Advertisment

ಟೀಮ್​ ಇಂಡಿಯಾದಲ್ಲಿ ಮತ್ತೆ ಕೋಲ್ಡ್​ ವಾರ್.. ಇಬ್ಬರು ಸ್ಟಾರ್​​​ ನಡುವೆ ಜಿದ್ದಾಜಿದ್ದಿ..!

author-image
Ganesh
Updated On
ಬಾಂಗ್ಲಾ ವಿರುದ್ಧ ಟಿ20 ಸರಣಿಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ; ಸ್ಟಾರ್​ ಆಟಗಾರರೇ ಔಟ್​
Advertisment
  • ಸ್ಟಾರ್ ಆಟಗಾರರ ನಡುವೆ ಶೀತಲ ಸಮರ?
  • ಸೀನಿಯರ್​ ಆಟಗಾರರ ವೈಮನಸ್ಸಿಗೆ ಕಾರಣ ಏನು?
  • ವೈಮನಸ್ಸಿಗೆ ಬ್ರೇಕ್​ ಹಾಕ್ತಾರಾ ಗುರು ಗಂಭೀರ್​..?

ಇಂಡೋ-ಬಾಂಗ್ಲಾ ನಡುವಿನ ಟಿ20 ಸರಣಿ ಆರಂಭಕ್ಕೂ ಮುನ್ನ ಟೀಮ್​ ಇಂಡಿಯಾದಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಕ್ಯಾಪ್ಟನ್​ ಸೂರ್ಯಕುಮಾರ್​​ ಯಾದವ್​, ಹಾರ್ದಿಕ್​ ಪಾಂಡ್ಯ ನಡುವೆ ಎಲ್ಲವೂ ಸರಿಯಿಲ್ವಾ ಅನ್ನೋ ಚರ್ಚೆ ಶುರುವಾಗಿದೆ. ಸೀನಿಯರ್​ ಆಟಗಾರರ ನಡುವೆ ಕೋಲ್ಡ್​ ವಾರ್​ ನಡೆದಿದೆ.

Advertisment

ಇಂಡೋ-ಬಾಂಗ್ಲಾ ಟಿ20 ಸರಣಿ ಆರಂಭಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಭಾನುವಾರದಿಂದ 3 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, ಮೊದಲ ಪಂದ್ಯಕ್ಕೆ ಗ್ವಾಲಿಯರ್​ನಲ್ಲಿ ವೇದಿಕೆ ಸಜ್ಜಾಗಿದೆ. ಟೆಸ್ಟ್​ ಸರಣಿಯನ್ನ 2-0 ಅಂತರದಲ್ಲಿ ಗೆದ್ದು ಬೀಗಿದ ಟೀಮ್​ ಇಂಡಿಯಾ, ಟಿ20 ಸರಣಿಯಲ್ಲೂ ಗೆಲುವನ್ನು ಎದುರು ನೋಡ್ತಿದೆ. ಯುದ್ಧಕ್ಕಿಳಿಯಲು ಸೂರ್ಯಕುಮಾರ್​ ಯಾದವ್​ ನೇತೃತ್ವದ ಯುವ ಪಡೆ ಸಿದ್ಧತೆ ಆರಂಭಿಸಿದೆ.

ಇದನ್ನೂ ಓದಿ: ಪಾಂಡ್ಯ ಬಿಟ್ಟು ಸೂರ್ಯಕುಮಾರ್​ಗೆ T20 ಕ್ಯಾಪ್ಟನ್ಸಿ ಕೊಟ್ಟಿದ್ಯಾರು.. ರೋಹಿತ್, ಗಂಭೀರ್ ಅಲ್ಲವೇ ಅಲ್ಲ!

