/newsfirstlive-kannada/media/media_files/2025/12/10/devil-2025-12-10-16-20-46.jpg)
ಪ್ರತಿಯೊಬ್ಬ ಹೀರೋ ಸಹ ತನ್ನ ಸಿನಿಮಾ ಗೆಲ್ಬೇಕು. ತನ್ನ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸ್ಬೇಕು ಅನ್ನೋದ್ ಇರುತ್ತೆ. ಅದೇ ನಿಟ್ಟಿನಲ್ಲಿ ಹಗಲು ರಾತ್ರಿ ಕೆಲಸ ಮಾಡಿರ್ತಾರೆ. ನಿರ್ಮಾಪಕರು ಸಾಲಸೂಲ ಮಾಡಿ ಸಿನಿಮಾಗೆ ಬೇಕಾದ ಹಣವನ್ನ ಹಾಕಿರ್ತಾರೆ. ಹೀಗಿದ್ದಾಗ ಸಿನಿಮಾದ ಗೆಲುವು ಹೀರೋ ಪಾಲಿಗೆ ಖಂಡಿತವಾಗಿಯೂ ನಿರ್ಣಾಯಕ. ಅದ್ರಲ್ಲಿಯೂ ಡೆವಿಲ್ ಗೆಲುವು ದರ್ಶನ್ ಪಾಲಿಗೆ ವೇರಿ ವೇರಿ ಇನ್‌ಪಾರ್ಟೆಂಟ್.
ಇದನ್ನೂ ಓದಿ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಭರ್ಜರಿ ಗುಡ್​ನ್ಯೂಸ್..!
/filters:format(webp)/newsfirstlive-kannada/media/post_attachments/wp-content/uploads/2025/02/Darshan-Devil-Teaser-7.jpg)
ದರ್ಶನ್ ಜೈಲಲ್ಲಿ, ಡೆವಿಲ್ ಥಿಯೇಟರ್‌ಗೆ!
ರೇಣುಕಾಸ್ವಾಮಿ ಕೇಸ್‌ನಲ್ಲಿ ಆರೋಪಿಯಾಗಿರೋ ದರ್ಶನ್ ಸದ್ಯ ಪರಪ್ಪನ ಅಗ್ರಹಾರ ಜೈಲಲ್ಲಿ ಇದ್ದಾರೆ. ಮೊದಲ ಬಾರಿಗೆ ಕೊಲೆ ಕೇಸ್‌ನಲ್ಲಿ ತಗ್ಲಾಕೊಂಡಾಗ ಡೆವಿಲ್ ಸಿನಿಮಾದ ಶೂಟಿಂಗ್ ನಡೀತಾ ಇತ್ತು ಅನ್ನೋದ್ ಮಹತ್ವದ್ದು. ಆಮೇಲೆ ದರ್ಶನ್ ಜೈಲಿಗೆ ಹೋಗ್ಬೇಕಾಯ್ತು. ಆಮೇಲೆ ಹೈಕೋರ್ಟ್‌ನಿಂದ ಜಾಮೀನು ಪಡ್ಕೊಂಡ್ ಬಂದು ನಾಲ್ಕೈದು ತಿಂಗಳಲ್ಲಿ ಸಿನಿಮಾ ಕಂಪ್ಲೀಟ್ ಮಾಡಿದ್ದಾರೆ. ಬೆನ್ನು ನೋವಿದ್ರೂ ಅದನ್ನೂ ಲೆಕ್ಕಿಸದೇ ಸಿನಿಮಾ ಕಂಪ್ಲೀಟ್ ಮಾಡಿದ್ದಾರೆ. ಆದ್ರೆ, ಸುಪ್ರೀಂ ಕೋರ್ಟ್‌ನಲ್ಲಿ ಬೇಲ್ ಕ್ಯಾನ್ಸಲ್ ಆಗಿರೋ ಹಿನ್ನೆಲೆಯಲ್ಲಿ ದರ್ಶನ್ ಮತ್ತೆ ಜೈಲು ಸೇರುವಂತಾಗಿದೆ. ಇದೀಗ ಜೈಲಲ್ಲಿ ಇರುವಾಗಲೇ ಡೆವಿಲ್ ಬಿಡುಗಡೆಯಾಗ್ತಾ ಇದ್ದು. ಈ ಸಿನಿಮಾದ ಸಕ್ಸಸ್ ದರ್ಶನ್ ಪಾಲಿಗೆ ಖಂಡಿತವಾಗಿಯೂ ಮಹತ್ವದ್ದಾಗಿದೆ.
ಸಾಮಾನ್ಯ ವೀಕ್ಷಕರು ಸಿನಿಮಾಗೆ ಬರ್ಬೇಕಾಗುತ್ತೆ?
