/newsfirstlive-kannada/media/media_files/2026/02/26/rashmika-mandanna-12-2026-02-26-11-24-30.jpg)
ಟಾಲಿವುಡ್‌ನ ಮೋಸ್ಟ್ ಹ್ಯಾಪನಿಂಗ್ ಕಪಲ್ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ಮದುವೆಯ ಸಂಭ್ರಮ ಅಕ್ಷರಶಃ ಮುಗಿಲುಮುಟ್ಟಿದೆ. ರಾಜಸ್ಥಾನದ ಉದಯಪುರದಲ್ಲಿರುವ ಐಷಾರಾಮಿ ರೆಸಾರ್ಟ್ ಸಂಪೂರ್ಣ ಹಬ್ಬದ ವಾತಾವರಣದಿಂದ ಕಂಗೊಳಿಸುತ್ತಿದ್ದು, ಮದುವೆಗೂ ಮುನ್ನ ನಡೆದ ಪ್ರೀ-ವೆಡ್ಡಿಂಗ್, ಸಂಗೀತ ಹಾಗೂ ಮೆಹಂದಿ ಕಾರ್ಯಕ್ರಮಗಳ ಝಲಕ್ ಹೊರಬಿದ್ದಿದೆ.
ಬೆಳಗ್ಗೆ 10.10ರ ಶುಭಲಗ್ನದಲ್ಲಿ ಹಿಂದೂ ಸಂಪ್ರದಾಯದಂತೆ ಈ ಜೋಡಿಯ ವಿವಾಹ ನೆರವೇರಿದ್ದು, ಸಂಜೆ 4.30ಕ್ಕೆ ಕೊಡವ ಸಂಪ್ರದಾಯದಂತೆ ಮತ್ತೊಮ್ಮೆ ಮದುವೆ ನಡೆಯಲಿದೆ. ಇದಕ್ಕೂ ಮುನ್ನ ನಿನ್ನೆ (ಫೆ.25) ರಾತ್ರಿ ನಡೆದ ನೈಟ್ ಪಾರ್ಟಿ ಹಾಗೂ ಸಂಗೀತ ಕಾರ್ಯಕ್ರಮ ಎಲ್ಲರ ಗಮನ ಸೆಳೆದಿದೆ.
ಸಂಗೀತದಲ್ಲಿ ಹಳೆಯ ನೆನಪುಗಳ ಮೆಲುಕು
ನಿನ್ನೆ ರಾತ್ರಿ ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ‘ಸಂಗೀತ’ ಕಾರ್ಯಕ್ರಮ ಜರುಗಿದೆ. ಈ ವೇಳೆ ವಿಜಯ್ ಹಾಗೂ ರಶ್ಮಿಕಾ ಅವರ ಸಿನಿಮಾ ಪಯಣವನ್ನು ನೆನಪಿಸುವಂತಹ ಹಿಟ್ ಹಾಡುಗಳನ್ನು ಪ್ಲೇ ಮಾಡಲಾಗಿದ್ದು ಇಡೀ ಕಾರ್ಯಕ್ರಮ 'ನೊಸ್ಟಾಲ್ಜಿಕ್' (Nostalgic) ಮೂಡ್‌ಗೆ ಜಾರಿತ್ತು.
ಇದನ್ನೂ ಓದಿ: ‘ವಿರೋಶ್’ ಜೋಡಿಗೆ ಇವತ್ತು ಮದುವೆ.. ಉದಯಪುರದಲ್ಲಿ 2 ಸಂಪ್ರದಾಯಗಳಂತೆ ರಶ್ಮಿಕಾ-ವಿಜಯ್ ಕಲ್ಯಾಣ
‘ಗೀತಾ ಗೋವಿಂದಂ’ ಹಾಗೂ ‘ಡಿಯರ್ ಕಾಮ್ರೇಡ್’ ಚಿತ್ರಗಳ ಹಾಡುಗಳು ಪ್ಲೇ ಆಗ್ತಿದ್ದಂತೆ ಅತಿಥಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ‘ಇಂಕೇಮ್ ಇಂಕೇಮ್ ಇಂಕೇಮ್ ಕಾವಾಲೆ’, ‘ಕಲ್ಯಾಣಿ ವಚ್ಚ ವಚ್ಚ’ ಮುಂತಾದ ಹಾಡುಗಳು ವೇದಿಕೆಗೆ ಮತ್ತಷ್ಟು ಕಳೆ ತಂದುಕೊಟ್ಟವು.
‘ಪೀಲಿಂಗ್ಸ್' ಹಾಡಿಗೆ ಭರ್ಜರಿ ಸ್ಟೆಪ್ಸ್!
ಸಂಗೀತ ಕಾರ್ಯಕ್ರಮದ ಅಸಲಿ ಹೈಲೈಟ್ ಎಂದರೆ, ಪುಷ್ಪ-2 ಚಿತ್ರದ ವೈರಲ್ ಸಾಂಗ್ ‘ಪೀಲಿಂಗ್ಸ್’ (Peelings). ಈ ಹಾಡು ಶುರುವಾಗುತ್ತಿದ್ದಂತೆಯೇ ಅತಿಥಿಗಳೆಲ್ಲರೂ ಡ್ಯಾನ್ಸ್ ಫ್ಲೋರ್‌ಗೆ ಇಳಿದು ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಇಡೀ ಸಂಗೀತ ಕಾರ್ಯಕ್ರಮ ಹೈ-ಎನರ್ಜಿ ಪಾರ್ಟಿಯಾಗಿ ಮಾರ್ಪಟ್ಟಿತ್ತು.
ಮೋಜಿನ ಆಟಗಳಲ್ಲಿ ಗೆದ್ದವರು ಯಾರು?
ಮಂಗಳವಾರ (ಫೆ. 24) ವಧು (ರಶ್ಮಿಕಾ) ಹಾಗೂ ವರನ (ವಿಜಯ್) ಕಡೆಯವರ ನಡುವೆ ಮೋಜಿನ ಆಟಗಳನ್ನು ಆಡಿಸಲಾಯಿತು. ಈ ವೇಳೆ ನಡೆದ 'ಮ್ಯೂಸಿಕಲ್ ಚೇರ್' (Musical Chair) ಆಟದಲ್ಲಿ ರಶ್ಮಿಕಾ ಮಂದಣ್ಣ ತಂಡ ಗೆಲುವು ಸಾಧಿಸಿದರೆ, ‘ಹಗ್ಗ ಜಗ್ಗಾಟ’ದಲ್ಲಿ (Tug of War) ವಿಜಯ್ ದೇವರಕೊಂಡ ಅವರ ತಂಡ ಪಾರುಪತ್ಯ ಮೆರೆದಿದೆ.
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ವಿರೋಶ್’ ಜೋಡಿ: ಉದಯಪುರದಲ್ಲಿ ಶ್ರೀವಲ್ಲಿ ವಿವಾಹ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us