/newsfirstlive-kannada/media/post_attachments/wp-content/uploads/2024/02/Shami_Indian-Cricketer.jpg)
2026.. ಹೊಸ ವರ್ಷದ ಆರಂಭದಲ್ಲೇ ಟೀಮ್​ ಇಂಡಿಯಾ ವೇಗಿ ಮೊಹಮ್ಮದ್​ ಶಮಿಗೆ ಅದೃಷ್ಟ ಖುಲಾಯಿಸಿದೆ. ಚಾಂಪಿಯನ್ಸ್​ ಟ್ರೋಫಿ ಬಳಿಕ ಟೀಮ್​ ಇಂಡಿಯಾದಿಂದ ಹೊರ ಬಿದ್ದಿರೋ ವೇಗಿ ಶಮಿಗೆ ಮತ್ತೆ ಡೋರ್​ ಓಪನ್​ ಆಗೋ ಸಾಧ್ಯತೆ ದಟ್ಟವಾಗಿದೆ. ನ್ಯೂಜಿಲೆಂಡ್​ ಸರಣಿಯಲ್ಲಿ ಶಮಿ ಕಮ್​ಬ್ಯಾಕ್ ಮಾಡೋ ಸಾಧ್ಯತೆಯಿದೆ. ಇದು ಕಮ್​ಬ್ಯಾಕಾ.? ಕೊನೆಯ ಚಾನ್ಸಾ? ಎಂಬ ಪ್ರಶ್ನೆ ಹುಟ್ಟಿದೆ.
ಹೊಸ ವರ್ಷದ ಮೊದಲ ಚಾಲೆಂಜ್​​ಗೆ ವೇದಿಕೆ ಸಜ್ಜಾಗಿದೆ. ಜನವರಿ 11 ರಿಂದ ಆರಂಭವಾಗೋ ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಗೆ ಟೀಮ್​ ಇಂಡಿಯಾ ಆಯ್ಕೆ ಕಸರತ್ತು ಜೋರಾಗಿ ನಡೀತಿದೆ. ಈ ಬಾರಿ ಹಲವು ಆಟಗಾರರು ಗುಡ್​ನ್ಯೂಸ್​ನ​ ನಿರೀಕ್ಷೆಯಲ್ಲಿ ಕಾದುಕುಳಿತಿದ್ದಾರೆ. ಯಂಗ್​ಸ್ಟರ್​ಗಳ ಜೊತೆ ಜೊತೆಗೆ ಸ್ಪೀಡ್​ ಸ್ಟರ್​, ಅನುಭವಿ ವೇಗಿ ಮೊಹಮ್ಮದ್​ ಶಮಿ ಕೂಡ ಹೊಸ ವರ್ಷದಲ್ಲಿ ಗುಡ್​ನ್ಯೂಸ್​ ಸಿಗುತ್ತೆ ಅನ್ನೋ ಅಪಾರ ನಿರೀಕ್ಷೆಯಲ್ಲಿದ್ದಾರೆ.
/filters:format(webp)/newsfirstlive-kannada/media/post_attachments/wp-content/uploads/2025/03/Rohit-sharma-Shami.jpg)
ಶಮಿ ಕಮ್​ಬ್ಯಾಕ್​..?
ಮೊಹಮ್ಮದ್​ ಶಮಿ ಟೀಮ್​ ಇಂಡಿಯಾ ಪರ ಕೊನೆಯದಾಗಿ ಆಡಿದ್ದು ಮಾರ್ಚ್​ 2025ರಲ್ಲಿ. ಆ ಬಳಿಕ ಸ್ಥಾನ ಗಿಟ್ಟಿಸಿಕೊಳ್ಳೋಕೆ ಶಮಿ, ಶತಪ್ರಯತ್ನ ನಡೆಸ್ತಾ ಇದ್ರೂ ಕೂಡ ಸೆಲೆಕ್ಟರ್ಸ್​ ಶಮಿಯನ್ನ ಕಡೆಗಣನೆ ಮಾಡ್ತಾನೆ ಬಂದಿದ್ದಾರೆ. ಹೊಸ ವರ್ಷದಲ್ಲಿ ಅವಕಾಶ ಶಮಿಯನ್ನ ಹುಡುಕಿಕೊಂಡು ಬಂದಂತಿದೆ. ನ್ಯೂಜಿಲೆಂಡ್​ ಸರಣಿಯಿಂದ ವೇಗಿ ಜಸ್​ಪ್ರಿತ್​ ಬೂಮ್ರಾ ವಿಶ್ರಾಂತಿ ನೀಡಲು ಸೆಲೆಕ್ಟರ್ಸ್​ ಮುಂದಾಗಿದ್ದಾರೆ. ಬೂಮ್ರಾಗೆ ರೆಸ್ಟ್​ಗೆ ನೀಡಿ ಮೊಹಮ್ಮದ್​ ಶಮಿಗೆ ಚಾನ್ಸ್​ ನೀಡಲು ಮಹತ್ವದ ಚರ್ಚೆ ನಡೆದಿದೆ.