ದರ್ಶನ್‌ಗೆ ಭಾರೀ ದೊಡ್ಡ ಸಂಖ್ಯೆಯ ಅಭಿಮಾನಿಗಳ ವರ್ಗವಿದೆ ಅನ್ನೋದ್ ಎಲ್ಲರಿಗೂ ಗೊತ್ತಿರೋ ವಿಚಾರ. ಹಾಕಿದ ಬಂಡವಾಳ ಒಂದೇ ವಾರದಲ್ಲಿ ರಿಟರ್ನ್ ಆಗುತ್ತೆ ಅನ್ನೋದ್ ಗೊತ್ತಿರೋ ವಿಚಾರ. ಹೀಗಾಗಿ ಡೆವಿಲ್ ಸಿನಿಮಾ ಬಿಡುಗಡೆಯಾದಾಗ ಆರಂಭದಲ್ಲಿ ಅಭಿಮಾನಿಗಳು ನುಗ್ಗಿ ಹೋಗಿ ನೋಡೋದು ಗ್ಯಾರಂಟಿ.
ಇದನ್ನೂ ಓದಿ:‘ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ..’ ಜೈಲಿನಿಂದಲೇ ಭಾವನಾತ್ಮಕವಾಗಿ ಪತ್ರ ಬರೆದ ದರ್ಶನ್
/filters:format(webp)/newsfirstlive-kannada/media/media_files/2025/08/14/devil-cinema-of-darshan-2025-08-14-14-33-27.jpg)
ನಾಲ್ಕೈದು ದಿನದ ನಂತರ ಸಿನಿಮಾಗೆ ಹೇಗೆ ಪ್ರತಿಕ್ರಿಯೆಗಳು ಬರ್ತಾವೆ ಅನ್ನೋದು ಮುಖ್ಯವಾಗಿರುತ್ತೆ. ಸಾಮಾನ್ಯ ವೀಕ್ಷಕರು, ಕುಟುಂಬದವರು ಬರ್ತಾರೋ ಇಲ್ವೋ ಅನ್ನೋದನ್ನ ನೋಡ್ಬೇಕಾಗುತ್ತೆ. ಅವರು ಬಂದ್ರೆ ಮಾತ್ರ ಸಿಮಾಗೆ ದೊಡ್ಡ ಸಕ್ಸಸ್ ಸಿಗೋದಕ್ಕೆ ಸಾಧ್ಯ.
ದೊಡ್ಡ ಗೆಲುವು ಸಿಗದೇ ಇದ್ರೆ ದರ್ಶನ್‌ಗೆ ಕಷ್ಟ!
ಜೈಲಲ್ಲಿರೋ ದರ್ಶನ್‌ಗೆ ಶಿಕ್ಷೆ ಆಗುತ್ತೋ? ಇಲ್ವೋ ಅನ್ನೋದು ಗೊತ್ತಿಲ್ಲ. ಅದು ಕೋರ್ಟ್ ತೀರ್ಪಿನ ಮೇಲಿರುತ್ತೆ. ಡೆವಿಲ್ ಸಿನಿಮಾ ಏನಾದ್ರೂ ಸೋತು ಬಿಟ್ರೆ ದರ್ಶನ್ ಪಾಲಿಗೆ ದೊಡ್ಡ ಶಿಕ್ಷೆ ಅಂದ್ರೆ ಖಂಡಿತ ತಪ್ಪಾಗದು. ಅಭಿಮಾನಿಗಳೇನೋ ಗೆಲ್ಲಿಸಲೇಬೇಕು ಅಂತ ಪಣತೊಟ್ಟಿದ್ದಾರೆ. ಈಗಾಗಲೇ ಅಡ್ವಾನ್ಸ್ ಬುಕಿಂಗ್‌ನಲ್ಲಿ 3.5 ಕೋಟಿಗೂ ಹೆಚ್ಚಿನ ಕಲೆಕ್ಸನ್ ಮಾಡಿದೆ. ಆದ್ರೆ, ಮುಂದಿನ ದಿನದಲ್ಲಿ ಏನಾಗುತ್ತೆ ಅನ್ನೋದ್ ಮುಖ್ಯವಾಗಿರುತ್ತೆ. ಈ ಸಿನಿಮಾ ಗೆದ್ದರೆ ಮಾತ್ರ ದರ್ಶನ್ ಸಿನಿಮಾ ಲೈಫ್‌ಗೆ ಉಸಿರು ಅಂದ್ರೆ ತಪ್ಪಾಗದು.
ಇದನ್ನೂ ಓದಿ:ಡೆವಿಲ್ ದಾಖಲೆ ಉಡೀಸ್ ಮಾಡಿದ ಮಾರ್ಕ್.. ಫ್ಯಾನ್ಸ್ ನಡುವೆ ವಾರ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us