ಟೀಮ್​ ಇಂಡಿಯಾದಲ್ಲಿ ಮತ್ತೆ ಕೋಲ್ಡ್​ ವಾರ್?
ಬಾಂಗ್ಲಾದೇಶ ಎದುರಿನ ಟಿ20 ಸರಣಿಗೂ ಮುನ್ನ ಟೀಮ್​ ಇಂಡಿಯಾದಲ್ಲಿ ಮತ್ತೆ ಕೋಲ್ಡ್​ವಾರ್​ ಶುರುವಾದ ಸುದ್ದಿ ಹೊರಬಿದ್ದಿದೆ. ಈ ಹಿಂದೆ ವಿರಾಟ್​ ಕೊಹ್ಲಿ-ರೋಹಿತ್​ ಶರ್ಮಾ ನಡುವೆ ಎಲ್ಲವೂ ಸರಿಯಿಲ್ಲಾ. EGO ಫೈಟ್​​ ನಡೀತಾ ಇದೆ ಅನ್ನೋ ಸುದ್ದಿ ಸಖತ್​ ಸದ್ದು ಮಾಡಿತ್ತು. ಕೆಲವೊಂದು ವಿಚಾರಗಳಲ್ಲಿ ಇದು ಬಹಿರಂಗಗೊಂಡಿತ್ತು ಕೂಡ. ಅಂತಿಮವಾಗಿ ಈಗ ಕೊಹ್ಲಿ-ರೋಹಿತ್ ವೈಮನಸ್ಸು ಮರೆತು ಒಂದಾಗಿದ್ದಾರೆ. ಎಲ್ಲವೂ ಸರಿಯಾಯ್ತು ಅನ್ನೋವಾಗಲೇ ಮತ್ತೊಂದು ಕೋಲ್ಡ್​ ವಾರ್​​ನ ಬೇಸರದ ಸುದ್ದಿ ಹೊರಬಿದ್ದಿದೆ.

Advertisment

ಸೂರ್ಯ v ಪಾಂಡ್ಯ..
ಟೀಮ್​ ಇಂಡಿಯಾದ ಟಿ20 ಕ್ಯಾಪ್ಟನ್ ಸೂರ್ಯಕುಮಾರ್​ ಯಾದವ್​, ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯ ನಡುವೆ ಇದೀಗ ಎಲ್ಲವೂ ಸರಿಯಿಲ್ಲ ಅನ್ನೋ ಸುದ್ದಿ ಹೊರಬಿದ್ದಿದೆ. ಐಪಿಎಲ್​ನಿಂದ ಶುರುವಾಗಿ ಟೀಮ್​ ಇಂಡಿಯಾವರೆಗೆ ಹಲವು ವಿಚಾರಗಳಲ್ಲಿ ಇಬ್ಬರ ನಡುವೆ ಈಗೋ ಫೈಟ್​​ ಶುರುವಾಗಿದೆ ಎನ್ನಲಾಗ್ತಿದೆ. ಇದು ಡ್ರೆಸ್ಸಿಂಗ್​ರೂಮ್​ ಮೇಲೆ ನೇರವಾದ ಪರಿಣಾಮ ಬೀರೋ ಸಾಧ್ಯತೆ ದಟ್ಟವಾಗಿದೆ.

