/newsfirstlive-kannada/media/media_files/2025/12/04/team-india-8-2025-12-04-07-41-56.jpg)
ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಗೆ ಇವತ್ತು ಟೀಮ್ ಇಂಡಿಯಾ ಆಯ್ಕೆ ನಡೆಯಲಿದೆ. ಬರೋಡಾ, ರಾಜ್​ಕೋಟ್ ಮತ್ತು ಇಂದೋರ್​ನಲ್ಲಿ ನಡೆಯಲಿರುವ ಪಂದ್ಯಗಳಿಗೆ 15 ಆಟಗಾರರ ತಂಡ ಪ್ರಕಟವಾಗಲಿದೆ. ಏಕದಿನ ಸರಣಿ ತಂಡಕ್ಕೆ ಕೆಲ ಹಿರಿಯ ಆಟಗಾರರು ವಾಪಸಾಗಲಿದ್ರೆ, ಇನ್ನು, ಕೆಲವರಿಗೆ ಆಯ್ಕೆ ಸಮಿತಿ ವಿಶ್ರಾಂತಿ ನೀಡೋ ಸಾಧ್ಯತೆ ಹೆಚ್ಚಿದೆ.
ಓಪನರ್ಸ್​ ಯಾರು..?
ವಿಜಯ್ ಹಜಾರೆ ಟೂರ್ನಿಯಲ್ಲಿ ಶತಕ ಸಿಡಿಸಿ ಮಿಂಚಿದ್ದ ಹಿಟ್​ಮ್ಯಾನ್ ರೋಹಿತ್ ಶರ್ಮಾ, ತಂಡಕ್ಕೆ ಮರಳುತಿದ್ದಾರೆ. ಸೌತ್ ಆಫ್ರಿಕಾ ಏಕದಿನ ಸರಣಿಯಲ್ಲೂ ಮಿಂಚಿದ್ದ ರೋಹಿತ್, ತನ್ನ ಸ್ಥಾನವನ್ನ ಭದ್ರ ಮಾಡಿಕೊಂಡಿದ್ದಾರೆ. ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿರುವ ನಾಯಕ ಶುಭ್ಮನ್ ಗಿಲ್, ಕಮ್​ಬ್ಯಾಕ್ ಮಾಡಲಿದ್ದಾರೆ. ಆದ್ರೆ ಟೀಮ್ ಇಂಡಿಯಾ ಎಂಟ್ರಿಗೂ ಮುನ್ನ ಗಿಲ್, ವಿಜಯ್ ಹಜಾರೆಯಲ್ಲಿ 2 ಪಂದ್ಯಗಳನ್ನ ಆಡಲಿದ್ದಾರೆ.
ಬ್ಯಾಕ್​ಅಪ್ ಓಪನರ್ಸ್​ ಯಾರು..?
ಸೌತ್ ಆಫ್ರಿಕಾ ಏಕದಿನ ಸರಣಿಯಲ್ಲಿ ಶತಕ, ಸೈಯ್ಯದ್ ಮುಷ್ತಾಕ್ ಅಲಿ ಟಿ-20 ಸರಣಿಯಲ್ಲಿ ಶತಕ ಸಿಡಿಸಿ ಮಿಂಚಿರುವ ಯಶಸ್ವಿ ಜೈಸ್ವಾಲ್, ಕಿವೀಸ್ ಸರಣಿಗೆ ಆಯ್ಕೆಯಾಗೋ ನಿರೀಕ್ಷೆಯಲ್ಲಿದ್ದಾರೆ. ಜೈಸ್ವಾಲ್​ಗೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಸಿಗುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ 15 ಸದಸ್ಯರ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಋತುರಾಜ್ ಗಾಯಕ್ವಾಡ್ ​ಸಹ ಸೌತ್ ಆಫ್ರಿಕಾ ಏಕದಿನ ಸರಣಿಯಲ್ಲಿ ಶತಕ ಮತ್ತು ವಿಜಯ್ ಹಜಾರೆಯಲ್ಲಿ ಶತಕ ಸಿಡಿಸಿ ಫಾರ್ಮ್​​ನಲ್ಲಿದ್ದಾರೆ. ಋತುರಾಜ್, ಜೈಸ್ವಾಲ್ ಇಬ್ಬರೂ ಬ್ಯಾಕ್​ಅಪ್ ಓಪನರ್ಸ್​ ಸ್ಲಾಟ್​​ಗಾಗಿ ಫೈಟ್ ನಡೆಸಲಿದ್ದಾರೆ.
