newsfirstkannada.com

×

ಮುಡಾ ಹಗರಣದಲ್ಲಿ ರಾಜ್ಯಪಾಲರಿಂದ ಸಿಎಂಗೆ ನೋಟಿಸ್; ಇಬ್ಬರಿಗೂ ಇರೋ ಕಾನೂನು ಅವಕಾಶಗಳೇನು?

Share :

Published August 2, 2024 at 12:53pm

Update August 2, 2024 at 12:57pm

    ಮುಡಾದಲ್ಲಿ ಸಿಎಂ ಪತ್ನಿ ಅಕ್ರಮವಾಗಿ ಸೈಟ್ ಪಡೆದ ಗಂಭೀರ ಆರೋಪ

    ಗವರ್ನರ್​ & ಸಿಎಂ ಸಿದ್ದರಾಮಯ್ಯ ನಡುವೆ ಶುರು ಕಾನೂನು ಸಮರ

    ಸಿಎಂ, ರಾಜ್ಯಪಾಲರ ಕಾನೂನು ಸಮರದ ಬಗ್ಗೆ ಇಂಚಿಂಚೂ ಮಾಹಿತಿ ಇಲ್ಲಿದೆ

ಬೆಂಗಳೂರು: ಮುಡಾದಲ್ಲಿ ಅಕ್ರಮವಾಗಿ ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯನವರು ಸೈಟ್ ಪಡೆದ ಆರೋಪದಲ್ಲಿ ಈಗ ರಾಜ್ಯದಲ್ಲಿ ರಾಜ್ಯಪಾಲರ ಹಾಗೂ ಸಿಎಂ ನಡುವೆ ಕಾನೂನು ಸಮರ ಜೋರಾಗಿದೆ. ಈ ಕಾನೂನು ಸಮರದಲ್ಲಿ ಮುಂದೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಸದ್ಯ ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಾಸಿಕ್ಯೂಷನ್ ಅನುಮತಿ ನೀಡುವ ಬಗ್ಗೆ ಸಿಎಂಗೆ ಗವರ್ನರ್ ಥಾವರ್ ಚಂದ್ ಗೆಹ್ಲೋಟ್​ ನೋಟಿಸ್​ ನೀಡಿದ್ದಾರೆ. ಗವರ್ನರ್ ನೋಟಿಸ್​ಗೆ ಉತ್ತರ ನೀಡಲು ಸದ್ಯ ಸಿಎಂ ಸಿದ್ದರಾಮಯ್ಯ ಲೀಗಲ್ ಟೀಮ್ ಸಜ್ಜಾಗಿದೆ. ಹಾಗಿದ್ರೆ ಈ ಸಮರದ ಹಾದಿ ಹೇಗೆಲ್ಲಾ ಸಾಗಲಿದೆ ಅನ್ನೋದೇ ಈಗ ಕುತೂಹಲ ಕೆರಳಿಸಿದೆ.

ಮುಡಾ ಪ್ರಕರಣದಲ್ಲಿ ರಾಜ್ಯಪಾಲ ವರ್ಸಸ್ ಸಿಎಂ ಸಮರಕ್ಕೆ ಈಗಾಗಲೇ ಒಂದು ನೋಟಿಸ್ ನಾಂದಿ ಹಾಡಿದೆ. ಆದ್ರೆ ಸಿಎಂ ಸಿದ್ದರಾಮಯ್ಯಗೆ ಗವರ್ನರ್ ನೋಟಿಸ್ ನೀಡಿರುವುದು ಔಪಚಾರಿಕ. ಪಿಸಿ ಆ್ಯಕ್ಟ್ ಸೆ. 19ರ ಅಡಿಯಲ್ಲಿ ಪ್ರಾಸಿಕ್ಯೂಷನ್ ಕಡ್ಡಾಯ, ಆದ್ರೆ ಅದಕ್ಕೆ ಅರೋಪಿಗೆ ನೋಟಿಸ್ ಕೊಡುವ ಅವಶ್ಯಕತೆ ಇಲ್ಲ. ಆದರೆ ರಾಜ್ಯಪಾಲರು ಇಲ್ಲಿ ಜಾಣ ನಡೆ ಪ್ರದರ್ಶಿಸಿದ್ದಾರೆ.

