/newsfirstlive-kannada/media/media_files/2025/10/26/shreyas_iyer_injury-2025-10-26-07-18-04.jpg)
ಟೀಮ್ ಇಂಡಿಯಾ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್​​​​​, ನ್ಯೂಜಿಲೆಂಡ್ ಏಕದಿನ ಸರಣಿ ಆಡೋದು ಡೌಟ್​ಫುಲ್. ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್​ನಲ್ಲಿ ಫಿಟ್ನೆಸ್ ಟೆಸ್ಟ್ ಫೇಲ್ ಆಗಿರುವ ಸರ್​ಪಂಚ್ ಶ್ರೇಯಸ್, ಇನ್ನು ಕೆಲ ದಿನಗಳ ಕಾಲ ರಿಹ್ಯಾಬ್​​​ಗೆ ಒಳಗಾಗಲಿದ್ದಾರೆ. ಪದೇ ಪದೇ ಇಂಜುರಿಗೆ ತುತ್ತಾಗ್ತಿರೋ ಶ್ರೇಯಸ್ ಆಟಕ್ಕಿಂತ NCAನಲ್ಲೇ ಹೆಚ್ಚು ಕಾಲ ಕಳೆದಿದ್ದಾರೆ.
/filters:format(webp)/newsfirstlive-kannada/media/media_files/2025/10/28/shreyas-iyer-2025-10-28-21-12-57.jpg)
5 ವರ್ಷ 5 ಪ್ರಮುಖ ಇಂಜುರಿ, ಶ್ರೇಯಸ್ ಅಯ್ಯರ್​​ ಕರಿಯರ್​ಗೆ ಕುತ್ತು. ಟೀಮ್ ಇಂಡಿಯಾ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್, ಆಟಕ್ಕಿಂತ ಹೆಚ್ಚು ಚಿಕಿತ್ಸೆ ಪಡೆಯೋದ್ರಲ್ಲೇ, ಕಾಲಕಳೆದಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಶ್ರೇಯಸ್, ಹಲವು ಬಾರಿ ಇಂಜುರಿಗೆ ಒಳಗಾಗಿದ್ದಾರೆ. ಟೀಮ್ ಇಂಡಿಯಾ ಕಮ್​ಬ್ಯಾಕ್​ಗೆ ಸಾಕಷ್ಟು ಪರದಾಡಿದ್ದಾರೆ.
ಮುಂಬೈಕರ್ ಶ್ರೇಯಸ್ ಅಯ್ಯರ್​ ಸಿಕ್ಕಾಪಟ್ಟೆ ಟ್ಯಾಲೆಂಟೆಡ್ ಕ್ರಿಕೆಟರ್. ಹಾಗೆ ನಾಯಕತ್ವದ ಗುಣಗಳನ್ನ ಹೊಂದಿರೋ ಶ್ರೇಷ್ಟ ಆಟಗಾರ. ಆದ್ರೆ ಪದೇ ಪದೇ ಇಂಜುರಿಗೆ ಒಳಗಾಗೋ ಶ್ರೇಯಸ್, ಸಾಕಷ್ಟು ಪಂದ್ಯಗಳನ್ನ ಮಿಸ್ ಮಾಡಿಕೊಂಡಿದ್ದಾರೆ. ಮೂರೂ ಫಾರ್ಮೆಟ್​ಗಳಲ್ಲಿ ಟೀಮ್ ಇಂಡಿಯಾ ನಾಯಕನಾಗುವ ಅವಕಾಶ, ಶ್ರೇಯಸ್​ಗಿತ್ತು. ಆದ್ರೆ ಇಂಜುರಿ ಶ್ರೇಯಸ್ ಕರಿಯರ್​ ಅನ್ನೇ ಹಾಳು ಮಾಡಿಬಿಡ್ತು.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಹಿನ್ನಲೆ: ಮುಸ್ತಾಫಿಜೂರ್ ರೆಹಮಾನ್ ಐಪಿಎಲ್ ನಿಂದ ಔಟ್!
/filters:format(webp)/newsfirstlive-kannada/media/media_files/2025/09/06/shreyas-iyer-captain-2025-09-06-19-56-29.jpg)
ಸಿಡ್ನಿ ಏಕದಿನ ಪಂದ್ಯ ವೇಳೆ ಕ್ಯಾಚ್ ಹಿಡಿಯಲು ಹೋದ ಶ್ರೇಯಸ್, ಗಂಭೀರ ಗಾಯಗೊಂಡಿದ್ರು. ಪಕ್ಕೆಲಬಿನ ಒಳಗೆ ರಕ್ತಸ್ರಾವ ಆಗ್ತಿದ್ದ ಕಾರಣ ಶ್ರೇಯಸ್ ಸಿಡ್ನಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ರು. ಐಸಿಯೂನಲ್ಲಿ ಚಿಕಿತ್ಸೆ ಪಡೆದ ಶ್ರೇಯಸ್, ನಂತರ ಡಿಸ್ಚಾರ್ಚ್ ಆದ್ರು. ಸದ್ಯ ಸಂಪೂರ್ಣ ಚೇತರಿಸಿಕೊಳ್ಳದ ಶ್ರೇಯಸ್, ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ.
