Advertisment

ಮುಳುಗುತ್ತಿದ್ದ ಹಡಗಿಗೆ ಸಾರಥಿ ಆದ್ಮೇಲೆ ಹಣೆಬರಹ ಚೇಂಜ್​.. ಕನ್ನಡಿಗ​ ಖರ್ಗೆ ಕಾಂಗ್ರೆಸ್​​ಗೆ ಬಲ ತುಂಬಿದ್ದೇಗೆ?

author-image
Ganesh
Updated On
ಮುಳುಗುತ್ತಿದ್ದ ಹಡಗಿಗೆ ಸಾರಥಿ ಆದ್ಮೇಲೆ ಹಣೆಬರಹ ಚೇಂಜ್​.. ಕನ್ನಡಿಗ​ ಖರ್ಗೆ ಕಾಂಗ್ರೆಸ್​​ಗೆ ಬಲ ತುಂಬಿದ್ದೇಗೆ?
Advertisment
  • ಖರ್ಗೆ ಅಧ್ಯಕ್ಷರಾದ ಬಳಿಕ 3 ರಾಜ್ಯದಲ್ಲಿ ಅಧಿಕಾರ..!
  • ಫಿನಿಕ್ಸ್​ನಂತೆ ಮೇಲೆದ್ದ ಕಾಂಗ್ರೆಸ್​! 10 ವರ್ಷದ ಬಳಿಕ ಅತ್ಯಧಿಕ ಸ್ಥಾನ
  • ರಾಜಿ ಮನೋಭಾವದ ನಾಯಕ ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಕಮಾಲ್ ಮಾಡೋದಕ್ಕೆ ಮಲ್ಲಿಕಾರ್ಜುನ್ ತಂತ್ರಗಾರಿಕೆ ಹೇಗೆ ಕೆಲಸ ಮಾಡಿತ್ತೋ.. ಅತ್ತ ಕೇಂದ್ರದಲ್ಲೂ ಮುಗ್ಗರಿಸಿ ಹೋಗಿದ್ದ ಕಾಂಗ್ರೆಸ್​ಗೆ ಬಲ ತುಂಬುವಲ್ಲೂ ಖರ್ಗೆ ಪಾತ್ರ ಬಹುಮುಖ್ಯವಾಗಿದೆ. ಮುಳುಗುತ್ತಿದ್ದ ಹಡಗಿಗೆ ಮಲ್ಲಿಕಾರ್ಜುನ್ ಖರ್ಗೆ ಸಾರಥಿಯಾದ್ಮೇಲೆ ಹಣೆಬರಹವೇ ಚೇಂಜ್ ಆಗಿದೆ. ಅಷ್ಟಕ್ಕೂ ಕೈ ಪಾಳಯಕ್ಕೆ ಖರ್ಗೆ ಆನೆ ಬಲ ತಂದಿದ್ದು ಹೇಗೆ? ಕಾಂಗ್ರೆಸ್​​ನ್ನ ಖರ್ಗೆ ಪುಟಿದೇಳುವಂತೆ ಮಾಡಿದ್ದು ಹೇಗೆ?

Advertisment

2014.. ದಶಕಗಳಿಂದ ಅಧಿಕಾರದ ಗದ್ದುಗೆ ಹಿಡಿದಿದ್ದ ಕಾಂಗ್ರೆಸ್ ಮೋದಿ ಅಲೆಯಲ್ಲಿ ಕೊಚ್ಚಿಕೊಂಡು ಹೋಗಿತ್ತು. ಕಾಂಗ್ರೆಸ್​​ನ್ನ ಜನ ತೀರಸ್ಕಾರ ಮಾಡಿದ್ರು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರೋದೆ ಇಲ್ಲ ಅನ್ನೋ ಮಾತುಗಳು ಕೇಳಿ ಬಂದಿದ್ವು. ಆದ್ರೀಗ ಈ ಎಲ್ಲ ಮಾತು ಸುಳ್ಳಾಗಿದೆ. ಮತ್ತೆ ಕೈ ಪಡೆ ಪುಟಿದೆದ್ದಿದೆ. ಕೈ ಪಾಳಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯೋದಕ್ಕಾಗಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಇದನ್ನೂ ಓದಿ:ನಮಗೆ ಎರಡು ಸಚಿವ ಸ್ಥಾನಬೇಕು -ಸಭೆಯಲ್ಲಿ ಕುಮಾರಸ್ವಾಮಿ ಕೇಳಿದ ಇನ್ನೊಂದು ಸ್ಥಾನ ಯಾರಿಗೆ..?

