Advertisment

Yash Toxic teaser release: ‘ರಾಯ’ನ ಅವತಾರಕ್ಕೆ ಕಳೆದುಹೋದ ಫ್ಯಾನ್ಸ್ -ವಿಡಿಯೋ

ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿಮಾನಿಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ. ಇಂದು ಬೆಳಗ್ಗೆ 9:35ಕ್ಕೆ ಸರಿಯಾಗಿ ‘ಟಾಕ್ಸಿಕ್’ (Toxic) ಸಿನಿಮಾದ ಬಹುನಿರೀಕ್ಷಿತ ಟೀಸರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದೆ.

author-image
Ganesh Kerekuli
toxic yash
Advertisment

ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿಮಾನಿಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ. ಇಂದು ಬೆಳಗ್ಗೆ 9:35ಕ್ಕೆ ಸರಿಯಾಗಿ ‘ಟಾಕ್ಸಿಕ್’ (Toxic) ಸಿನಿಮಾದ ಬಹುನಿರೀಕ್ಷಿತ ಟೀಸರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದೆ.

Advertisment

ಮಾರ್ಚ್ ಮೊದಲ ವಾರದಲ್ಲಿ ಟ್ರೇಲರ್ ಬಿಡುಗಡೆಯಾಗಲಿದೆ ಎಂಬ ಸುದ್ದಿಯ ನಡುವೆಯೇ, ಚಿತ್ರತಂಡ ಇಂದು ದಿಢೀರ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದೆ.

ಟೀಸರ್ ಹೈಲೈಟ್ಸ್ ಏನು?

ಈ ಹಿಂದೆ ಬಿಡುಗಡೆಯಾಗಿದ್ದ ಗ್ಲಿಂಪ್ಸ್‌ನಲ್ಲಿ ಕಂಡುಬಂದಿದ್ದ ಹಸಿಬಿಸಿ ದೃಶ್ಯಗಳು ಮತ್ತು ಗುಂಡಿನ ಸದ್ದು ಈ ಟೀಸರ್‌ನಲ್ಲೂ ಮುಂದುವರಿದಿದ್ದು, ಸಿನಿಮಾ ಎಷ್ಟು ‘ಟಾಕ್ಸಿಕ್’ ಆಗಿರಲಿದೆ ಎಂಬುದರ ಸುಳಿವು ನೀಡಿದೆ. ಯಶ್ ಅವರ ‘ರಾಯ’ನ ಲುಕ್ ಮತ್ತು ಸ್ಟೈಲ್ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಯಾರ ಪಾತ್ರವೇನು? ಪಾತ್ರ ಪರಿಚಯ ಹೀಗಿದೆ

ಈ ಟೀಸರ್ ಮೂಲಕ ಸಿನಿಮಾದ ಪ್ರಮುಖ ಪಾತ್ರಧಾರಿಗಳ ಪರಿಚಯವನ್ನು ಮಾಡಿಕೊಡಲಾಗಿದೆ. ನಟಿಯರ ದಂಡೇ ಇರುವ ಈ ಸಿನಿಮಾದಲ್ಲಿ ಪ್ರತಿಯೊಬ್ಬರಿಗೂ ವಿಭಿನ್ನ ಪಾತ್ರಗಳನ್ನು ನೀಡಲಾಗಿದೆ.

Advertisment

ಇದನ್ನೂ ಓದಿ: ವಿದ್ಯಾ, ಭದ್ರನಾ ಸಂಸಾರಕ್ಕೆ ಕುತಂತ್ರಿಗಳಿಂದ ಕಂಟಕ.. ಛೇ ಪಾಪ ಎಂದ ವೀಕ್ಷಕರು..!

toxic yash (1)

  • ಯಶ್: ರಾಯ (Raya)
  • ನಯನತಾರಾ: ಗಂಗಾ (ಮಾಸ್ ಮತ್ತು ಡಾನ್ ಲುಕ್‌ನಲ್ಲಿ ಲೇಡಿ ಸೂಪರ್ ಸ್ಟಾರ್ ಎಂಟ್ರಿ)
  • ಕಿಯಾರಾ ಅಡ್ವಾಣಿ: ನಾದಿಯಾ (Nadia)
  • ಹುಮಾ ಖುರೇಶಿ: ಎಲಿಜಬೆತ್
  • ರುಕ್ಮಿಣಿ ವಸಂತ್: ಮೆಲಿಸಾ
  • ತಾರಾ ಸುತಾರಿಯಾ: ರೆಬೆಕಾ
  • ನಟಾಲಿ ಬರ್ನ್: ಉಕ್ರೇನಿಯನ್ ನಟಿ (ಟೀಸರ್‌ನಲ್ಲಿ ವಿಶೇಷ ಪಾತ್ರ)

ಬೋಲ್ಡ್ ದೃಶ್ಯಗಳದ್ದೇ ಚರ್ಚೆ

ಈ ಹಿಂದೆ ರಾಯನ ಪಾತ್ರ ಪರಿಚಯಿಸುವ ಟೀಸರ್ ಬಿಡುಗಡೆಯಾದಾಗ ಅದರಲ್ಲಿನ ಕೆಲವು ಬೋಲ್ಡ್ ದೃಶ್ಯಗಳು ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದ್ದವು. ಕೆಲವರು ಇದು ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಇಂದಿನ ಟೀಸರ್‌ನಲ್ಲಿ ನಿರ್ದೇಶಕ ಗೀತು ಮೋಹನ್‌ದಾಸ್ ಅವರು ಕಥೆಯ ಎಳೆ ಮತ್ತು ಪಾತ್ರಗಳ ತೂಕವನ್ನು ತೋರಿಸುವ ಮೂಲಕ ಟೀಕಾಕಾರರಿಗೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ.

Advertisment

toxic tease release

ಮುಂದೇನು?

ಟೀಸರ್ ಮೂಲಕ ಈಗ ಪ್ರಚಾರದ ಕಾವು ಏರಿಸಿರುವ ಚಿತ್ರತಂಡ, ಮಾರ್ಚ್ ಮೊದಲ ವಾರದಲ್ಲಿ ಟ್ರೇಲರ್ ಬಿಡುಗಡೆ ಮಾಡಲು ಸಜ್ಜಾಗಿದೆ. ಒಟ್ಟಿನಲ್ಲಿ ಕೆಜಿಎಫ್ ನಂತರ ಯಶ್ ನಟನೆಯ ಈ ಸಿನಿಮಾ ಭಾರೀ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸುವುದು ಪಕ್ಕಾ ಎಂದು ಅಭಿಮಾನಿಗಳು ಮಾತನಾಡಿಕೊಳ್ತಿದ್ದಾರೆ. 

ಇದನ್ನೂ ಓದಿ:ಟ್ರಂಪ್ ಕನಸಿನ ‘ಶಾಂತಿ ಮಂಡಳಿ’ ಸಭೆಯಲ್ಲಿ ಭಾರತ ಭಾಗಿ.. ಆದರೆ ಸದಸ್ಯತ್ವ ಪಡೆಯಲಿಲ್ಲ.. ಮತ್ತೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Yash toxic edited teaser Toxic movie Toxic: A Fairy Tale for Grown-Ups
Advertisment
Advertisment
Advertisment