ನ್ಯೂಜಿಲೆಂಡ್ ವಿರುದ್ಧದ ಸರಣಿಗಾಗಿ ಐವರು ಸ್ಟಾರ್​ಗಳ ಮಧ್ಯೆ ಬಿಗ್ ಫೈಟ್..!

ನ್ಯೂಜಿಲೆಂಡ್ ಏಕದಿನ ಸರಣಿಗೆ ಟೀಮ್ ಇಂಡಿಯಾ ರೆಡಿಯಾಗಿದೆ. ಒಂದೆರಡು ದಿನಗಳಲ್ಲಿ ಸೆಲೆಕ್ಟರ್ಸ್ 15 ಸದಸ್ಯರ ಬಲಿಷ್ಟ ತಂಡವನ್ನ ಪ್ರಕಟಿಸಲಿದ್ದಾರೆ. ಆದ್ರೆ ಅದಕ್ಕೂ ಮುನ್ನ ಯುವ ಆಟಗಾರರ ಮಧ್ಯ, ಸ್ಥಾನಕ್ಕಾಗಿ ಭಾರೀ ಫೈಟ್ ನಡೆಯುತ್ತಿದೆ. ಅವಕಾಶಕ್ಕಾಗಿ ಕಾಯುತ್ತಿರುವ 5 ಯಂಗ್​ಸ್ಟರ್ಸ್​ ವಿವರ ಇಲ್ಲಿದೆ.

author-image
Ganesh Kerekuli
devdutta padikkal
Advertisment

2027ರ ಏಕದಿನ ವಿಶ್ವಕಪ್​​​ಗೆ ನ್ಯೂಜಿಲೆಂಡ್​ ಏಕದಿನ ಸರಣಿಯಿಂದಲೇ, ಟೀಮ್ ಇಂಡಿಯಾ ತಯಾರಿ ಆರಂಭವಾಗಲಿದೆ. ಹೊಸ ವರ್ಷದಂದೇ ಕೋರ್ ಟೀಮ್ ರೆಡಿ ಮಾಡುತ್ತಿರುವ ಟೀಮ್ ಮ್ಯಾನೇಜ್ಮೆಂಟ್ ಮತ್ತು ಸೆಲೆಕ್ಟರ್ಸ್​, ಯುವ ಸೈನ್ಯವನ್ನ ಕಟ್ಟೋ  ಸಾಧ್ಯತೆ ಹೆಚ್ಚಿದೆ. ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾರಂತಹ ಹಿರಿಯ ಆಟಗಾರರೊಂದಿಗೆ ಯುವ ಶಕ್ತಿಯನ್ನ ಹೆಚ್ಚಿಸಲು, ಬಿಗ್​ಬಾಸ್​ಗಳು ಚಿಂತನೆ ನಡೆಸ್ತಿದ್ದಾರೆ. 

ನಂ.1: ದೇವದತ್ ಪಡಿಕ್ಕಲ್

ಕರ್ನಾಟಕ ತಂಡದ ಎಡಗೈ ಬ್ಯಾಟ್ಸ್​ಮನ್ ದೇವದತ್ ಪಡಿಕ್ಕಲ್, ವಿಜಯ್ ಹಜಾರೆಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಈಗಾಗಲೇ ಆಡಿರೋ ನಾಲ್ಕು ಪಂದ್ಯಗಳಲ್ಲಿ ಮೂರು ಭರ್ಜರಿ ಶತಕ ಸಿಡಿಸಿರುವ ಪಡಿಕ್ಕಲ್, ನ್ಯೂಜಿಲೆಂಡ್ ಏಕದಿನ ಸರಣಿಗೆ ಆಯ್ಕೆಯಾಗುವ ಸ್ಟ್ರಾಂಗ್ ಕಂಟೆಂಡರ್ ಆಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ:ರೋಹಿತ್​ -ಕೊಹ್ಲಿ ಕರಿಯನ್​ನ ಕಠಿಣ ವರ್ಷ.. ಏಳು, ಬೀಳಿನ ಮಧ್ಯೆ ಸಾಧಿಸಬೇಕಾಗಿದ್ದು ಏನೇನು?

6, 6, 6; ಕೊಹ್ಲಿ ಬೆನ್ನಲ್ಲೇ ಪಡಿಕ್ಕಲ್ ಹಾಫ್​ಸೆಂಚುರಿ​.. ಕನ್ನಡಿಗನ ಬ್ಯಾಟ್​ನಿಂದ ಸತತ 2ನೇ ಅರ್ಧಶತಕ

ನಂ.2: ಋತುರಾಜ್ ಗಾಯಕ್ವಾಡ್

ದಕ್ಷಿಣ ಆಫ್ರಿಕಾ ವಿರುದ್ಧ ರಾಯ್​ಪುರ್ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ಋತುರಾಜ್ ಗಾಯಕ್ವಾಡ್, ತಮ್ಮ ಅದ್ಭುತ ಫಾರ್ಮ್​​ ಅನ್ನ ವಿಜಯ್ ಹಜಾರೆಯಲ್ಲೂ ಮುಂದುವರೆಸಿದ್ದಾರೆ. ಉತ್ತರಾಖಂಡ್ ವಿರುದ್ಧ ಆಕರ್ಷಕ ಶತಕ ಸಿಡಿಸಿದ ಋತುರಾಜ್, ಕಿವೀಸ್ ಸರಣಿಗೆ ರೆಡಿಯಾಗಿದ್ದಾರೆ.

