Video: ನಾಗರಹಾವಿನ ಜೊತೆಗೆ ಹಸುವಿನ ಸ್ನೇಹ.. ಇದು ನಂಬಲಸಾಧ್ಯವಾದ ಬಂಧನ

author-image
AS Harshith
Updated On
Video: ನಾಗರಹಾವಿನ ಜೊತೆಗೆ ಹಸುವಿನ ಸ್ನೇಹ.. ಇದು ನಂಬಲಸಾಧ್ಯವಾದ ಬಂಧನ
Advertisment
  • ಗೋವಿನ ಸ್ನೇಹಕ್ಕೆ ಮನಸೋತ ನಾಗರಹಾವು
  • ವಿಷಜಂತುವಿನೊಂದಿಗೆ ಸ್ನೇಹ ಬೆಳೆಸಿದ ಮೂಕ ಪ್ರಾಣಿ
  • ಗೋವಿನ ನಿಷ್ಕಲ್ಮಶವಾದ ಪ್ರೀತಿಗೆ ಹೆಡೆ ಎತ್ತಿದ ನಾಗರಹಾವು

ಪ್ರಾಣಿಗಳ ಪ್ರೀತಿ ನಿಷ್ಕಲ್ಮಶವಾದದ್ದು, ವಿಷಜಂತುವನ್ನೂ ಕೂಡ ಶಾಂತಗೊಳಿಸುವ ಶಕ್ತಿ ಸ್ನೇಹಕ್ಕಿದೆ. ಇಲ್ಲೊಂದು ನಾಗರಹಾವು ಹೆಡೆ ಎತ್ತಿ ನಿಂತಿದೆ, ಅದೇ ವೇಳೆ ಅಲ್ಲಿಗೆ ಬಂದ ಹಸು ಹಾವಿನೊಂದಿಗೆ ಸ್ನೇಹ ಬೆಳೆಸಿದೆ.

ನಾಗರಹಾವು ಮತ್ತು ಹಸುವಿನ ಸ್ನೇಹವನ್ನು ಕಂಡಾಗ ಅಚ್ಚರಿಯಾಗುತ್ತದೆ. ಏಕೆಂದರೆ ವಿಷಜಂತುಗಳ ಜೊತೆಗೆ ಆಟವಾಡಲು ಹೋಗಬಾರದು. ಅದು ಯಾವಾಗ ಕಚ್ಚುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಇಲ್ಲಿ ನಾಗರಹಾವು ಮಾತ್ರ ಹಸುವಿನ ಮೂಕ ಸ್ನೇಹಕ್ಕೆ ಮನಸೋತಿದೆ. ಹೆಡೆ ಎತ್ತಿದ್ದನ್ನು ಕೂಡ ಇಳಿಸಿದೆ.

ಇನ್ನು ಹಸು ಕೂಡ ತಾನು ವಿಷಜಂತು ಜೊತೆಗೆ ಸ್ನೇಹ ಬೆಳೆಸಿದ್ದೇನೆ ಎಂದು ತಲೆಕೆಡಿಸಿಕೊಳ್ಳದೆ ಅನ್ಯೋನ್ಯತೆ ಬೆಳೆಸಲು ಮುಂದಾಗಿದೆ. ಅಷ್ಟು ಮಾತ್ರವಲ್ಲದೆ, ನಾಗರಹಾವಿನ ಬಳಿ ತನ್ನ ತಲೆ ಇಟ್ಟು, ಬಳಿಕ ನಾಲಿಗೆಯಲ್ಲಿ ಹಾವಿನ ಹೆಡೆ ಸವರಿದೆ. ಹಾವು ಕೂಡ ಹಸುವಿನ ಪ್ರೀತಿ, ಸ್ನೇಹಕ್ಕೆ ಮನಸೋತು ಸುಮ್ಮನಾಗಿದೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಲದಲಿ ವೈರಲ್​ ಆಗಿದೆ. ಐಎಪ್​ ಅಧಿಕಾರಿ ಸುಸಾಂತ್​ ನಂದ್​ ಈ ದೃಶ್ಯವನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment