ನಟಿ ಕಾವ್ಯ ಗೌಡ ಪ್ರಕರಣ.. ನಿನ್ನೆ ಪೊಲೀಸ್‌ ಠಾಣೆಯಲ್ಲಿ ಅಸಲಿಗೆ ಆಗಿದ್ದೇನು..?

ಕಿರುತೆರೆ ನಟಿ ಕಾವ್ಯ ಗೌಡ ಹಾಗೂ ಅವರ ಪತಿ ಸೋಮಶೇಖರ್ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಈಗ ಹೊಸ ತಿರುವು ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವ್ಯ ಗೌಡ ಮತ್ತು ಅವರ ಕುಟುಂಬದ ಸದಸ್ಯರಾದ ಪ್ರೇಮ ಎಂಬುವವರು ಪರಸ್ಪರ ದೂರು-ಪ್ರತಿದೂರು ದಾಖಲಿಸಿದ್ದಾರೆ.

author-image
Ganesh Kerekuli
KAVYA GOWDA FAMILY FIGHT (1)
Advertisment

ಬೆಂಗಳೂರು: ಕಿರುತೆರೆ ನಟಿ ಕಾವ್ಯ ಗೌಡ ಹಾಗೂ ಅವರ ಪತಿ ಸೋಮಶೇಖರ್ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಈಗ ಹೊಸ ತಿರುವು ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವ್ಯ ಗೌಡ ಮತ್ತು ಅವರ ಕುಟುಂಬದ ಸದಸ್ಯರಾದ ಪ್ರೇಮ ಎಂಬುವವರು ಪರಸ್ಪರ ದೂರು-ಪ್ರತಿದೂರು ದಾಖಲಿಸಿದ್ದು, ರಾಮಮೂರ್ತಿನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ವಿಚಾರಣೆ ನಡೆಸಿದ ಪೊಲೀಸರು

ಈ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಪ್ರತಿವಾದಿಗಳಾದ ಪ್ರೇಮ, ನಂದೀಶ್, ಪ್ರಿಯಾ ಮತ್ತು ರವಿಕುಮಾರ್ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಪ್ರಾಥಮಿಕ ವಿಚಾರಣೆಯ ನಂತರ ಪೊಲೀಸರು ಇವರಿಗೆ ಠಾಣಾ ಜಾಮೀನು (Station Bail) ನೀಡಿದ್ದು, ತನಿಖೆಗೆ ಅಗತ್ಯ ಬಿದ್ದಾಗ ಮತ್ತೆ ಹಾಜರಾಗುವಂತೆ ಸೂಚಿಸಿ ನೋಟಿಸ್ ನೀಡಿದ್ದಾರೆ.

ಇದನ್ನೂ ಓದಿ: ನೆಲಮಂಗಲದಲ್ಲಿ ಪ್ಲಾಸ್ಟಿಕ್‌ ಗನ್‌ ತೋರಿಸಿ ರಾಬರಿ.. ಸಿನಿಮಾ ಸ್ಟೈಲ್‌ನಲ್ಲಿ ಬಂದು ಚಿನ್ನಾಭರಣ ದರೋಡೆ..

ಕುಟುಂಬ ಕಲಹವೇ ಕಾರಣ?

ನಟಿ ಕಾವ್ಯ ಗೌಡ ಹಾಗೂ ಪ್ರೇಮ ಇಬ್ಬರೂ ಒಂದೇ ಮನೆಯ ಸೊಸೆಯಂದಿರಾಗಿದ್ದು, ಈ ಗಲಾಟೆಯ ಹಿಂದೆ ಕೌಟುಂಬಿಕ ಕಾರಣಗಳಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಆಸ್ತಿ ವಿಚಾರವಾಗಿ ಏನಾದರೂ ವಿವಾದವಿದೆಯೇ ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಲಾಟೆಯ ಸಂದರ್ಭದಲ್ಲಿ ಕಾವ್ಯ ಗೌಡ ಹಾಗೂ ಪ್ರೇಮ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಕುಟುಂಬದ ಇತರ ಸದಸ್ಯರ ಹೇಳಿಕೆಗಳನ್ನೂ ಪೊಲೀಸರು ಪಡೆದಿದ್ದಾರೆ.

ವೀಡಿಯೋ ಸಾಕ್ಷ್ಯಗಳ ಸಂಗ್ರಹ:

ಗಲಾಟೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದವರು ಚಿತ್ರೀಕರಿಸಿದ ವೀಡಿಯೋಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೀಡಿಯೋಗಳ ಆಧಾರದ ಮೇಲೆ ಘಟನೆಯಲ್ಲಿ ಯಾರ ಪಾತ್ರವೇನು ಮತ್ತು ಗಲಾಟೆ ಹೇಗೆ ಶುರುವಾಯಿತು ಎಂಬ ಬಗ್ಗೆ ಸ್ಪಷ್ಟನೆ ಪಡೆಯಲಾಗುತ್ತಿದೆ. ಪ್ರಸ್ತುತ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈ ಪ್ರಕರಣದ ವರದಿಯನ್ನು ಸಲ್ಲಿಸಲಾಗಿದೆ. ಇದು ಸಂಪೂರ್ಣವಾಗಿ ಕುಟುಂಬದ ಒಳಗಿನ ವಿಚಾರವಾಗಿರುವುದರಿಂದ ಮತ್ತು ಪರಸ್ಪರ ಸಂಬಂಧಿಕರೇ ಆಗಿರುವುದರಿಂದ, ಪೊಲೀಸರು ಎರಡೂ ಕುಟುಂಬಗಳಿಗೆ 'ಕೌನ್ಸೆಲಿಂಗ್' (Counseling) ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಜಾಬ್‌ ಆಫರ್‌ ಬಂದಾಗ ಮೊದಲು ನೀವು ಮಾಡಬೇಕಾಗಿದ್ದು ಏನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kavya gowda
Advertisment