/newsfirstlive-kannada/media/post_attachments/wp-content/uploads/2024/06/Police-nagesh.jpg)
ಮಂಡ್ಯ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಕೇಸ್ ವಿಚಾರವಾಗಿ ಕೊನೆಗೂ ದರ್ಶನ್ ಆ್ಯಂಡ್ ಟೀಂ ಜೈಲು ಸೇರಿದ್ದಾರೆ. ಆದರೀಗ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್ ಆಪ್ತರಿಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ನಟನ ಆಪ್ತರ ಮೇಲೆ ಮತ್ತೊಂದು ಕೇಸ್ ದಾಖಲಾಗುವ ನಿರೀಕ್ಷೆ ಇದೆ.
ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಡಿ ಗ್ಯಾಂಗ್ ಹಲ್ಲೆ ನಡೆಸಿತ್ತು ಎಂಬ ಆರೋಪ ಕೇಳಿಬಂದಿತ್ತು. 2 ತಿಂಗಳ ಬಳಿಕ ಗನ್ ಮ್ಯಾನ್ ಮೇಲಿನ ಹಲ್ಲೆ ಪ್ರಕರಣ ಮತ್ತೆ ಜೀವ ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸದ್ಯ ಮಂಡ್ಯ ಪೊಲೀಸರು ಮೇಲಾಧಿಕಾರಿಗಳ ಸೂಚನೆಯಂತೆ ಪ್ರಕರಣ ದಾಖಲಿಸಿಕೊಳ್ಳುತ್ತಾರಾ ಎಂಬ ಅನುಮಾನ ಕಾಡಿದೆ.
ಇದನ್ನೂ ಓದಿ: ಜೈಲಿನಲ್ಲಿ ಮೊದಲ ದಿನ ಕಳೆದ ದರ್ಶನ್.. ನಟನಿಗೆ ನೀಡಿದ ಫೆಸಿಲಿಟಿ ಮಾತ್ರ..
ಏಪ್ರಿಲ್ 22 ರಂದು ಗನ್ ಮ್ಯಾನ್ ನಾಗೇಶ್ ಮೇಲೆ ಡಿ ಗ್ಯಾಂಗ್ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಕಾನ್ಸ್ಟೇಬಲ್ ನಾಗೇಶ್ ಮದ್ದೂರು MLA ಕದಲೂರು ಉದಯ್ ಗನ್ ಮ್ಯಾನ್ ಆಗಿದ್ದರು. ಚುನಾವಣಾ ಪ್ರಚಾರದ ವೇಳೆ ನಟ ದರ್ಶನ್ ಆಪ್ತರಿಂದ ನಾಗೇಶ್ ಮೇಲೆ ಹಲ್ಲೆ ನಡೆಸಿದ್ದ ಆರೋಪ ಕೇಳಿಬಂದಿತ್ತು. MLA ಮನೆಯ ಬಳಿಯೇ ಲಕ್ಷ್ಮಣ್, ನಾಗರಾಜು ಎಂಬುವರು ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿದ್ದರು. ಸದ್ಯ ಹಲ್ಲೆ ಮಾಡಿದವರಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಭಾಗಿಯಾಗಿದ್ದ ಲಕ್ಷ್ಮಣ್, ನಾಗರಾಜು ಜೈಲಿನಲ್ಲಿದ್ದಾರೆ.
ಇದನ್ನೂ ಓದಿ: ವಿವಾದಿತ ಬಾಲಿವುಡ್ ಬ್ಯೂಟಿ ಸೋನಾಕ್ಷಿ ಸಿನ್ಹಾ ಮದುವೆಗೆ ಯಾರೆಲ್ಲಾ ಬರ್ತಾರೆ? ಯಾಕಿಷ್ಟು ಸಿಂಪಲ್?
ಕಾನ್ಸ್ಟೇಬಲ್ ನಾಗೇಶ್ ಅಂದು ಹಲ್ಲೆಗೊಳಗಾದ ಬಳಿಕ ಸರ್ಕಾರಿ ಆಸ್ಪತ್ರೆಯಲ್ಲಿ ಎಂ.ಎಲ್.ಸಿ ಮಾಡಿಸಿದ್ದರು. ಕೆಸ್ತೂರು ಪೊಲೀಸ್ ಠಾಣೆಗೆ ನಾಗೇಶ್ ದೂರು ಕೊಟ್ಟಿದ್ದರು. ಆದರೆ FIR ದಾಖಲಾಗಿರಲಿಲ್ಲ. ಇದೀಗ ಹಳೆ ಪ್ರಕರಣ ಮತ್ತೆ ಮುನ್ನೆಲೆಗೆ ಬರುವ ಸಾಧ್ಯತೆ ಇದೆ. ಕಾರಣ ಈ ಬಗ್ಗೆ ಮಂಡ್ಯ ಎಸ್ಪಿಯಿಂದ ಗೃಹ ಇಲಾಖೆ ಮಾಹಿತಿ ಪಡಿದುಕೊಂಡಿದೆ. ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆದ್ರೂ ಯಾಕೆ FIR ದಾಖಲಿಸಿಲ್ಲ ಎಂದು ಪ್ರಶ್ನೆ ಮಾಡಿದೆ. ಪ್ರಕರಣ ಬಗ್ಗೆ ವರದಿ ನೀಡುವ ಜೊತೆಗೆ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಹಳೆಯ ಸ್ನೇಹಿತರ ಭೇಟಿಯಿಂದ ಖುಷಿ, ಈ ರಾಶಿಗೆ ಶತ್ರುಗಳ ಕಾಟ- ಇಲ್ಲಿದೆ ಇಂದಿನ ಭವಿಷ್ಯ!
ಒಂದು ವೇಳೆ FIR ದಾಖಲಾದ್ರೆ ದರ್ಶನ್ ಆಪ್ತರಿಗೆ ಮತ್ತೊಂದು ಕಂಟಕ ಎದುರಾಗುವ ಸಾಧ್ಯತೆ ಇದೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ನೌಕರನ ಮೇಲೆ ಹಲ್ಲೆ ಸೆಕ್ಷನ್ ಅಡಿ ಕೇಸು ದಾಖಲಾಗುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