ಮುಂಬೈ ಫ್ರಾಂಚೈಸಿ ಬಿಡಲು ರೆಡಿ
ಟೀಮ್​ ಇಂಡಿಯಾ ಟಿ20 ನಾಯಕ ಸೂರ್ಯಕುಮಾರ್​ ಯಾದವ್​, ಮುಂಬರುವ ಐಪಿಎಲ್​ಗೂ ಮುನ್ನ ಮುಂಬೈ ಇಂಡಿಯನ್ಸ್​ಗೆ ಗುಡ್​​ ಬೈ ಹೇಳಲು ಸಜ್ಜಾಗಿದ್ದಾರೆ. ಕೊಲ್ಕತ್ತಾ ನೈಟ್​ ರೈಡರ್ಸ್​ ಸೇರಿದಂತೆ ಹಲವು ಫ್ರಾಂಚೈಸಿಗಳು ಈಗಾಗಲೇ ಸೂರ್ಯನನ್ನ ಸಂಪರ್ಕಿಸಿವೆ. ಹರಾಜಿನಲ್ಲಿ ಸೂರ್ಯನ ಖರೀದಿ ಮಾಡೋ ಮಾತನ್ನೂ ನೀಡಿರೋ ವರದಿಯಾಗಿದೆ. ಅಂದ್ಹಾಗೆ ಸೂರ್ಯ ಮುಂಬೈಗೆ ಟಾಟಾ ಮಾಡಲು ಮೇನ್​ ರೀಸನ್​​ ಹಾರ್ದಿಕ್​ ಪಾಂಡ್ಯ. ಪಾಂಡ್ಯ ನಾಯಕತ್ವದಡಿ ಆಡಲು ಸೂರ್ಯನಿಗೆ ಇಷ್ಟವಿಲ್ಲ ಎನ್ನಲಾಗ್ತಿದೆ.

ಇದನ್ನೂ ಓದಿ:ಹೊಸ ಕ್ಯಾಪ್ಟನ್​ಗಾಗಿ ಮುಂಬೈ ಜತೆ RCB ಮೆಗಾ ಟ್ರೇಡ್​​; ಬೆಂಗಳೂರು ತಂಡಕ್ಕೆ ಸೂರ್ಯ ಎಂಟ್ರಿ!

Advertisment

ನಾಯಕತ್ವದ ವಿಚಾರದಿಂದ ವೈಮನಸ್ಸು
ಕಳೆದ ಸೀಸನ್​ ಐಪಿಎಲ್​ಗೂ ಮುನ್ನ ರೋಹಿತ್​ ಶರ್ಮಾನ ಕೆಳಗಿಳಿಸಿ, ಹಾರ್ದಿಕ್​ ಪಾಂಡ್ಯನ ಕರೆ ತಂದು ಮುಂಬೈ ಇಂಡಿಯನ್ಸ್​ ನಾಯಕನ ಪಟ್ಟ ಕಟ್ಟಿತ್ತು. ಆಗಲೇ ಸೂರ್ಯಕುಮಾರ್​​, ಹಾರ್ದಿಕ್​ರಿಂದ ಅಂತರ ಕಾಯ್ದುಕೊಂಡು ರೋಹಿತ್​ ಜೊತೆ ಗುರುತಿಸಿಕೊಂಡಿದ್ರು. ಇದೀಗ ಭಾರತ ಟಿ20 ತಂಡಕ್ಕೆ ಸೂರ್ಯನೇ ನಾಯಕನಾಗಿದ್ದಾರೆ. ಈ ಹಿಂದಿನಿಂದ ಹಾರ್ದಿಕ್​ ವಿಚಾರದಲ್ಲಿ ವೈಮನಸ್ಸು ಹೊಂದಿರೋ ಸೂರ್ಯನಿಗೆ ಭಾರತ ತಂಡದ ನಾಯಕತ್ವ ಸಿಕ್ಕಿದೆ. ಹೀಗಾಗಿ ಹಾರ್ದಿಕ್​ ನಾಯಕತ್ವದಡಿ ಆಡಲು ಹಿಂದೇಟು ಹಾಕ್ತಿದ್ದಾರೆ ಎನ್ನಲಾಗ್ತಿದೆ.

