/newsfirstlive-kannada/media/media_files/2025/11/11/delhi-incident-7-2025-11-11-21-23-38.jpg)
ವೈದ್ಯೋ ನಾರಾಯಣೋ ಹರಿ ಅಂತಾರೆ. ಆದ್ರೆ, ಉಗ್ರ ಮನಸ್ಥಿತಿ ಇದ್ರೆ ಅವನು ವೈದ್ಯನೇ ಅಲ್ಲ.. ಈಗ ಡೆಲ್ಲಿಯಲ್ಲಿ ನಡೆದಿರೋ ಭೀಕರ ದುರಂತದ ಹಿಂದೆ ಬಿಳಿ ಕೋಟ್ ಧರಿಸಿರೋ ಡಾಕ್ಟರ್‌ಗಳ ಕೈವಾಡದ ಶಂಕೆ ಮೂಡಿದೆ. ಇದಕ್ಕೆ ಬಲವಾದ ಸಾಕ್ಷಿಯೂ ಸಿಕ್ಕಿವೆ.
ವೈಟ್‌ಕಾಲರ್ ಟೆರರ್ ಮಾಡ್ಯೂಲ್‌ಗಳೇ ಅಮಾಯಕರ ಜೀವವನ್ನ ಬಲಿಪಡೆದಿರೋ ಸಂಶಯ ಮೂಡಿದೆ. ಡಾ. ಉಮರ್ ಓಡಿಸುತ್ತಿದ್ದ ಐ-20 ಕಾರು ಬ್ಲಾಸ್ಟ್ ಹಿಂದೆ ವೈದ್ಯರ ಹೆಸರೇ ಕೇಳಿಬಂದಿದೆ.
ವೈಟ್ ಕಾಲರ್ ಟೆರರ್!
ದೆಹಲಿ ಪ್ರಕರಣದ ಸುತ್ತ ಡಾಕ್ಟರ್ಸ್​ಗಳ ಹೆಸರೇ ಕೇಳಿಬಂದಿದೆ. ಹೊಸದಾಗಿ ಇಬ್ಬರು ಸೇರಿದಂತೆ ಒಟ್ಟು 5 ವೈದ್ಯರನ್ನ ಬಂಧನ ಮಾಡಲಾಗಿದೆ. ಡಾ.ಆದಿಲ್, ಡಾ.ಮುಜಾಮಿಲ್, ಡಾ.ಶಾಹೀನ್ ಅರೆಸ್ಟ್ ಆದ ಬೆನ್ನಲ್ಲೇ ಮತ್ತಿಬ್ಬರನ್ನ ತನಿಖಾ ತಂಡ ಬಂಧಿಸಿದೆ. ಗುಜರಾತ್​ನ ಸೂರತ್​ನಲ್ಲಿ ಮತ್ತೋರ್ವ ವೈದ್ಯ ಲಾಕ್ ಆಗಿದ್ದು, ಆತನ ಕ್ಲಿನಿಕ್​ನಲ್ಲೂ ಒಂದಷ್ಟು ಸ್ಪೋಟಕ ಸಿಕ್ಕ ಮಾಹಿತಿ ಇದೆ. ಕಾಶ್ಮೀರದಲ್ಲೂ ಮತ್ತೋರ್ವ ಡಾಕ್ಟರ್‌ನ ಬಂಧನವಾಗಿದ್ದು, ಈತ ಡಾ.ಉಮರ್ ಸ್ನೇಹಿತ ಡಾ.ಸಜಾದ್ ಅಹ್ಮದ್ ಅಂತ ತಿಳಿದುಬಂದಿದೆ.
