/newsfirstlive-kannada/media/media_files/2026/01/04/jadeja-vs-parag-2026-01-04-15-24-49.jpg)
ಐಪಿಎಲ್ ಸೀಸನ್-19ಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್​ ಕ್ಯಾಂಪ್​​ನಲ್ಲಿ ಗೊಂದಲಗಳು ಶುರುವಾಗಿವೆ. ಟ್ರೇಡ್ ಮೂಲಕ ರಾಜಸ್ಥಾನ್ ತಂಡಕ್ಕೆ ರಾಯಲ್ ಎಂಟ್ರಿ ಕೊಟ್ಟಿರೋ ಆಲ್​ರೌಂಡರ್ ರವೀಂದ್ರ ಜಡೇಜಾಗೆ, ತಂಡದ ಸಾರಥ್ಯ ನೀಡ್ತಾರಾ? ಅಥವಾ ಯಂಗ್ ರಿಯಾನ್ ಪರಾಗ್​ರನ್ನೇ ತಂಡದ ನಾಯಕನನ್ನಾಗಿ ಮುಂದುವರೆಸುತ್ತಾರಾ ಅನ್ನೋ ಕನ್ಫೂಷನ್ ರಾಜಸ್ಥಾನ್ ಆಟಗಾರರಲ್ಲಿ ಶುರುವಾಗಿದೆ.
ರಾಜಸ್ಥಾನ್ ರಾಯಲ್ಸ್ ಕ್ಯಾಂಪ್​ನಲ್ಲಿ ಕ್ಯಾಪ್ಟನ್ಸ್ ವಾರ್ ಶುರುವಾಗಿದೆ. ರವೀಂದ್ರ ಜಡೇಜಾ ವರ್ಸಸ್ ರಿಯಾನ್ ಪರಾಗ್ ನಡುವೆ ಫೈಟ್ ಆರಂಭವಾಗಿದೆ. ಇಬ್ಬರಲ್ಲಿ ಯಾರು ತಂಡವನ್ನ ಮುನ್ನಡೆಸೋದು? ಇಬ್ಬರಲ್ಲಿ ಯಾರಿಗೆ ಸಾರಥ್ಯ? ಸೀನಿಯರ್ ವರ್ಸಸ್ ಜ್ಯೂನಿಯರ್. ಇಬ್ಬರಲ್ಲಿ ಯಾರಿಗೆ ಮೇಲುಗೈ ಅನ್ನೋದು ಸದ್ಯ ರಾಯಲ್ಸ್​ ತಂಡದಲ್ಲೇ ಗೊಂದಲಗಳು ನಡೀತಿವೆ.
/filters:format(webp)/newsfirstlive-kannada/media/media_files/2025/11/21/ravindra-jadeja-and-sam-2025-11-21-13-21-57.jpg)
ಐಪಿಎಲ್ ಸೀಸನ್-19ಕ್ಕೆ ಸರಿ ಸುಮಾರು ಮೂರು ತಿಂಗಳು ಬಾಕಿ ಇದೆ. ತೆರೆ ಹಿಂದೆ ತಂಡಗಳು ಟೂರ್ನಿಗೆ, ತಯಾರಿ ನಡೆಸಿಕೊಳ್ತಿವೆ. ಆದ್ರೆ ರಾಜಸ್ಥಾನ್ ರಾಯಲ್ಸ್​ ತಂಡದಲ್ಲಿ ಮಾತ್ರ ಪ್ರಿಪರೇಷನ್ಸ್​​ ಮಾತೇ ಇಲ್ಲ. ಬದಲಿಗೆ ಆಟಗಾರರಲ್ಲಿ ಗೊಂದಲ..! ಫ್ರಾಂಚೈಸಿ ಮಾಲೀಕರು ಮೌನಕ್ಕೆ ಶರಣಾಗಿದ್ದಾರೆ. ಇದಕ್ಕೆ ಕಾರಣ, ಆರ್​ಆರ್​ ಸಾರಥಿ ಯಾರು ಅನ್ನೋ ಪ್ರಶ್ನೆಗೆ, ಸದ್ಯಕ್ಕೆ ಉತ್ತರ ಸಿಗದೇ ಇರೋದು..! ನಾಯಕತ್ವದ ವಿಚಾರದಲ್ಲಿ ರಾಜಸ್ಥಾನ್ ರಾಯಲ್ಸ್ ಮಾಲೀಕರು ಇನ್ನೂ ಗೊಂದಲದಲ್ಲಿದ್ದಾರೆ.
ಜಡೇಜಾ ರಾಯಲ್ಸ್ ಸಾರಥಿ ಆಗ್ತಾರಾ?
ಮಿನಿ ಹರಾಜಿಗೂ ಮುನ್ನ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್​ಕಿಂಗ್ಸ್​ ನಡುವೆ ಮಹತ್ವದ ಡೀಲ್ ನಡೆಯಿತು. ಸಂಜು ಸ್ಯಾಮ್ಸನ್​ರನ್ನ ಸಿಎಸ್​​ಕೆಗೆ ಕೊಟ್ಟು ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್​​ರನ್ನ ಆರ್​ಆರ್​ ತಂಡಕ್ಕೆ ಕರೆದೊಯ್ಯೋದು.! ಡೀಲ್ ಏನೋ ಫಿಕ್ಸ್ ಆಯ್ತು. ಅಂದುಕೊಂಡಂತೆ ಎಲ್ಲವೂ ನಡೀತು. ಆದ್ರೆ ಜಡ್ಡುಗೆ ಗಾಳ ಹಾಕೋಕೂ ಮುನ್ನ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ, ಕೊಟ್ಟ ಮಾತನ್ನ ಉಳಿಸಿಕೊಳ್ಳಬೇಕಿದೆ. ನಾಯಕತ್ವದ ಭರವಸೆಯನ್ನ ಈಡೇರಿಸಬೇಕಿದೆ. ಒಂದು ವೇಳೆ ಆರ್​ಆರ್​ ನಾಯಕತ್ವ ಬೇರೆಯವರಿಗೆ ನೀಡಿದ್ರೆ, ಕೊಟ್ಟ ಮಾತಿಗೆ ತಪ್ಪಿದಂತಾಗುತ್ತದೆ.
/filters:format(webp)/newsfirstlive-kannada/media/post_attachments/wp-content/uploads/2025/03/riyan_parag.jpg)
ಪರಾಗ್​​ಗೆ RR ಪಟ್ಟ ಸಿಗೋದು ಡೌಟ್?
24 ವರ್ಷದ ರಿಯಾನ್ ಪರಾಗ್, ಆರ್​ಆರ್​ ತಂಡದ ಫ್ಯೂಚರ್ ಸ್ಟಾರ್. ರಾಜಸ್ಥಾನ್ ಸಹ ಇದನ್ನೇ ಗಮನದಲ್ಲಿಟ್ಟುಕೊಂಡು, ಪರಾಗ್​​ಗೆ ಕಳೆದ ಸೀಸನ್​​ನಲ್ಲಿ ನಾಯಕತ್ವದ ಜವಾಬ್ದಾರಿ ನೀಡಿತ್ತು. ಆದ್ರೆ ಪರಾಗ್, ನಾಯಕನಾಗಿ ಫ್ರಾಂಚೈಸಿ ಮಾಲೀಕರನ್ನ ಇಂಪ್ರೆಸ್ ಮಾಡಲಿಲ್ಲ. 8 ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿದ್ದ ಪರಾಗ್, 6 ಪಂದ್ಯಗಳನ್ನ ಸೋತು, ಕೇವಲ ಎರಡೇ ಎರಡು ಪಂದ್ಯಗಳನ್ನ ಮಾಡತ್ರ ಗೆದ್ದಿದ್ರು. ಇದು ಆರ್​ಆರ್​ ಮಾಲೀಕರಿಗೆ ಸಮಾಧಾನ ನೀಡಿಲ್ಲ. ಹಾಗಾಗಿ ಈ ಬಾರಿ ಪರಾಗ್ ಕ್ಯಾಪ್ಟನ್​ಶಿಪ್ ಭವಿಷ್ಯ, ಏನು ಅನ್ನೋದೇ ಗೊತ್ತಿಲ್ಲ.
