ಟ್ರಂಪ್ ಕನಸಿನ ‘ಶಾಂತಿ ಮಂಡಳಿ’ ಸಭೆಯಲ್ಲಿ ಭಾರತ ಭಾಗಿ.. ಆದರೆ ಸದಸ್ಯತ್ವ ಪಡೆಯಲಿಲ್ಲ.. ಮತ್ತೆ..?

ವಿಶ್ವಸಂಸ್ಥೆಗೆ ಪರ್ಯಾಯವಾಗಿ ಶಕ್ತಿಶಾಲಿ ಒಕ್ಕೂಟ ಒಂದನ್ನು ಕಟ್ಟಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ. ಟ್ರಂಪ್ ಅವರ ಕನಸಿನ ಕೂಸಾದ ‘ಬೋರ್ಡ್ ಆಫ್ ಪೀಸ್’ನ ಮೊದಲ ಸಭೆ ಗುರುವಾರ (ಫೆ.19) ನಡೆದಿದೆ. ಈ ಮಹತ್ವದ ಸಭೆಯಲ್ಲಿ ಭಾರತವು ‘ವೀಕ್ಷಕ ರಾಷ್ಟ್ರ’ವಾಗಿ (Observer Nation) ಭಾಗವಹಿಸಿದೆ.

author-image
Ganesh Kerekuli
donald trump (1)
Advertisment

ವಿಶ್ವಸಂಸ್ಥೆಗೆ (UN) ಪರ್ಯಾಯವಾಗಿ ಶಕ್ತಿಶಾಲಿ ಒಕ್ಕೂಟ ಒಂದನ್ನು ಕಟ್ಟಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ. ಟ್ರಂಪ್ ಅವರ ಕನಸಿನ ಕೂಸಾದ ‘ಬೋರ್ಡ್ ಆಫ್ ಪೀಸ್’ (Board of Peace)ನ ಮೊದಲ ಸಭೆ ಗುರುವಾರ (ಫೆ.19) ನಡೆದಿದೆ. ಈ ಮಹತ್ವದ ಸಭೆಯಲ್ಲಿ ಭಾರತವು ‘ವೀಕ್ಷಕ ರಾಷ್ಟ್ರ’ವಾಗಿ (Observer Nation) ಭಾಗವಹಿಸಿದೆ.

ಭಾರತದ ನಡೆ ಏನು?

ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಸಭೆಯಲ್ಲಿ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿ ನಾಮ್ಗ್ಯಾ ಸಿ. ಖಂಪಾ (Namgya C. Khampa) ಭಾರತವನ್ನು ಪ್ರತಿನಿಧಿಸಿದರು. ಆರಂಭದಲ್ಲಿ, ಈ ಮಂಡಳಿಗೆ ಸೇರ್ಪಡೆಗೊಳ್ಳುವಂತೆ ಅಮೆರಿಕ ನೀಡಿದ್ದ ಆಹ್ವಾನವನ್ನು ಭಾರತ ತಕ್ಷಣವೇ ಒಪ್ಪಿಕೊಂಡಿರಲಿಲ್ಲ. ಫೆಬ್ರವರಿ 12 ರಂದು ಪ್ರತಿಕ್ರಿಯಿಸಿದ್ದ ಭಾರತೀಯ ವಿದೇಶಾಂಗ ಸಚಿವಾಲಯ, ‘ನಾವು ಪ್ರಸ್ತಾಪವನ್ನು ಪರಿಶೀಲಿಸುತ್ತಿದ್ದೇವೆ. ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆಯ ಪ್ರಯತ್ನಗಳಿಗೆ ನಮ್ಮ ಬೆಂಬಲವಿದೆ’ ಎಂದು ಹೇಳಿತ್ತು. 

ಇದನ್ನೂ ಓದಿ: ICC T20 Rankings: ಇಶಾನ್ ಕಿಶನ್ ದರ್ಬಾರ್..!

USA PREZ DONALD TRUMP

ಇದೀಗ ಪೂರ್ಣ ಪ್ರಮಾಣದ ಸದಸ್ಯತ್ವ ಪಡೆಯದಿದ್ದರೂ ವೀಕ್ಷಕ ರಾಷ್ಟ್ರವಾಗಿ ಭಾಗವಹಿಸುವ ಮೂಲಕ ಭಾರತವು ಟ್ರಂಪ್ ಅವರ ಈ ಹೊಸ ನಡೆಗೆ ತನ್ನ ರಾಜತಾಂತ್ರಿಕ ಬೆಂಬಲದ ಸುಳಿವು ನೀಡಿದೆ.

ಏನಿದು ‘ಬೋರ್ಡ್ ಆಫ್ ಪೀಸ್’? ಟ್ರಂಪ್ ಪ್ಲಾನ್ ಏನು?