publive-image

ಖರ್ಗೆ ಸಾರಥಿಯಾದ್ಮೇಲೆ ಹಣೆಬರಹ ಚೇಂಜ್..​​!
2014 ರಲ್ಲಿ ಸೋಲಿನ ಕಹಿ ಉಂಡಿದ್ದ ಕಾಂಗ್ರೆಸ್ ಪಕ್ಷ 2019 ರಲ್ಲೂ ಚೇತರಿಕೆ ಕಂಡಿರಲಿಲ್ಲ. ಆದ್ರೆ ಈ ಬಾರಿಯ ಲೋಕಸಭೆಯಲ್ಲಿ ಕಾಂಗ್ರೆಸ್ ಪಲಿತಾಂಶ ಬಿಜೆಪಿ ಪಾಳಯದಲ್ಲೂ ನಡುಕ ಹುಟ್ಟಿಸಿದೆ. ಬರೋಬ್ಬರಿ 240 ಕ್ಷೇತ್ರಗಳಲ್ಲಿ ಗೆಲುವಿನ ನಾಗಲೋಟ ಬೀರೋ ಮೂಲಕ ಕಾಂಗ್ರೆಸ್ ನೈತೃತ್ವದ ಎನ್​ಡಿಎ ಕಳೆದ 10 ವರ್ಷಗಳಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದೆ. ಆದ್ರೆ ಕಾಂಗ್ರೆಸ್​​ನ ಈ ಸಾಧನೆ ರಾಹುಲ್ ಗಾಂಧಿ ಕೊಡುಗೆ ಎಷ್ಟಿದ್ಯೋ.. ಎಐಸಿಸಿ ಅಧ್ಯಕ್ಷ ಕನ್ನಡಿಗ ಮಲ್ಲಿಕಾರ್ಜುನ್ ಪಾತ್ರವೂ ಅಷ್ಟೆ ಬಹುಮುಖ್ಯವಾಗಿದೆ. 2014 ರ ಸೋಲಿನ ಬಳಿಕ ಕಾಂಗ್ರೆಸ್ ಮುಳುಗುವ ಹಡುಗು ಅನ್ನೋ ಮಾತು ಕೇಳಿ ಬರ್ತಿತ್ತು. ಈ ಮುಳುಗುವ ಹಡಗಿಗೆ ಖರ್ಗೆ ಸಾರಥಿಯಾದ್ಮೇಲೆ ಕಾಂಗ್ರೆಸ್​ ಹಣೆ ಬರಹವೇ ಚೇಂಜ್ ಆಗಿತ್ತು.

Advertisment

ಫಿನಿಕ್ಸ್​ನಂತೆ ಮೇಲೆದ್ದ ಕಾಂಗ್ರೆಸ್​!
ಪ್ರಧಾನಿ ಮೋದಿ ಅಲೆಯ ಮುಂದೆ ಕಾಂಗ್ರೆಸ್ ಕೊಚ್ಚಿ ಹೋಗಲಿದೆ. ಕಾಂಗ್ರೆಸ್ ಇನ್ನಷ್ಟು ಹೀನಾಯ ಸ್ಥಿತಿ ತಲುಪಲಿದೆ ಅನ್ನೋ ಟೀಕೆಗಳ ಮಧ್ಯೆ ಮತ್ತೆ ಪುಟಿದ್ದೆದ್ದಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪೈಪೋಟಿ ನೀಡುವ ಮಟ್ಟಿಗೆ ಗೆದ್ದು ಬೀಗಿದೆ. ಆದ್ರೆ ಈ ಗೆಲುವಿಗೆ ಕಾರಣವಾಗಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ..

