/newsfirstlive-kannada/media/media_files/2025/12/12/chinnaswamy-2025-12-12-08-19-59.jpg)
ಮುಖ್ಯಮಂತ್ರಿಗಳ ಜೊತೆ ಸಭೆ, ಉಪ ಮುಖ್ಯಮಂತ್ರಿಗಳ ಜೊತೆ ಸುದೀರ್ಘ ಮಾತುಕತೆ, ಗೃಹಸಚಿವರಿಗೆ ಸಹಾಯಕ್ಕಾಗಿ ಬೇಡಿಕೆ, ನಗರಾಭಿವೃದ್ದಿ ಸಚಿವರ ಜೊತೆ ಚರ್ಚೆ, ಪೊಲೀಸ್ ಕಮಿನರ್​​ಗೆ ಕಳಕಳಿ ಮನವಿ, ಹೀಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳು, ಘಟಾನುಘಟಿಗಳನ್ನ ಬೇಟಿಯಾದ್ರು, ಪ್ರಯೋಜನವಾಗ್ಲಿಲ್ಲ. ಅಧಿಕಾರದ ಚುಕ್ಕಾಣಿ ಹಿಡಿದ ಕೆಲವೇ ಕೆಲವು ದಿನಗಳಲ್ಲಿ ವೆಂಕಟೇಶ್ ಪ್ರಸಾದ್ ಌಂಡ್ ಟೀಮ್ ರಾತ್ರಿ ಹಗಲು ಕೆಲಸ ಮಾಡಿತ್ತು. ಆದ್ರೆ ಚಿನ್ನಸ್ವಾಮಿ ಹಣೆಬರಹ ಬದಲಾಹಿಸೋಕೆ ಆಗ್ಲಿಲ್ಲ.
ಚಿನ್ನಸ್ವಾಮಿ ಸ್ಟೇಡಿಯಂ​ನಿಂದ ವಿಶ್ವಕಪ್​ ಔಟ್
ಮುಂದಿನ ತಿಂಗಳು ಫೆಬ್ರವರಿ 7ರಿಂದ ಆರಂಭವಾಗಲಿರುವ ಟಿ-20 ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನ 7 ಸ್ಥಳಗಳಲ್ಲಿ ನಡೆಸಲು ಐಸಿಸಿ ತೀರ್ಮಾನಿಸಿದೆ. ಭಾರತದ 5 ವೆನ್ಯೂಸ್ ಮತ್ತು ಶ್ರೀಲಂಕಾದ 2 ವೆನ್ಯೂಗಳನ್ನ ಫಿಕ್ಸ್ ಮಾಡಲಾಗಿದೆ. ಆದ್ರೆ ಒಂದೇ ಒಂದು ಪಂದ್ಯದ ಆತಿಥ್ಯ ಚಿನ್ನಸ್ವಾಮಿಗೆ ನೀಡಲಿಲ್ಲ. ಇದು ಹೆಚ್ಚು ಕ್ರಿಕೆಟ್​ ಅಭಿಮಾನಿಗಳನ್ನ ಹೊಂದಿರೋ ರಾಜ್ಯಕ್ಕೆ, ಭಾರೀ ಹಿನ್ನಡೆಯನ್ನ ಉಂಟು ಮಾಡಿದೆ.
ಇದನ್ನೂ ಓದಿ: ಬರೀ ಜಗಳ ಒಂದೇ ಅಲ್ಲ.. ಗಿಲ್ಲಿ, ಅಶ್ವಿನಿ ಜೋಡಿ ವೀಕ್ಷಕರ ಹೃದಯ ಗೆದ್ದಿದ್ದು ಹೇಗೆ..?ʼ
/filters:format(webp)/newsfirstlive-kannada/media/media_files/2025/08/22/chinnaswami_studium-2025-08-22-10-31-30.jpg)
ವಿಶ್ವಕಪ್ ಪ್ರಾಕ್ಟೀಸ್ ಮ್ಯಾಚ್​ಗಳಾದ್ರೂ KSCAಗೆ ಸಿಗುತ್ತಾ..?
