Advertisment

ರಶ್ಮಿಕಾ ಮತ್ತು ದೇವರಕೊಂಡ ಮದುವೆ ಫೋಟೋ ವೈರಲ್, ಆದರೆ ಅದು ಇವತ್ತಿಂದಲ್ಲ..!

ಟಾಲಿವುಡ್‌ನ ಬಹುನಿರೀಕ್ಷಿತ ತಾರಾಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ವಿವಾಹ ಇಂದು ಉದಯಪುರದಿಂದ 50 ಕಿ.ಮೀ ದೂರದಲ್ಲಿರುವ ಐಷಾರಾಮಿ ‘ಐಟಿಸಿ ಮಾಮ್ಯ-ಸೌವೆನಿರ್’ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ.

author-image
Ganesh Kerekuli
vijay devarakonda
Advertisment

ಟಾಲಿವುಡ್‌ನ ಬಹುನಿರೀಕ್ಷಿತ ತಾರಾಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ವಿವಾಹ ಇಂದು ಉದಯಪುರದಿಂದ 50 ಕಿ.ಮೀ ದೂರದಲ್ಲಿರುವ ಐಷಾರಾಮಿ ‘ಐಟಿಸಿ ಮಾಮ್ಯ-ಸೌವೆನಿರ್’ (ITC Maamya-Souvenir) ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಈ ಮದುವೆ ನಡೆದಿದ್ದು, ಮದುವೆ ಮಂಟಪದ ಹೊರಗೆ ಕಾಯುತ್ತಿದ್ದ ಪಾಪರಾಜಿಗಳು ಹಾಗೂ ಮಾಧ್ಯಮದವರಿಗೆ ನವಜೋಡಿ ಸಿಹಿ ಹಂಚಿ ಸಂಭ್ರಮಿಸಿದೆ.

Advertisment

ಬೆಳಗ್ಗೆ 10:10ಕ್ಕೆ ತೆಲುಗು (ಹಿಂದೂ) ಸಂಪ್ರದಾಯದಂತೆ ಮದುವೆ ಶಾಸ್ತ್ರಗಳು ಮುಗಿದಿದ್ದು, ವರದಿಗಳ ಪ್ರಕಾರ ಇಂದು ಸಂಜೆ 4 ಗಂಟೆ ಸುಮಾರಿಗೆ ರಶ್ಮಿಕಾ ಅವರ ಮೂಲವಾದ ಕೂರ್ಗ್‌ನ (ಕೊಡವ) ಸಂಪ್ರದಾಯದಂತೆ ಸೂರ್ಯಾಸ್ತದ ಹಿನ್ನೆಲೆಯಲ್ಲಿ (Sunset Wedding) ಮತ್ತೊಮ್ಮೆ ವಿವಾಹ ನಡೆಯಲಿದೆ.

ಇದನ್ನೂ ಓದಿ: ದೇವರಕೊಂಡ ಮಾತಿಗೆ ನಾಚಿ ನೀರಾದ ರಶ್ಮಿಕಾ ಮಂದಣ್ಣ -ವಿಡಿಯೋ ವೈರಲ್

rashmika mandanna and vijay devarakonda

ವೈರಲ್ ಆಗುತ್ತಿದೆ 'ಗೀತಾ ಗೋವಿಂದಂ' ವಿಡಿಯೋ!

ಈ ಜೋಡಿಯ ಮದುವೆಯ ಅಧಿಕೃತ ಫೋಟೋಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ 'ಗೀತಾ ಗೋವಿಂದಂ' ಸಿನಿಮಾದ ಮದುವೆಯ ದೃಶ್ಯವೊಂದು ಸಖತ್ ವೈರಲ್ ಆಗುತ್ತಿದೆ. ಚಿತ್ರದಲ್ಲಿ ನಾಯಕ ಗೋವಿಂದ್ (ವಿಜಯ್) ನಾಯಕಿ ಗೀತಾಳನ್ನು (ರಶ್ಮಿಕಾ) ಮದುವೆಯಾಗುವ ಕನಸು ಕಾಣುತ್ತಾನೆ. ಹಿನ್ನೆಲೆಯಲ್ಲಿ 'ವಚ್ಚಿಂದಮ್ಮಾ..' ಹಾಡು ಪ್ಲೇ ಆಗುತ್ತದೆ. 2018ರಲ್ಲಿ ತೆರೆಕಂಡಿದ್ದ ಈ ಸಿನಿಮಾದ ಸೆಟ್‌ನಲ್ಲೇ ಇವರಿಬ್ಬರ ಮೊದಲ ಭೇಟಿಯಾಗಿತ್ತು. ಅಂದು ರೀಲ್‌ನಲ್ಲಿ ಕಂಡಿದ್ದ ಮದುವೆಯ ಕನಸು ಇಂದು ರಿಯಲ್ ಆಗಿರುವುದನ್ನು ಕಂಡು ಅಭಿಮಾನಿಗಳು ಖುಷಿಪಡುತ್ತಿದ್ದಾರೆ.

Advertisment

ಸಂಗೀತದಲ್ಲಿ ‘ಪೀಲಿಂಗ್ಸ್’ ಹವಾ.. ಹಲ್ದಿ ಶಾಸ್ತ್ರದ ಡಿಟೇಲ್ಸ್

ಮದುವೆಗೂ ಮುನ್ನ ನಡೆದ ಸಂಗೀತ ಕಾರ್ಯಕ್ರಮ ಭಾರಿ ಮನರಂಜನೆಯಿಂದ ಕೂಡಿತ್ತು. ವಿಜಯ್ ಹಾಗೂ ರಶ್ಮಿಕಾ ನಟನೆಯ 'ಗೀತಾ ಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಚಿತ್ರದ ಹಿಟ್ ಹಾಡುಗಳನ್ನು ಪ್ಲೇ ಮಾಡಲಾಗಿತ್ತು. 'ಇಂಕೇಮ್ ಇಂಕೇಮ್', 'ಕಲ್ಯಾಣಿ ವಚ್ಚ ವಚ್ಚ' ಹಾಡುಗಳು ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದರೆ, ಪುಷ್ಪ-2 ಚಿತ್ರದ 'ಪೀಲಿಂಗ್ಸ್' (Peelings) ಟ್ರ್ಯಾಕ್ ಪ್ಲೇ ಆಗುತ್ತಿದ್ದಂತೆ ಅತಿಥಿಗಳೆಲ್ಲರೂ ಡ್ಯಾನ್ಸ್ ಫ್ಲೋರ್‌ಗೆ ಇಳಿದು ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.

ಇದನ್ನೂ ಓದಿ: ಪವಾಡ ಪುರುಷ ಮುತ್ಯಾಗೆ ‘ಪೋಕ್ಸೋ’ ಕಂಟಕ: ಯಾರೀತ? ಲೈಕ್ಸ್‌, ವ್ಯೂವ್ಸ್​ಗಾಗಿ ವಿಡಿಯೋ ಮಾಡಿದ್ರಾ ಸಂತ್ರಸ್ತೆಯ ಪೋಷಕರು?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

rashmika mandanna
Advertisment
Advertisment
Advertisment