ಇದನ್ನೂ ಓದಿ:ಕಳೆದ ಬಾರಿ ಮಿಸ್, ಈ ಬಾರಿ ಮಿಸ್ ಆಗುವ ಚಾನ್ಸೇ ಇಲ್ಲ ಅಂತಿದ್ದಾರೆ ನಿತೀಶ್ ಕುಮಾರ್.. ಏನದು..?

publive-image

2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಆದ್ರೆ ಅದ್ಯವಾಗ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ್ರೂ ಅಲ್ಲಿಂದ ಕಾಂಗ್ರೆಸ್​ ಆನೆ ಬಲ ಹೆಚ್ಚಾಯ್ತು. ಖರ್ಗೆಗೆ ಅಧ್ಯಕ್ಷ ಪಟ್ಟ ನೀಡಿದ ಬಳಿಕ ಪಕ್ಷದಲ್ಲಿ ಹಲವು ಬದಲಾವಣೆಗಳಾಗಿದ್ದವು. ಕುಟುಂಬ ರಾಜಕಾರಣದ ಆರೋಪ ಹೊತ್ತಿದ್ದ ಕಾಂಗ್ರೆಸ್​​ ಖರ್ಗೆಗೆ ಸ್ಥಾನ ಬಿಟ್ಟು ಕೊಡುವ ಮೂಲಕ ಆರೋಪ ಮುಕ್ತವಾಗಿತ್ತು. ಇದಾದ ನಂತರ ಪಕ್ಷದಲ್ಲಿನ ಎಲ್ಲರನ್ನೂ ಅನುಸರಿಸಿಕೊಂಡು ಹೋಗುವ ನೀತಿಯನ್ನು ಖರ್ಗೆ ಅವರು ಪಾಲಿಸಿದ್ದೂ ಪಕ್ಷದ ಏಳ್ಗೆಗೆ ಬಹುಮುಖ್ಯ ಕಾರಣವಾಗಿತ್ತು.

Advertisment

ಕಾಂಗ್ರೆಸ್‌ನಲ್ಲಿ ರಾಷ್ಟ್ರೀಯ ಅಧ್ಯಕ್ಷರ ಹುದ್ದೆಯು ಸಾಮಾನ್ಯವಾಗಿ ಗಾಂಧಿ ಕುಟುಂಬದ ಸದಸ್ಯರಿಗೆ ಇರುತ್ತದೆ. ಆದ್ರೆ 2022 ರಲ್ಲಿ ಚುನಾವಣೆ ಮೂಲಕ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆಗೆ ಅಧ್ಯಕ್ಷ ಸ್ಥಾನ ಬಿಟ್ಟು ಕೊಟ್ಟಿತ್ತು. ಅಲ್ಲಿಂದ ಕೈ ಪಾಳಯದಲ್ಲಿ ಹೊಸ ಹುಮ್ಮಸ್ಸು ಮತ್ತು ಚೈತನ್ಯ ಪುಡಿದೆದ್ದಿತ್ತು. ಯಾಕಂದ್ರೆ ದೇಶದ ತುಂಬಾ ಮೋದಿ ಮೋದಿ ಅನ್ನೋ ಘೋಷಣೆಗಳ ಮಧ್ಯೆ ಮೋದಿಯನ್ನ ನೇರವಾಗಿ ಎದುರಿಸುವ ನಾಯಕ ಯಾರದ್ರೂ ಆಗಿದ್ರೆ ಅದು ಮಲ್ಲಿಕಾರ್ಜುನ ಖರ್ಗೆ ಮಾತ್ರ.. ಯಾಕಂದ್ರೆ ಲೋಕಸಭೆಯಲ್ಲಿ ಮೋದಿಗೆ ನೇರ ನೇರ ಪ್ರಶ್ನೆಗಳನ್ನ ಕೇಳುವಲ್ಲಿ ಅಥವಾ ಸರ್ಕಾರವನ್ನ ಟೀಕಿಸುವಲ್ಲಿ ಖರ್ಗೆ ಯಾವತ್ತೂ ಹಿಂದೆ ಸರಿದಿಲ್ಲ. ಹೀಗಾಗಿ ಈ ವ್ಯಕ್ತಿತ್ವವೇ ಈ ಬಾರಿ ಕಾಂಗ್ರೆಸ್​​ನ ಅಭೂತಪೂರ್ವ ಗೆಲುವಿಗೆ ಕಾರಣವಾಗಿದೆ.

