Advertisment

ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ಎಸೆತ.. ಬಾಗಲಕೋಟೆಯಲ್ಲಿ ಫೆ.24ವರೆಗೆ ನಿಷೇಧಾಜ್ಞೆ

ಬಾಗಲಕೋಟೆಯ ಕಿಲ್ಲಾ ಓಣಿಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ಮತ್ತು ಚಪ್ಪಲಿ ತೂರಾಟ ನಡೆಸಿದ್ದಾರೆ. ಪಂಕಾ ಮಸೀದಿ ಒಳಗಿಂದ ಚಪ್ಪಲಿಯನ್ನ ಎಸೆಯಲಾಗಿದೆ ಎಂಬ ಆರೋಪ ಇದೆ.

author-image
Ganesh Kerekuli
bagalakote galate
Advertisment

ಬಾಗಲಕೋಟೆಯ ಕಿಲ್ಲಾ ಓಣಿಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ಮತ್ತು ಚಪ್ಪಲಿ ತೂರಾಟ ನಡೆಸಿದ್ದಾರೆ.

Advertisment

ಪಂಕಾ ಮಸೀದಿ ಒಳಗಿಂದ ಚಪ್ಪಲಿಯನ್ನ ಎಸೆಯಲಾಗಿದೆ ಎಂಬ ಆರೋಪ ಇದೆ. ಘಟನೆಯಲ್ಲಿ ಎಸ್‌ಪಿ ಸಿದ್ದಾರ್ಥ್ ಗೋಯೆಲ್ ಅವರ ಕುತ್ತಿಗೆಗೆ ಕಲ್ಲು ಬಿದ್ದಿದೆ. ಪರಿಸ್ಥಿತಿ ಬಿಗಾಡಾಯಿಸುತ್ತಿದ್ದಂತೆ ಪೊಲೀಸರು ಪರಿಸ್ಥಿತಿಯನ್ನ ನಿಯಂತ್ರಿಸಿದ್ದಾರೆ. ಕಲ್ಲು-ಚಪ್ಪಲಿ ತೂರಾಟದ ಬಳಿಕ ಕಿಡಿಗೇಡಿಗಳು ತಳ್ಳುವ ಬಂಡಿಗಳಿಗೆ ಬೆಂಕಿ ಹಚ್ಚಿದ್ದಾರೆ.

ಇದನ್ನೂ ಓದಿ: ನಿಮ್ಮನ್ನು ಯಾರು ಮೋಸಗೊಳಿಸಲು ಈ ದಿನ ಆಗಲ್ಲ -ನಿಮ್ಮ ರಾಶಿ ಭವಿಷ್ಯ

bagalakote galate (1)

ಹಳೆ ನಗರದ ತರಕಾರಿ ಮಾರುಕಟ್ಟೆಯಲ್ಲಿ ಎರಡು ತರಕಾರಿ ಗಾಡಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬೆಂಕಿ ನಂದಿಸಿದ್ದಾರೆ. ಕಿಲ್ಲಾ ಓಣಿಯಲ್ಲಿ ಕಲ್ಲು ತೂರಾಟದಿಂದಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಕಿಲ್ಲಾ ಗಲ್ಲಿ ಮತ್ತು ಪಂಕಾ ಮಸೀದಿ ಸುತ್ತಮುತ್ತಾ ಪೊಲೀಸ್ ಬಂದೋಬಸ್ತ್‌ ಮಾಡ್ಲಾಗಿದೆ. ಮುಂಜಾಗ್ರತೆ ದೃಷ್ಟಿಯಿಂದ ಫೆಬ್ರವರಿ 24ರವರೆಗೆ ಬಾಗಲಕೋಟೆ, ನವನಗರ, ವಿದ್ಯಾಗಿರಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಇದನ್ನೂ ಓದಿ: ಮಿಸ್ಟರ್ 360 ಸೂರ್ಯ ಈಗ ಮಿಸ್ಟರ್ ಕನ್ಸಿಸ್ಟೆಂಟ್.. ಪ್ಲೇಯರ್ಸ್ ಫ್ರೆಂಡ್ಲಿ ಕ್ಯಾಪ್ಟನ್..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Shivaji Jayanti procession Killa Oni Bagalkot
Advertisment
Advertisment
Advertisment