ಬೆಂಗಳೂರು: ವಿಷ್ಣು ಸ್ಮಾರಕ ವಿವಾದ ಬೆನ್ನಲ್ಲೇ ನಟ ಅನಿರುದ್ಧ್ ಅವರು ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾದರು. ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ಸಿದ್ದರಾಮಯ್ಯರ ಜೊತೆ ಕೆಲವು ಹೊತ್ತು ಚರ್ಚೆ ನಡೆಸಿದರು. ಈ ವೇಳೆ ವಿಷ್ಣುವರ್ಧನ್ ಅವ್ರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವಂತೆ ಸಿಎಂ ಬಳಿ ಮನವಿ ಮಾಡಿಕೊಂಡರು.
ಇದನ್ನೂ ಓದಿ: ಅನುಶ್ರೀ ಕಲ್ಯಾಣ -ಲೇಟೆಸ್ಟ್ ಫೋಟೋಗಳು
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅನಿರುದ್ಧ್, ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದೆ. ಕರ್ನಾಟಕ ರತ್ನ ಪ್ರಶಸ್ತಿ ಸಂಬಂಧ ಹಿಂದೆಯೂ ಸಕಾರಾತ್ಮಕವಾಗಿ ಸ್ಪಂದಿಸಿದ್ದರೂ, ಇವತ್ತು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದನ್ನ ಸಚಿವ ಸಂಪುಟದಲ್ಲಿ ಚರ್ಚೆ ಮಾಡ್ತೇನೆ ಎಂದಿದ್ದಾರೆ. ಕರ್ನಾಟಕ ರತ್ನ ಪ್ರಶಸ್ತಿಗೆ ವಿಷ್ಣುವರ್ಧನ್ ಅವರು ಅರ್ಹರು. ಹಾಗಾಗಿ ಕೇಳುವ ಬದಲಾಗಿ ನೆನಪು ಮಾಡುತ್ತೇನೆ. ಈ ಬಾರಿಯೂ ನೆನಪು ಮಾಡಿದ್ದೇನೆ ಎಂದರು.
ವಿಷ್ಣುವರ್ಧನ್ ಸ್ಮಾರಕ ಧ್ವಂಸ ವಿಚಾರಕ್ಕೆ ಪ್ರತಿಕ್ರಿಯಿಸಿ.. ಇದರ ಬಗ್ಗೆ ಈಗಾಗಲೇ ಸರ್ಕಾರ ಮತ್ತು ಸಿಎಂ ಗಮನಕ್ಕೆ ಇದೆ. ಈ ಹಿಂದೆ ನಾವು ಕೇಳಿದ ಹಾಗೆ ಕರ್ನಾಟಕ ಸರ್ಕಾರ ಅಪ್ಪ ಅವರ ಸ್ಮಾರಕ ಮಾಡಿದೆ. ಈಗಾಗಲೇ ಸರ್ಕಾರ ಐದು ಎಕರೆ ಜಮೀನಿನಲ್ಲಿ ಸ್ಮಾರಕ ಮಾಡಿದೆ ಎಂದರು.
ಇದನ್ನೂ ಓದಿ: ಚೆನ್ನಾಗಿ ಅಡುಗೆ ಮಾಡ್ತೀನಿ, ಅನು ಚೆನ್ನಾಗಿ ತಿಂತಾಳೆ -ಅನುಶ್ರೀ ಬಗ್ಗೆ ಪತಿ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