newsfirstkannada.com

×

ಬಿಲ್ಲು ಬಾಣ ಹಿಡಿದು ಅರವಿಂದ ಲಿಂಬಾವಳಿಗೆ ಗುರಿಯಿಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ -Photo

Share :

Published January 22, 2024 at 3:19pm

Update January 22, 2024 at 3:20pm

    ಅಯೋಧ್ಯೆಯ ಬೆನ್ನಲ್ಲೇ ಸೀತಾರಾಮ ದೇವಾಲಯ ಉದ್ಘಾಟಿಸಿದ ಸಿಎಂ

    ಮಹಾದೇವಪುರ ಕ್ಷೇತ್ರದ ಹಿರಂಡಹಳ್ಳಿಯಲ್ಲಿ ನಿರ್ಮಿಸಿರುವ ದೇಗುಲ

    ಹಿರಂಡಹಳ್ಳಿ ಶ್ರೀರಾಮ ಟೆಂಪಲ್ ಟ್ರಸ್ಟ್ ನಿರ್ಮಿಸಿದ್ದ ದೇವಾಲಯ

ಬೆಂಗಳೂರು: ಅಯೋಧ್ಯೆಯ ಪ್ರಾಣ ಪ್ರತಿಷ್ಠಾಪನೆ ಬೆನ್ನಲ್ಲೇ ಮಹಾದೇವಪುರ ಕ್ಷೇತ್ರದ ಹಿರಂಡಹಳ್ಳಿಯಲ್ಲಿ ಸೀತಾರಾಮ‌ ಲಕ್ಷ್ಮಣ ದೇವಾಲಯ ಲೋಕಾರ್ಪಣೆಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಿದ್ದಾರೆ.

ದೇವಾಲಯ ಉದ್ಘಾಟನೆ ಮಾಡಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ.. ಬಿದರಹಳ್ಳಿ ಹೋಬಳಿಯ, ಹಿರಂಡಹಳ್ಳಿ ಶ್ರೀರಾಮ ಟೆಂಪಲ್ ಟ್ರಸ್ಟ್ ನಿರ್ಮಿಸಿದ್ದ ಸಕುಟುಂಬ ಸಮೇತನಾಗಿರುವ ಸೀತಾರಾಮ ಲಕ್ಷ್ಮಣ ದೇವಾಲಯ ಹಾಗೂ 33 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹದ ಶಿಲಾ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಳಿಕ ಮಹಾ ಕುಂಭಾಭಿಷೇಕದಲ್ಲಿ ಭಾಗವಹಿಸಿದೆ. ಸಚಿವರಾದ ಬೈರತಿ ಸುರೇಶ್, ಈಶ್ವರ್ ಖಂಡ್ರೆ, ಆಯೋಗದ ಉಪಾಧ್ಯಕ್ಷರಾದ ರಾಜು ಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ ಗೋವಿಂದ ರಾಜು, ಶಾಸಕರಾದ ಅರವಿಂದ್ ಲಿಂಬಾವಳಿ, ಮಾಜಿ ಸಚಿವರಾದ ಹೆಚ್​ಎಂ ರೇವಣ್ಣ ಉಪಸ್ಥಿತರಿದ್ದರು ಎಂದರು.

ಇದನ್ನೂ ಓದಿ: ಅಯೋಧ್ಯೆಯ ಬೆನ್ನಲ್ಲೇ ಸೀತಾರಾಮ ದೇವಾಲಯ ಲೋಕಾರ್ಪಣೆ ಮಾಡಿದ ಸಿಎಂ ಸಿದ್ದರಾಮಯ್ಯ; ಎಲ್ಲಿ ಗೊತ್ತಾ?

ಲಿಂಬಾವಳಿಯತ್ತ ಗುರಿಯಿಟ್ಟ ಸಿದ್ದರಾಮಯ್ಯ
ದೇವಾಲಯ ಉದ್ಘಾಟನೆ ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಈ ವೇಳೆ ಸಿದ್ದರಾಮಯ್ಯಗೆ ವೇದಿಕೆ ಮೇಲೆ ಬಿಲ್ಲು ಬಾಣಗಳನ್ನು ನೀಡಲಾಯಿತು. ಬಿಲ್ಲು, ಬಾಣ ಎತ್ತಿದ್ದ ಸಿದ್ದರಾಮಯ್ಯ, ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿಯತ್ತ ಗುರಿಯಿಟ್ಟರು. ಅದನ್ನು ನೋಡಿದ ಗಣ್ಯರು ನಗೆಗಡಲಲ್ಲಿ ತೇಲಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಲ್ಲು ಬಾಣ ಹಿಡಿದು ಅರವಿಂದ ಲಿಂಬಾವಳಿಗೆ ಗುರಿಯಿಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ -Photo

https://newsfirstlive.com/wp-content/uploads/2024/01/SIDDU-31.jpg

Load More