ಆರ್​ಆರ್​ ಮಾಲೀಕರು ನಾಯಕತ್ವದ ಬಗ್ಗೆ ಎಲ್ಲೂ ತುಟಿಕ್ ಪಿಟಿಕ್ ಅಂದಿಲ್ಲ. ಐಪಿಎಲ್​​​ ಸೀಸನ್-19 ಶುರುವಾಗೋಕೆ ಇನ್ನೂ ಟೈಮ್ ಇದೆ. ಹಾಗಾಗಿ ಸದ್ಯ ಗೊಂದಲದ ನಿರ್ಣಯ ಬೇಡ ಅನ್ನೋದು, ಆರ್​ಆರ್​ ಮಾಲೀಕರ ಜಾಣ್ಮೆಯ ನಡೆ. ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್​ ಮಾಲೀಕರ ತಲೆಯಲ್ಲಿ, ರವಿಂದ್ರ ಜಡೇಜಾಗೆ ಪಟ್ಟ ಕಟ್ಟಬೇಕು ಅನ್ನೋ ಆಸೆ ಇದೆ. ಆದ್ರೆ ಸಿಎಸ್​ಕೆ ನಾಯಕನಾಗಿ ಜಡ್ಡು ಫೇಲ್ ಆಗಿರೋದ್ರಿಂದ, ಸಾರಥ್ಯ ನೀಡೋಕೆ ಹಿಂದೆ ಮುಂದೆ ನೋಡ್ತಿದ್ದಾರೆ. ಹಾಗಂತೆ ರಿಯಾನ್ ಪರಾಗ್​​ ಮೇಲೂ, ಆರ್​ಆರ್​ ಮಾಲೀಕರಿಗೆ ಒಲವಿದೆ ಅಂತಲ್ಲ.!
ಇದನ್ನೂ ಓದಿ:Super six: ಮಿಂಚಿದ ಶ್ರೇಯಾಂಕ ಪಾಟೀಲ್, ಗಿಲ್ ದಿಢೀರ್ ಭೇಟಿಯಾಗಿದ್ದು ಯಾರನ್ನ..?
ರವೀಂದ್ರ ಜಡೇಜಾ, ರಿಯಾನ್ ಪರಾಗ್, ಯಶಸ್ವಿ ಜೈಸ್ವಾಲ್, ಧೃವ್ ಜುರೆಲ್, ಸ್ಯಾಮ್ ಕರನ್​ರಂತಹ ಆಟಗಾರರು, ಕ್ಯಾಪ್ಟನ್​ಶಿಪ್ ಸ್ಕಿಲ್ಸ್​ ಹೊಂದಿದ್ದಾರೆ. ಎಲ್ಲರಿಗೂ ತಂಡವನ್ನ ಮುನ್ನಡೆಸುವ ಸಾಮರ್ಥ್ಯ ಇದೆ. ಹಾಗಂತೆ ಎಲ್ಲರಿಗೂ ನಾಯಕತ್ವ ನೀಡೋದಕ್ಕೆ ಆಗೋದಿಲ್ಲ. ಹೀಗಾಗಿ ಆರ್​ಆರ್​ ಮಾಲೀಕರು, ಟೂರ್ನಿ ಹತ್ತಿರ ಇರುವಾಗ ಸಾರಥಿಯನ್ನ ಫೈನಲ್ ಮಾಡೋಕೆ ಚಿಂತನೆ ನಡೆಸ್ತಿದ್ದಾರೆ.
ರವಿಂದ್ರ ಜಡೇಜಾ, ರಿಯಾನ್ ಪರಾಗ್ ಮತ್ತು ಯಶಸ್ವಿ ಜೈಸ್ವಾಲ್ ನಡುವೆ ನಾಯಕತ್ವಕ್ಕಾಗಿ ಟ್ರಯಾಂಗಲ್ ಫೈಟ್​​​ ಅಂತೂ ನಡೆಯಲಿದೆ. ಆದ್ರೆ ಅಂತಿಮವಾಗಿ ರಾಜಸ್ಥಾನ್ ತಂಡದ ರಾಯಲ್ ಕ್ಯಾಪ್ಟನ್ ಯಾರಾಗ್ತಾರೆ ಅನ್ನೋದೇ ಭಾರೀ ಕುತೂಹಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us