ಅಸಲಿಗೆ ಮೊಹಮ್ಮದ್​ ಶಮಿ ಟೀಮ್​ ಇಂಡಿಯಾದಿಂದ ಹೊರಬಿದ್ದಿದ್ಯಾಕೆ ಅನ್ನೋದೆ ಉತ್ತರವಿಲ್ಲದ ಪ್ರಶ್ನೆ. ಶಮಿ ಕೊನೆಯದಾಗಿ ಭಾರತ ತಂಡದ ಪರ ಆಡಿದ್ದು, ಚಾಂಪಿಯನ್ಸ್​ ಟ್ರೋಫಿಯಲ್ಲಿ. ಈ ಟೂರ್ನಿಯಲ್ಲಿ ಶಮಿ, ಭರ್ಜರಿ ಬೌಲಿಂಗ್​ ಪ್ರದರ್ಶನವನ್ನೇ ನೀಡಿದ್ರು. 5 ಪಂದ್ಯಗಳಲ್ಲಿ 9 ವಿಕೆಟ್​ ಕಬಳಿಸಿ ಭಾರತದ ಪರ ಸೆಕೆಂಡ್​ ಹೈಯೆಸ್ಟ್​ ವಿಕೆಟ್​ ಅನಿಸಿದ್ರು. ಆದ್ರೆ, ಟೂರ್ನಿ ಅಂತ್ಯವಾದ ಬಳಿಕ ಇದಕ್ಕಿದ್ದಂತೆ ಶಮಿ ಮರೆಯಾದ್ರು.
ಚಾಂಪಿಯನ್ಸ್​ ಟ್ರೋಫಿ ಬಳಿಕ ಇದಕ್ಕಿದ್ದಂತೆ ಶಮಿಯನ್ನ ಸೈಡ್​ಲೈನ್​ ಮಾಡಿದ ಸೆಲೆಕ್ಟರ್ಸ್​, ಯುವ ವೇಗಿಗಳತ್ತ ಮುಖ ಮಾಡಿದ್ದಾರೆ. ಆದ್ರೆ, ಶಮಿ ಮಾತ್ರ ಕಮ್​ಬ್ಯಾಕ್​ಗೆ ಶತ ಪ್ರಯತ್ನ ಮುಂದುವರೆಸಿದ್ದಾರೆ. ಬೆಂಗಾಲ್​ ಪರ ಡೊಮೆಸ್ಟಿಕ್​ ಅಖಾಡಕ್ಕಿಳಿದಿರೋ ಶಮಿ ಕನ್ಸಿಸ್ಟೆಂಟ್​ ಸ್ಟೆಂಟ್​ ಪರ್ಫಾಮೆನ್ಸ್​ ಮೂಲಕ ಗಮನ ಸೆಳೆದಿದ್ದಾರೆ. ಸದ್ಯ ನಡೀತಿರೋ ವಿಜಯ್​ ಹಜಾರೆ ಟೂರ್ನಿಯಲ್ಲಿ, 4 ಪಂದ್ಯಗಳಲ್ಲೇ 8 ವಿಕೆಟ್​ ಬೇಟೆಯಾಡಿರೋ ಶಮಿ, 5.53ರ ಎಕಾನಮಿ ಹೊಂದಿದ್ದಾರೆ.
ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧದ ಸರಣಿಗಾಗಿ ಐವರು ಸ್ಟಾರ್​ಗಳ ಮಧ್ಯೆ ಬಿಗ್ ಫೈಟ್..!
/filters:format(webp)/newsfirstlive-kannada/media/post_attachments/wp-content/uploads/2024/10/SHAMI-1.jpg)
ಇದಕ್ಕೂ ಹಿಂದೆ ನಡೆದ ಮುಷ್ತಾಕ್​ ಅಲಿ ಟೂರ್ನಿಯಲ್ಲೂ ಮೊಹಮ್ಮದ್​ ಶಮಿ ಶೈನ್​ ಆಗಿದ್ರು. ಬ್ಯಾಟರ್ಸ್​ಗೆ ಸಖತ್​ ಕಾಟ ಕೊಟ್ಟಿದ್ದ ಶಮಿ, ಆಡಿದ 7 ಪಂದ್ಯಗಳಲ್ಲೇ 16 ವಿಕೆಟ್​ ಕಬಳಿಸಿದ್ರು. 8.90ರ ಎಕಾನಮಿ ಹೊಂದಿದ್ದ ಶಮಿ, 14.93ರ ಸರಾಸರಿಯಲ್ಲಿ ಬೌಲಿಂಗ್​ ಮಾಡಿದ್ರು. ಇನ್ನು, ರಣಜಿ ಟ್ರೋಫಿ ಟೂರ್ನಿಯಲ್ಲೂ 7 ಇನ್ನಿಂಗ್ಸ್​ಗಳಲ್ಲೇ 20 ವಿಕೆಟ್​ ಬೇಟೆಯಾಡಿದ್ರು. ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​ ಮಾಡೋ ಗುರಿಯನ್ನ ಬೆನ್ನತ್ತಿರೋ ಮೊಹಮ್ಮದ್​ ಶಮಿ, ಡೊಮೆಸ್ಟಿಕ್​ ಕಣದಲ್ಲಿ ಧೂಳೆಬ್ಬಿಸಿ ಸೆಲೆಕ್ಟರ್ಸ್​ ತನ್ನತ್ತ ತಿರುಗುವಂತೆ ಮಾಡಿದ್ದಾರೆ. ನೀಡಿರೋ ಅದ್ಭುತ ಪರ್ಫಾಮೆನ್ಸ್​ ಆಧಾರದಲ್ಲಿ ಶಮಿ ಅವಕಾಶಕ್ಕೆ ನಿಜಕ್ಕೂ ಅರ್ಹರು.
ಇದು ಕಮ್​ಬ್ಯಾಕಾ? ಕೊನೆಯ ಚಾನ್ಸಾ?
ಮೊಹಮ್ಮದ್​​ ಶಮಿಯ ವಯಸ್ಸು ಈಗ 35 ವರ್ಷಗಳ ಗಡಿ ದಾಟಿದೆ. ಫಾರ್ಮ್​ ಅದ್ಭುತವಾಗಿದ್ರೂ ಫಿಟ್​ನೆಸ್​ ಸಮಸ್ಯೆ ಆಗಾಗ ಶಮಿಯನ್ನ ಕಾಡಿದೆ. 2027ರಲ್ಲಿ ಏಕದಿನ ವಿಶ್ವಕಪ್​ ಇರೋದ್ರಿಂದ, ಶಮಿಯನ್ನ ಬಿಟ್ಟು, ಯಂಗ್​​ಸ್ಟರ್ಸ್​​ನ ಗ್ರೂಮ್​ ಮಾಡೋ ಕೆಲಸವನ್ನ ಬಿಸಿಸಿಐ ಆರಂಭಿಸಿದೆ. ಇದೀಗ ಬೂಮ್ರಾ ಅಲಭ್ಯತೆಯ ಕಾರಣಕ್ಕೆ ಶಮಿಗೆ ಅವಕಾಶ ನೀಡ್ತಿರೋದ್ರ ಹಿಂದೆಯೋ ಒಂದು ಕಾರಣವಿದ್ದಂತಿದೆ. ಕಳೆದ ಕೆಲ ಸರಣಿಗಳಿಂದ ಶಮಿಯನ್ನ ಡ್ರಾಪ್​ ಮಾಡಿದಾಗ ವಿದಾಯ ಹೇಳೋದಕ್ಕಾದ್ರೂ ಒಂದು ಅವಕಾಶ ನೀಡಬೇಕು ಎಂಬ ಮಾತುಗಳು ಕೇಳಿ ಬಂದಿದ್ವು. ಹೀಗಾಗಿ ಕಿವೀಸ್​ ವಿರುದ್ಧ ಚಾನ್ಸ್​ ನೀಡ್ತಿರೋದು ಗುಡ್​ ಬೈ ಹೇಳೋದಕ್ಕಾ ಎಂಬ ಚರ್ಚೆಯೂ ಸದ್ಯ ಆರಂಭವಾಗಿದೆ.
ಅದೇನೆ ಇರಲಿ.. ಸದ್ಯಕ್ಕಂತೂ ಕಿವೀಸ್​ ಎದುರಿನ ಸರಣಿಯೊಂದಿಗೆ ಶಮಿ ಕಮ್​ಬ್ಯಾಕ್​ ಮಾಡೋದು ಬಹುತೇಕ ಪಕ್ಕಾ ಆಗಿದೆ. ಆದ್ರೆ ಇದು ಕಮ್​ಬ್ಯಾಕಾ? ಅಥವಾ ಕೊನೆಯ ಚಾನ್ಸಾ? ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ.
ಇದನ್ನೂ ಓದಿ: ಪ್ರಾಜೆಕ್ಟ್ ಚೀತಾಗೆ ಭಾರತದಲ್ಲಿ ಯಶಸ್ಸು! ಭಾರತದಲ್ಲಿ ಹುಟ್ಟಿದ್ದ 19 ಚೀತಾಗಳು, ಒಟ್ಟಾರೆ 30 ಚೀತಾಗಳ ಆವಾಸಸ್ಥಾನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us