ತಿಥಿ ಸಿನಿಮಾ ಖ್ಯಾತಿಯ ಹಿರಿಯ ನಟ ಸೆಂಚುರಿ ಗೌಡ ನಿಧನ

ತಿಥಿ ಸಿನಿಮಾ ಖ್ಯಾತಿಯ ಹಿರಿಯ ನಟ ಸೆಂಚುರಿ ಗೌಡ ನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿಂಗ್ರೆಗೌಡ ಅಲಿಯಾಸ್ ಸೆಂಚುರಿ ಗೌಡ ಅವರು ಇನ್ನು ನೆನಪು ಮಾತ್ರ.

author-image
Ganesh Kerekuli
century gowda
Advertisment

ತಿಥಿ ಸಿನಿಮಾ ಖ್ಯಾತಿಯ ಹಿರಿಯ ನಟ ಸೆಂಚುರಿ ಗೌಡ ನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿಂಗ್ರೆಗೌಡ ಅಲಿಯಾಸ್ ಸೆಂಚುರಿ ಗೌಡ ಅವರು ಇನ್ನು ನೆನಪು ಮಾತ್ರ. 

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಿಂಗ್ರೆಗೌಡನ ಕೊಪ್ಪಲು ಗ್ರಾಮದ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ತಿಥಿ ಸಿನಿಮಾ ಮೂಲಕ ಸೆಂಚುರಿಗೌಡ ಎಂದು ಖ್ಯಾತಿ ಪಡೆದಿದ್ದರು. 100 ವರ್ಷ ವಯಸ್ಸು ದಾಟಿದ್ದರಿಂದ ಸಿನಿಮಾದಲ್ಲೂ ಸೆಂಚುರಿಗೌಡ ಎಂದೇ ಪಾತ್ರದ ಹೆಸರಾಗಿತ್ತು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ರಾತ್ರಿ ಕೊನೆಯುಸಿರೆಳೆದಿದ್ದು, ಇಂದು ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಇದನ್ನೂ ಓದಿ:ರಾಜಸ್ಥಾನ್ ರಾಯಲ್ಸ್​ನಲ್ಲಿ ಮತ್ತೆ ತಿಕ್ಕಾಟ.. ಜಡೇಜಾ vs ಪರಾಗ್..!

century gowda (1)

ಕಳೆದ ಕೆಲವೇ ತಿಂಗಳ ಹಿಂದೆ ಗಡ್ಡಪ್ಪ ಖ್ಯಾತಿಯ ಚನ್ನೇಗೌಡ ಮೃತಪಟ್ಟಿದ್ದರು. ಇವರಿಬ್ಬರೂ ತಿಥಿ ಸಿನಿಮಾದಲ್ಲಿ ನಟಿಸಿ ಫೇಮಸ್‌ ಆಗಿದ್ದರು. ಇವರಿಬ್ಬರು ತಮ್ಮ ಸಹಜ ನಟೆಯಿಂದ ಮನೆಮಾತಾಗಿದ್ದರು. ತಿಥಿ ಸಿನಿಮಾ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸಿತ್ತು. ಹಾಲು ತಪ್ಪ, ಚಿನ್ನದ ಗೊಂಬೆ, ಹಳ್ಳಿ ಪಂಚಾಯ್ತಿ, ತರ್ಲೆ ವಿಲೇಜ್‌ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದರು. 

ಇದನ್ನೂ ಓದಿ: ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಇನ್ನಿಲ್ಲ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Gaddappa century Gowda
Advertisment