ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೂ ಕಂಡಕ್ಟರ್ಗೂ ಜಗಳ
ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ಕಂಡಕ್ಟರ್ಗೆ ಕಪಾಳ ಮೋಕ್ಷ ಮಾಡಿದ ಮಹಿಳೆ
ಬಸ್ನಲ್ಲಿ ಮಹಿಳೆಗೆ ಮನಬಂದಂತೆ ಥಳಿಸಿದ ಕಂಡಕ್ಟರ್ ರೌದ್ರಾವತಾರ
ಬೆಂಗಳೂರು: ಸಿಲಿಕಾನ್ ಸಿಟಿಯ ಬಿಎಂಟಿಸಿ ಬಸ್ ಸುದ್ದಿಯಾಗೋದು ಸಾಮಾನ್ಯ ವಿಷ್ಯ. ಅಪಘಾತದ ವಿಚಾರಕ್ಕೆ ಸುದ್ದಿಯಾಗುತ್ತಿದ್ದ ಬಿಎಂಟಿಸಿ ಬಸ್ನಲ್ಲೀಗ ಭಾರೀ ಹೊಡೆದಾಟ ನಡೆದಿದೆ. ಬಸ್ ಒಳಗೆ ನಡೆದಿರೋ ಕಂಡಕ್ಟರ್ ಹಾಗೂ ಮಹಿಳಾ ಪ್ರಯಾಣಿಕರು ಮಾರಾಮಾರಿ ನಡೆಸಿರುವ ದೃಶ್ಯ ಬೆಚ್ಚಿ ಬೀಳಿಸುವಂತಿದೆ.
ಇದನ್ನೂ ಓದಿ: ತುಮಕೂರು ಕುಚ್ಚಂಗಿಯಲ್ಲಿ 3 ಮೃತದೇಹ ಸಿಕ್ಕ ಕೇಸ್; 8 ಆರೋಪಿಗಳನ್ನು ಬಂಧಿಸಿದ ಪೊಲೀಸರು
ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೂ ಕಂಡಕ್ಟರ್ಗೂ ಜಗಳ ಆಗಿದೆ. ಮಹಿಳೆಯಿಂದ ಕಂಡಕ್ಟರ್ಗೆ ಕಪಾಳ ಮೋಕ್ಷ ಮಾಡಲಾಗಿದ್ದು, ಸಿಟ್ಟಿಗೆದ್ದ ಕಂಡಕ್ಟರ್ ಮಹಿಳೆ ಮೇಲೆ ಹಿಗ್ಗಾಮುಗ್ಗ ಬಾರಿಸಿದ್ದಾನೆ. ಬಸ್ನಲ್ಲಿ ಮಹಿಳೆಗೆ ಮನಬಂದಂತೆ ಕಂಡಕ್ಟರ್ ಥಳಿಸಿದ್ದು, ಈ ಭಯಾನಕ ದೃಶ್ಯವನ್ನ ಇತರೆ ಪ್ರಯಾಣಿಕರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಬೆಂಗಳೂರು | ಮಹಿಳೆಯ ಮೇಲೆ ಹಿಗ್ಗಾಮುಗ್ಗಾ ಹಲ್ಲೆಗೈದ @BMTC_BENGALURU ಕಂಡಕ್ಟರ್; ವಿಡಿಯೋ ವೈರಲ್
ಬಸ್ನಲ್ಲಿಯೇ ಹಲ್ಲೆ ಮಾಡಿ ಅಟ್ಟಹಾಸ. ಟಿಕೆಟ್ ವಿಚಾರವಾಗಿ ಹಲ್ಲೆ: ಇಂದು ಬೆಳಗ್ಗೆ 10 ಗಂಟೆಗೆ ನಡೆದ ಕೃತ್ಯ. ಗಟನೆಯ ದ್ರುಶ್ಯ ಮೊಬೈಲ್ನಲ್ಲಿ ಸೆರೆ.
ಸಿದ್ದಾಪುರ ಪೊಲೀಸ್ ಟಾಣೆಯಲ್ಲಿ FIR pic.twitter.com/FFRpiBLtiP
— ದಡಿಗ ಗಂಗವಾಡಿ | Ganga Dynasty (@dadigagangawadi) March 26, 2024
ತನ್ಜಿಲಾ ಇಸ್ಮಾಯಿಲ್ ಎಂಬಾಕೆಗೆ ಕಂಡಕ್ಟರ್ ಹೊನ್ನಪ್ಪ ಎಂಬುವವರು ಹಲ್ಲೆ ಮಾಡಿದ್ದಾರೆ. ಯುವತಿ ಬಿಳೇಕಳ್ಳಿಯಿಂದ ಶಿವಾಜಿನಗರಕ್ಕೆ ಹೊರಟಿದ್ದರು. ಬಿಳೇಕಳ್ಳಿ ಬಳಿ ಟಿಕೆಟ್ ಕೇಳಿದ್ದ ಯುವತಿಗೆ ಕಂಡಕ್ಟರ್ ಕೊಟ್ಟಿರಲಿಲ್ಲ. ಮತ್ತೆ ಡೈರಿ ಸರ್ಕಲ್ ಬಳಿ ಟಿಕೆಟ್ ಕೇಳಿದ್ದ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಟಿಕೆಟ್ ಕೊಡ್ತಿನಿ ಇರಿ ಎಂದಿದ್ದಕ್ಕೆ ಕಂಡಕ್ಟರ್ ಹಾಗೂ ಮಹಿಳೆ ಮಧ್ಯೆ ಮಾತಿಗೆ ಮಾತು ಬೆಳೆದು ಹಲ್ಲೆ ಮಾಡಲಾಗಿದೆ. ಕಂಡಕ್ಟರ್ ಹೊನ್ನಪ್ಪ ಅವರನ್ನು ಕರ್ತವ್ಯದಲ್ಲಿದ್ದ ವೇಳೆಯೇ ಪೊಲೀಸರು ವಶಕ್ಕೆ ಪಡೆದು ಪೊಲೀಸ್ ಠಾಣೆ ಕರೆತಂದಿದ್ದಾರೆ.
ನಗರದ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆಿದಿದೆ. ದೃಶ್ಯದಲ್ಲಿ ಮೊದಲು ಮಹಿಳೆಯೇ ಕಂಡಕ್ಟರ್ಗೆ ಕಪಾಳ ಮೋಕ್ಷ ಮಾಡಿದ್ದು, ಸಿಟ್ಟಿಗೆದ್ದ ಕಂಡಕ್ಟರ್ ಪ್ರತಿದಾಳಿ ಮಾಡಿದ್ದಾನೆ. ಪೊಲೀಸರಿಂದ ತನಿಖೆ ಮುಂದುವರಿದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