾಶಿಕಾ ಕೂಡ ಮಾಳು ವಿರುದ್ಧ ಕೆಂಡಾಮಂಡಲವಾಗಿದ್ದು, ತನ್ನನ್ನು ಬಿಗ್‌ಬಾಸ್‌ ಮನೆಯ ಕಸ ಎಂದು ಹೇಗೆ ಆಯ್ಕೆ ಮಾಡಿದ್ರಿ ಅದಕ್ಕೆ ಕಾರಣ ನೀಡಿ ಎಂದು ಹೇಳಿದ್ದಾರೆ. 
ಮಾಳು ಇಲ್ಲಿಯವರೆಗೂ ಮಾತೇ ಆಡಲ್ಲ ಎಲ್ಲರೊಂದಿಗೆ ಬೆರೆಯುವುದೂ ಇಲ್ಲ ಎಂದೇ ಫೇಮಸ್‌ ಆದವರು. ಇದೀಗ ಅವರೂ ಮಾತಾಡೋದು ಅನಿವಾರ್ಯವಾಗಿದ್ದು ಮುಂದೇನಾಗುತ್ತೆ ಅನ್ನೋದನ್ನು ನೋಡಿ ಬಿಗ್‌ಬಾಸ್‌ನಲ್ಲಿ.  

ಇದನ್ನೂ ಓದಿ: ಬಾಲಿವುಡ್​ ಸೂಪರ್ ಸ್ಟಾರ್ ಧರ್ಮೇಂದ್ರ ಅವರ ಆರೋಗ್ಯ ಗಂಭೀರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 Bigg boss Malu Nipanal
Advertisment
Advertisment
Advertisment