ಟಿ-20 ವಿಶ್ವಕಪ್ ಪಂದ್ಯಗಳು, ಚಿನ್ನಸ್ವಾಮಿಯಿಂದ ಹೊರ ಹೋಗಿದೆ. ಆದ್ರೆ ವಿಶ್ವಕಪ್​ಗೂ ಮುನ್ನ ನಡೆಯೋ ಅಭ್ಯಾಸ ಪಂದ್ಯಗಳಾದ್ರೂ, ಕೆಎಸ್​​ಸಿಎ ಆತಿಥ್ಯಕ್ಕೆ ಸಿಗುತ್ತಾ? ಸದ್ಯದ ಮಾಹಿತಿ ಪ್ರಕಾರ, ಕೆಎಸ್​ಸಿಎ ಪದಾಧಿಕಾರಿಗಳು, ಪ್ರಾಕ್ಟೀಸ್ ವಿಶ್ವಕಪ್ ಪ್ರಾಕ್ಟೀಸ್ ಮ್ಯಾಚ್​ಗಳನ್ನ ರಾಜ್ಯ ಕ್ರಿಕೆಟ್ ಸಂಸ್ಥೆಗೆ ತರಬೇಕು ಅಂತ ಪಣತೊಟ್ಟಿದ್ದಾರೆ. ವೆಂಕಿ ಌಂಡ್ ಟೀಮ್ ಪ್ರಯತ್ನ ಸಫಲವಾಗುತ್ತಾ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ.​
ಡೆಲ್ಲಿ ವರ್ಸಸ್ ಆಂಧ್ರ ಮತ್ತು ಡೆಲ್ಲಿ ವರ್ಸಸ್ ಗುಜರಾತ್​..! ವಿಜಯ್ ಹಜಾರೆ ಟೂರ್ನಿಯ ಈ ಎರಡು ಪಂದ್ಯಗಳು, ಚಿನ್ನಸ್ವಾಮಿಯಲ್ಲೇ ನಡೆಯಬೇಕಿತ್ತು. ಆದ್ರೆ ಇದಕ್ಕಿದಂತೆ ಈ ಎರಡೂ ಪಂದ್ಯಗಳು ಬೆಂಗಳೂರಿನಿಂದ ಬೇರೆಡೆ ಶಿಫ್ಟ್ ಮಾಡಲಾಯ್ತು. ದೇವನಹಳ್ಳಿ ಬಳಿ ಇರೋ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್​ನಲ್ಲಿ ಆಯೋಜಿಸಲಾಯ್ತು. ಜನವರಿ 6ರಂದು ನಡೆಯಲಿರುವ ಡೆಲ್ಲಿ ಪಂದ್ಯ ಸಹ, ಸಿಓಇನಲ್ಲೇ ಫಿಕ್ಸ್ ಆಗಿದೆ.
ಐಪಿಎಲ್ ಚಿನ್ನಸ್ವಾಮಿಯಿಂದ ಹೊರಹೋಗೋ ಸಾಧ್ಯತೆ ಹೆಚ್ಚು
ಮೂಲಕಗಳ ಪ್ರಕಾರ ಐಪಿಎಲ್ ಸೀಸನ್-19 ವೇಳಾಪಟ್ಟಿ, ಒಂದೆರಡು ವಾರಗಳಲ್ಲಿ ಹೊರಬೀಳಲಿದೆ. ಆದ್ರೆ ಚಿನ್ನಸ್ವಾಮಿಗೆ ಐಪಿಎಲ್ ಪಂದ್ಯಗಳ ಆತಿಥ್ಯ ನೀಡೋದು ಡೌಟ್ ಎನ್ನಲಾಗ್ತಿದೆ. ವಿಜಯ್ ಹಜಾರೆ ಟೂರ್ನಿಗೆ ಪರ್ಮಿಷನ್ ನೀಡಿದ ರಾಜ್ಯ ಸರ್ಕಾರ, ಐಪಿಎಲ್​​ಗೆ ನೀಡುತ್ತಾ ಅನ್ನೋದು, ಕ್ರಿಕೆಟ್ ವಲಯದಲ್ಲಿ ಚರ್ಚೆ ಆಗ್ತಿದೆ. ಇದೆಲ್ಲದರ ಜೊತೆಗೆ ಕೆಎಸ್​​ಸಿಎ ಕ್ರಿಕೆಟ್​​ ಪಂದ್ಯಗಳ ಆತಿಥ್ಯಕ್ಕೆ ಅನ್​ಫಿಟ್​ ಅಂತ ನ್ಯಾಮೂರ್ತಿ ಮೈಕಲ್ ಡಿ' ಕುನ್ಹಾ ನೀಡಿರುವ ವರದಿ ಬೆನ್ನಲೆ, ಐಪಿಎಲ್​​ ಬೆಂಗಳೂರಿನಲ್ಲಿ ನಡೆಯೋದು ಡೌಟ್​ಫುಲ್.