ವಿಶ್ವಸಂಸ್ಥೆಗೆ (United Nations) ಪೈಪೋಟಿ ನೀಡಬಲ್ಲ ಸಂಸ್ಥೆಯಾಗಿ ಇದನ್ನು ರೂಪಿಸುವುದು ಟ್ರಂಪ್ ಅವರ ಉದ್ದೇಶ.
ಆರಂಭದಲ್ಲಿ ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮದ ಮೇಲೆ ನಿಗಾ ಇಡಲು ಇದನ್ನು ಪ್ರಸ್ತಾಪಿಸಲಾಗಿತ್ತು.
ಈಗ ಟ್ರಂಪ್ ಅವರ ಮಹತ್ವಾಕಾಂಕ್ಷೆ ಹೆಚ್ಚಾಗಿದ್ದು, ಇದೊಂದು ಜಾಗತಿಕ ಆಡಳಿತ ಮಂಡಳಿಯಾಗುವ ಲಕ್ಷಣಗಳು ಕಾಣುತ್ತಿವೆ.
ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ್ದ ಟ್ರಂಪ್, ‘ಪ್ರತಿಯೊಬ್ಬರೂ ಈ ಸಂಸ್ಥೆಯ ಭಾಗವಾಗಲು ಬಯಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: ವಿದ್ಯಾ, ಭದ್ರನಾ ಸಂಸಾರಕ್ಕೆ ಕುತಂತ್ರಿಗಳಿಂದ ಕಂಟಕ.. ಛೇ ಪಾಪ ಎಂದ ವೀಕ್ಷಕರು..!

ಯಾವೆಲ್ಲಾ ದೇಶಗಳು ಭಾಗಿ?

ವಾಷಿಂಗ್ಟನ್‌ನ ಯುಎಸ್ ಇನ್‌ಸ್ಟಿಟ್ಯೂಟ್ ಆಫ್ ಪೀಸ್‌ನಲ್ಲಿ ನಡೆದ ಸಭೆಯಲ್ಲಿ ಸುಮಾರು 50 ದೇಶಗಳ ಅಧಿಕಾರಿಗಳು ಭಾಗವಹಿಸಿದ್ದರು.
ಸದಸ್ಯ ರಾಷ್ಟ್ರಗಳು: ಅಜರ್ಬೈಜಾನ್, ಬೆಲಾರಸ್, ಈಜಿಪ್ಟ್, ಹಂಗೇರಿ, ಇಂಡೋನೇಷ್ಯಾ, ಇಸ್ರೇಲ್, ಜೋರ್ಡಾನ್, ಮೊರಾಕೊ, ಪಾಕಿಸ್ತಾನ, ಕತಾರ್, ಸೌದಿ ಅರೇಬಿಯಾ, ಟರ್ಕಿ, ಯುಎಇ ಮತ್ತು ವಿಯೆಟ್ನಾಂ ಸೇರಿದಂತೆ 27 ದೇಶಗಳು ಸದಸ್ಯರಾಗಿವೆ.
ವೀಕ್ಷಕರು: ಭಾರತ ಮತ್ತು ಯುರೋಪಿಯನ್ ಒಕ್ಕೂಟ (EU) ವೀಕ್ಷಕರಾಗಿ ಭಾಗವಹಿಸಿದವು.

ಹಣದ ಹೊಳೆ ಹರಿಸಿದ ಟ್ರಂಪ್

ಸಭೆಯಲ್ಲಿ ಮಾತನಾಡಿದ ಟ್ರಂಪ್, ಗಾಜಾ ಪರಿಹಾರ ಕಾರ್ಯಗಳಿಗಾಗಿ ಕಜಕಿಸ್ತಾನ್, ಯುಎಇ, ಸೌದಿ ಅರೇಬಿಯಾ ಸೇರಿದಂತೆ 9 ಸದಸ್ಯ ರಾಷ್ಟ್ರಗಳು ಒಟ್ಟು 7 ಬಿಲಿಯನ್ ಡಾಲರ್ ನೀಡಲು ಒಪ್ಪಿಗೆ ಸೂಚಿಸಿವೆ ಎಂದು ತಿಳಿಸಿದರು. ಅಮೆರಿಕ ಕಡೆಯಿಂದಲೂ ಶಾಂತಿ ಮಂಡಳಿಗೆ 10 ಬಿಲಿಯನ್ ಡಾಲರ್ ನೀಡುವುದಾಗಿ ಘೋಷಿಸಿದರು. ವಿಶ್ವಸಂಸ್ಥೆಯ ಪ್ರಭಾವ ತಗ್ಗಿಸಲು ಟ್ರಂಪ್ ನಡೆಸ್ತಿರುವ ಈ ಹೊಸ ಪ್ರಯೋಗಕ್ಕೆ ಭಾರತ ಕೂಡ ಕಾದು ನೋಡುವ ತಂತ್ರದೊಂದಿಗೆ ಹೆಜ್ಜೆ ಹಾಕಿದೆ.

ಇದನ್ನೂ ಓದಿ:ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ಎಸೆತ.. ಬಾಗಲಕೋಟೆಯಲ್ಲಿ ಫೆ.24ವರೆಗೆ ನಿಷೇಧಾಜ್ಞೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Pm Narendra Modi DONALD TRUMP
Advertisment