/newsfirstlive-kannada/media/media_files/2025/09/11/bcci-2-2025-09-11-12-29-09.jpg)
ಟೀಮ್​ ಇಂಡಿಯಾದ ಹೆಡ್​ಕೋಚ್​​ ಗೌತಮ್​ ಗಂಭೀರ್​ ಕುರ್ಚಿ ಸದ್ಯ ಅಲುಗಾಡ್ತಿದೆ. ಗಂಭೀರ್​ ಪವರ್​ಕಟ್​ ಮಾಡಲು ಬಿಸಿಸಿಐ ವಲಯದಲ್ಲಿ ತೆರೆಮರೆಯಲ್ಲೇ ಕಸರತ್ತುಗಳು ಜೋರಾಗಿ ನಡೀತಿವೆ. ಗಂಭೀರ್​ ಮಾರ್ಗದರ್ಶನದಲ್ಲಿ ಟೀಮ್​ ಇಂಡಿಯಾ ವೈಟ್​ ಬಾಲ್​ ಫಾರ್ಮೆಟ್​​ನಲ್ಲಿ ಚಾಂಪಿಯನ್​​ ಆಟವಾಡಿದೆ. ರೆಡ್​ ಫಾರ್ಮೆಟ್​ನಲ್ಲಿ ಹೀನಾತಿಹೀನ ಪರ್ಫಾಮೆನ್ಸ್​ ನೀಡಿದೆ. ಹೀಗಾಗಿ ಟೆಸ್ಟ್​ ಫಾರ್ಮೆಟ್​​ಗೆ ಪ್ರತ್ಯೇಕ​​​ ಕೋಚ್​ ನೇಮಕಕ್ಕೆ ಸರ್ಕಸ್ ನಡೀತಿದ್ದು, ದಿಗ್ಗಜ ಕ್ರಿಕೆಟರ್ಸ್​ಗೆ ಬಿಸಿಸಿಐ ಆಫರ್​ ನೀಡಿದೆ.
/filters:format(webp)/newsfirstlive-kannada/media/media_files/2025/11/13/gambhir-2025-11-13-09-43-52.jpg)
ಟೆಸ್ಟ್​ ಕ್ರಿಕೆಟ್​ನ ಡಾನ್​ ಆಗಿ ಮೆರದಾಡ್ತಿದ್ದ ಟೀಮ್​ ಇಂಡಿಯಾ ಗಂಭೀರ್​ ಕೋಚ್​ ಪಟ್ಟವೇರಿದ 2 ವರ್ಷಗಳ ಅವಧಿಯಲ್ಲೇ ಎರಡು ಬಾರಿ ತವರಿನಲ್ಲಿ ವೈಟ್​ ವಾಷ್​ ಮುಖಭಂಗ ಅನುಭವಿಸಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ 3-1 ಅಂತರದಲ್ಲಿ ಸೋಲುಂಡಿದೆ. ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ನಲ್ಲಿ ಸತತ 2 ಬಾರಿ ಫೈನಲ್​ ಪ್ರವೇಶಿಸಿದ್ದ ಟೀಮ್​ ಇಂಡಿಯಾ ಈ ಬಾರಿ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿದಿದೆ. ಹೀನಾಯ ಪರ್ಫಾಮೆನ್ಸ್​ ಬಿಸಿಸಿಐ ಬಾಸ್​ಗಳನ್ನ ಕಂಗೆಡಿಸಿದ್ದು ಹೊಸ ಕೋಚ್​ಗಾಗಿ ಹುಡುಕಾಟ ಭರದಿಂದ ಸಾಗಿದೆ.
ಗಂಭೀರ್​ಗೆ ಸೈಲೆಂಟ್​ ಸ್ಕೆಚ್​
ಗಂಭೀರ್​ನ ಕೆಳಗಿಳಿಸೋ ಯೋಚನೆ ಮಾಡಿದ ಬೆನ್ನಲ್ಲೇ ಬಿಸಿಸಿಐ ಬಾಸ್​ಗಳು ಎನ್​ಸಿಎ ಹೆಡ್​, ಟೆಸ್ಟ್​ ಸ್ಪೆಷಲಿಸ್ಟ್​​ ವಿವಿಎಸ್​ ಲಕ್ಷ್ಮಣ್​ಗೆ ಮೊದಲು ಆಫರ್​ ನೀಡಿದ್ರು. ಟೆಸ್ಟ್​ ಕ್ರಿಕೆಟ್​ನಲ್ಲಿ ವಿವಿಎಸ್​ ಲಕ್ಷ್ಮಣ್​ಗೆ ಅಪಾರ ಅನುಭವವಿದೆ. ಜೊತೆಗೆ ದೇಶ-ವಿದೇಶದ ಪ್ಲೇಯಿಂಗ್​ ಕಂಡೀಷನ್ಸ್​​ ಬಗ್ಗೆ ಚೆನ್ನಾಗಿ ಅರಿವಿದೆ. ಹೀಗಾಗಿ ಲೆಜೆಂಡರಿ ಆಟಗಾರನಿಗೆ ಪಟ್ಟ ಕಟ್ಟಲು ಬಿಸಿಸಿಐ ಮುಂದಾಗಿತ್ತು. ಲಕ್ಷ್ಮಣ್, ಟ್ರಾವೆಲಿಂಗ್​ನ ಕಾರಣ ನೀಡಿ​ ಆಫರ್​​ನ ರಿಜೆಕ್ಟ್​ ಮಾಡಿದ್ದಾರೆ. ಬೆನ್ನಲ್ಲೇ ಬಿಸಿಸಿಐ ಬಾಸ್​ಗಳ ಕಣ್ಣು ದಿಗ್ಗಜರ ಮೇಲೆ ಬಿದ್ದಿದೆ.
ಇದನ್ನೂ ಓದಿ: ಗಿಲ್ಲಿ ಮೇಲೆ ವೀಕ್ಷಕರಿಗೆ ಈ ವಾರ ಬೇಸರ.. ಅಶ್ವಿನಿ ಪರ ಅನುಕಂಪದ ಅಲೆ..!
/filters:format(webp)/newsfirstlive-kannada/media/post_attachments/wp-content/uploads/2024/11/VVS-Laskshman.jpg)
ಲಕ್ಷ್ಮಣ್​ ಕೋಚ್​ ಹುದ್ದೆಯನ್ನ ನಿರಾಕರಿಸಿದ ಬೆನ್ನಲ್ಲೇ ಭಾರತೀಯ ಡೊಮೆಸ್ಟಿಕ್ ಕ್ರಿಕೆಟ್​ನ​ ಲೆಜೆಂಡರಿ ಕೋಚ್​ ಚಂದ್ರಕಾಂತ್​ ಪಂಡಿತ್​ನ ಬಿಸಿಸಿಐ ಸಂಪರ್ಕಿಸಿದೆ. ರಣಜಿ ಟ್ರೋಫಿಯಲ್ಲಿ ಚಂದ್ರಕಾಂತ್​ ಪಂಡಿತ್​ ಪಾಠ ಮಾಡಿದ ತಂಡಗಳೆಲ್ಲಾ ಚಾಂಪಿಯನ್​ಗಳಾಗಿ ಮೆರೆದಾಡಿವೆ. ವಿದರ್ಭ ಕೋಚ್​ ಆಗಿ 2018 ಹಾಗೂ 2019ರಲ್ಲಿ ಸತತ 2 ವರ್ಷ ಬ್ಯಾಕ್​ ಟು ಬ್ಯಾಕ್​ ರಣಜಿ ಟ್ರೋಫಿ ಗೆಲ್ಲಿಸಿದ್ದಾರೆ. 2022ರಲ್ಲಿ ಮಧ್ಯಪ್ರದೇಶ ತಂಡಕ್ಕೆ ಚೊಚ್ಚಲ ರಣಜಿ ಟ್ರೋಪಿ ಗೆಲ್ಲಿಸಿಕೊಟ್ಟಿದ್ರು. ಇಂಡಿಯನ್​ ಡೊಮೆಸ್ಟಿಕ್​ ಸೆಟ್​​ಅಪ್​ನ ಇನ್​ & ಔಟ್​ ತಿಳಿದಿರೋ ಚಂದ್ರಕಾಂತ್​ ಪಂಡಿತ್​ಗೆ ಹಳಿ ತಪ್ಪಿರುವ ಟೀಮ್​ ಇಂಡಿಯಾದ ಟೆಸ್ಟ್​ ತಂಡವನ್ನ ಸರಿದಾರಿಗೆ ತರೋ ಸಾಮರ್ಥ್ಯವಿದೆ. ಹೀಗಾಗಿ ಬಾಸ್​ಗಳು ಅಪ್ರೋಚ್​ ಮಾಡಿದ್ದಾರೆ.
ಜಸ್ಟಿನ್​ ಲ್ಯಾಂಗರ್​ಗೂ ಆಫರ್
ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ದಿಗ್ಗಜ, ಮಾಜಿ ಹೆಡ್​ ಕೋಚ್​​ ಜಸ್ಟಿನ್​ ಲ್ಯಾಂಗರ್​ಗೂ ಬಿಸಿಸಿಐನಿಂದ ಆಫರ್​ ಹೋಗಿದೆ. ಸ್ಯಾಂಡ್​ ಪೇಪರ್​​ ಗೇಟ್​ ಸ್ಕ್ಯಾಂಡಲ್​ನಲ್ಲಿ ಸಿಲುಕಿ ಆಸ್ಟ್ರೇಲಿಯಾ ತಂಡ ಕುಗ್ಗಿ ಹೋಗಿದ್ದ ವೇಳೆ ಹೆಡ್​ ಕೋಚ್​ ಪಟ್ಟವೇರಿದ್ದ ಜಸ್ಟಿನ್​ ಲ್ಯಾಂಗರ್​ ತಂಡದ ಆಟದ ಶೈಲಿಯನ್ನೇ ಬದಲಾಯಿದ್ರು. ಒಂದೇ ವರ್ಷದಲ್ಲಿ ಪ್ರತಿಷ್ಟಿಯ ಆ್ಯಷಸ್​ ಟೆಸ್ಟ್​ ಸರಣಿ ಗೆಲ್ಲಿಸಿಕೊಟ್ಟಿದ್ರು. ಸದ್ಯ ಸೀನಿಯರ್​ ಆಟಗಾರರ ನಿರ್ಗಮನದಿಂದ ಟೀಮ್​ ಇಂಡಿಯಾದ ಬ್ಯಾಲೆನ್ಸ್​ ಕೂಡ ತಪ್ಪಿದೆ. ಯಂಗ್​ ಟೀಮ್​ಗೆ ಜಸ್ಟಿನ್ ಲ್ಯಾಂಗರ್​ ಒಳ್ಳೆ ಗುರುವಾಗಬಲ್ಲರು.
ಟೆಸ್ಟ್​ ತಂಡಕ್ಕೆ ಕೋಚ್​ ಆಗ್ತಾರಾ RCB ಕೋಚ್​.?
ಆರ್​ಸಿಬಿ ತಂಡದ ಹೆಡ್​ ಕೋಚ್​ ಆ್ಯಂಡಿ ಫ್ಲವರ್​ ಮೇಲೂ ಬಿಸಿಸಿಐ ಬಾಸ್​ಗಳ ಕಣ್ಣು ಬಿದ್ದಿದೆ. ಸದ್ಯ ಟಿ20 ಫಾರ್ಮೆಟ್​ನ ಸಕ್ಸಸ್​​ಫುಲ್​ ಕೋಚ್​ ಎನಿಸಿಕೊಂಡಿರೋ ಆ್ಯಂಡಿ ಫ್ಲವರ್​, ರೆಡ್​ ಬಾಲ್​ ಕೋಚ್​ ಆಗಿಯೂ ಯಶಸ್ಸು ಕಂಡಿದ್ದಾರೆ. ಇಂಗ್ಲೆಂಡ್​ ಕೋಚ್ ಆಗಿ ಆ್ಯಂಡಿ ಫ್ಲವರ್​ ಆ್ಯಷಸ್​ ಟೆಸ್ಟ್​ ಸರಣಿಯನ್ನ ಗೆಲ್ಲಿಸಿಕೊಟ್ಟಿದ್ರು. ಪ್ಲೇಯರ್ಸ್​ ಮ್ಯಾನೇಜ್​ಮೆಂಟ್​ ವಿಚಾರದಲ್ಲಿ ದಿ ಬೆಸ್ಟ್​ ಎನಿಸಿರೋ ಆ್ಯಂಡಿ ಫ್ಲವರ್ ಕೂಡ ಟೀಮ್​ ಇಂಡಿಯಾ ಟೆಸ್ಟ್​ ತಂಡಕ್ಕೆ ಗುಡ್​ ಚಾಯ್ಸ್​​ ಅನ್ನೋದ್ರಲ್ಲಿ ಡೌಟೇ ಇಲ್ಲ.
ಇದನ್ನೂ ಓದಿ: ಎಣ್ಣೆ ಕೊಡದಿದ್ದಕ್ಕೆ ಬಾರ್​​ಗೆ ಬೆಂಕಿ ಇಟ್ಟು ವಿಕೃತಿ ಮೆರೆದ ಕಿಡಿಗೇಡಿಗಳು..!
/filters:format(webp)/newsfirstlive-kannada/media/media_files/2025/11/05/rcb-2025-11-05-13-13-50.jpg)
ಆ್ಯಂಡಿ ಫ್ಲವರ್ ಹಾಗೂ ಜಸ್ಟಿನ್​ ಲ್ಯಾಂಗರ್​ ಸದ್ಯ ವಿಶ್ವಾದ್ಯಂತ ಫ್ರಾಂಚೈಸಿ ಕ್ರಿಕೆಟ್​ನಲ್ಲಿ ಫುಲ್​ ಬ್ಯುಸಿಯಾಗಿದ್ದಾರೆ. ಐಪಿಎಲ್​ನಲ್ಲೂ ಹೆಡ್​ ಕೋಚ್​ಗಳಾಗಿ ಕಾರ್ಯ ನಿರ್ವಹಿಸ್ತಾ ಇದ್ದಾರೆ. ಒಂದು ವೇಳೆ ಟೀಮ್​ ಇಂಡಿಯಾ ಟೆಸ್ಟ್ ತಂಡದ ಹೆಡ್​ ಕೋಚ್​ ಆಗಲು ಮುಂದಾದ್ರೆ, ಬೇರೆಲ್ಲೂ ಕಾರ್ಯ ನಿರ್ವಹಿಸೋಕೆ ಸಾಧ್ಯವಿಲ್ಲ. ಹೀಗಾಗಿ ಫ್ಲವರ್​ ಹಾಗೂ ಲ್ಯಾಂಗರ್​, ಬಿಸಿಸಿಐ ಆಫರ್​ನ ಒಪ್ಪೋದು ಅನುಮಾನವೇ. ಭಾರತದ ಡೊಮೆಸ್ಟಿಕ್​ ಲೆಜೆಂಡ್ ಚಂದ್ರಕಾಂತ್​ ಪಂಡಿಂತ್ ಪಾಲಿ​ಗೆ ಲೈನ್​ ಫುಲ್​ ಕ್ಲೀಯರ್​ ಆದಂತಿದೆ.
ಟೀಮ್​ ಇಂಡಿಯಾದ ಮುಂದಿನ ಟೆಸ್ಟ್​ ಸರಣಿ ಇರೋದು ಅಗಸ್ಟ್​ನಲ್ಲಿ. ಹೀಗಾಗಿ ತುರಾತುರಿಯಲ್ಲಿ ಬಿಸಿಸಿಐ ಕೋಚ್​ ನೇಮಿಸೋದು ಅನುಮಾನವೇ. ಸದ್ಯ ತೆರೆ ಹಿಂದೆ ಕಸರತ್ತು ಜೋರಾಗಿ ನಡೀತಿದ್ದರೂ ಟಿ20 ವಿಶ್ವಕಪ್ ಹಾಗೂ ಐಪಿಎಲ್​​ ಬಳಿಕವೇ ಈ ವಿಚಾರದಲ್ಲಿ ಸ್ಪಷ್ಟತೆ ಸಿಗಲಿದೆ.
ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ ODI ಸರಣಿ.. ಬಲಿಷ್ಠ ಟೀಂ ಇಂಡಿಯಾ ಪ್ರಕಟ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us