ಅದೃಷ್ಟದ ನಿರೀಕ್ಷೆಯಲ್ಲಿ ಕನ್ನಡಿಗ ಪಡಿಕ್ಕಲ್​ ..?
ಆಸಿಸ್ ಪ್ರವಾಸದಲ್ಲಿ ಗಾಯಗೊಂಡಿದ್ದ ಉಪನಾಯಕ ಶ್ರೇಯಸ್ ಅಯ್ಯರ್, ನ್ಯೂಜಿಲೆಂಡ್ ಸರಣಿಗೆ ಆಯ್ಕೆಯಾಗೋದು ಅನುಮಾನ. ಫಿಟ್ನೆಸ್​​​​ ಸಮಸ್ಯೆ ಎದುರಿಸುತ್ತಿರುವ ಅಯ್ಯರ್, IPL ವೇಳೆಗೆ ಫುಲ್ ಫಿಟ್ ಆಗಲಿದ್ದಾರೆ. ಕರ್ನಾಟಕ ಬ್ಯಾಟ್ಸ್​ಮನ್ ದೇವದತ್ ಪಡಿಕ್ಕಲ್, ಎಕ್ಸ್ಟ್ರಾರ್ಡಿನರಿ ಫಾರ್ಮ್​ನಲ್ಲಿದ್ದಾರೆ. ವಿಜಯ್ ಹಜಾರೆಯಲ್ಲಿ ಶತಕಗಳ ಮೇಲೆ ಶತಕಗಳನ್ನ ಸಿಡಿಸುತ್ತಿರುವ ಪಡಿಕ್ಕಲ್, ಅದೃಷ್ಟ ನಿರೀಕ್ಷೆಯಲ್ಲಿದ್ದಾರೆ. ಚೊಚ್ಚಲ ಏಕದಿನ ಸರಣಿಗೆ ಆಯ್ಕೆಯಾಗೋ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಪಂದ್ಯಾವಳಿ ನಿಲ್ಲಿಸೋದು ಪರಿಹಾರವಲ್ಲ -ಅನಿಲ್ ಕುಂಬ್ಳೆ ಬೇಸರ
ವಿಕೆಟ್ ಕೀಪರ್ಸ್ ಯಾಱರು..?
ಮಿಡಲ್ ಆರ್ಡರ್ ಬ್ಯಾಟ್ಸ್​​ಮನ್ ಕಮ್ ವಿಕೆಟ್ ಕೀಪರ್ ಕೆ.ಎಲ್.ರಾಹುಲ್, ತಂಡದ ಫಸ್ಟ್ ಚಾಯ್ಸ್​ ವಿಕೆಟ್ ಕೀಪರ್. ಕಳೆದೊಂದಿ ವರ್ಷದಿಂದ ರಾಹುಲ್, ವೈಟ್​ಬಾಲ್​​​​ ಫಾರ್ಮೆಟ್​ನಲ್ಲಿ ಪರ್ಮನೆಂಟ್ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಆದ್ರೆ ರಿಷಭ್ ಪಂತ್ ಎಂಟ್ರಿಯಿಂದ ರಾಹುಲ್ ರೋಲ್ ಏನು ಅನ್ನೋದು, ಕ್ಲಾರಿಟಿ ಇಲ್ಲ. ಪಂತ್ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ಪಡೆಯುತ್ತಾರಾ ಅನ್ನೋದೇ, ಸದ್ಯ ದೊಡ್ಡ ಪ್ರಶ್ನೆಯಾಗಿದೆ.
ಆಲ್​ರೌಂಡರ್ಸ್​ ಫೈಟ್..!
