RCB ಅಭಿಮಾನಿಗಳಿ​ಗೆ ಕೆಟ್ಟ ಸುದ್ದಿ.. ಓದಲೇಬೇಕಾದ ಸ್ಟೋರಿ..!

ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕೋಲ್ಡ್ ವಾರ್​ನಿಂದ ಐಪಿಎಲ್​​ ಬೆಂಗಳೂರಿನಿಂದ ಬೇರೆಡೆ ಸ್ಥಳಾಂತರ ಸಾಧ್ಯತೆ ಹೆಚ್ಚಿದೆ. ಹೊಸ ಹೋಂ ಗ್ರೌಂಡ್ ಹುಡುಕುತ್ತಿರುವ ಆರ್​ಸಿಬಿ, ಮಹಾರಾಷ್ಟ್ರದ ಪುಣೆ ಕ್ರಿಕೆಟ್ ಸಂಸ್ಥೆಯಲ್ಲಿ ಐಪಿಎಲ್ ಪಂದ್ಯಗಳನ್ನಾಡಲು ಆಸಕ್ತಿ ತೋರುತ್ತಿದೆ.

author-image
Ganesh Kerekuli
RCB fans
Advertisment

ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕೋಲ್ಡ್ ವಾರ್​ನಿಂದ ಐಪಿಎಲ್​​ ಬೆಂಗಳೂರಿನಿಂದ ಬೇರೆಡೆ ಸ್ಥಳಾಂತರ ಸಾಧ್ಯತೆ ಹೆಚ್ಚಿದೆ. ಹೊಸ ಹೋಂ ಗ್ರೌಂಡ್ ಹುಡುಕುತ್ತಿರುವ ಆರ್​ಸಿಬಿ, ಮಹಾರಾಷ್ಟ್ರದ ಪುಣೆ ಕ್ರಿಕೆಟ್ ಸಂಸ್ಥೆಯಲ್ಲಿ ಐಪಿಎಲ್ ಪಂದ್ಯಗಳನ್ನಾಡಲು ಆಸಕ್ತಿ ತೋರುತ್ತಿದೆ. ಒಂದು ವೇಳೆ ಪುಣೆ ಫೈನಲ್ ಆದ್ರೆ ಬೆಂಗಳೂರು ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ನಿರಾಸೆ ಆಗಲಿದೆ.

ಜೂನ್ 4, 2025.. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದರು ಮತ್ತು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ದುರ್ಘಟನೆಯ ಬಳಿಕ, ಐಕಾನಿಕ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ, ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯ ನಡೆದಿಲ್ಲ. ಇದೀಗ ಬೆಂಗಳೂರು, ಐಪಿಎಲ್ ಆತಿಥ್ಯವನ್ನೂ ಕಳೆದುಕೊಳ್ಳುವ ಭೀತಿಯಲ್ಲಿದೆ. ಹಾಗಾಗಿ ಆರ್​ಸಿಬಿ ಫ್ರಾಂಚೈಸಿ, ಹೊಸ ಹೋಂ ಗ್ರೌಂಡ್ ಹುಡುಕಾಟ ಶುರುಮಾಡಿದೆ.

ಆರ್​​ಸಿಬಿ ತಂಡಕ್ಕೆ ಪುಣೆ ಹೊಸ ಹೋಂ ಗ್ರೌಂಡ್..? 

ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿರೋ ಫಸ್ಟ್ ಚಾಯ್ಸ್​ ಗ್ರೌಂಡ್ ಅಂದ್ರೆ, ಅದು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ, ಪುಣೆ ಸ್ಟೇಡಿಯಮ್. ಪುಣೆಯಲ್ಲಿ ಆರ್​ಸಿಬಿ ಪಂದ್ಯಗಳನ್ನ ನಡೆಸಿದ್ರೆ, ತಂಡಕ್ಕೆ ದೊಡ್ಡ ಲಾಭವಾಗಲಿದೆ. ಯಾಕಂದ್ರೆ ಆರ್​ಸಿಬಿ ಪಂದ್ಯಗಳನ್ನ ನೋಡಲು ಸುತ್ತಮುತ್ತಲಿನ ರಾಜ್ಯಗಳ ಅಭಿಮಾನಿಗಳು, ಪುಣೆಗೆ ಆಗಮಿಸ್ತಾರೆ ಅನ್ನೋದು ಆರ್​ಸಿಬಿ ಫ್ರಾಂಚೈಸಿ ಮಾಲೀಕರ ಲೆಕ್ಕಾಚಾರ. ಜೊತೆಗೆ ಚಿನ್ನಸ್ವಾಮಿಗೆ ಹೋಲಿಸಿದ್ರೆ, ಪುಣೆ ಸ್ಟೇಡಿಯಮ್​ನಲ್ಲಿ ಇನ್ನೂ 11 ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿಗೆ ಪಂದ್ಯ ವೀಕ್ಷಣೆಗೆ ಅವಕಾಶ ಸಿಗಲಿದೆ. ಹಾಗಾಗಿ ಪುಣೆ ಬೆಸ್ಟ್ ಚಾಯ್ಸ್ ಅನ್ನೋದು, ಆರ್​ಸಿಬಿ ಮಾಲೀಕರ ಅಭಿಪ್ರಾಯ.