ಕಳೆದ ಟಿ20 ವಿಶ್ವಕಪ್​​ಗೂ ಮುನ್ನ ಹಾರ್ದಿಕ್​ ಪಾಂಡ್ಯ ಭವಿಷ್ಯದ ಟೀಮ್​ ಇಂಡಿಯಾ ನಾಯಕ ಎಂದೇ ಬಿಂಬಿತವಾಗಿದ್ರು. ಅಧಿಕೃತವಾಗಿ ತಂಡದ ಉಪನಾಯಕನ ಹುದ್ದೆಯನ್ನೂ ಅಲಂಕರಿಸಿದ್ರು. ಟಿ20 ವಿಶ್ವಕಪ್​​ ಅಂತ್ಯದ ಬೆನ್ನಲ್ಲೇ ಬಿಸಿಸಿಐ ಹಾರ್ದಿಕ್​ಗೆ ಶಾಕ್​ ನೀಡ್ತು. ರೋಹಿತ್​ ಶರ್ಮಾ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಸೂರ್ಯಕುಮಾರ್​​ನ ತಂದು ಕೂರಿಸಿದೆ. ಹಾರ್ದಿಕ್​ ಪಾಂಡ್ಯನ ಉಪನಾಯಕನ ಸ್ಥಾನದಿಂದಲೂ ವಜಾ ಮಾಡಲಾಗಿದೆ. ಇದೂ ಕೂಡ ಇಬ್ಬರ ನಡುವೆ ವೈಮನಸ್ಸು ಬೆಳೆಯಲು ಕಾರಣ ಎಂಬ ಸುದ್ದಿಯಿದೆ.

ಇದನ್ನೂ ಓದಿ:ಹಾರ್ದಿಕ್​​​ ಪಾಂಡ್ಯಗೆ ಬಿಗ್​ ಶಾಕ್​​ ಕೊಟ್ಟ ಮುಂಬೈ ಇಂಡಿಯನ್ಸ್​​.. ಮುಂದಿನ ಕ್ಯಾಪ್ಟನ್ ಇವರೇ!

Advertisment

ವೈಮನಸ್ಸಿಗೆ ಬ್ರೇಕ್​ ಹಾಕ್ತಾರಾ ಗುರು ಗಂಭೀರ್​
ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾರಂತಹ ಸೀನಿಯರ್​​ ಆಟಗಾರರು ಸದ್ಯ ಟಿ20 ತಂಡದಲ್ಲಿಲ್ಲ. ಸದ್ಯ ತಂಡದಲ್ಲಿರೋ ಸೀನಿಯರ್​ ಆಟಗಾರರ ನಡುವೆಯೇ ಕೋಲ್ಡ್​ವಾರ್​ ಶುರುವಾಗಿದೆ. ಸದ್ಯಕ್ಕೆ ಡ್ರೆಸ್ಸಿಂಗ್​ ರೂಮ್​ನಲ್ಲಿರೋವ್ರ ಪೈಕಿ ಕೋಚ್​ ಗೌತಮ್​​ ಗಂಭೀರ್​ ಒಬ್ರೆ ಸದ್ಯ ಸೀನಿಯರ್​​. ಹೀಗಾಗಿ ಇಬ್ಬರ ನಡುವಿನ ವೈಮನಸ್ಸಿಗೆ ತೇಪೆ ಹಾಕಿ ಡ್ರೆಸ್ಸಿಂಗ್​ ರೂಮ್​ ವಾತಾವರಣ ಸರಿಯಾಗಿಸೋ ಜವಾಬ್ದಾರಿ ಸದ್ಯ ಕೋಚ್​ ಮೇಲಿದೆ. ಈ ಜವಾಬ್ದಾರಿಯನ್ನು ಗಂಭೀರ್​ ಹೇಗೆ ನಿಭಾಯಿಸ್ತಾರೆ ಕಾದು ನೋಡಬೇಕಿದೆ.

ಇದನ್ನೂ ಓದಿ:2025 IPL: ಹಾರ್ದಿಕ್​​ ಪಾಂಡ್ಯಗೆ ಮಾಸ್ಟರ್​ ಸ್ಟ್ರೋಕ್​​​​; ಮುಂಬೈ ಇಂಡಿಯನ್ಸ್​ಗೆ ಸ್ಫೋಟಕ ಬ್ಯಾಟರ್​​ ಕ್ಯಾಪ್ಟನ್​​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment