Super six: ಮಿಂಚಿದ ಶ್ರೇಯಾಂಕ ಪಾಟೀಲ್, ಗಿಲ್ ದಿಢೀರ್ ಭೇಟಿಯಾಗಿದ್ದು ಯಾರನ್ನ..?

ಆಸ್ಟ್ರೇಲಿಯಾದ ಬ್ಯಾಟ್ಸ್​ಮನ್​ ವಾರ್ನರ್​ 39ನೇ ವಯಸ್ಸಿನಲ್ಲಿ ತಮ್ಮ ಕರಿಯರ್​​ನ ವೇಗದ ಶತಕ ದಾಖಲಿಸಿದ್ದಾರೆ. ವಿಜಯ್​ ಹಜಾರೆ ಟೂರ್ನಿಯಲ್ಲಿ ವೇಗಿ ಆರ್ಷ್​​ದೀಪ್​ ಸಿಂಗ್​ ಭರ್ಜರಿ ಬೌಲಿಂಗ್​ ಮೂಲಕ ಮಿಂಚಿದ್ದಾರೆ. ಗಿಲ್​, ನಾರ್ವೆಯ ಸ್ಟಾರ್​ ಫುಟ್ಬಾಲ್ ಆಟಗಾರ ಎರ್ಲಿಂಗ್ ಹಾಲೆಂಡ್​ರನ್ನ ಭೇಟಿಯಾಗಿದ್ದಾರೆ.

author-image
Ganesh Kerekuli
Shreyanka patil (2)
Advertisment

14 ವರ್ಷದ ಬಳಿಕ ಬಿಗ್​ಬ್ಯಾಷ್​ನಲ್ಲಿ ವಾರ್ನರ್​ ಶತಕ

ಆಸ್ಟ್ರೇಲಿಯಾದ ಬ್ಯಾಟ್ಸ್​ಮನ್​ ಡೇವಿಡ್​ ವಾರ್ನರ್​ 39ನೇ ವಯಸ್ಸಿನಲ್ಲಿ ತಮ್ಮ ಕರಿಯರ್​​ನ ವೇಗದ ಶತಕ ದಾಖಲಿಸಿದ್ದಾರೆ. ಹೊಬರ್ಟ್​ ಹರಿಕೇನ್​ ವಿರುದ್ಧದ ನಿನ್ನೆಯ ಪಂದ್ಯದಲ್ಲಿ ಸಿಡ್ನಿ ಥಂಡರ್​ ಪರ ಕಣಕ್ಕಿಳಿದಿದ್ದ ವಾರ್ನರ್​, 57 ಎಸೆತಗಳಲ್ಲಿ ಶತಕ ಪೂರೈಸಿದ್ರು. ಈ ಮೂಲಕ ಬಿಗ್​ ಬ್ಯಾಷ್​ ಲೀಗ್​ನಲ್ಲಿ 14 ವರ್ಷಗಳ ಬಳಿಕ ಶತಕ ಸಿಡಿಸಿದ ಸಾಧನೆ ಮಾಡಿದ್ರು. ಪಂದ್ಯದಲ್ಲಿ ಒಟ್ಟು 65 ಎಸೆತಗಳನ್ನ ಎದುರಿಸಿದ ವಾರ್ನರ್​ 20 ಬೌಂಡರಿ ಸಹಿತ ಅಜೇಯ 130 ರನ್​ ಸಿಡಿಸಿದ್ರು. 

ಇದನ್ನೂ ಓದಿ: 62 ಬಾಲ್​ನಲ್ಲಿ 66 ರನ್​.. ನಂತರ ಒಂದೇ ಓವರ್​ನಲ್ಲಿ ಶತಕ ಬಾರಿಸಿದ ಪಾಂಡ್ಯ

IPL 2025 Auction; RCB ವಿರುದ್ಧ ಚೊಚ್ಚಲ ಐಪಿಎಲ್​  ಟ್ರೋಫಿ ಗೆದ್ದಿದ್ದ ವಾರ್ನರ್ ಅನ್​ಸೋಲ್ಡ್​