ಮುಂದೆ ರಾಜಕೀಯ ಆರೋಪ ಬರಬಾರದೆಂದು ನೋಟಿಸ್ ಜಾರಿ ಮಾಡಿದ್ದಾರೆ. ನಿಮ್ಮ ವಿರುದ್ಧ ಪ್ರಾಸಿಕ್ಯೂಷನ್​ಗೆ ಯಾಕೆ ಅನುಮತಿ ನೀಡಬಾರದು ಅಂತ ನೋಟಿಸ್ ನೀಡಿ ಈ ಬಗ್ಗೆ ಉತ್ತ ನೀಡಲು ಸಿಎಂಗೆ ಸಮನ್ಸ್ ಕೊಟ್ಟಿದ್ದಾರೆ ಗೆಹ್ಲೋಟ್​, ಹಗರಣದ ಸಂಬಂಧ ಸಿಎಂ ಹಾಗೂ ಮುಖ್ಯ ಕಾರ್ಯದರ್ಶಿಗೂ ನೋಟಿಸ್ ನೀಡಲಾಗಿದೆ. ಹಾಗಿದ್ರೆ ಇಲ್ಲಿ ರಾಜ್ಯಪಾಲರಿಗಿರುವ ಕಾನೂನು ಅವಕಾಶಗಳ ಬಗ್ಗೆ ವಿವರವಾಗಿ ನೋಡುವುದಾದ್ರೆ ಹಲವು ಅಂಶಗಳು ಗೊತ್ತಾಗುತ್ತದೆ.

ರಾಜ್ಯಪಾಲರಿಗಿರೋ ಕಾನೂನು ಅವಕಾಶಗಳು
ಸಿಎಂಗೆ ನೀಡಿರೋ ನೋಟಿಸ್​ಗೆ ಉತ್ತರ ಬರುವ ತನಕ ರಾಜ್ಯಪಾಲರು ಕಾಯಬಹುದು, ಉತ್ತರ ಸಿಗದಿದ್ದ ಪಕ್ಷದಲ್ಲಿ ಮತ್ತೊಂದು ಬಾರಿ ನೋಟಿಸ್ ನೀಡಬಹುದು, ಇಲ್ಲವೇ ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಬಹುದು. ಕೊಟ್ಟ ಸಾಕ್ಷಿ ಸರಿಯಿಲ್ಲ ಅಂತ ರಿಜೆಕ್ಟ್ ಮಾಡುವ ಅವಕಾಶವೂ ಸಹ ರಾಜ್ಯಪಾಲರಿಗಿದೆ.

ಇದನ್ನೂ ಓದಿ: ಬಿಜೆಪಿ ಪಾದಯಾತ್ರೆಗೆ ಜೆಡಿಎಸ್ ಜೈ ಅಂತಿದ್ದಂತೆ ಅಲರ್ಟ್‌ ಆದ ಕಾಂಗ್ರೆಸ್.. ಕೌಂಟರ್ ಪ್ಲಾನ್ ರೆಡಿ; ಏನದು?

ಆದ್ರೆ ಹೊಸ BNSS ಅಡಿಯಲ್ಲಿ ಮೂರು ತಿಂಗಳಲ್ಲಿ ಕಡ್ಡಾಯವಾಗಿ ಒಂದು ನಿರ್ಣಯಕ್ಕೆ ಬರಲೇಬೇಕು. ತೀರ್ಮಾನ ತೆಗೆದುಕೊಳ್ಳದಿದ್ದರೆ ಡೀಮ್ಡ್ ಅಪ್ರೂವಲ್ ಆಗುತ್ತೆ, ಹೀಗಾಗಿ ಸಿಎಂ ಉತ್ತರಿಸಲಿ ಬಿಡಲಿ ರಾಜ್ಯಪಾಲರು ಒಂದು ನಿರ್ಧಾರಕ್ಕೆ ಬರಲೇಬೇಕು. ಒಂದು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಬೇಕು ಇಲ್ಲವೇ ತಿರಸ್ಕಾರ ಮಾಡಬೇಕು

ಮುಡಾ ಪ್ರಕರಣದ ಸಂಕಷ್ಟದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಈಗಾಗಲೇ ನೋಟಿಸ್​ಗೆ ಉತ್ತರ ನೀಡಲು ಲೀಗಲ್ ಟೀಮ್ ರೆಡಿಮಾಡಿಕೊಂಡಿದ್ದಾರೆ. ರಾಜ್ಯಪಾಲರಿಗಿರುವ ಕಾನೂನು ಅವಕಾಶಗಳಿದ್ದಂತೆ ಸಿಎಂ ಸಿದ್ದರಾಮಯ್ಯನವರಿಗೂ ಕೂಡ ಹಲವು ಕಾನೂನು ಅವಕಾಶಗಳಿವೆ.