ಆಂಧ್ರ ಆಲ್​ರೌಂಡರ್ ನಿತೀಶ್ ಕುಮಾರ್ ರೆಡ್ಡಿ, ಏಕೈಕ ಫಾಸ್ಟ್ ಬೌಲಿಂಗ್ ಆಲ್​ರೌಂಡರ್ ಆಗಿ ಕಣಕ್ಕಿಳಿಯಲಿದ್ದಾರೆ. ಒಂದು ವೇಳೆ ಸೆಲೆಕ್ಟರ್ಸ್​ ಸ್ಪಿನ್​ಗೆ ಹೆಚ್ಚು ಒತ್ತು ನೀಡಿದ್ರೆ, ರೆಡ್ಡಿಯನ್ನ ಎಡಗೈ ಸ್ಪಿನ್ ಆಲ್​ರೌಂಡರ್ ಅಕ್ಷರ್ ಪಟೇಲ್ ಓವರ್​ಟೇಕ್ ಮಾಡಲಿದ್ದಾರೆ. ಅಕ್ಷರ್, ಟಾಪ್ ಆರ್ಡರ್​ನಲ್ಲೂ ಬ್ಯಾಟಿಂಗ್ ಮಾಡೋದ್ರಿಂದ, ರೆಡ್ಡಿಗಿಂತ ಅಕ್ಷರ್​​​ ಸೆಲೆಕ್ಟರ್ಸ್ ಫೇವರಿಟ್.​​
ಸ್ಪಿನ್ ಆಲ್​ರೌಂಡರ್ಸ್​​​​​​​ ಯಾರು..?
ಅನುಭವಿ ಸ್ಪಿನ್ ಆಲ್​ರೌಂಡರ್ ರವೀಂದ್ರ ಜಡೇಜಾ ಮತ್ತು ಬಲಗೈ ಆಫ್ ಸ್ಪಿನ್ನ್ ಆಲ್​ರೌಂಡರ್ ವಾಶಿಂಗ್ಟನ್ ಸುಂದರ್, ಇಬ್ಬರೂ 15 ಸದಸ್ಯರ ತಂಡದಲ್ಲಿ ಕಾಣಿಸಿಕೊಳ್ಳೋದು ಬಹುತೇಕ ಫಿಕ್ಸ್ ಆದ್ರೆ, ಹನ್ನೊಂದರಲ್ಲಿ ಆಡೋ ಸ್ಪಿನ್ನರ್ಸ್​​ ಬಗ್ಗೆ ಸ್ವಲ್ಪ ಕನ್ಫೂಷನ್ ಇದೆ.
ವೇಗಿಗಳಾಗಿ ಯಾರಿಗೆ ಸ್ಥಾನ..?
ವೇಗಿ ಜಸ್ಪ್ರೀತ್ ಬೂಮ್ರಾ ಕಿವೀಸ್ ಸರಣಿಗೆ ಡೌಟ್​ಫುಲ್. ಬೂಮ್ರಾ ಅಲಭ್ಯತೆಯಲ್ಲಿ ಆರ್ಷ್​​ದೀಪ್ ಸಿಂಗ್, ಹರ್ಷಿತ್ ರಾಣಾ ಮತ್ತು ಪ್ರಸಿದ್ಧ್ ಕೃಷ್ಣ, ಪೇಸ್ ಅಟ್ಯಾನಲ್ಲಿ ಸ್ಥಾನ ಪಡೆಯಲಿದ್ದಾರೆ. ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ, ಇಬ್ಬರ ಹೆಸರನ್ನೂ ಸೆಲೆಕ್ಟರ್ಸ್​ ಸಭೆಯಲ್ಲಿ ಚರ್ಚಿಸಲಿದ್ದಾರೆ. ಒಟ್ನಲ್ಲಿ..! ಹೊಸ ವರ್ಷದ ಆರಂಭದಲ್ಲಿ ಸೆಲೆಕ್ಟರ್ಸ್ ಯಾರಿಗೆ ಗುಡ್​ನ್ಯೂಸ್ ಕೊಡ್ತಾರೆ. ಯಾರಿಗೆ ಬ್ಯಾಡ್ ನ್ಯೂಸ್ ಕೊಡ್ತಾರೆ ಅನ್ನೋದನ್ನ ಕಾದುನೋಡೋಣ.
ಇದನ್ನೂ ಓದಿ:ನ್ಯೂಜಿಲೆಂಡ್ ವಿರುದ್ಧದ ಸರಣಿಗಾಗಿ ಐವರು ಸ್ಟಾರ್​ಗಳ ಮಧ್ಯೆ ಬಿಗ್ ಫೈಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us