/newsfirstlive-kannada/media/post_attachments/wp-content/uploads/2024/09/SIDDARAMAIAH-2.jpg)
ಅಂತು ಇಂತು ಮುಡಾ ಕೇಸ್​ಗೆ ಅಂತಿಮ ಅನ್ನೋ ಅಂತ್ಯಕ್ಕೆ ಬಂದು ತಲುಪಿದೆ. ಸಿಎಂ ಸಿದ್ದರಾಮಯ್ಯ ಮಾಡಿದ್ರಾ, ಇಲ್ವಾ, ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಕೊಟ್ಟಿದ್ದು, ಸರಿನಾ? ತಪ್ಪಾ? ಯಾರ ವಾದಕ್ಕೆ ಹೈಕೋರ್ಟ್​ ಮನ್ನಣೆ ನೀಡಲಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಇವತ್ತು ಹೈಕೋರ್ಟ್​​​ ತೀರ್ಪು ನೀಡಲಿದೆ.
ಇಡೀ ರಾಜ್ಯವೇ ಅಲರ್ಟ್​​ ಸ್ಥಿತಿಯಲ್ಲಿದೆ. ಕಾರಣ ಸಿಎಂ ಸಿದ್ದರಾಮಯ್ಯ ಭವಿಷ್ಯ. ಇಡೀ ರಾಷ್ಟ್ರ ರಾಜಕೀಯದ ಚಿತ್ತವೇ ಸಿಎಂ ಸಿದ್ದರಾಮಯ್ಯ ಭವಿಷ್ಯ ಏನಾಗಲಿದೆ ಅನ್ನೋದನ್ನ ಕಾದು ನೋಡ್ತಿದೆ. ಮುಡಾ ಕೇಸ್​​ ಯಾರನ್ನ ಮೂಡೌಟ್​ ಮಾಡ್ಲಿದೆ ಅನ್ನೋ ಸಸ್ಪೆನ್ಸ್​ ಥ್ರಿಲ್ಲರ್​ ರಿವೀಲ್​ ಆಗ್ಲಿದೆ. ರಾಜಭವನ ತೀರ್ಮಾನ ಸರಿನಾ? ಸಿಎಂ ವಾದ ಸರಿನಾ? ಈ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.
ಇದನ್ನೂ ಓದಿ:ಬಿಗ್‌ಬಾಸ್ ಫ್ಯಾನ್ಸ್ ಗುಡ್‌ನ್ಯೂಸ್.. ಹೊಸ ಅಧ್ಯಾಯದ ಬಿಗ್ ಸೀಕ್ರೆಟ್‌ಗೆ ಮುಹೂರ್ತ ಫಿಕ್ಸ್; ಯಾವಾಗ?
ಇಂದು ಸಿಎಂ ಸಿದ್ದು ಪ್ರಾಸಿಕ್ಯೂಷನ್ ಭವಿಷ್ಯ ನಿರ್ಧಾರ
ಮುಡಾ.. ಮೈಸೂರು ಅರ್ಬನ್​​​ ಡೆವಲಪ್​​ಮೆಂಟ್​​​ ಅಥಾರಿಟಿ ಕಳೆದ 2 ತಿಂಗಳಿಂದ ನಡೆಯುತ್ತಿದ್ದ ಸಮರ, ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಇಂದು ಪ್ರಾಸಿಕ್ಯೂಷನ್​ ಭವಿಷ್ಯ ನಿರ್ಧಾರ ಆಗಲಿದ್ದು, ಸಿಎಂ ಸಿದ್ದರಾಮಯ್ಯ ಎದೆಯಲ್ಲಿ ನಡುಕು ಶುರುವಾಗಿದೆ.
ಇಂದು ಸಿದ್ದು ಭವಿಷ್ಯ!
- ಮುಡಾ ಹಗರಣ ಸಂಬಂಧ ಪ್ರಾಸಿಕ್ಯೂಷನ್​ಗೆ ಅನುಮತಿ
- ರಾಜ್ಯಪಾಲರ ಈ ಆದೇಶ ಪ್ರಶ್ನಿಸಿದ್ದ ಸಿಎಂ ಸಿದ್ದರಾಮಯ್ಯ
- ಇದೇ ಅರ್ಜಿಯ ತೀರ್ಪು ಇಂದು ಪ್ರಕಟಿಸಲಿದೆ ಹೈಕೋರ್ಟ್
- ನ್ಯಾ. ನಾಗಪ್ರಸನ್ನ ಅವರ ಏಕಸದಸ್ಯ ಪೀಠದಿಂದ ಆದೇಶ
- ಇಂದು ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿರುವ ತೀರ್ಪು
- ಕೇಸ್​​ ಸಂಬಂಧ ಕೋರ್ಟ್​ನಲ್ಲಿ ಸುದೀರ್ಘ ವಾದ-ಪ್ರತಿವಾದ
- ವಾದ ಆಲಿಸಿ ತೀರ್ಪಿ ಕಾಯ್ದಿರಿಸಿದ್ದ ನ್ಯಾ. ನಾಗಪ್ರಸನ್ನ ಪೀಠ
ಮುಂದುವರಿದ ಸರ್ಕಾರ ಮತ್ತು ಗವರ್ನರ್ ನಡುವಿನ ಸಮರ
ಅತ್ತ ಮುಡಾ ತೀರ್ಪು ಇಂದು ಪ್ರಕಟಗೊಳ್ತಿದ್ರೆ, ಇತ್ತ ಗವರ್ನಮೆಂಟ್​​ ವರ್ಸಸ್​​ ಗವರ್ನರ್​​ ನಡುವಿನ ಸಮರಕ್ಕೆ ಬ್ರೇಕ್​​​ ಬಿದ್ದಿಲ್ಲ. ಕೆಂಪಣ್ಣ ಆಯೋಗದ ವರದಿ ನೀಡಲು ಸರ್ಕಾರಕ್ಕೆ ಪತ್ರ ಬರೆದ ರಾಜ್ಯಪಾಲರಿಗೆ ಸಿಎಂ ತಿರುಗೇಟು ನೀಡಿದ್ದಾರೆ. ಒಂದ್ಕಡೆ ಸಿಎಂ ಪ್ರಹಾರ ನಡೆಸ್ತಿದ್ರೆ, ಸಚಿವರು ಸಹ ಸಾಥ್​​​ ನೀಡ್ತಿದ್ದಾರೆ. ಗೃಹ ಸಚಿವ ಪರಮೇಶ್ವರ್​​, ಎಲ್ಲಾ ಮಾಹಿತಿ ಕೊಡೋಕೆ ಸಾಧ್ಯವಿಲ್ಲ ಎಂದ್ರೆ, ಎಂ.ಬಿ ಪಾಟೀಲ್​​, ರಾಜ್ಯದಲ್ಲಿ ಪೊಲೀಸ್ ಠಾಣೆಗಳು, ತನಿಖಾ ಏಜೆನ್ಸಿಗಳೂ ಬೇಡ. ಎಲ್ಲವನ್ನೂ ರಾಜ್ಯಪಾಲರೇ ಮಾಡ್ಲಿ ಅಂತ ಛೇಡಿಸಿದ್ದಾರೆ.
‘ಎಲ್ಲಾ ಮಾಹಿತಿ ಕೊಡಬೇಕಿಲ್ಲ’
ಯಾವುದನ್ನು ಉತ್ತರ ಕೊಡಬೇಕು ಅದಕ್ಕೆ ಖಂಡಿತ ಉತ್ತರ ಕೊಡುತ್ತೇವೆ. ಅನಿವಾರ್ಯತೆ ಇಲ್ಲದಿದ್ದರೇ ಉತ್ತರ ಕೊಡಲ್ಲ. ಎಲ್ಲವನ್ನು ಕೊಡಬೇಕು ಅಂತ ಏನು ಇಲ್ಲ.
ಪರಮೇಶ್ವರ್, ಗೃಹ ಸಚಿವ
ಇದನ್ನೂ ಓದಿ: ಅಯ್ಯೋ ಕಂದಮ್ಮ.. ಒಂದು ವರ್ಷದ ಮಗು ದುರಂತ ಸಾವು; ಅಪ್ಪ-ಅಮ್ಮನ ಸ್ಥಿತಿ ಚಿಂತಾಜನಕ!
‘ಪೊಲೀಸರು ಬೇಡ, ಎಲ್ಲಾ ರಾಜ್ಯಪಾಲರೆ’
ಕರ್ನಾಟಕದಲ್ಲಿ ಪೊಲೀಸ್ ಠಾಣೆಗಳು ಬೇಕಾಗಿಲ್ಲ. ಎಲ್ಲರೂ ನೇರ ಹೋಗಿ ರಾಜ್ಯಪಾಲರಿಗೆ ಅರ್ಜಿ ಕೊಟ್ಟರೆ ಸಾಕು. ಲೋಕಯುಕ್ತ ಸೇರಿ ಬೇರೆ ಯಾವುದೇ ಏಜೆನ್ಸಿ ಬೇಕಾಗಿಲ್ಲ. ರಾಜ್ಯಪಾಲರು ಒಬ್ಬರೇ ಇದ್ದರೇ ಸಾಕು. ರಾಜ್ಯಪಾಲರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರ ಗಂಭೀರವಾಗಿ ಚಿಂತನೆ ಮಾಡುತ್ತೇವೆ.
ಎಂ.ಬಿ.ಪಾಟೀಲ್, ಕೈಗಾರಿಕಾ ಸಚಿವ
ಇಂದು ಸಿದ್ದು ಭವಿಷ್ಯ ಪ್ರಕಟ ಆಗ್ಲಿದ್ದು, ಮಧ್ಯಾಹ್ನ 12 ಗಂಟೆಗೆ ಹೈಕೋರ್ಟ್​ ನೀಡುವ ತೀರ್ಪಿನತ್ತ ಎಲ್ಲರ ದೃಷ್ಟಿ ನೆಟ್ಟಿದೆ. ತೀರ್ಪು ವ್ಯತಿರಿಕ್ತ ಬಂದಲ್ಲಿ 2 ಪಾರ್ಟಿಗಳ ನಿರ್ಧಾರ ಏನಾಗಿರಲಿದೆ ಅನ್ನೋದು ಕುತೂಹಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