ಇದನ್ನೂ ಓದಿ: ₹1200 ಕೋಟಿ ವೆಚ್ಚದ ಸಂಸತ್ ಭವನ ಸೋರಿಕೆ; ₹120 ಬಕೆಟ್​ ಮೇಲೆ ಅವಲಂಬಿತ ಆಯ್ತು ಎಂದು ವ್ಯಂಗ್ಯ

ಸಿಎಂ ಸಿದ್ದರಾಮಯ್ಯನವರಿಗೆ ಇರುವ ಅವಕಾಶಗಳೇನು?
ರಾಜ್ಯಪಾಲರ ಪತ್ರಕ್ಕೆ ಅಥವಾ ನೋಟಿಸ್​ಗೆ ಸಿಎಂ ಸಿದ್ದರಾಮಯ್ಯ ಉತ್ತರಿಸಲೇಬೇಕು ಅಂತ ಕಡ್ಡಾಯವೇನಿಲ್ಲ. ನಾನು ಉತ್ತರ ನೀಡುವುದಿಲ್ಲ ಅಂತ ನೋಟಿಸ್ ತಿರಸ್ಕರಿಸುವ ಅವಕಾಶ ಸಿದ್ದರಾಮಯ್ಯನವರಿಗಿದೆ ಅಥವಾ ಹಗರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಕೂಡ ಉತ್ತರಿಸುವ ಸಾಧ್ಯತೆಯೂ ಇದೆ.

ಗವರ್ನರ್ ನಿರ್ಧಾರವನ್ನು ಕಾದು ನೋಡುವ ತಂತ್ರ ಮಾಡಬಹುದು. ಒಂದು ವೇಳೆ ಪ್ರಾಸಿಕ್ಯೂಷನ್​ಗೆ ಅವಕಾಶ ಕೊಟ್ರೆ ಕೋರ್ಟ್​ನಲ್ಲಿ ಪ್ರಶ್ನಿಸಬಹುದು. ರಿಟ್ ಪಿಟಿಷನ್ ಹಾಕಿ ಹೈಕೋರ್ಟ್​ನಲ್ಲಿ ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಷನ್ ಅನುಮತಿಯನ್ನು ಪ್ರಶ್ನಿಸುವುದರ ಜೊತೆಗೆ ರಾಜ್ಯಪಾಲರ ಆದೇಶವನ್ನು ರದ್ದು ಮಾಡುವಂತೆ ಕೋರಿಕೊಳ್ಳಬಹುದು.

ರಾಜ್ಯಪಾಲರ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ

ಇನ್ನು, ರಾಜ್ಯಪಾಲರು ನೀಡಿರುವ ಶೋಕಾಸ್ ನೋಟಿಸ್ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಆಡುತ್ತಿದ್ದಾರೆ. ನಾನು ತಪ್ಪು ಮಾಡಿದ್ರೆ ತಾನೆ ಹೆದರೋದು, ಇದಕ್ಕೆಲ್ಲಾ ನಾನು ಹೆದರಲ್ಲ, ಇದೆಲ್ಲವನ್ನೂ ಎದುರಿಸಲು ಸಿದ್ಧರಾಗಿದ್ದೇವೆ, 136 ಶಾಸಕರ ಬೆಂಬಲದೊಂದಿಗೆ ಸಿಎಂ ಆಗಿರೋನು ನಾನು, ನನ್ನ ಪಾತ್ರವಿಲ್ಲದಿದ್ದರೂ ಸರ್ಕಾರವನ್ನ ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

ಅಲ್ಲದೇ ರಾಜ್ಯಪಾಲರು ಅಧಿಕಾರವನ್ನು ರಾಜಭವನವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ರಾಜ್ಯಪಾಲರ ನೋಟಿಸ್​ಗೆ ನಾನ್ಯಾಕೆ ಹೆದರಲಿ, ಅರ್ ಅಶೋಕ್ ಹೆದರಬೇಕು ಅವರಿಗೆ ಭಯ, ನನಗಲ್ಲ, ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜರ್ನಾರ್ಧನ ರೆಡ್ಡಿ ವಿರುದ್ಧದ ದೂರು ಇನ್ನೂ ಹಾಗೆಯೇ ಇವೆ. ಅವ್ರಿಗೆ ಶೋಕಾಸ್ ನೋಟಿಸ್ ಕೊಟ್ಟಿಲ್ಲ. ನನಗೆ ಯಾಕೆ ತರಾತುರಿಯಲ್ಲಿ ನೋಟಿಸ್ ಕೊಟ್ಟಿದ್ದಾರೆ ಎಂದು ಸಿಎಂ ಪ್ರಶ್ನಿಸಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಮುಡಾ ಹಗರಣದಲ್ಲಿ ರಾಜ್ಯಪಾಲರಿಂದ ಸಿಎಂಗೆ ನೋಟಿಸ್; ಇಬ್ಬರಿಗೂ ಇರೋ ಕಾನೂನು ಅವಕಾಶಗಳೇನು?

https://newsfirstlive.com/wp-content/uploads/2024/08/cm-vs-governor-1.jpg

Load More