ಇದನ್ನೂ ಓದಿ:ಕಬ್ಬಾಳು ದೇಗುಲದಲ್ಲಿ ಗಲಾಟೆ.. ಬೀಗದ ಕೀನಲ್ಲಿ ಹೊಡೆದು ಭಕ್ತನ ತಲೆ ಬುರುಡೆ ಬಿಚ್ಚಿದ ಸೆಕ್ಯೂರಿಟಿ

publive-image

ರಾಜಿ ಮನೋಭಾವದ ನಾಯಕ ಮಲ್ಲಿಕಾರ್ಜುನ ಖರ್ಗೆ
ಗಾಂಧಿ ಕುಟುಂಬದ ಹೊರಗಿನವರಾಗಿ ಎಐಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಪಕ್ಷದ ಬಲವರ್ದನೆಗೆ ನಾಯಕತ್ವ ನೀಡಿದ ಶ್ರೇಯಸ್ಸು ಖರ್ಗೆಗೆ ಸಲ್ಲುತ್ತದೆ. ಯಾಕಂದ್ರೆ ಸುದೀರ್ಘ ಹತ್ತು ವರ್ಷದ ಬಳಿಕ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಅದಕ್ಕೆ ಕಾರಣ ಖರ್ಗೆ ವ್ಯಕ್ತಿತ್ವ. ಮಲ್ಲಿಕಾರ್ಜುನ ಖರ್ಗೆ ಅವರು ದಲಿತ ಮುಖ ಮಾತ್ರವಲ್ಲದೆ ಅತ್ಯಂತ ಹಿರಿಯ ಕಾಂಗ್ರೆಸ್ ನಾಯಕರು. ಸಾಮಾನ್ಯವಾಗಿ ಅವರನ್ನು ‘ಸೌಮ್ಯ ನಾಯಕ’ ಹಾಗೂ ಎಲ್ಲರೊಂದಿಗೂ ರಾಜಿ ಮನೋಭಾವದಿಂದ ವರ್ತಿಸುವ ನಾಯಕ ಅಂತ ಹೇಳಲಾಗುತ್ತೆ. ಯಾಕಂದ್ರೆ ಖರ್ಗೆ ಯಾವತ್ತೂ ಕೂಡ ಪಕ್ಷದಲ್ಲಿ ಸಮನ್ವಯ ಕಾಪಾಡಿಕೊಂಡು ಬಂದಿದ್ರು. ಎಂದಿಗೂ ಪಕ್ಷದಲ್ಲಿ ಅವರು ಒಮ್ಮತವನ್ನು ಅನುಸರಿಸಲು ಪ್ರಯತ್ನಿಸುವಂತ ನಾಯಕ. ಕಾಂಗ್ರೆಸ್‌ನ ಆಂತರಿಕ ವಿಚಾರವಾಗಿರಲಿ ಅಥವಾ ಮೈತ್ರಿಗೆ ಸಂಬಂಧಿಸಿದ ವಿಚಾರವಾಗಿರಲಿ ಖರ್ಗೆ ಸಮನ್ವಯದ ತಂತ್ರವೇ ಇಂದು ಕಾಂಗ್ರೆಸ್​​ಗೆ ವಿಜಯದ ಮಾಲೆ ಹಾಕಿದೆ ಅಂದ್ರೂ ತಪ್ಪಾಗಲ್ಲ.