5 ವಿಕೆಟ್​ ಕಬಳಿಸಿ ಮಿಂಚಿದ ಆರ್ಷ್​​ದೀಪ್​ ಸಿಂಗ್

ವಿಜಯ್​ ಹಜಾರೆ ಟೂರ್ನಿಯಲ್ಲಿ ವೇಗಿ ಆರ್ಷ್​​ದೀಪ್​ ಸಿಂಗ್​ ಭರ್ಜರಿ ಬೌಲಿಂಗ್​ ಮೂಲಕ ಮಿಂಚಿದ್ದಾರೆ. ಪಂಜಾಬ್​ ಪರ ಕಣಕ್ಕಿಳಿದಿರೋ ಆರ್ಷ್​​ದೀಪ್ ಸಿಂಗ್​​, ನಿನ್ನೆ ನಡೆದ ಸಿಕ್ಕಿಂ ವಿರುದ್ಧ 5 ವಿಕೆಟ್​ ಕಬಳಿಸಿದ್ರು. ಎಕಾನಮಿಕಲ್​ ಸ್ಪೆಲ್ ಹಾಕಿದ ಆರ್ಷ್​ದೀಪ್​, ಒಟ್ಟು 10 ಓವರ್​ ಬೌಲಿಂಗ್​ ಮಾಡಿ​ ಕೇವಲ 34 ರನ್​ ಬಿಟ್ಟು ಕೊಟ್ಟರು. ಎಡಗೈ ವೇಗಿಯ ಅದ್ಭುತ ಬೌಲಿಂಗ್​ ನೆರವಿನೊಂದಿಗೆ ಪಂಜಾಬ್​ 259 ರನ್​ಗಳ ಭರ್ಜರಿ ಗೆಲುವು ಸಾಧಿಸಿತು. 

ಟೀಂ ಇಂಡಿಯಾದಲ್ಲಿ ಒಂದು ಸಿಂಹ.. ಕಾಲಿಟ್ಟ ಎರಡೂವರೆ ವರ್ಷದಲ್ಲಿ ಎಲ್ಲರೂ ಸೈಡ್​​ಲೈನ್..!

ಎಲ್ಲಿಂಗ್​ ಹಾಲೆಂಡ್​ ಭೇಟಿಯಾದ ಗಿಲ್​

ಟೀಮ್​ ಇಂಡಿಯಾ ಏಕದಿನ ತಂಡದ ನಾಯಕ ಶುಭ್​ಮನ್​ ಗಿಲ್​, ನಾರ್ವೆಯ ಸ್ಟಾರ್​ ಫುಟ್ಬಾಲ್ ಆಟಗಾರ ಎರ್ಲಿಂಗ್ ಹಾಲೆಂಡ್​ರನ್ನ ಭೇಟಿಯಾಗಿದ್ದಾರೆ. ಮುಂಬೈನಲ್ಲಿ ನಡೆದ ಶೂಟ್​ವೊಂದರ ವೇಳೆ ಭೇಟಿಯಾಗಿ ಕೆಲ ಕಾಲ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಶುಭ್​ಮನ್​ ಗಿಲ್​ಗೆ ಎರ್ಲಿಂಗ್ ಹಾಲೆಂಡ್ ಸಹಿ ಹಾಕಿದ ಫುಟ್ಬಾಲ್​​ ಶೂಗಳನ್ನ ಉಡುಗೊರೆಯಾಗಿ ನೀಡಿದ್ದಾರೆ. 

ಇದನ್ನೂ ಓದಿ: RCB ಅಭಿಮಾನಿಗಳಿ​ಗೆ ಕೆಟ್ಟ ಸುದ್ದಿ.. ಓದಲೇಬೇಕಾದ ಸ್ಟೋರಿ..!

Shubamn Gill meet

ಬೃಂದಾವನಕ್ಕೆ ಭೇಟಿ ನೀಡಿದ ದೀಪ್ತಿ ಶರ್ಮಾ 

ಮಹಿಳಾ ಪ್ರೀಮಿಯರ್​ ಲೀಗ್​ ಆರಂಭಕ್ಕೂ ಮುನ್ನ ಯುಪಿ ವಾರಿಯರ್ಸ್​ ತಂಡದ ಆಟಗಾರ್ತಿ ದೀಪ್ತಿ ಶರ್ಮಾ, ಗುರುವಿನ ಆಶೀರ್ವಾದ ಪಡೆದಿದ್ದಾರೆ. ಉತ್ತರ ಪ್ರದೇಶದ ಬೃಂದಾವನದಲ್ಲಿರೋ ಪ್ರೇಮಾನಂದ ಮಹಾರಾಜರ ಆಶ್ರಮಕ್ಕೆ ದೀಪ್ತಿ ಶರ್ಮಾ ಭೇಟಿ ನೀಡಿದ್ರು. ಭೇಟಿ ವೇಳೆ ಆಶೀರ್ವಾದ ಪಡೆಯಲು ಬಂದ ದೀಪ್ತಿ ಶರ್ಮಾ ಸಾಧನೆಯನ್ನ ಪ್ರೇಮಾನಂದ ಗುರುಗಳು ಕೊಂಡಾಡಿದ್ದಾರೆ. ಆಶೀರ್ವಚನ ನೀಡಿ ದೀಪ್ತಿ ಶರ್ಮಾಗೆ ಹರಸಿದ್ದಾರೆ. 

