/newsfirstlive-kannada/media/media_files/2025/11/05/rcb-2025-11-05-13-13-50.jpg)
ಐಪಿಎಲ್ ಸಿಸನ್-19 ಪ್ಲೇಯರ್ಸ್​ ರಿಟೆನ್ಶನ್​​​​ ಡೆಡ್​​ಲೈನ್​ಗೆ ಕೌಂಟ್​ಡೌನ್ ಶುರುವಾಗಿದೆ. ಈಗಾಗಲೇ ಎಲ್ಲಾ 10 ಫ್ರಾಂಚೈಸಿಗಳು ಬಲಿಷ್ಟ ತಂಡ ಕಟ್ಟಲು ತೆರೆ ಹಿಂದೆ ಕಸರತ್ತು ನಡೆಸ್ತಿವೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಹ, ರಿಲೀಸ್ ಆಟಗಾರರ ಲಿಸ್ಟ್ ರೆಡಿ ಮಾಡಿಕೊಂಡಿದ್ದು, ವರ್ಷಾಂತ್ಯದಲ್ಲಿ ನಡೆಯಲಿರುವ ಆಟಗಾರರ ಹರಾಜಿಗಾಗಿ ಕಾಯ್ತಿದೆ.
ನವೆಂಬರ್ 15 ಆಟಗಾರರ ರಿಟೆನ್ಶನ್ ಲಿಸ್ಟ್​​​ ನೋಡಲು ಇಡೀ ವಿಶ್ವವೇ ಎದುರು ನೋಡ್ತಿದೆ. ಯಾವ ತಂಡ ಯಾವೆಲ್ಲಾ ಆಟಗಾರರನ್ನ ರೀಟೇನ್ ಮಾಡಿಕೊಂಡಿದೆ, ಯಾವೆಲ್ಲಾ ಆಟಗಾರರನ್ನ ತಂಡದಿಂದ ರಿಲೀಸ್ ಮಾಡಲಾಗಿದೆ ಅನ್ನೋ ಕುತೂಹಲ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯಲ್ಲಿದೆ.
ಇದನ್ನೂ ಓದಿ: 5 ವರ್ಷ RCBಯಲ್ಲಿ ಉಳಿಸಿಕೊಳ್ಳೋ ಷರತ್ತು..? ಕೊಹ್ಲಿ ಡಿಮ್ಯಾಂಡ್​ ಎಷ್ಟು ಕೋಟಿ..?
ಇದೆಲ್ಲದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಟಗಾರರ ರಿಟೆನ್ಶನ್ ಮತ್ತು ರಿಲೀಸ್​​​​​​​ ವಿಚಾರದಲ್ಲಿ ಜಾಣ್ಮೆಯ ನಡೆ ಇಟ್ಟಿದೆ. ಪ್ರತಿಯೊಬ್ಬ ಆಟಗಾರನ ಸ್ಟ್ರೆಂಥ್, ವೀಕ್ನೆಸ್ ಗಮನಹರಿಸಿರುವ ಫ್ರಾಂಚೈಸಿ, ತಂಡಕ್ಕೆ ಫಿಟ್ ಆಗುವಂತಹ ಆಟಗಾರರನ್ನೇ ಉಳಿಸಿಕೊಳ್ಳಲು ತೀರ್ಮಾನಿಸಿದೆ. ಪರ್ಸ್​​ ಬಗ್ಗೆ ಕೂಡ ಹೆಚ್ಚು ನಿಗಾ ಇಟ್ಟಿದೆ.
ಲಿಯಾಮ್ ಲಿವಿಂಗ್​ಸ್ಟೋನ್
ಇಂಗ್ಲೆಂಡ್​​ ತಂಡದ ಸೂಪರ್​ಸ್ಟಾರ್ ಆಲ್​ರೌಂಡರ್ ಲಿಯಾಮ್ ಲಿವಿಂಗ್​ಸ್ಟೋನ್, ಕಳೆದ ಐಪಿಎಲ್ ಸೀಸನ್​​ನಲ್ಲಿ, ಅಟ್ಟರ್ ಫ್ಲಾಪ್ ಪರ್ಫಾಮೆನ್ಸ್ ನೀಡಿದ್ರು. 10 ಪಂದ್ಯಗಳಲ್ಲಿ ಕೇವಲ 112 ರನ್​​ ಮತ್ತು 2 ವಿಕೆಟ್ ಕಬಳಿಸಿದ್ದ ಲಿವಿಂಗ್​ಸ್ಟೋನ್, ಫ್ರಾಂಚೈಸಿ ಮಾಲೀಕರಿಗೆ ಭಾರೀ ನಿರಾಸೆ ಮೂಡಿಸಿದ್ದಾರೆ. ಹಾಗಾಗಿ 8.75 ಕೋಟಿ ವೀರ ಲಿಂಗ್​ಸ್ಟೋನ್, ಮುಂದಿನ ಸೀಸನ್​ನಲ್ಲಿ ಆರ್​​ಸಿಬಿ ಪರ ಆಡೋದು, ಬಹುತೇಕ ಅನುಮಾನ.