ನಂ.3: ಧೃವ್ ಜುರೆಲ್

ಉತ್ತರ ಪ್ರದೇಶದ ವಿಕೆಟ್ ಕೀಪರ್ ಬ್ಯಾಟರ್ ಧೃವ್ ಜುರೆಲ್, ಔಟ್​ಸ್ಟ್ಯಾಂಡಿಂಗ್ ಫಾರ್ಮ್​ನಲ್ಲಿದ್ದಾರೆ. ಹೈದ್ರಾಬಾದ್ ವಿರುದ್ಧ 80 ರನ್, ಚಂಡೀಗಢ್ ವಿರುದ್ಧ 67 ರನ್, ಬರೋಡಾ ವಿರುದ್ಧ ಅಜೇಯ 160 ರನ್​ಗಳಿಸಿರುವ ಜುರೆಲ್, ಬ್ಯಾಕ್​ಅಪ್ ವಿಕೆಟ್ ಕೀಪರ್​​ ಬ್ಯಾಟ್ಸ್​ಮನ್​​​ ಆಗೋಕೆ ತುದಿಗಾಲಲ್ಲಿ ನಿಂತಿದ್ದಾರೆ.

ಇದನ್ನೂ ಓದಿ: ಫಿಟ್ನೆಸ್​ ಟೆಸ್ಟ್​ನಲ್ಲಿ ಅಯ್ಯರ್ ಫೇಲ್.. ಕನ್ನಡಿಗನ ಮೇಲೆ ಕಣ್ಣಿಟ್ಟ ಅಗರ್ಕರ್​​..!

ನಂ.4: ಸರ್ಫರಾಜ್ ಖಾನ್

ಗೋವಾ ವಿರುದ್ಧದ ಪಂದ್ಯದಲ್ಲಿ ಮುಂಬೈನ ಸರ್ಫರಾಜ್ ಖಾನ್, ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ಕೇವಲ 75 ಎಸೆತಗಳಲ್ಲಿ 157 ರನ್​​ ಬಾರಿಸಿರುವ ಸರ್ಫರಾಜ್, 14 ಭರ್ಜರಿ ಸಿಕ್ಸರ್​, 9 ಬೌಂಡರಿಗಳನ್ನ ಸಿಡಿಸಿದ್ದಾರೆ. ಉತ್ತರಾಖಂಡ್ ವಿರುದ್ಧವೂ ಸರ್ಫರಾಜ್ 55 ರನ್​ ಕಲೆಹಾಕಿದ್ರು. 

ನಂ.5: ಕೃನಾಲ್ ಪಾಂಡ್ಯ

ಬರೋಡಾದ ಆಲ್​ರೌಂಡರ್ ಕೃನಾಲ್ ಪಾಂಡ್ಯ ಸಹ, ನ್ಯೂಜಿಲೆಂಡ್ ಏಕದಿನ ಸರಣಿಗೆ ಆಯ್ಕೆಯಾಗೋ ಸ್ಟ್ರಾಂಗ್ ಕಂಟೆಂಡರ್. ಹೈದ್ರಾಬಾದ್ ವಿರುದ್ಧ ಶತಕ, ಬೆಂಗಾಲ್ ಮತ್ತು ಉತ್ತರ ಪ್ರದೇಶ ತಂಡಗಳ ವಿರುದ್ಧ ತಲಾ ಅರ್ಧಶತಕಗಳನ್ನ ಕೃನಾಲ್ ಸಿಡಿಸಿದ್ದಾರೆ. ಅಷ್ಟೇ ಅಲ್ಲ. ಬೌಲಿಂಗ್​ನಲ್ಲೂ ಕೃನಾಲ್ ಮಿಂಚಿದ್ದಾರೆ.

ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ, ಒಂದೆರಡು ಸ್ಥಾನಗಳು ಮಾತ್ರ ಖಾಲಿ ಇದೆ. ಆದ್ರೆ ಯುವ ಕ್ರಿಕೆಟಿಗರು ವಿಜಯ್ ಹಜಾರೆ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ನೀಡುವ ಮೂಲಕ, ಸೆಲೆಕ್ಟರ್ಸ್​​ಗೆ ತಲೆಬಿಸಿ ಹೆಚ್ಚಿಸಿದ್ದಾರೆ. ಯಾರು ಲಕ್ಕಿ, ಯಾರು ಅನ್​ಲಕ್ಕಿ ಆಗ್ತಾರೆ ಅನ್ನೋದನ್ನ ಕಾದುನೋಡೋಣ.

ಇದನ್ನೂ ಓದಿ:2026ರ ಏಪ್ರಿಲ್ 23, 24 ರಂದು ಸಿಇಟಿ ಪರೀಕ್ಷೆ : ಸಿಇಟಿ ಪರೀಕ್ಷಾ ದಿನಾಂಕ ಘೋಷಣೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Hardik Pandya, Krunal Pandya devdutt padikkal Dhruv Jurel Sarfaraz Khan Ruturaj Gaikwad
Advertisment