ಇದನ್ನೂ ಓದಿ:KSCA ಅಧ್ಯಕ್ಷೀಯ ಚುನಾವಣೆಗೆ ಎಂಟ್ರಿ ಕೊಟ್ಟ ವೆಂಕಟೇಶ್ ಪ್ರಸಾದ್..! ಕುಂಬ್ಳೆ ಬೆಂಬಲ
ದೆಹಲಿ ಘಟನೆ ಹಿಂದೆ ಮುಸ್ಲಿಂ ವೈದ್ಯರ ತಂಡವಿತ್ತು. ಈ ತಂಡದಲ್ಲಿ ಒಬ್ಬ ಮಹಿಳಾ ವೈದ್ಯೆಯೂ ಇದ್ದಾಳೆ ಅನ್ನೋದು ತನಿಖೆಯಲ್ಲಿ ಬಯಲಾಗಿದೆ. ಅಲ್ಲದೇ ಎರಡು ದಿನದ ಹಿಂದೆ ಫರೀದಾಬಾದ್‌ನಲ್ಲಿ ಆರ್‌ಡಿಎಕ್ಸ್ ಸೇರಿದಂತೆ ಸ್ಫೋ*ಕ ವಶ ಪಡಿಸಿಕೊಂಡ ಪ್ರಕರಣಕ್ಕೂ ದೆಹಲಿ ಸ್ಫೋ*ಕ್ಕೂ ಇರೋ ಲಿಂಕ್ ರಿವೀಲ್ ಆಗಿದೆ.
ಮುಸ್ಲಿಂ ವೈದ್ಯರ ಕರಾಳ ಮುಖ!
- ಜೈಷ್-ಎ ಪರ ಪೋಸ್ಟರ್ ಅಂಟಿಸಿದ ಕೇಸ್‌ನಲ್ಲಿ ಡಾ. ಆದಿಲ್ ಅರೆಸ್ಟ್
- ಆದಿಲ್ ಜೊತೆ ಸಂಪರ್ಕದಲ್ಲಿದ್ದ ಡಾ. ಮುಜಾಮಿಲ್ ಶಕೀಲ್ ಬಂಧನ
- 350 ಕೆ.ಜಿ. ಆರ್‌ಡಿಎಕ್ಸ್ ಹಾಗೂ 2,900 ಕೆ.ಜಿ. ಸ್ಫೋ*ಕಗಳು ಸೀಜ್
- ಡಾ. ಶಾಹಿನ್ ಶಹೀದ್ ಲಖನೌನ ನಿವಾಸಿಯಾಗಿದ್ದ ವೈದ್ಯಕೀಯ ಪ್ರೊಫೆಸರ್
- ಶಾಹಿನ್ ಶಹೀದ್ ಕಾರ್‌ನಲ್ಲಿ ಎ.ಕೆ. 47 ರೈಫಲ್ ಹಾಗೂ ಬುಲೆಟ್ಸ್ ಸಿಕ್ಕಿತ್ತು
- ಮುಜಾಮಿಲ್ ಹಾಗೂ ಆದಿಲ್‌ಗೆ ನಿಕಟವರ್ತಿ ಡಾ. ಉಮರ್ ನಬಿ
- ಉಮರ್ ಕೂಡಾ ಸ್ಫೋ*ಕಗಳನ್ನ ಪ್ರತ್ಯೇಕವಾಗಿ ಇರಿಸಿಕೊಂಡಿದ್ದ ಶಂಕೆ
- ತನ್ನ ಸಹವರ್ತಿಗಳು ಅರೆಸ್ಟಾಗುತ್ತಿದ್ದಂತೆಯೇ ಡಾ. ಉಮರ್‌ನಿಂದ ಕೃತ್ಯ
ದೇಶದಲ್ಲಿ ಯಾರನ್ನ ನಂಬಬೇಕು? ಯಾರನ್ನ ನಂಬಬಾರದು ಅನ್ನೋದು ನಿಜಕ್ಕೂ ತಿಳಿಯದಾಗಿದೆ. ವೈದ್ಯರೇ ಇಂಥ ಕೃತ್ಯಕ್ಕೆ ಇಳಿದಿದ್ದಾರೆ ಅನ್ನೋದಾದ್ರೆ ಇಂಥಹ ಸಮಾಜಘಾತುಕರು ದೇಶದ ಮೂಲೆ ಮೂಲೆಯಲ್ಲೂ ಅಡಗಿರೋ ಸಾಧ್ಯತೆ ಇದೆ. ದೇಶ ಉಳಿಯಬೇಕಾದ್ರೆ ಇಂಥಹ ಕ್ರಿಮಿಗಳನ್ನ ಮಟ್ಟಹಾಕಬೇಕಿದೆ.
ಇದನ್ನೂ ಓದಿ: 56ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ ‘ವನ್ಯ’ ಸಿನಿಮಾ ಆಯ್ಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us