ರಸಿಖ್ ದಾರ್
ಯುವ ಆಲ್​ರೌಂಡರ್ ರಸಿಖ್ ಸಲಾಮ್ ದಾರ್, ಐಪಿಎಲ್ ಸೀಸನ್-18ರಲ್ಲಿ ಹೆಚ್ಚೇನು ಪಂದ್ಯಗಳನ್ನ ಆಡಿಲ್ಲ. ಆಡಿರೋ 2 ಪಂದ್ಯಗಳಲ್ಲಿ ರಸಿಖ್, ಕೇವಲ 2 ವಿಕೆಟ್ ಮಾತ್ರ ಪಡೆದಿದ್ದಾರೆ. ಸೀಸನ್​ ಉದ್ದಕ್ಕೂ ಹೆಚ್ಚು ಬೆಂಚ್​ ಕಾದಿರುವ ರಸಿಖ್​ಗೆ, ಬೆಂಗಳೂರು ತಂಡ 6 ಕೋಟಿ ರೂಪಾಯಿ ನೀಡಿತ್ತು. ಆದ್ರೀಗ ಆರ್​ಸಿಬಿ ರಸಿಖ್​​ನ ಬಿಟ್ಟು ಮುಂದೆ ಹೋಗುವ ಚಿಂತನೆ ನಡೆಸ್ತಿದೆ.
ಯಶ್ ದಯಾಳ್
2025ರ ಐಪಿಎಲ್​ ಟೂರ್ನಿಯಲ್ಲಿ ಎಡಗೈ ವೇಗಿ ಯಶ್ ದಯಾಳ್, ಆರ್​ಸಿಬಿಯ ಗೇಮ್ ಚೇಂಜರ್ ಆಗಿ ಗುರುತಿಸಿಕೊಂಡಿದ್ದಾರೆ. ಆದ್ರೆ ಆಫ್ ದ ಫೀಲ್ಡ್​ನಲ್ಲಿ ಯಶ್ ದಯಾಳ್ ಮೇಲೆ ಗಂಭೀರ ಆರೋಪ ಇರುವ ಕಾರಣ, ಇವರನ್ನ ತಂಡದಲ್ಲಿ ಕೈಬಿಡುವ ಸಾಧ್ಯತೆಯೇ ಹೆಚ್ಚು. 5 ಕೋಟಿ ಪಡೆದು ಆರ್​ಸಿಬಿಗೆ ಎಂಟ್ರಿ ಕೊಟ್ಟಿದ್ದ ದಯಾಳ್, ಮುಂದಿನ ಐಪಿಎಲ್ ಸೀಸನ್​​ನಲ್ಲಿ ಆಡದೇ ಇದ್ರೂ ಆಶ್ಚರ್ಯ ಪಡಬೇಕಾಗಿಲ್ಲ.
ನುವಾನ್ ತುಷಾರಾ
ಶ್ರೀಲಂಕಾದ ವೇಗಿ ನುವಾನ್ ತುಷಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸದ್ಯ ಬೇಡವಾದ ಬೌಲರ್. ಕಳೆದ ಐಪಿಎಲ್ ಸೀಸನ್​ನಲ್ಲಿ 1.60 ಕೋಟಿ ರೂಪಾಯಿ ಪಡೆದು, ಕೇವಲ ಒಂದೇ ಒಂದು ಪಂದ್ಯ ಆಡಿದ್ದ ತುಷಾರ, ಈ ಬಾರಿ ಹರಾಜಿಗೆ ಹೋಗೋದು ಖಚಿತ. ಆರ್​ಸಿಬಿ ತಂಡದಲ್ಲಿ ಹೆಚ್ಚು ಬೌಲರ್​ಗಳಿರೋದ್ರಿಂದ, ತುಷಾರರನ್ನ ರಲೀಸ್ ಮಾಡಲು ಆರ್​ಸಿಬಿ ಮುಂದಾಗಿದೆ.
