/newsfirstlive-kannada/media/media_files/2025/11/12/islamabada-court-2025-11-12-08-36-55.jpg)
ಭಯೋತ್ಪಾದಕರ ಮ್ಯಾನಿಫ್ಯಾಕ್ಚರಿಂಗ್ ಯೂನಿಟ್​ ಪಾಕಿಸ್ತಾನದಲ್ಲಿ ಭೀಕರ ಆ*ಹುತಿ ದಾಳಿ ನಡೆದಿದೆ. ಪ್ರತಿಬಾರಿ ಕೂಡ ಉಗ್ರರನ್ನ ತಲೆ ಮೇಲೆ ಹೊತ್ಕೊಂಡು ಮೆರೆಸೋ ಡಬಲ್ ಗೇಮ್ ಪಾಕಿಸ್ತಾನ ಇದೀಗ ತನ್ನದೇ ನೆಲದಲ್ಲಿ ಭೀಕರವಾದ ದಾಳಿ ಎದುರಿಸಿದೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿನ ಪೈಶಾಚಿಕ ಕೃತ್ಯಕ್ಕೆ ಭಾರತವೇ ಕಾರಣ ಅನ್ನೋ ಹೊಸ ನಾಟಕ ಶುರು ಮಾಡಿದೆ ಪಾಕಿಸ್ತಾನ.
ಐ20 ಕಾರು.. ಇಡೀ ದೇಶವನ್ನ ಮಲಗದೇ ಇರುವಂತೆ ಮಾಡಿತ್ತು. ಭಾರತದ ರಾಜಧಾನಿ ನವದೆಹಲಿಯ ಹೃದಯಭಾಗದಲ್ಲಾದ ಕೃತ್ಯದ ಶಾಕ್​ನಿಂದ ದೇಶ ಇನ್ನೂ ಹೊರಗೆ ಬಂದಿಲ್ಲ.. ಅಷ್ಟರಲ್ಲಾಗಲೇ ಪಾಕಿಸ್ತಾನ ತನ್ನ ಮನೆಯಲ್ಲಿ ದೋಸೆ ತೂತಿಗೆ ಭಾರತವೇ ಕಾರಣ ಅಂತಿದೆ.
ದಿಲ್ಲಿ ಪ್ರಕರಣದಿಂದ ಆದ ನಷ್ಟ.. 9 ಮಂದಿ ಸಾ*.. ನೋವು.. ನಾವು ಇದಕ್ಕೆ ಮುಲಾಮು ಹಚ್ಚಿಕೊಳ್ಳೊದಕ್ಕೆ ಈಗ ಶುರು ಮಾಡಿದ್ದೀವಿ.. ಆದ್ರೆ ಪಾಕಿಸ್ತಾನದಲ್ಲಾದ ಗಾಯಕ್ಕೆ ಭಾರತವೇ ಕಾರಣ ಅಂತ ಪಾಕ್​ ಪ್ರಧಾನಿ ಬೊಬ್ಬೆ ಹೊಡೆಯುತ್ತಿದ್ದಾನೆ. ಭಯೋತ್ಪಾದಕರ ಮ್ಯಾನಿಫ್ಯಾಕ್ಚರಿಂಗ್ ಯೂನಿಟ್​ ಪಾಕಿಸ್ತಾನದಲ್ಲಿ ಆತ್ಮಾ*ತಿ ದಾಳಿ ನಡೆದಿದೆ.. ಸೇಮ್​ ದೆಹಲಿಯಲ್ಲಾದ ಕಾರು ಸ್ಫೋ*ದಂತೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಭೀಕರ ಸ್ಫೋ*​ ಆಗಿದೆ.
ಇದನ್ನೂ ಓದಿ:5 ವರ್ಷ RCBಯಲ್ಲಿ ಉಳಿಸಿಕೊಳ್ಳೋ ಷರತ್ತು..? ಕೊಹ್ಲಿ ಡಿಮ್ಯಾಂಡ್​ ಎಷ್ಟು ಕೋಟಿ..?
ನಿನ್ನೆ ಮಧ್ಯಾಹ್ನ ಪಾಕಿಸ್ತಾನದ ಇಸ್ಲಾಮಾಬಾದ್‌ನ ಕೋರ್ಟ್ ಕಟ್ಟಡದ ಹೊರಗಡೆ ಉಗ್ರರಿಂದ ಭೀಕರ ದಾಳಿ ನಡೆದಿದೆ. ಜನ ಹೆಚ್ಚಾಗಿರುವ ಸಮಯದಲ್ಲೇ ಈ ರೀತಿಯ ದಾಳಿ ಮಾಡಲಾಗಿದೆ. ಅದೆಷ್ಟು ತೀವ್ರವಾಗಿತ್ತು ಎಂದರೆ, 5 ಕಿಲೋ ಮೀಟರ್ ದೂರಕ್ಕೂ ಸ್ಫೋ*ದ ಸದ್ದು ಕೇಳಿಸಿದೆ. ದಾಳಿಯಲ್ಲಿ 12 ಜನರು ಸಾ*ನ್ನಪ್ಪಿದ್ದು, 27 ಮಂದಿ ಗಾಯಗೊಂಡಿದ್ದಾರೆ.
ನಾಲಿಗೆ ಹರಿಬಿಟ್ಟ ಪಾಕಿಸ್ತಾನ ಪ್ರಧಾನಿ!
ಇದು ಉಗ್ರರ ದಾಳಿ ಅಂತ ಪಾಕ್ ಅಧಿಕಾರಿಗಳು ತಿಳಿಸಿದ್ರೂ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಭಾರತವನ್ನ ದೂರಿದ್ದು ಉರಿಯುವ ಬೆಂಕಿಗೆ ತುಪ್ಪ ಸುರಿಸಿದ್ದಾರೆ. ಅಫ್ಘಾನಿಸ್ತಾನ ನಡುವಿನ ಉದ್ವಿಗ್ನತೆ.. ಭಾರತದ ಆಪರೇಷನ್​ ಸಿಂಧೂರ್​ ಮನಸ್ಸಿನಲ್ಲಿಟ್ಕೊಂಡು ಪಾಕಿಸ್ತಾನ ಈಗೆ ಆರೋಪ ಹೊರಿಸೋ ಕೆಲಸ ಮಾಡಿದೆ.
ದಾಳಿಯ ಹೊಣೆಯನ್ನ ತೆಹ್ರಿಕ್​​​ ಇ ತಾಲಿಬಾನ್​​ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಉಗ್ರರ ಪೋಷಕ ಪಾಪಿ ಪಾಕಿಸ್ತಾನದ ನೆಲದಲ್ಲಿ ಭೀಕರವಾದ ದಾಳಿಗೆ ತನ್ನದೇ ನೆಲದಲ್ಲಿ ನೆತ್ತರು ಹರಿದಿದೆ.. ಇಷ್ಟಾದ್ರೂ ಬುದ್ಧಿ ಇಲ್ಲದವರಂತೆ ಪಾಕ್ ಪ್ರಧಾನಿ ಹೇಳಿದ್ದು ಬೆಂಕಿ ಹೊತ್ತಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us