/newsfirstlive-kannada/media/post_attachments/wp-content/uploads/2024/07/Mamatha.jpg)
ಹಾಸನ: ಕೌಟುಂಬಿಕ ಕಲಹ ಹಿನ್ನೆಲೆ ಪತಿ ತನ್ನ ಕೈಯಾರೆ ಪತ್ನಿಗೆ ಚಾಕು ಇರಿದ ಘಟನೆ ನಡೆದಿದೆ. ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಘಟನೆ ನಡೆದಿದೆ.
ಹಾಸನ ನಗರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಲೋಕನಾಥ್ ಪತ್ನಿ ಮಮತಾಗೆ ಚಾಕುವಿನಿಂದ ಇರಿದ್ದಾರೆ. ಚಾಕು ಇರಿತಕ್ಕೆ ಒಳಗಾಗಿದ್ದ ಪತ್ನಿ ಸಾವನ್ನಪ್ಪಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಗಂಡ-ಹೆಂಡತಿ ನಡುವೆ ಜಗಳ ನಡೆದಿದ್ದು, ಇಂದು ಪತಿ ವಿರುದ್ಧ ಮಮತಾ ದೂರು ನೀಡಲು ಎಸ್ಪಿ ಕಚೇರಿಗೆ ಬಂದಿದ್ದರು. ಈ ವೇಳೆ ಲೋಕನಾಥ್ ಪತ್ನಿ ಮಮತಾಗೆ ಚಾಕುವಿನಿಂದ ಇರಿದಿದ್ದಾರೆ.
ಇದನ್ನೂ ಓದಿ: ಜೈಲು ಸೇರಿದ ಬಳಿಕ ಚೇಂಜ್ ಆದ ದರ್ಶನ್.. ಟಿವಿ ನೋಡ್ತಾರೆ, ಕೇರಂ ಆಡ್ತಾರೆ, ಟೈಂ ಪಾಸ್​ ಮಾಡ್ತಾರೆ!
ಚಾಕುವಿನಿಂದ ಇರಿದ ಪರಿಣಾಮ ಕೂಡಲೇ ಮಮತಾರನ್ನು ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಮತಾ ಸಾವನ್ನಪ್ಪಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us