ಫೆಬ್ರವರಿ 2024, ಇಂಗ್ಲೆಂಡ್ ವಿರುದ್ಧ ವಿಶಾಖಪಟ್ಟಣಂನಲ್ಲಿ ಶ್ರೇಯಸ್ ಅಯ್ಯರ್ ಆಡಿದ್ದ ಕೊನೆಯ ಟೆಸ್ಟ್ ಪಂದ್ಯ. ನಂತರ ಶ್ರೇಯಸ್ ಇಂಡಿಯಾ ಎ ತಂಡದ ನಾಯಕನಾಗಿ ಆಸಿಸ್​ ಎ ವಿರುದ್ಧ ಕಣಕ್ಕಿಳಿದಿದ್ರು. ಆದ್ರೆ ಇದಕ್ಕಿದಂತೆ ಬೆನ್ನು ನೋವಿನ ಸಮಸ್ಯೆ ಎದುರಿಸಿದ ಶ್ರೇಯಸ್, ಕ್ರಿಕೆಟ್​ನಿಂದ ಬ್ರೇಕ್ ಪಡೆಯಲು ನಿರ್ಧರಿಸಿದ್ರು. ​
2024, ಇಂಗ್ಲೆಂಡ್ ಪ್ರವಾಸದಲ್ಲಿ ಶ್ರೇಯಸ್ ಮೊದಲ ಟೆಸ್ಟ್ ಪಂದ್ಯ ಆಡಿದ್ರು. ಆದ್ರೆ ಎರಡನೇ ಟೆಸ್ಟ್ ಪಂದ್ಯದ ವೇಳೆ ಶ್ರೇಯಸ್​​​​​​​​ಗೆ ಬ್ಯಾಕ್ ಸ್ಪ್ಯಾಸಮ್ ಕಾಣಿಸಿಕೊಂಡಿತ್ತು. ಇದ್ರಿಂದ ಮುಂಬೈಕರ್ ಟೆಸ್ಟ್ ಸರಣಿಯಿಂದಲೇ ಹೊರಗುಳಿದಿದ್ರು. ನಂತರ ರಣಜಿ ಟೂರ್ನಿಯನ್ನೂ ಮಿಸ್ ಮಾಡಿಕೊಂಡಿದ್ದ ಶ್ರೇಯಸ್​​, ಬಿಸಿಸಿಐ ಕಾಂಟ್ರ್ಯಾಕ್ಟ್​ನಿಂದ ಕಿಕ್​ಔಟ್ ಆದ್ರು.
ಇದನ್ನೂ ಓದಿ: ನ್ಯೂಜಿಲೆಂಡ್ ಏಕದಿನ ಸರಣಿಗೆ ಇವತ್ತು ತಂಡ ಪ್ರಕಟ.. ಯಾರಿಗೆಲ್ಲ ಸ್ಥಾನ..?
/filters:format(webp)/newsfirstlive-kannada/media/media_files/2025/09/25/shreyas-iyer-4-2025-09-25-11-41-17.jpg)
ಶ್ರೇಯಸ್ ಅಯ್ಯರ್​ಗೆ ಬ್ಯಾಕ್ ಇಂಜುರಿ ಹೊಸತೇನಲ್ಲ. ಪದೇ ಪದೇ ಬೆನ್ನು ನೋವಿನ ಸಮಸ್ಯೆ ಎದುರಿಸೋ ಶ್ರೇಯಸ್, 2023 ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ವೇಳೆ ಮತ್ತೆ ಬ್ಯಾಕ್​ ಪೇಯಿನ್​ಗೆ ತುತ್ತಾದ್ರು. ನಂತರ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಶ್ರೇಯಸ್, ಐಪಿಎಲ್ ಮತ್ತು ವರ್ಲ್​ ಟೆಸ್ಟ್ ಚಾಂಪಿಯನ್​ಶಿಪ್ ಮಿಸ್ ಮಾಡಿಕೊಂಡ್ರು.
ಮಾರ್ಚ್​ 2021, ಇಂಗ್ಲೆಂಡ್ ವಿರುದ್ಧದ ಪುಣೆ ಏಕದಿನ ಪಂದ್ಯದ ವೇಳೆ ಶ್ರೇಯಸ್ ಶೋಲ್ಡರ್ ಇಂಜುರಿಗೆ ಗುರಿಯಾದ್ರು. ಭುಜನ ನೋವಿನಿಂದ ಶ್ರೇಯಸ್ ಏಕದಿನ ಸರಣಿ, ಐಪಿಎಲ್ 2021 ಮತ್ತು ಅದೇ ವರ್ಷ ನಡೆದ ಟಿ-ಟ್ವೆಂಟಿ ವಿಶ್ವಕಪ್​​​​​ ತಂಡದಿಂದಲೂ ದೂರ ಉಳಿದ್ರು. ಹಾಗೆ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಾಯಕತ್ವವನ್ನೂ ಕಳೆದುಕೊಂಡ್ರು. ​​​ಶ್ರೇಯಸ್ ಅಯ್ಯರ್ ಮತ್ತು ಇಂಜುರಿ ಜೊತೆ ಜೊತೆಲ್ಲೇ ಸಾಗುತ್ತಿದೆ. ಶ್ರೇಯಸ್ ಅಯ್ಯರ್ ಇಂಜುರಿ ಸಹವಾಸವೇ ಬೇಡ ಅಂದ್ರೂ, ಇಂಜುರಿ ಮಾತ್ರ ಮುಂಬೈಕರ್​​ರನ್ನ ಬಿಟ್ಟು ಬಿಡದೆ ಕಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us