Advertisment

ವಿದ್ಯಾ, ಭದ್ರನಾ ಸಂಸಾರಕ್ಕೆ ಕುತಂತ್ರಿಗಳಿಂದ ಕಂಟಕ.. ಛೇ ಪಾಪ ಎಂದ ವೀಕ್ಷಕರು..!

ವಿದ್ಯಾ, ಭದ್ರನಾ ಸಂಸಾರಕ್ಕೆ ಕುತಂತ್ರಿಗಳಿಂದ ಕಂಟಕ ಶುರುವಾಗಿದೆ. ವಿದ್ಯಾ ಮತ್ತು ಭದ್ರನಾ ಸಂಸಾರ ಒಡೆಯುವ ಕುತಂತ್ರಿಗಳು ಪ್ರಯತ್ನ ಮಾಡ್ತಿದ್ದಾರೆ. ದೂರದಿಂದಳೇ ಗಂಡನ ಪೂಜೆ ಮಾಡೋ ವಿದ್ಯಾ ಬೆನ್ನ ಹಿಂದೆ ಹೊಸ ಸಂಚು ನಡೆಯುತ್ತಿದೆ.

author-image
Ganesh Kerekuli
muddu sose (2)
Advertisment

ವಿದ್ಯಾ, ಭದ್ರನಾ ಸಂಸಾರಕ್ಕೆ ಕುತಂತ್ರಿಗಳಿಂದ ಕಂಟಕ ಶುರುವಾಗಿದೆ. ವಿದ್ಯಾ ಮತ್ತು ಭದ್ರನಾ ಸಂಸಾರ ಒಡೆಯುವ ಕುತಂತ್ರಿಗಳು ಪ್ರಯತ್ನ ಮಾಡ್ತಿದ್ದಾರೆ. ದೂರದಿಂದಳೇ ಗಂಡನ ಪೂಜೆ ಮಾಡೋ ವಿದ್ಯಾ ಬೆನ್ನ ಹಿಂದೆ ಹೊಸ ಸಂಚು ನಡೆಯುತ್ತಿದೆ. ಸದ್ದಿಲ್ಲದೇ ಭದ್ರನಿಗೆ ಮತ್ತೊಂದು ಮದುವೆ ಮಾಡುವ ಪ್ಲಾನ್​ ಮಾಡಕಲಾಗ್ತಿದೆ. ಇದರಿಂದ ಮುದ್ದು ಸೊಸೆ ಬಚಾವ್ ಆಗ್ತಾಳಾ?

Advertisment

ಹೊಸ ಹೊಸ ತಿರುವು ಪಡೆದುಕೊಳ್ತಿರೋ ಮುದ್ದು ಸೊಸೆ ಧಾರಾವಾಹಿಯ ಪ್ರತಿ ಎಪಿಸೋಡ್‌ ವೀಕ್ಷರನ್ನ ಇಂಪ್ರೆಸ್‌‌ ಮಾಡ್ತಿದೆ. ಸದ್ಯ ಮುದ್ದು ಸೊಸೆ ಧಾರಾವಾಹಿ ರೋಚಕ ತಿರುವು ಪಡೆದುಕೊಂಡಿದ್ದು,  ಭದ್ರ ಮತ್ತು ವಿದ್ಯಾಳ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಮುದ್ದಾದ ಜೋಡಿಯ ಸಂಬಂಧವನ್ನು ಹಾಳು ಮಾಡಲು ವೈರಿಗಳು ಮಾಸ್ಟರ್ ಪ್ಲಾನ್ ಮಾಡಿದ್ದಾನೆ.

ಇದನ್ನೂ ಓದಿ: 8 ಲಕ್ಷ ಸಾಲ ತೀರಿಸಲು ಪಾರ್ಶ್ವವಾಯು ಪೀಡಿತ ಪತಿಯ ಮುಂದೆಯೇ ವೃದ್ಧೆಯ ಕತ್ತು ಸೀಳಿದ.. ಭಯಾನಕ ಕೃತ್ಯ..!

muddu sose (1)

ಮನೆ ಹೊರಗೆ ಕುತಂತ್ರಿಗಳು ಇದ್ರೆ ಹೇಗಾದ್ರೂ ಸರಿ ಮಾಡಬಹುದು. ಮನೆಯಲ್ಲೇ ನಂಬಿಕೆ ದ್ರೋಹಿಗಳು ಇದ್ರೆ ಹೇಗೆ ಹೇಳಿ. ಹೌದು.. ಭದ್ರನಾ ವಿರುದ್ಧ ಮನೆಯಲ್ಲಿರುವ ವೈರಿಗಳು ಮಸಲತ್ತು ಮಾಡಿದ್ದಾರೆ. ವಿನಂತಿಗೆ ಭದ್ರ ಅಂದ್ರೆ ಇಷ್ಟ. ಆತನನ್ನ ಪಡೆದುಕೊಳ್ಳಬೇಕು ಎಂಬ ಆಸೆ. ಹೀಗಾಗಿ ಭದ್ರನಿಗೆ ಮತ್ತುಬರುವ ಔಷಧಿ ಕೊಟ್ಟು, ಭದ್ರ ನನ್ನ ಬಾಳನ್ನ ಹಾಳು ಮಾಡ್ದಾ ಅಂತ ನಾಟಕವಾಡಿದ್ದಾಳೆ. 

Advertisment

ಭದ್ರ ಕೂಡ ಕುತಂತ್ರಿಗಳು ಹೆಣೆದ ಜಾಲದಲ್ಲಿ  ಸಿಲುಕಿಕೊಳ್ತಾನೆ. ಮನೆಮಂದಿ ಕೂಡ ಭದ್ರನನ್ನ ನಂಬುದಿಲ್ಲ. ತಾನು ಮಾಡದ ತಪ್ಪಿಗೆ ಭದ್ರ ಶಿಕ್ಷೆ ಅನುಭವಿಸುವಂತಾಗಿದೆ.  ಈ ನಡುವೆ ವಿನಂತಿಯ ತಾಯಿ, ಭದ್ರ ತನ್ನ ತಪ್ಪನ್ನು ಒಪ್ಪಿಕೊಂಡು ನನ್ನ ಮಗಳ ಕೊರಳಿಗೆ ತಾಳಿ ಕಟ್ಟಬೇಕು ಅಂತಾ ಹೇಳ್ತಾಳೆ. ಸಾಲದ್ದಕ್ಕೆ ವಿನಂತಿ ಕೂಡ ನನ್ನನ್ನ ಮದುವೆ ಮಂಟಪಕ್ಕೆ ಕಳಿಸ್ತೀರಾ ಅಥವಾ ಮಸಣಕ್ಕೆ ಕಳಿಸ್ತಿರೋ ನೀವೆ ಯೋಚನೆ ಮಾಡಿ ಅಂತಾ ಸೂಸೈಡ್​ ಮಾಡಿಕೊಳ್ಳುವ ನಾಟಕವಾಡಿದ್ದಾಳೆ.

laksminivasa kannada serial (3)

ಇದ್ಯಾವುದು ವಿದ್ಯಾಳಿಗೆ ಗೊತ್ತಿಲ್ಲ. ಭದ್ರ ಹಾಗೂ ಮನೆಮಂದಿ ಈ ವಿಷಯವನ್ನ ವಿದ್ಯಾಳಿಂದ ಮುಚ್ಚಿಟ್ಟಿದ್ದಾರೆ. ಆದ್ರೆ ಮನೆ ಮಂದಿಯ ಮುಖದಲ್ಲಿ ನಗುವಿಲ್ಲ.. ಜೊತೆಗೆ ಭದ್ರ ಕೂಡ ಬೇಜಾರಲಿದ್ದಾರೆ. ಮನೆ ಮಂದಿ ಯಾವುದೋ ಆತಂಕದಲ್ಲಿದ್ದಾರೆ ಎಂಬ ಅನುಮಾನ ವಿದ್ಯಾಳಿಗೆ ಶುರುವಾಗಿದೆ... ವಿದ್ಯಾಳಿಗೆ ಭದ್ರನ ಮೇಲೆ ಅಪಾರವಾದ ನಂಬಿಕೆ ಏನೋ ಇದೆ.. ಆದ್ರೆ ಭದ್ರನ ವಿರುದ್ಧ ಕುತಂತ್ರಿಗಳು ಮಾಡಿರುವ ಸಂಚಿನಿಂದ ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ. 

ಮುಂದೆ ಭದ್ರನ ಬೇಜಾರಿಗೆ ಕಾರಣ ಗೊತ್ತಾದ್ರೆ ವಿದ್ಯಾ ತಡ್ಕೋತಾಳಾ? ಭದ್ರ ಈ ಸಂಕಷ್ಟದಿಂದ ಹೇಗೆ ಹೊರಬರ್ತಾನೆ? ಅಥವಾ ಒತ್ತಡಕ್ಕೆ ಸಿಲುಕಿ ವಿನಂತಿಯನ್ನ ಮದುವೆಯಾಗ್ತಾನಾ? ಎಂಬ ಪ್ರಶ್ನೆಗಳೇ ಮುಂದಿನ ಎಪಿಸೋಡ್‌ಗಳ ಜೀವಾಳವಾಗಿದೆ.

Advertisment

ಇದನ್ನೂ ಓದಿ:ಶ್ರೀಕಾಂತ್ ಸತ್ತಿಲ್ಲ.. ರವಿಶಂಕರ್​​ನ ಕಳ್ಳಾಟ ಬಯಲು ಮಾಡಿ ಮರಳಿ ಬಂದ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Muddu Sose Kannada Serial
Advertisment
Advertisment
Advertisment