ಇದನ್ನೂ ಓದಿ:KSCA ಅಧ್ಯಕ್ಷೀಯ ಚುನಾವಣೆಗೆ ಎಂಟ್ರಿ ಕೊಟ್ಟ ವೆಂಕಟೇಶ್ ಪ್ರಸಾದ್..! ಕುಂಬ್ಳೆ ಬೆಂಬಲ
ಲುಂಗಿ ಎಂಗಿಡಿ
ದಕ್ಷಿಣ ಆಫ್ರಿಕಾ ತಂಡದ ವೇಗಿ ಲುಂಗಿ ಎಂಗಿಡಿಯನ್ನ, ಆರ್​ಸಿಬಿ ಫ್ರಾಂಚೈಸಿ ರಿಲೀಸ್ ಮಾಡೋದು ನೂರಕ್ಕೆ ನೂರರಷ್ಟು ಸತ್ಯ. ಕಳೆದ ವರ್ಷ ಎಂಗಿಡಿ ಆಡಿದ್ದು ಕೇವಲ 4 ಪಂದ್ಯಗಳನ್ನ ಮಾತ್ರ. ಹೆಚ್ಚು ಅವಕಾಶಗಳನ್ನ ಪಡೆಯದ ಎಂಗಿಡಿ, ಈ ಬಾರಿ ಆರ್​ಸಿಬಿ ತಂಡದಿಂದ ದೂರ ಹೋಗಲಿದ್ದಾರೆ. 1 ಕೋಟಿ ಪಡೆದು ಕೇವಲ ನಾಲ್ಕೇ ನಾಲ್ಕು ವಿಕೆಟ್ ಪಡೆದಿದ್ದ ಎಂಗಿಡಿಯನ್ನ, ಆರ್​ಸಿಬಿ ರೀಟೇನ್ ಮಾಡೋ ಮನಸು ಮಾಡುತ್ತಿಲ್ಲ.
ಆರ್​ಸಿಬಿ ಪರ್ಸ್​​ನಲ್ಲಿ ಇರೋ ಬ್ಯಾಲೆನ್ಸ್ ಎಷ್ಟು..?
ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ್ಸ್​ನಲ್ಲಿ 75 ಲಕ್ಷ ರೂಪಾಯಿ ಬ್ಯಾಲೆನ್ಸ್​ ಇದೆ. ಆದ್ರೆ ಲಿವಿಂಗ್​ಸ್ಟೋನ್, ರಸಿಖ್ ದಾರ್, ಯಶ್ ದಯಾಳ್, ತುಷಾರ ಮತ್ತು ಎಂಗಿಡಿಯನ್ನ ರಿಲೀಸ್ ಮಾಡಿದ್ರೆ ಆರ್​ಸಿಬಿ ತನ್ನ ಬ್ಯಾಲೆನ್ಸ್ ಅನ್ನ 22.35 ಕೋಟಿ ರೂಪಾಯಿಗೆ ಏರಿಸಿಕೊಳ್ಳಲಿದೆ. ಈ ಹಣದಿಂದ ಡಿಸೆಂಬರ್​ನಲ್ಲಿ ನಡೆಯಲಿರುವ ಮಿನಿ ಹರಾಜಿನಲ್ಲಿ ಡಿಸೆಂಟ್ ಪ್ಲೇಯರ್​ಗಳನ್ನ ಖರೀದಿ ಮಾಡಬಹುದಾಗಿದೆ.
ಆರ್​ಸಿಬಿ ಯಾವೆಲ್ಲಾ ಪ್ಲೇಯರ್​ಗಳನ್ನ ರೀಟೇನ್ ಮಾಡಿಕೊಂಡಿದೆ. ಹಾಗೆ ಯಾವೆಲ್ಲಾ ಪ್ಲೇಯರ್​ಗಳನ್ನ ರಿಲೀಸ್ ಮಾಡಲು ಮುಂದಾಗಿದೆ ಅನ್ನೋ ಕ್ಲಾರಿಟಿ ಇಲ್ಲ. ಆದ್ರೆ ಬೆಂಗಳೂರು ಫ್ರಾಂಚೈಸಿ,ಆಟಗಾರರ ರಿಟೆನ್ಶನ್ ಮತ್ತು ರಿಲೀಸ್​ನಲ್ಲಿ ಸಿಕ್ಕಾಪಟ್ಟೆ ಹೋಂ ವರ್ಕ್​ ಮಾಡೇ ಅಖಾಡಕ್ಕೆ ಇಳಿಯಲಿದೆ.
ಇದನ್ನೂ ಓದಿ: ರಕ್ಷಿತಾಳನ್ನ ವಿಷಕಾರಿ ಎಂದ ರಾಶಿಕಾ.. ನಾಮಿನೇಟ್ ವಿಚಾರದಲ್ಲಿ ದೊಡ್ಡ ಗಲಾಟೆ..! VIDEO
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us