ಫೋಟೋಶೂಟ್​ನಲ್ಲಿ ಮಿಂಚಿದ ಶ್ರೇಯಾಂಕ ಪಾಟೀಲ್​ 

ಮಹಿಳಾ ಪ್ರೀಮಿಯರ್​ ಲೀಗ್​ ಸೀಸನ್​ 4ಕ್ಕೂ ಮುನ್ನ ಕನ್ನಡತಿ ಶ್ರೇಯಾಂಕ ಪಾಟೀಲ್​ ಫೋಟೋಶೂಟ್​ನಲ್ಲಿ ಭಾಗಿಯಾಗಿದ್ದಾರೆ. ಆರ್​​ಸಿಬಿ ಟೀಮ್​ ಹೊಟೇಲ್​ನಲ್ಲಿ ನಡೆದ ಫೋಟೋಶೂಟ್​ನಲ್ಲಿ ಹೊಸ ಜೆರ್ಸಿ ತೊಟ್ಟು, ಸ್ಟೈಲಿಷ್​ ಪೋಸ್​ಗಳನ್ನ ಕೊಟ್ಟು ಶ್ರೇಯಾಂಕ ಮಿಂಚಿದ್ದಾರೆ. ಬಳಿಕ ಅಭ್ಯಾಸದ ಕಣದಲ್ಲೂ ಶ್ರೇಯಾಂಕ ಪಾಟೀಲ್ ಬೆವರಿಳಿಸಿದ್ದು, ನೆಟ್ಸ್​ನಲ್ಲಿ ಭರ್ಜರಿ ಬ್ಯಾಟಿಂಗ್​ ನಡೆಸಿದ್ದಾರೆ. ಸ್ವೀಪ್​, ರಿವರ್ಸ್​ ಸ್ವೀಪ್​ ಶಾಟ್​ಗಳನ್ನ ಬಾರಿಸಿ ಗಮನ ಸೆಳೆದಿದ್ದಾರೆ. 

ಇದನ್ನೂ ಓದಿ: ವಿಶ್ವಕಪ್​ನಿಂದ ಚಿನ್ನಸ್ವಾಮಿ ಸ್ಟೇಡಿಯಮ್ ಔಟ್.. ಪ್ರಾಕ್ಟೀಸ್ ಮ್ಯಾಚ್​ಗಳಾದ್ರೂ KSCAಗೆ ಸಿಗುತ್ತಾ..?

Shreyanka patil (1)

ಗೆಳತಿಯೊಂದಿಗೆ ದೇವರ ದರ್ಶನ ಪಡೆದ ಪೃಥ್ವಿ ಷಾ

ವಿಜಯ್​ ಹಜಾರೆ ಟೂರ್ನಿಯ ನಡುವೆ ಮಹಾರಾಷ್ಟ್ರ ತಂಡದ ಬ್ಯಾಟ್ಸ್​​ಮನ್ ಪೃಥ್ವಿ ಷಾ, ದೇವರ ದರ್ಶನ ಪಡೆದಿದ್ದಾರೆ. ರಾಜಸ್ಥಾನದ ಸಿಕರ್​ನಲ್ಲಿರೋ ಖಾಟು ಶ್ಯಾಮ್​​ ದೇವಸ್ಥಾನಕ್ಕೆ ಪೃಥ್ವಿ ಷಾ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಗೆಳತಿ ಆಕೃತಿ ಅಗರ್​ವಾಲ್ ಜೊತೆಗೆ ಪೃಥ್ವಿ ಷಾ ದೇವರ ಆಶೀರ್ವಾದ ಪಡೆದಿದ್ದಾರೆ. ಪೃಥ್ವಿ ಷಾಗೆ ದೇವಸ್ಥಾನದ ಆಡಳಿತ ಮಂಡಳಿ ದೇವರ ಫೋಟೋ ಉಡುಗೊರೆ ನೀಡಿ ಸತ್ಕರಿಸಿದೆ. 

ಇದನ್ನೂ ಓದಿ:ಗಿಲ್ಲಿಗೆ ಕಾವ್ಯಾಳ ಸ್ನೇಹ ಮುಳ್ಳಾಗ್ತಿದ್ಯಾ? ಅಶ್ವಿನಿಗೆ ಜನ ಲೈಕ್ ಮಾಡ್ತಿರೋದು ಯಾಕೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Shreyanka Patil Shubman Gill
Advertisment