Advertisment

ಮೈತ್ರಿ ಕೂಟಗಳ ಸಮನ್ವಯದಲ್ಲಿ ಖರ್ಗೆ ಮಹತ್ತರ ಪಾತ್ರ!
ಕೇಂದ್ರದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡ್ತಿದ್ದ ಕಾಂಗ್ರೆಸ್​ಗೆ ರಾಜ್ಯಗಳಲ್ಲಿ ಪಕ್ಷವನ್ನ ಉಳಿಸಿಕೊಳ್ಳೋದು ಕೂಡ ಸವಾಲಾಗಿತ್ತು. ಆದ್ರೆ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದ ಮೇಲೆ ಅವರ ರಾಜಕೀಯ ತಂತ್ರಗಾರಿಗೆ ಮತ್ತು ನಿಲುವುಗಳು ಕೇಂದ್ರದಲ್ಲಿ ಮಾತ್ರವಲ್ಲ ರಾಜ್ಯಗಳಲ್ಲೂ ಪಕ್ಷ ಬಲವಾಗವಂತೆ ಮಾಡಿತ್ತು. ಖರ್ಗೆ ಅಧ್ಯಕ್ಷರಾದ ನಂತರವೇ ಕಾಂಗ್ರೆಸ್‌ ಹಿಮಾಚಲ ಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಜಯಗಳಿಸಿತ್ತು. ಈ ಮೂಲಕ ಖರ್ಗೆ ಕಾಂಗ್ರೆಸ್ ಮತ್ತೆ ಮೇಲೆಳುವಂತೆ ಮಾಡಿದ್ರು.

ಇದನ್ನೂ ಓದಿ:ಲಿವಿಂಗ್ ರಿಲೇಷನ್​​ನಲ್ಲಿದ್ದ ಪ್ರೇಮಿಗಳು ನಿಗೂಢ ಸಾವು.. ಫಜೀತಿಗೆ ಸಿಲುಕಿದ ಮನೆ ಮಾಲೀಕ

publive-image

ಈ ಬಾರಿ ಇಂಡಿಯಾ ಮೈತ್ರಿ ಕೂಟದ ಮೂಲಕ ಲೋಕಸಭೆ ಚುನಾವಣೆ ಎದುರಿಸಿದ್ದ ಕಾಂಗ್ರೆಸ್​ ಗೆಲ್ಲೋದು ಸವಾಲಿನ ಕೆಲಸವೇ ಆಗಿತ್ತು. ಇಂಡಿಯಾ ಮೈತ್ರಿಕೂಟದ ಸದಸ್ಯ ಪಕ್ಷಗಳ ನಡುವೆ ಸಮನ್ವಯ ಸಾಧಿಸುವಲ್ಲಿ ಖರ್ಗೆ ಮಹತ್ತರ ಪಾತ್ರ ವಹಿಸಿದ್ರು. ಎಲ್ಲ ಪಕ್ಷದ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಕ್ಕೆ ಗೆಲುವಿನ ನಾಗಲೋಟ ಬೀರುವಂತೆ ಮಾಡುವಲ್ಲಿ ಖರ್ಗೆ ಕ್ಯಾಪ್ಟನ್ ಆಗಿ ಕೆಲಸ ಮಾಡಿದ್ರು. ಕ್ಯಾಫ್ಟನ್​ ಮಾಡಿದ ರಣ ತಂತ್ರಗಳು, ದೇಶದ ಜನರಿಗೆ ಖರ್ಗೆ ಮೇಲಿದ್ದ ನಂಬಿಕೆ ಎಲ್ಲವೂ ವರ್ಕೌಟ್ ಆಗಿ ಈಗ ಎನ್​ಡಿಎ 200 ಕ್ಕೂ ಅಧಿಕ ಸ್ಥಾನಗಳನ್ನ ಭದ್ರಪಡಿಸಿಕೊಳ್ಳೋದ್ರಲ್ಲಿ ಸಫಲವಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment