Advertisment

ದರ್ಶನ್ ಕೇಸ್​​ನಲ್ಲಿ ಯಾರ ಮಾತಿಗೂ CM ಡೋಂಟ್‌ಕೇರ್.. ಸಿದ್ದರಾಮಯ್ಯರ ದೃಢ ನಿರ್ಧಾರಕ್ಕೆ ಇದೆ 5 ಕಾರಣ..!

author-image
Ganesh
Updated On
ದರ್ಶನ್ ಕೇಸ್​​ನಲ್ಲಿ ಯಾರ ಮಾತಿಗೂ CM ಡೋಂಟ್‌ಕೇರ್.. ಸಿದ್ದರಾಮಯ್ಯರ ದೃಢ ನಿರ್ಧಾರಕ್ಕೆ ಇದೆ 5 ಕಾರಣ..!
Advertisment
  • ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್‌ಗೆ ತಪ್ಪದ ಸಂಕಷ್ಟ
  • ದರ್ಶನ್ ಕೇಸ್​ನಲ್ಲಿ ಸಿಎಂ, ಡಿಸಿಎಂ ಹಾಗೂ ಗೃಹಸಚಿವರು ತಟಸ್ಥ
  • ದರ್ಶನ್ ಪರ ಯಾರೇ ಬ್ಯಾಟಿಂಗ್ ಮಾಡಿದ್ರೂ ಕ್ಯಾರೆ ಎನ್ನದ ಸಿಎಂ

ಬೆಂಗಳೂರು: ನಟ ದರ್ಶನ್ ಕೇಸ್​ನಲ್ಲಿ ಸಿಎಂ, ಡಿಸಿಎಂ ಹಾಗೂ ಗೃಹಸಚಿವರು ತಟಸ್ಥರಾಗಿದ್ದಾರೆ. ದರ್ಶನ್ ಪರ ಯಾರೇ ಬ್ಯಾಟಿಂಗ್ ಮಾಡಿದ್ರೂ ಸಿಎಂ ಸಿದ್ದರಾಮಯ್ಯ ಕ್ಯಾರೆ ಇನ್ನುತ್ತಿಲ್ಲ. ಸರ್ಕಾರದ ಈ ನಿರ್ಧಾರದಿಂದಾಗಿ ನಟ ದರ್ಶನ್​ಗೆ ಸಂಕಷ್ಟ ತಪ್ಪಲ್ಲ ಎನ್ನಲಾಗುತ್ತಿದೆ.

Advertisment

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಇಂಚಿಂಚೂ ಮಾಹಿತಿಯನ್ನು ತರಿಸಿಕೊಂಡಿದ್ದಾರೆ. ಹಲ್ಲೆಯ ಸಿಟಿಟಿವಿ ಫೂಟೇಜ್‌ ನೋಡಿಯೇ ಖಡಕ್ ಆದೇಶ ನೀಡಿದ್ದಾರೆ. ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ ಮಾಡಿರೋ ದೃಶ್ಯ ಲಭ್ಯವಾಗಿದೆ. ಕಂಪ್ಲೀಟ್ ಸಿಸಿಟಿವಿ ಫುಟೇಜ್ ಪೊಲೀಸರು, ಸರ್ಕಾರಕ್ಕೆ ಸಿಕ್ಕಿದೆ. ವಿಡಿಯೋವನ್ನ ಸಿಎಂ, ಡಿಸಿಎಂ ಹಾಗೂ ಗೃಹಸಚಿವರು ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ನಂತ್ರ ಪ್ರಕರಣದ ತೀವ್ರತೆಯನ್ನು ಸಿದ್ದರಾಮಯ್ಯ ಅರಿತುಕೊಂಡಿದ್ದಾರೆ.