/filters:format(webp)/newsfirstlive-kannada/media/media_files/2025/11/18/venkatesh-prasad-1-2025-11-18-07-53-47.jpg)
ಆರ್​ಸಿಬಿ ಮಾಲೀಕರಿಗೆ KSCAನಲ್ಲಿ ಆಡೋದು ಇಷ್ಟವಿಲ್ಲ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಮೂಲಗಳ ಪ್ರಕಾರ, ಆರ್​ಸಿಬಿ ಮಾಲೀಕರಿಗೆ ಚಿನ್ನಸ್ವಾಮಿಯಲ್ಲಿ ಪಂದ್ಯಗಳನ್ನ ಆಯೋಜಿಸೋದು ಇಷ್ಟವಿಲ್ಲವಂತೆ. ಕಾಲ್ತುಳಿತದ ಪ್ರಕರಣದಲ್ಲಿ ಆರ್​ಸಿಬಿ ಮೇಲೆ ಕೇಸ್ ದಾಖಲಾದ ಕಾರಣ, ಮಾಲೀಕರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಆರ್​ಸಿಬಿಯನ್ನ ಆರೋಪಿಯನ್ನಾಗಿಸಿರುವ ಬೆನ್ನಲೆ, ಚಿನ್ನಸ್ವಾಮಿ ಸಹವಾಹಸವೇ ಬೇಡ ಅಂತಿದ್ದಾರೆ ಎನ್ನಲಾಗ್ತಿದೆ. ಒಂದು ವೇಳೆ ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಗಳು ನಡೆದಿದ್ದೇ ಆದ್ರೆ, ಅದು ಸ್ಮೂತ್ ಆಗಿ ನಡೆಯಲು ಸಾಧ್ಯವಿಲ್ಲ. ಮೊದಲಿಗೆ ಐಪಿಎಲ್ ನಿಗಧಿ ವೇಳೆಗೆ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಶಿಫಾರಸ್ಸು ಮಾಡಿರುವ 17 ಅಂಶಗಳನ್ನ ಜಾರಿಗೆ ತರೋದು ಬಹುತೇಕ ಕಷ್ಟ. ಅಲ್ಲದೇ, ಐಪಿಎಲ್ ಟೂರ್ನಿಯಲ್ಲಿ ಆರ್​ಸಿಬಿ ಫ್ರಾಂಚೈಸಿ ಮತ್ತು ಕೆಎಸ್​​ಸಿಎ ನಡುವೆ ಒಂದಲ್ಲ ಒಂದು ವಿಚಾರಗಳಲ್ಲಿ ಗೊಂದಲಗಳು ಉಂಟಾಗೋದು ಬಹುತೇಕ ಖಚಿತ ಎನ್ನಲಾಗ್ತಿದೆ.
ಕೆಎಸ್​ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಉಪಾಧ್ಯಕ್ಷ ಸುಜಿತ್ ಸೋಮ್​ಸುಂದರ್, ಕಾರ್ಯದರ್ಶಿ ಸಂತೋಷ್ ಮೆನನ್ ಮತ್ತು ವಕ್ತಾರ ವಿನಯ್ ಮೃತ್ಯುಂಜಯ, ಕಳೆದ ಕೆಲ ದಿನಗಳಿಂದ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಆದ್ರೆ ಐಪಿಎಲ್​​ಗೂ ಮುನ್ನ ಎದುರಾಗಿರೋ ಎಲ್ಲಾ ಸಮಸ್ಯೆಗಳನ್ನ ಬಗೆಹರಿಸಿದ್ರೆ, ರಾಜ್ಯ ಕ್ರಿಕೆಟ್ ಅಭಿಮಾನಿಗಳಿಗೆ ಒಳ್ಳೆ ಸುದ್ದಿ ಸಿಗೋ ಸಮಯ, ದೂರವೇನಲ್ಲ.
ಇದನ್ನೂ ಓದಿ: ಗಿಲ್ಲಿ ಮೇಲೆ ವೀಕ್ಷಕರಿಗೆ ಈ ವಾರ ಬೇಸರ.. ಅಶ್ವಿನಿ ಪರ ಅನುಕಂಪದ ಅಲೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us