/newsfirstlive-kannada/media/post_attachments/wp-content/uploads/2024/09/Shoaib-khan.jpg)
​​ಭಾರತೀಯರಿಗೆ ಕ್ರಿಕೆಟ್​​ ಎಂದರೆ ಅಚ್ಚುಮೆಚ್ಚು. ಅದರಲ್ಲೂ ಕ್ರಿಕೆಟ್​ನಲ್ಲಿ ಸಾಧನೆ ಮಾಡಿದವರನ್ನು ಕಂಡರೆ ದೇವರಂತೆ ಕಾಣುತ್ತಾರೆ. ಅದಕ್ಕೆ ಉದಾಹರಣೆ ಸಾಕಷ್ಟಿವೆ. ಸಚಿನ್​ ತೆಂಡೂಲ್ಕರ್​, ಕೊಹ್ಲಿ, ರೋಹಿತ್​ ಶರ್ಮಾ ಹೀಗೆ ಅನೇಕರಿದ್ದಾರೆ.
ಕ್ರಿಕೆಟ್​ನಲ್ಲಿ ಸದಾ ದಾಖಲೆಗಳು ನಿರ್ಮಾಣವಾಗುತ್ತವೆ. ಕೆಲವು ದಾಖಲೆಗಳು ಅಳಿಸಿ ಹೊಸ ದಾಖಲೆಗಳು ಸೃಷ್ಟಿಯಾಗುತ್ತವೆ. ಆದರೆ ಇಲ್ಲೊಬ್ಬ ಕ್ರಿಕೆಟಿಗನ ದಾಖಲೆ ಮಾತ್ರ ಭಾರತೀಯ ಕ್ರಿಕೆಟ್​​ ಪ್ರಿಯರನ್ನು ಕಂಡಿತವಾಗಿಯೂ ಹುಬ್ಬೇರಿಸುವಂತೆ ಮಾಡಲಿದೆ. ಅದೇಕೆ ಗೊತ್ತಾ?.
ಶೋಯೆಬ್​ ಖಾನ್​​ ಎಂಬ ಮುಂಬೈ ಮೂಲದ ಎಡಗೈ ಸ್ಪಿನ್ನರ್​ ಸಾಧನೆ ಮಾಡಿದ್ದಾನೆ.​ ಒಂದೇ ಇನ್ನಿಂಗ್ಸ್​​ನಲ್ಲಿ 10 ವಿಕೆಟ್​​ ಪಡೆಯುವ ಮೂಲಕ ​ಅಚ್ಚರಿ ಮೂಡಿಸಿದ್ದಾನೆ. ಸ್ಥಳೀಯ ಕ್ರಿಕೆಟ್​ ಇತಿಹಾಸದಲ್ಲಿ ಸಾಧನೆ ಮಾಡಿರುವ ಹೆಗ್ಗಳಿಕೆಗೆ ಈ ಯುವಕ ಪಾತ್ರನಾಗಿದ್ದಾನೆ.
ಮುಂಬೈ ಕ್ರಿಕೆಟ್​ ಕಂಗಾ ಕ್ರಿಕೆಟ್​​ ಟೂರ್ನಿ ಆಯೋಜಿಸಿತ್ತು. ಈ ವೇಳೆ ಗೌರ್​​​ ಸರಸ್ವತ್​ ಕ್ರಿಕೆಟ್​ ಕ್ಲಬ್​ ಮತ್ತು ಜಾಲಿ ಕ್ರಿಕೆಟರ್ಸ್​​ ನಡುವೆ ಪಂದ್ಯ ಏರ್ಪಟ್ಟಿತು. ಈ ವೇಳೆ ಶೋಯೆಬ್​ ಖಾನ್​​​ ಗೌರ್​ ಸರಸ್ವತ್​ ಕ್ರಿಕೆಟ್​ ಕ್ಲಬ್​ ಮೂಲಕ ಕಣಕ್ಕಿಳಿದು ಸಾಧನೆ ಮಾಡಿದ್ದಾನೆ.
ಪಂದ್ಯದ ವೇಳೆ ಶೋಯೆಬ್​ 17.4 ಓವರ್​​ ಬೌಲಿಂಗ್​ ಮಾಡಿದ್ದಾನೆ. ಈ ವೇಳೆ 10 ವಿಕೆಟ್​ ಪಡೆಯುವ ಮೂಲಕ ಎದುರಾಳಿ ತಂಡವನ್ನು 67 ರನ್​ಗೆ ಕಟ್ಟಿ ಹಾಕಿದ್ದಾರೆ. ಇನ್ನು ಶೋಯೆಬ್​ ಇದ್ದ ತಂಡ 2 ರನ್​ಗಳ ಜಯ ತನ್ನದಾಗಿಸಿತು.
ಒಂದೇ ಇನ್ನಿಂಗ್ಸ್​ನಲ್ಲಿ 10 ವಿಕೆಟ್​ ಕದ್ದ ಶೋಯೆಬ್​ ಆಟವನ್ನು ಮತ್ತು ತಂಡವನ್ನು ಗೆಲ್ಲಿಸಿಕೊಟ್ಟ ಕಾರಣಕ್ಕೆ ತಂಡದ ಮಾಲೀಕರಾದ ರಮಿ ಮಾಂಡ್ರೇಕರ್​ 10 ಸಾವಿರ ರೂಪಾಯಿಗಳ ಗೌರವ ಧನವನ್ನು ಆತನಿಗೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us