ಇದನ್ನೂ ಓದಿ:  ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಹಿನ್ನಲೆ: ಮುಸ್ತಾಫಿಜೂರ್ ರೆಹಮಾನ್‌ ಐಪಿಎಲ್‌ ನಿಂದ ಔಟ್‌!

RCB

ಮತ್ತೊಂದೆಡೆ ಆರ್​ಸಿಬಿ, ಪುಣೆ ಬಗ್ಗೆ ಆಸಕ್ತಿ ತೋರಿದ ಬೆನ್ನಲೆ, ರಾಜಸ್ಥಾನ್ ರಾಯಲ್ಸ್ ಸಹ ಪುಣೆಯಲ್ಲಿ ಪಂದ್ಯಗಳನ್ನ ಆಯೋಜಿಸುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ. ಈಗಾಗಲೇ ಆರ್​ಆರ್ ಫ್ರಾಂಚೈಸಿ ಮಾಲೀಕರು, ಮಹರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಪುಣೆಯಲ್ಲಿ ಪಂದ್ಯಗಳನ್ನ ಆಯೋಜಿಸುವ ಉತ್ಸಾಹ ತೋರಿದ್ದಾರೆ. ಆದ್ರೆ ಎಂಸಿಎ ಅಧಿಕಾರಿಗಳು, ಆರ್​ಸಿಬಿ ಅಥವಾ ಆರ್​ಆರ್​​​​ ಫ್ರಾಂಚೈಸಿಗಳಿಗೆ ಗ್ರೀನ್ ಸಿಗ್ನಲ್ ನೀಡಿಲ್ಲ.

ಆರ್​ಸಿಬಿ ಪ್ಲಾನ್ ಗೊತ್ತಿಲ್ಲ 

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ, ಎಂಸಿಎ ಅಧಿಕಾರಿಗಳ ಜೊತೆ ಎರಡು ತಿಂಗಳ ಹಿಂದೆಯೇ ಚರ್ಚೆ ನಡೆಸಿದೆ. ಆದ್ರೆ ಫೈನಲ್ ಡಿಸಿಷನ್ ಇನ್ನೂ ತಿಳಿಸಿಲ್ಲ. ಸದ್ಯ ಆರ್​ಸಿಬಿ ಫ್ರಾಂಚೈಸಿ ಮಾಲೀಕರು ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿರೋದ್ರಿಂದ, ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳಿಗೂ ಆರ್​ಸಿಬಿ ಪ್ಲಾನ್ ಏನು ಅಂತ ಗೊತ್ತಿಲ್ಲದೇ ಕನ್ಫ್ಯೂಸ್ ಆಗಿದ್ದಾರೆ.

ಇದನ್ನೂ ಓದಿ: ಶ್ರೇಯಸ್ ಅಯ್ಯರ್​ ಕರಿಯರ್​ನಲ್ಲಿ ‘ಇಂಜುರಿ ಆಟ’.. ಐದು ವರ್ಷ ಐದು ಪ್ರಮುಖ ಇಂಜುರಿ..!

RCB (1)

ಆರ್​ಸಿಬಿ ನಿರಾಸಕ್ತಿ ಯಾಕೆ..?

ಬೆಂಗಳೂರಿನಲ್ಲಿ ಆರ್​ಸಿಬಿ ತಂಡಕ್ಕೆ ಲಾಯಲ್ ಫ್ಯಾನ್ಸ್ ಇದ್ದಾರೆ. ಹಾಗಿದ್ರೂ ಆರ್​ಸಿಬಿಗೆ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಐಪಿಎಲ್​​​​ ಪಂದ್ಯಾವಳಿಗಳನ್ನ ಆಡಲು ನಿರಾಸಕ್ತಿ ತೋರುತ್ತಿದೆ. ಆರ್​ಸಿಬಿ ಫ್ರಾಂಚೈಸಿ ಮೇಲೆ ಕಾಲ್ತುಳಿದ ಪ್ರಕರಣದ ಗಂಭೀರ ಆರೋಪವಿದೆ. ಕಾಲ್ತುಳಿತಕ್ಕೆ ಆರ್​ಸಿಬಿ ಫ್ರಾಂಚೈಸಿಯೇ ನೇರ ಹೊಣೆ ಅಂತಾನೂ ವರದಿ ಬಂದಿದೆ. ಹೀಗಿರುವಾಗ ಆರ್​ಸಿಬಿ ಫ್ರಾಂಚೈಸಿ, ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳನ್ನ ಆಯೋಜಿಸೋದು ಹೇಗೆ ಅಂತ ದಾರಿ ಹುಡುಕುತ್ತಿದೆ.

RR​ಗೂ ಕ್ಲಾರಿಟಿ ಇಲ್ಲ 

ಕಳೆದ ಐಪಿಎಲ್ ಸೀಸನ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಜಸ್ಥಾನ್ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳ ನಡುವೆ ಜಟಾಪಟಿ ಉಂಟಾಯ್ತು. ಟಿಕೆಟ್ ವಿಚಾರದಲ್ಲಿ ಆರ್​ಆರ್​ ಮತ್ತು ಆರ್​ಸಿಎ ಅಧಿಕಾರಿಗಳು, ನೇರಾ ನೇರಾ ಕೆಸರೆರೆಚಾಟ ಎಲ್ಲಿರಿಗೂ ಗೊತ್ತಿದೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್​, ಜೈಪುರದಿಂದ ಹೊರ ನಡೆಯಲು ತೀರ್ಮಾನಿಸಿದೆ. ಸದ್ಯ ಪುಣೆ ಮೇಲೆ ಕಣ್ಣಿಟ್ಟಿರುವ ಆರ್​ಆರ್ ಸೂಕ್ತ ಕ್ಲಾರಿಟಿ ಇಲ್ಲದೇ ಸ್ಥಳ ಹುಡುಕುತ್ತಿದೆ. 

2022ರಲ್ಲಿ ಪುಣೆ ಐಪಿಎಲ್ ಪಂದ್ಯಗಳ ಆತಿಥ್ಯವಹಿಸಿಕೊಂಡಿತ್ತು. ಕಳೆದ ಮೂರು ವರ್ಷಗಳಲ್ಲಿ ಪುಣೆಯಲ್ಲಿ ಒಂದೇ ಒಂದು ಐಪಿಎಲ್ ಪಂದ್ಯ ನಡೆದಿಲ್ಲ. ಹೀಗಿರುವಾಗ ಪುಣೆ, ಐಪಿಎಲ್ ಆತಿಥ್ಯಕ್ಕಾಗಿ ಕಾದು ಕುಳಿತಿದೆ. ಮಿಲಿಯನ್ ಡಾಲರ್ ಟೂರ್ನಿಯ ಪಂದ್ಯಗಳನ್ನ ಆಯೋಜಿಸುವ ತವಕದಲ್ಲಿದೆ. ಐಪಿಎಲ್​ನ ಎರಡು ಹೈಪ್ರೊಫೈಲ್ ಫ್ರಾಂಚೈಸಿಗಳು, ಪುಣೆ ಆತಿಥ್ಯಕ್ಕೆ ಫೈಟ್ ಮಾಡುತ್ತಿದೆ. ಮುಂದೆ ಪುಣೆ, ಯಾವ ಫ್ರಾಂಚೈಸಿ ಪಾಲಾಗುತ್ತದೆ ಅನ್ನೋದು ನೋಡೋಣ.

ಇದನ್ನೂ ಓದಿ: ಗಿಲ್ಲಿ ಮೇಲೆ ವೀಕ್ಷಕರಿಗೆ ಈ ವಾರ ಬೇಸರ.. ಅಶ್ವಿನಿ ಪರ ಅನುಕಂಪದ ಅಲೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCB CARES IPL brand valuable IPL RCB retention IPL 2026 rcb team
Advertisment