ಇದನ್ನೂ ಓದಿ:ಟೀಂ ಇಂಡಿಯಾ ಕಟ್ಟಿಹಾಕಲು ರಶೀದ್ ಖಾನ್ ಪ್ಲಾನ್.. ಭಯಂಕರ ಅಸ್ತ್ರ ಪ್ರಯೋಗಿಸ್ತೀವಿ ಎಂದ ಅಫ್ಘಾನ್

publive-image

ಇದೇ ಕಾರಣಕ್ಕೆ ದರ್ಶನ್ ಬಚಾವ್‌ಗೆ ಯಾವುದೇ ನಾಯಕರು ಹೇಳಿದ್ರೂ ಒಪ್ಪಲಿಲ್ಲ. ಕೊಲೆಯಾದ ರೇಣುಕಾಸ್ವಾಮಿ ವೀರಶೈವ-ಲಿಂಗಾಯತ ಸಮುದಾಯದವ. ಮೃತನ ಮನೆಗೆ ಸ್ವಾಮೀಜಿಗಳು ಹಾಗೂ ಬಿಜೆಪಿ ನಾಯಕರು ಕೂಡ ಭೇಟಿ ನೀಡಿದ್ದಾರೆ. ಒಂದು ವೇಳೆ ದರ್ಶನ್ ಬೆನ್ನಿಗೆ ನಿಂತ್ರೆ ಸಮುದಾಯದ ವಿರೋಧಿ ಸರ್ಕಾರ ಎಂಬ ಪಟ್ಟ ಬರಲಿದೆ.

Advertisment

ಇದನ್ನೂ ಓದಿ:ಉಮಾಪತಿ ಹೇಳಿಕೆಯಿಂದ ದರ್ಶನ್​​ಗೆ ಮತ್ತೊಂದು ಸಂಕಷ್ಟ.. ಗೃಹ ಇಲಾಖೆಯಿಂದ ಶಾಕಿಂಗ್ ನಿರ್ಧಾರ..?

publive-image

ಕೇಸ್‌ನಲ್ಲಿ ಸಾಕ್ಷ್ಯಗಳು, ಆಧಾರಗಳು ಎಲ್ಲಾ ದರ್ಶನ್‌ಗೆ ವಿರುದ್ಧವಾಗಿದೆ. ಹೀಗಾಗಿ ಅವರಿಗೆ ಕಾನೂನು ಪ್ರಕಾರ ಏನು ಕ್ರಮ ಆಗಬೇಕೋ ಆಗಲಿ. ಕೇಸ್‌ನಲ್ಲಿ ದರ್ಶನ್ ಪರ ಮಾತನಾಡದಂತೆ ಕಾಂಗ್ರೆಸ್​ ನಾಯಕರಿಗೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಕಾರಣ

  1. ವಿಡಿಯೋ ನೋಡಿದ ನಂತ್ರ ಪ್ರಕರಣದ ತೀವ್ರತೆಯನ್ನು ಅರಿತ ಸಿದ್ದರಾಮಯ್ಯ
  2. ಕೊಲೆಯಾದ ರೇಣುಕಾಸ್ವಾಮಿ ವೀರಶೈವ-ಲಿಂಗಾಯತ ಸಮುದಾಯದವ
  3. ಮೃತನ ಮನೆಗೆ ಸ್ವಾಮೀಜಿಗಳು ಹಾಗೂ ಬಿಜೆಪಿ ನಾಯಕರು ಕೂಡ ಭೇಟಿ
  4. ದರ್ಶನ್ ಬೆನ್ನಿಗೆ ನಿಂತ್ರೆ ಸಮುದಾಯದ ವಿರೋಧಿ ಸರ್ಕಾರ ಎಂಬ ಪಟ್ಟ
  5. ಕೇಸ್‌ನಲ್ಲಿ ಸಾಕ್ಷ್ಯಗಳು, ಆಧಾರಗಳು ಎಲ್ಲಾ ದರ್ಶನ್‌ಗೆ ವಿರುದ್ಧವಾಗಿದೆ
Advertisment

ಇದನ್ನೂ ಓದಿ:ಚಂದನ್ ಶೆಟ್ಟಿ-ನಿವೇದಿತಾ ಗೌಡ ಕುರಿತ ಮತ್ತೊಂದು ಅಪ್​ಡೇಟ್ಸ್.. ಮತ್ತೆ ಪ್ರೂವ್ ಮಾಡಿದ ಜೋಡಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment